ಅಪಘಾನಿಸ್ತಾನ ಇಂದು ಸ್ವಾತಂತ್ರ್ಯದ 100ನೇ ವರ್ಷಾಚರಣೆ ಮಾಡುತ್ತಿರುವ ಸುಸಂದರ್ಭದಲ್ಲಿ ಪ್ರಧಾನ ಮಂತ್ರಿ ಅವರು ತಮ್ಮ ಪರವಾಗಿ ಮತ್ತು ಭಾರತದ 1.3 ಬಿಲಿಯನ್ ಜನತೆಯ ಪರವಾಗಿ ಅಪಘಾನಿಸ್ತಾನದ ಜನತೆಗೆ ಹೃದಯಸ್ಪರ್ಷಿ ಶುಭಾಶಯ ಕೋರಿದರು.
ಸರ್ವಾಂಗೀಣ ಬೆಂಬಲಕ್ಕಾಗಿ ಮಾಜಿ ಅಧ್ಯಕ್ಷರು ಭಾರತಕ್ಕೆ ಕೃತಜ್ಞತೆ ಸಲ್ಲಿಸಿದರಲ್ಲದೆ ಉಭಯ ದೇಶಗಳ ಜನತೆಯ ನಡುವಿನ ವಿಶೇಷವಾದ ಸದ್ಭಾವನೆಗೆ ತಮ್ಮ ಸಂತೋಷ ವ್ಯಕ್ತಪಡಿಸಿದರು.
ಶಾಂತಿ, ಭದ್ರತೆ, ಮತ್ತು ಸ್ಥಿರತೆಗಾಗಿ , ಹಾಗು ಎಲ್ಲರನ್ನೂ ಒಳಗೊಳ್ಳುವ , ಏಕತ್ರ, ನೈಜ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವವಾದೀ ಅಪಘಾನಿಸ್ತಾನಕ್ಕೆ ಭಾರತದ ನಿರಂತರ ಬೆಂಬಲವನ್ನು ಪ್ರಧಾನ ಮಂತ್ರಿ ಅವರು ಪುನರುಚ್ಚರಿಸಿದರು.