All political parties stand united to ensure Nation’s safety and security: PM Narendra Modi
Thank all parties for supporting the Government in bringing historic economic reforms like preponing of Budget Session & GST: PM
Urge all parties to extend their support in fighting corruption: PM Modi at all party meet
PM Modi urges all parties to extend their support the issue of communal violence in the name of cow protection

· ಸಂಸತ್ತಿನ ಮಳೆಗಾಲದ ಅಧಿವೇಶನ ನಾಳೆಯಿಂದ ಆರಂಭವಾಗಲಿದೆ. ಈ ಅಧಿವೇಶನದ ಸಮಯವನ್ನು ನಾವು ಗರಿಷ್ಠ ಬಳಕೆ ಮಾಡಿಕೊಳ್ಳಬೇಕಾದ್ದು ಈ ಹೊತ್ತಿನ ಅಗತ್ಯವಾಗಿದೆ. ಕೆಲವೊಂದು ಅಪವಾದಗಳ ಹೊರತು ಪಡಿಸಿ, ಕಳೆದ ಮೂರು ವರ್ಷಗಳಲ್ಲಿ ಸಂಸತ್ತಿನ ಫಲಶ್ರುತಿಯಲ್ಲಿ ಗಣನೀಯವಾಗಿ ಏರಿಕೆ ಆಗಿದೆ. ಇದಕ್ಕಾಗಿ ಎಲ್ಲ ರಾಜಕೀಯ ಪಕ್ಷಗಳಿಗೆ ನನ್ನ ಧನ್ಯವಾದಗಳು.
· ಸದನದ ಕಲಾಪಕ್ಕೆ ನಿಗದಿ ಮಾಡಿರುವ ಸಮಯವನ್ನು ಮಳೆಗಾಲದ ಅಧಿವೇಶನದಲ್ಲಿ ಸಮರ್ಥವಾಗಿ ಬಳಸಿಕೊಳ್ಳಲಾಗುವುದು ಮತ್ತು ದು ಸಂಸತ್ತಿನ ಫಲಶ್ರುತಿಗೆ (ಉತ್ಪಾದಕತೆಗೆ) ಸಂಬಂಧಿದಂತೆ ದಾಖಲೆಯನ್ನೇ ಸೃಷ್ಟಿಸಲಿದೆ ಎಂಬ ಆಶಾಭಾವನೆಯನ್ನು ಹೊಂದಿದ್ದೇನೆ.
· ನಾವು ಸದನದ ಘನತೆ, ಸಂಪನ್ಮೂಲ ಹಾಗೂ ಸಮಯವನ್ನು ಗಮನದಲ್ಲಿಟ್ಟುಕೊಂಡು ಅರ್ಥಪೂರ್ಣ ಚರ್ಚೆಯೊಂದಿಗೆ ನಮ್ಮ ಜವಾಬ್ದಾರಿಗಳನ್ನು ಪೂರೈಸಬಹುದಾಗಿದೆ.

ಜಿಎಸ್ಟಿಗೆ ಧನ್ಯವಾದಗಳು


· ಜಿಎಸ್ಟಿಯ ಅನುಷ್ಠಾನಕ್ಕಾಗಿ ಕೈಜೋಡಿಸಿದ ನಿಮ್ಮೆಲ್ಲರಿಗೂ ನಾನು ಮತ್ತೊಮ್ಮೆ ಆಭಾರಿಯಾಗಿದ್ದೇನೆ.
· ಜಿಎಸ್ಟಿ ಕಳೆದ 15 ದಿನಗಳಿಂದ ಜಾರಿಯಲ್ಲಿದೆ ಮತ್ತು ಈ ಹದಿನೈದಿ ದಿನಗಳಲ್ಲಿ ನಾವು ಧನಾತ್ಮಕವಾದ ಫಲಿತಾಂಶವನ್ನು ನೋಡಿದ್ದೇವೆ. ಹಲವು ರಾಜ್ಯಗಳ ಗಡಿಯಲ್ಲಿ ಚೆಕ್ ಪೋಸ್ಟ್ ಗಳನ್ನು ತೆಗೆದು ಹಾಕಲಾಗಿದೆ ಮತ್ತು ಟ್ರಕ್ ಗಳ ಸಾಗಾಟ ಸುಗಮವಾಗಿದೆ.
· ಇನ್ನೂ ಜಿಎಸ್ಟಿ ವೇದಿಕೆಯಡಿ ನೋಂದಾಯಿಸಿಕೊಳ್ಳದ ವರ್ತಕರನ್ನು ಶೀಘ್ರ ವೇದಿಕೆಗೆ ತರಲು ಪ್ರಕ್ರಿಯೆಗಳನ್ನು ತ್ವರಿತಗೊಳಿಸುವ ಮೂಲಕ ಕೇಂದ್ರ ಸರ್ಕಾರವು ರಾಜ್ಯಗಳ ಆಪ್ತ ಸಹಯೋಗದೊಂದಿಗೆ ಕಾರ್ಯ ನಿರ್ವಹಿಸುತ್ತಿದೆ.

 



ಬಜೆಟ್ ಅಧಿವೇಶನದ ಫಲಶ್ರುತಿ

 ಬಜೆಟ್ ಅಧಿವೇಶನವು ಒಂದು ತಿಂಗಳ ಹಿಂದೆ ಸಮಾವೇಶಗೊಂಡಿತ್ತು. ಎಲ್ಲ ರಾಜಕೀಯ ಪಕ್ಷಗಳೂ ತಮ್ಮ ಸಹಕಾರವನ್ನು ನೀಡಿದವು. ನಾನು ಬಜೆಟ್ ಅಧಿವೇಶನದ ಧನಾತ್ಮಕ ಫಲಶ್ರುತಿಯನ್ನು ಹಂಚಿಕೊಳ್ಳಲು ಬಯಸುತ್ತೇನೆ.
· ಬಜೆಟ್ ಪ್ರಕ್ರಿಯೆಯನ್ನು ಒಂದು ತಿಂಗಳು ಮೊದಲೇ ಮಾಡಿದ್ದು ಪ್ರಮುಖ ಪರಿಣಾಮ ಬೀರಿದ್ದು, ವಿವಿಧ ಯೋಜನೆಗಳಿಗಾಗಿ ಹಲವು ಇಲಾಖೆಗಳಿಗೆ ಹಂಚಿಕೆ ಮಾಡಲಾಗಿರುವ ಹಣವು ಮಳೆಗಾಲದ ಅಧಿವೇಶನಕ್ಕೆ ಮೊದಲೇ ತಲುಪಿದೆ. ಈ ಮುನ್ನ ಯೋಜನೆಗಳಿಗೆ ಹಂಚಿಕೆ ಮಾಡಲಾದ ಮೊತ್ತ ಇಲಾಖೆಗಳನ್ನು ತಲುಪಲು ರಡು ಮೂರು ತಿಂಗಳು ತೆಗೆದುಕೊಳ್ಳುತ್ತಿತ್ತು. ಮಳೆಗಾಲದಿಂದಾಗಿ ಇದರ ಜಾರಿ ತಡವಾಗುತ್ತಿತ್ತು. ಆದರೆ, ಈ ಬಾರಿ ಹಾಗಾಗಿಲ್ಲ ಮತ್ತು ಮಾರ್ಚ್ ಬಳಿಕ ಯಾವುದೇ ವಿಳಂಬವೂ ಆಗಿಲ್ಲ. ಅಲ್ಲದೆ ಮೂಲಸೌಕರ್ಯ ಯೋಜನೆಗಳನ್ನು ಪೂರ್ಣಗೊಳಿಸಲು ಹೆಚ್ಚುವರಿ ಮೂರು ತಿಂಗಳುಗಳ ಕಾಲಾವಕಾಶವನ್ನೂ ಒದಗಿಸಲಾಗಿದೆ.
· ಲೆಕ್ಕಪತ್ರ ವಿಭಾಗದ ಮಹಾ ನಿಯಂತ್ರಕರ ಅಂದಾಜುಗಳ ಪ್ರಕಾರ ಈ ವರ್ಷ ಏಪ್ರಿಲ್ –ಜೂನ್ ಅವಧಿಯ ವೆಚ್ಚವು ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ.30ರಷ್ಟು ಹೆಚ್ಚಳವಾಗಿದೆ.
· ಮೂಲಸೌಕರ್ಯ ಯೋಜನೆಗಳಿಗೆ ಸಂಬಂಧಿಸಿದ ಬಂಡವಾಳ ವೆಚ್ಚವು ಕಳೆದ ವರ್ಷಕ್ಕಿಂತ ಶೇ.48ರಷ್ಟು ಹೆಚ್ಚಳವಾಗಿದೆ.
· ಯೋಜನೆಗಳ ವೆಚ್ಚದ ಪ್ರವೃತ್ತಿಯು ವರ್ಷಾದ್ಯಂತ ಸಮತೋಲಿತ ರೀತಿಯಲ್ಲಿ ಖರ್ಚು ಮಾಡಲಾಗುತ್ತಿರುವುದನ್ನು ಬಿಂಬಿಸುತ್ತದೆ. ಈ ಮುನ್ನ, ಮಳೆಗಾಲದ ಬಳಿಕ ಆರಂಭವಾಗುತ್ತಿದ್ದ ವೆಚ್ಚದಿಂದಾಗಿ ಮಾರ್ಚ್ ಗೆ ಮೊದಲು ಹಣ ವೆಚ್ಚ ಮಾಡಲು ಅನಗತ್ಯವಾದ ಒತ್ತಡವನ್ನು ಹೇರುತ್ತಿತ್ತು. ವ್ಯವಸ್ಥೆಯಲ್ಲಿ ದೋಷವಾಗಲು ಇದೂ ಒಂದು ಕಾರಣವಾಗಿತ್ತು .

ಈಶಾನ್ಯ ರಾಜ್ಯಗಳಲ್ಲಿ ಪ್ರವಾಹ

· ದೇಶದ ವಿವಿಧ ಭಾಗಗಳಲ್ಲಿ ಎಡೆಬಿಡದೆ ಮಳೆಯಾಗುತ್ತಿದೆ ಮತ್ತು ಈಶಾನ್ಯ ರಾಜ್ಯಗಳು ಪ್ರವಾಹ ಪೀಡಿತವಾಗಿದ್ದು, ಇದು ಕಾಳಜಿಯ ವಿಷಯವಾಗಿದೆ. ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳೊಂದಿಗೆ ಸತತ ಸಂಪರ್ಕದಲ್ಲಿದೆ ಮತ್ತು ಪರಿಸ್ಥಿತಿಯ ಬಗ್ಗೆ ಸೂಕ್ಷ್ಮ ನಿಗಾ ಇಡಲಾಗಿದೆ. ಹಲವು ಕೇಂದ್ರ ಸರ್ಕಾರಿ ಸಂಸ್ಥೆಗಳು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಕ್ಷಣೆ ಮತ್ತು ಪರಿಹಾರ ಕಾಮಗಾರಿಯಲ್ಲಿ ನಿರತವಾಗಿವೆ. ಯಾವುದೇ ಸಂದರ್ಭದಲ್ಲಿ ಯಾವುದೇ ರೀತಿಯ ನೆರವಿನ ಅಗತ್ಯವಿದ್ದರೆ ತುರ್ತಾಗಿ ತಿಳಿಸುವಂತೆ ರಾಜ್ಯಗಳಿಗೆ ತಿಳಿಸಲಾಗಿದೆ.


ಭಯೋತ್ಪಾದನೆಯ ಮೇಲೆ ಕಠಿಣ ಕ್ರಮ

 

 ಅಮರನಾಥ ಯಾತ್ರಿಕರ ಮೇಲೆ ನಡೆದ ಭಯೋತ್ಪಾದಕ ದಾಳಿಯಿಂದಾಗಿ ಇಡೀ ದೇಶವೇ ಆಘಾತದ ಸ್ಥಿತಿಯಲ್ಲಿದೆ. ಈ ದಾಳಿಯಲ್ಲಿ ಮೃತಪಟ್ಟ ಯಾತ್ರಿಕರಿಗೆ ನಾನು ಹೃದಯಾಂತರಾಳದಿಂದ ಸಂತಾಪ ಸೂಚಿಸುತ್ತೇನೆ ಮತ್ತು ಈ ದುಃಖದ ಸಮಯದಲ್ಲಿ ಅವರ ಕುಟುಂಬದೊಂದಿಗೆ ನನ್ನ ಅನುಕಂಪವಿದೆ. ಈ ದಾಳಿಯ ಹಿಂದಿನ ಅಪರಾಧಿಗಳ ವಿರುದ್ಧ ಕ್ರಮ ಜರಿಗಿಸಲಾಗುವುದು ಎಂದು ಸರ್ಕಾರವು ಖಾತ್ರಿಪಡಿಸುತ್ತದೆ.
· ನಾವು ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿಯನ್ನು ಕಾಪಾಡಲು ಮತ್ತು ರಾಜ್ಯದಲ್ಲಿ ಸಮಾಜಘಾತಕ ಶಕ್ತಿಗಳನ್ನು ನಿರ್ಮೂಲನ ಮಾಡಲು ಬದ್ಧರಾಗಿದ್ದೇವೆ. ಸರ್ಕಾರವು ಅಟಲ್ ಜೀ ಅವರು ಹಾಕಿಕೊಟ್ಟ ಮಾರ್ಗದಲ್ಲ ನಡೆಯುತ್ತಿದೆ.

 

ಗೋಸಂರಕ್ಷಣೆಹೆಸರಿನಲ್ಲಿ ಹಿಂಸಾಚಾರ ನಡೆಸುತ್ತಿರುವವರ ವಿರುದ್ಧ ರಾಜ್ಯ ಸರ್ಕಾರಗಳು ಕಠಿಣ ಕ್ರಮ ಜರುಗಿಸಬೇಕು.

 ಕೆಲವು ಸಮಾಜಘಾತಕ ಶಕ್ತಿಗಳು ಗೋ ಸಂರಕ್ಷಣೆಯ ಹೆಸರಿನಲ್ಲಿ ಹಿಂಸಾಚಾರವನ್ನು ಮಾಡುತ್ತಿದ್ದಾರೆ. ದೇಶದಲ್ಲಿ ಸೌಹಾರ್ದತೆಯನ್ನು ಕದಡಲು ಯತ್ನಿಸುತ್ತಿರುವವರು ಪರಿಸ್ಥಿತಿಯ ಲಾಭ ಪಡೆಯುತ್ತಿದ್ದಾರೆ.
· ಇದು ದೇಶದ ವರ್ಚಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಇಂಥ ಸಮಾಜ ಘಾತಕ ಶಕ್ತಿಗಳ ವಿರುದ್ಧ ರಾಜ್ಯ ಸರ್ಕಾರಗಳು ಕಠಿಣ ಕ್ರಮ ಜರುಗಿಸಬೇಕು.
· ಗೋವನ್ನು ದೇಶದಲ್ಲಿ ಮಾತೆ ಎಂದು ಗೌರವಿಸಲಾಗುತ್ತದೆ. ಗೋವಿನೊಂದಿಗೆ ಸಾರ್ವಜನಿಕರ ಭಾವನೆ ಸಂಪರ್ಕಿತವಾಗಿದೆ. ಆದಾಗ್ಯೂ ಗೋವುಗಳ ರಕ್ಷಣೆಗೆ ಕಾನೂನು ಇದೆ ಮತ್ತು ಹಿಂಸಾಚಾರವು ಕಾನೂನಿಗೆ ಪರ್ಯಾಯವಲ್ಲ ಎಂಬುದನ್ನು ಜನರು ಅರಿಯಬೇಕು.
· ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ರಾಜ್ಯ ಸರ್ಕಾರಗಳ ಜವಾಬ್ದಾರಿಯಾಗಿದೆ ಮತ್ತು ಎಲ್ಲೆಲ್ಲಿ ಇಂಥ ಘಟನೆಗಳು ನಡೆಯುತ್ತವೆಯೋ, ರಾಜ್ಯಸರ್ಕಾರಗಳು ಕಠಿಣವಾಗಿ ಕ್ರಮ ಜರುಗಿಸಬೇಕು. ಕೆಲವರು ಗೋ ಸಂರಕ್ಷಣೆಯ ಹೆಸರಿನಲ್ಲಿ ತಮ್ಮ ವೈಯಕ್ತಿಕ ದ್ವೇಷವನ್ನು ತೀರಿಸಿಕೊಳ್ಳುತ್ತಿರುವ ಬಗ್ಗೆಯೂ ರಾಜ್ಯ ಸರ್ಕಾರಗಳು ಗಮನ ಹರಿಸಬೇಕು.
· ಗೋ ಸಂರಕ್ಷಣೆಯ ಹೆಸರಲ್ಲಿ ನಡೆಯುತ್ತಿರುವ ಇಂಥ ಗೂಂಡಾಗಿರಿಯನ್ನು ಎಲ್ಲ ರಾಜಕೀಯ ಪಕ್ಷಗಳೂ ಬಲವಾಗಿ ಖಂಡಿಸಬೇಕು.

ಭ್ರಷ್ಟಾಚಾರದ ವಿರುದ್ಧ ಕ್ರಮ

ಕಳೆದ ಕೆಲವು ದಶಕಗಳಿಂದ, ನಮ್ಮಲ್ಲಿಯೇ ಕೆಲವು ನಾಯಕರು ಮಾಡಿದ ಕೃತ್ಯದಿಂದಾಗಿ ರಾಜಕೀಯ ನಾಯಕತ್ವದ ವರ್ಚಸ್ಸು ಕವಲು ದಾರಿಯಲ್ಲಿದೆ. ಹೀಗಾಗಿ ಪ್ರತಿಯೊಬ್ಬ ನಾಯಕರೂ ಕಳಂಕಿತರಲ್ಲ ಮತ್ತು ಪ್ರತಿಯೊಬ್ಬ ನಾಯಕರು ಹಣದ ಹಿಂದೆ ಓಡುತ್ತಿಲ್ಲ ಎಂಬುದನ್ನು ನಾವು ಜನತೆಗೆ ತಿಳಿಯಪಡಿಸಬೇಕು.
· ನಾವು ನಮ್ಮ ಸಾರ್ವಜನಿಕ ಜೀವನದಲ್ಲಿ ಪಾರದರ್ಶಕವಾಗಿರಬೇಕು ಮತ್ತು ಭ್ರಷ್ಟ ನಾಯಕರ ವಿರುದ್ಧ ಕ್ರಮ ಜರುಗಿಸಬೇಕು.
· ಅಂತಹ ನಾಯಕರನ್ನು ಗುರುತಿಸಿ ಮತ್ತು ರಾಜಕೀಯ ಪ್ರಯಾಣದಿಂದ ಅಂಥವರನ್ನು ಪ್ರತ್ಯೇಕಿಸುವ ಜವಾಬ್ದಾರಿಯೂ ರಾಜಕೀಯ ಪಕ್ಷಗಳ ಮೇಲಿದೆ.
· ನೆಲದ ಕಾನೂನು ಕೆಲಸ ಮಾಡುತ್ತಿದ್ದರೆ, ಆಗ, ರಾಜಕೀಯ ಪಿತೂರಿಯ ಎಂದು ಹೇಳುವ ಮೂಲಕ ತಮ್ಮನ್ನು ತಾವು ಉಳಿಸಿಕೊಳ್ಳಲು ಪ್ರಯತ್ನಿಸುವವರು ಒಡ್ಡುವ ಸವಾಲು ಎದುರಿಸಲು ನಾವು ಕೈಜೋಡಿಸಬೇಕು.
· ದೇಶವನ್ನು ಕೊಳ್ಳೆಹೊಡೆದವರ ಜೊತೆ ನಿಲ್ಲುವುದರಿಂದ ದೇಶಕ್ಕೆ ಯಾವುದೇ ಲಾಭ ಆಗುವುದಿಲ್ಲ.
· ಆಗಸ್ಟ್ 9ರಂದು ಬ್ರಿಟಿಷರೇ ದೇಶ ಬಿಟ್ಟು ತೊಲಗಿ ಚಳವಳಿಗೆ 75 ವಾರ್ಷಿಕೋತ್ಸವ. ಸಂಸತ್ತು ಈ ಬಗ್ಗೆ ಚರ್ಚಿಸಬೇಕು.
· ಒಮ್ಮತದಿಂದ ರಾಷ್ಟ್ರಪತಿಗಳ ಚುನಾವಣೆಯ ಆಯ್ಕೆ ನಡೆದಿದ್ದರೆ ಚೆನ್ನಾಗಿರುತ್ತಿತ್ತು. ಆದಾಗ್ಯೂ, ಚುನಾವಣಾ ಪ್ರಚಾರವು ಗೌರವಯುತವಾಗಿತ್ತು ಎಂಬುದು ಹೆಮ್ಮೆ ಮತ್ತು ತೃಪ್ತಿಯ ವಿಷಯವಾಗಿದೆ. ಎಲ್ಲ ರಾಜಕೀಯ ಪಕ್ಷಗಳಿಗೂ ಅಭಿನಂದನೆ ಸಲ್ಲಲೇಬೇಕು. ಎಲ್ಲ ರಾಜಕೀಯ ಪಕ್ಷಗಳೂ ತಮ್ಮ ಸಂಸದರು ಮತ್ತು ಶಾಸಕರಿಗೆ ಮತ ಹಾಕುವ ತರಬೇತಿ ನೀಡಬೇಕು. ಒಂದೇ ಒಂದು ಮತ ಸಹ ವ್ಯರ್ಥವಾಗಬಾರದು .

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Snacks, Laughter And More, PM Modi's Candid Moments With Indian Workers In Kuwait

Media Coverage

Snacks, Laughter And More, PM Modi's Candid Moments With Indian Workers In Kuwait
NM on the go

Nm on the go

Always be the first to hear from the PM. Get the App Now!
...
PM to attend Christmas Celebrations hosted by the Catholic Bishops' Conference of India
December 22, 2024
PM to interact with prominent leaders from the Christian community including Cardinals and Bishops
First such instance that a Prime Minister will attend such a programme at the Headquarters of the Catholic Church in India

Prime Minister Shri Narendra Modi will attend the Christmas Celebrations hosted by the Catholic Bishops' Conference of India (CBCI) at the CBCI Centre premises, New Delhi at 6:30 PM on 23rd December.

Prime Minister will interact with key leaders from the Christian community, including Cardinals, Bishops and prominent lay leaders of the Church.

This is the first time a Prime Minister will attend such a programme at the Headquarters of the Catholic Church in India.

Catholic Bishops' Conference of India (CBCI) was established in 1944 and is the body which works closest with all the Catholics across India.