Quoteಜಾಗತಿಕ ಆರ್ಥಿಕತೆಯನ್ನು ಸದುಪಯೋಗಪಡಿಸಿಕೊಳ್ಳುವ ಈ ಯೋಜನೆಯಿಂದ ಭಾರತೀಯ ಕಂಪೆನಿಗಳು ಚಾಂಪಿಯನ್ ಆಗಿ ಹೊರಹೊಮ್ಮಲು ಸಹಕಾರಿ
Quoteಕಾರ್ಯಕ್ರಮದ ನೆರವಿನಿಂದ ನೇರವಾಗಿ 7.5 ಲಕ್ಷಕ್ಕೂ ಹೆಚ್ಚು: ಇದರ ಬೆಂಬಲಿತ ವಲಯದಲ್ಲಿ ಹಲವಾರು ಲಕ್ಷ ಉದ್ಯೋಗ ಸೃಷ್ಟಿ
Quoteಈ ಯೋಜನೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರ ಭಾಗವಹಿಸುವಿಕೆಗೆ ದಾರಿ
Quoteಐದು ವರ್ಷಗಳಲ್ಲಿ ಈ ಉದ್ಯಮ ವಲಯಕ್ಕೆ 10,683 ಕೋಟಿ ರೂ ಪ್ರೋತ್ಸಾಹ ಧನ
Quoteಈ ಯೋಜನೆಯಡಿ 19,000 ಕೋಟಿಗಿಂತ ಹೆಚ್ಚಿನ ಹೊಸ ಹೂಡಿಕೆಗೆ ಹಾಗೂ ಐದು ವರ್ಷಗಳಲ್ಲಿ 3 ಲಕ್ಷ ಕೋಟಿ ರೂಪಾಯಿಗೂ ಹೆಚ್ಚುವರಿ ಉತ್ಪಾದನಾ ವಹಿವಾಟಿಗೆ ಕಾರಣವಾಗುವ ನಿರೀಕ್ಷೆ
Quoteಮಹತ್ವಾಕಾಂಕ್ಷೆಯ ಜಿಲ್ಲೆಗಳು ಮತ್ತು 3 ಹಾಗೂ 4 ನೇ ಹಂತದ ಪಟ್ಟಣಗಳಲ್ಲಿ ಹೂಡಿಕೆಗೆ ಹೆಚ್ಚಿನ ಆದ್ಯತೆ
Quoteಈ ಯೋಜನೆಯಿಂದ ಗುಜರಾತ್, ಉತ್ತರ ಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಪಂಜಾಬ್, ಆಂಧ್ರಪ್ರದೇಶ, ತೆಲಂಗಾಣ, ಒಡಿಶಾ ಮತ್ತಿತರ ರಾಜ್ಯಗಳಿಗೆ ಅನುಕೂಲ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಆತ್ಮನಿರ್ಭರ ಭಾರತದತ್ತ ಹೆಜ್ಜೆ ಇಟ್ಟಿದ್ದು, ಜವಳಿ ವಲಯದಲ್ಲಿ ಎಂ.ಎಂ.ಎಫ್ ಜವಳಿ, ಎಂ.ಎಂ.ಎಫ್ ಪ್ರಾಬ್ರಿಕ್ ಮತ್ತು ತಾಂತ್ರಿಕ ಜವಳಿ ವಲಯದ 10 ವಿಭಾಗಗಳು/ ಉತ್ಪನ್ನಗಳಿಗಾಗಿ 10,683 ಕೊಟಿ ರೂ ಮೊತ್ತದ ಪಿ.ಎಲ್.ಐ ಯೋಜನೆಗೆ ಅನುಮೋದನೆ ನೀಡಲಾಗಿದೆ.

ಜವಳಿಗಾಗಿ ಪಿ.ಎಲ್.ಐ ಜತೆಗೆ ಆರ್.ಒ.ಸಿ.ಟಿ.ಎಲ್ ಮತ್ತು ಆರ್.ಒ.ಡಿ.ಟಿ.ಪಿ ಮತ್ತು ಈ ವಲಯದಲ್ಲಿನ ಸರ್ಕಾರದ ಇತರೆ ಕಾರ್ಯಕ್ರಮಗಳಿವೆ. ಸ್ಪರ್ಧಾತ್ಮಕವಾಗಿ ಕಚ್ಚಾ ವಸ್ತುಗಳನ್ನು ಒದಗಿಸುವ, ಕೌಶಲ್ಯ ಅಭಿವೃದ್ಧಿ ಇತ್ಯಾದಿ ಕ್ರಮಗಳು ಜವಳಿ ತಯಾರಿಕೆಯಲ್ಲಿ ಹೊಸ ಯುಗಕ್ಕೆ ಇದು ನಾಂದಿಹಾಡಲಿದೆ.

2021 – 22 ರ ಕೇಂದ್ರ ಬಜೆಟ್ ನಲ್ಲಿ 13 ವಲಯಗಳಿಗೆ 1.97 ಲಕ್ಷ ಕೋಟಿ ರೂಪಾಯಿ ಮೊತ್ತದ ಪಿ.ಎಲ್.ಐ ಕಾರ್ಯಕ್ರಮ ಪ್ರಕಟಿಸಲಾಗಿದ್ದು, ಇದರಲ್ಲಿ ಜವಳಿ ವಲಯ ಕೂಡ ಒಂದಾಗಿದೆ.  13 ವಲಯಗಳಿಗೆ ಪಿ.ಎಲ್.ಐ ಯೋಜನೆಯನ್ನು ಘೋಷಿಸಿರುವುದರಿಂದ ಮುಂದಿನ ಐದು ವರ್ಷಗಳಲ್ಲಿ 37.5 ಲಕ್ಷ ಕೋಟಿ ರೂ ಮೊತ್ತದ ಕನಿಷ್ಠ ಉತ್ಪಾದನೆಯಾಗುವ ನಿರೀಕ್ಷೆಯಿದೆ ಮತ್ತು ಐದು ವರ್ಷಗಳಲ್ಲಿ ಕನಿಷ್ಠ ಸುಮಾರು 1 ಕೋಟಿ ಉದ್ಯೋಗ ಸೃಷ್ಟಿಯಾಗುವ ಸಂಭವವಿದೆ.

ಪಿ.ಎಲ್.ಐ ಕಾರ್ಯಕ್ರಮದಿಂದ ದೇಶದ ತಾಂತ್ರಿಕ ಜವಳಿ ವಲಯ, ಸಿದ್ಧ ಉಡುಪು, ಎಂ.ಎಂ.ಎಫ್ ಪ್ಯಾಬ್ರಿಕ್ ಕ್ಷೇತ್ರಗಳಲ್ಲಿ ಉನ್ನತ ಮೌಲ್ಯದ ಉತ್ಪಾದನೆಯನ್ನು ಉತ್ತೇಜಿಸಲು ಸಾಧ್ಯವಾಗಲಿದೆ. ಪ್ರೋತ್ಸಾಹಕ ರಚನೆಯನ್ನು ಹೆಚ್ಚಿನ ಪ್ರಮಾಣದಲ್ಲಿ ರೂಪಿಸಲಾಗಿದ್ದು, ಈ ವಿಭಾಗಗಳ ಹೊಸ ಸಾಮರ್ಥ್ಯಗಳಲ್ಲಿ ಹೂಡಿಕೆ ಮಾಡಲು ಉದ್ಯಮವನ್ನು ಪ್ರೋತ್ಸಾಹಿಸಲಾಗುತ್ತಿದೆ. ಎಂ.ಎಂ.ಎಫ‍್ ವಲಯದಲ್ಲಿ ಉನ್ನತ ಮೌಲ್ಯದ ಬೆಳವಣಿಗೆಗೆ ಇದು ಹೊಸ ಪುಷ್ಠಿ ನೀಡಲಿದೆ ಮತ್ತು ಹತ್ತಿ ಮತ್ತು ಇತರೆ ನೈಸರ್ಗಿಕ ಆಧರಿತ ಜವಳಿ ಉದ್ಯಮದಲ್ಲಿ  ಉದ್ಯೋಗಕ್ಕಾಗಿ ಹೊಸ ಅವಕಾಶಗಳನ್ನು ಸೃಷ್ಟಿಸಲು ಇದು ಪೂರಕವಾಗಲಿದೆ. ಜತೆಗೆ ವ್ಯಾಪಾರ, ಭಾರತ  ಜವಳಿ ಕ್ಷೇತ್ರದಲ್ಲಿ ಐತಿಹಾಸಿಕವಾಗಿ ಹೊಂದಿದ್ದ ಪ್ರಬಲ ಸ್ಥಾನವನ್ನು ಮರಳಿ ಪಡೆಯಲು ಸಹಕಾರಿಯಾಗಲಿದೆ.

ತಾಂತ್ರಿಕ ಜವಳಿ ವಿಭಾಗ ಹೊಸ ಯುಗದ ಜವಳಿಯಾಗಿದ್ದು, ಮೂಲ ಸೌಕರ್ಯ, ನೀರು, ಆರೋಗ್ಯ ಮತ್ತು ನೈರ್ಮಲ್ಯ, ರಕ್ಷಣೆ, ಭದ್ರತೆ, ವಾಹನಗಳು, ವಾಯುಯಾನ ಸೇರಿದಂತೆ ಆರ್ಥಿಕತೆಯ ಹಲವಾರು ಕ್ಷೇತ್ರಗಳಿಗೆ ಇದು ಅನ್ವಯವಾಗುತ್ತದೆ. ಆರ್ಥಿಕತೆಯ ಈ ಕ್ಷೇತ್ರಗಳಲ್ಲಿ ಇದು ದಕ್ಷತೆಯನ್ನು ಹೆಚ್ಚಿಸುತ್ತದೆ. ಜವಳಿ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸಲು ಸರ್ಕಾರ ರಾಷ್ಟ್ರೀಯ ತಾಂತ್ರಿಕ ಜವಳಿ ಅಭಿಯಾನವನ್ನು ಆರಂಭಿಸಿದೆ. ಪಿ.ಎಲ್.ಐನಿಂದ ಈ ವಲಯದಲ್ಲಿ ಹೂಡಿಕೆಯನ್ನು ಹೆಚ್ಚಿಸಲು ಮತ್ತಷ್ಟು ನೆರವಾಗಲಿದೆ. ವಿವಿಧ ರೀತಿಯ ಪ್ರೊತ್ಸಾಹಕ ರಚನೆಯೊಂದಿಗೆ ಎರಡು ರೀತಿಯ ಹೂಡಿಕೆ ಸಾಧ್ಯವಿದೆ. ಯಾವುದೇ ವ್ಯಕ್ತಿ [ಯಾವುದೇ ಸಂಸ್ಥೆ/ ಕಂಪೆನಿ ಒಳಗೊಂಡಂತೆ] ಯಾವುದೇ ಘಟಕದಲ್ಲಿ 300 ಕೋಟಿ ರೂ ಕನಿಷ್ಠ ಹೂಡಿಕೆ ಮಾಡಬಹುದಾಗಿದ್ದು, ಇದು ಯಂತ್ರೋಪಕರಣಗಳು, ಪರಿಕರಗಳು ಮತ್ತು ಸಿವಿಲ್ ಕಾಮಗಾರಿ [ಭೂಮಿ ಮತ್ತು ಆಡಳಿತಾತ್ಮಕ ಕಟ್ಟಡ ವೆಚ್ಚ], [ಎಂ.ಎಂ.ಎಫ್ ಪ್ಯಾಬ್ರಿಕ್ಸ್, ಸಿದ್ಧ ಉಡುಪು] ವಲಯದಲ್ಲಿ ಅಧಿಸೂಚಿತ ಉತ್ಪನ್ನಗಳು, ತಾಂತ್ರಿಕ ಜವಳಿ ಕ್ಷೇತ್ರದಲ್ಲಿ ಭಾಗವಹಿಸಲು ಇದು ಸಹಕಾರಿಯಾಗಲಿದೆ.  ಎರಡನೇ ಭಾಗದಲ್ಲಿ [ಕನಿಷ್ಠ 100 ಕೋಟಿ] ಹೂಡಿಕೆ ಮಾಡಲು ಇಚ್ಚಿಸುವ ಯಾವುದೇ ವ್ಯಕ್ತಿ [ಸಂಸ್ಥೆಯು ಮತ್ತು ಕಂಪೆನಿಯನ್ನು ಒಳಗೊಂಡಂತೆ] ಯೋಜನೆಯ ಈ ಭಾಗದಲ್ಲಿ ಭಾಗವಹಿಸಲು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಇದರ ಜತೆಗೆ ಮಹತ್ವಾಕಾಂಕ್ಷೆಯ ಜಿಲ್ಲೆಗಳು, 3 ಮತ್ತು 4 ನೇ ಹಂತದ ಪಟ್ಟಣಗಳು, ಗ್ರಾಮೀಣ ಪ್ರದೇಶಗಳಲ್ಲಿ  ಹೂಡಿಕೆಗೆ ಆದ್ಯತೆ ನೀಡಲಾಗುವುದು ಮತ್ತು ಇದರಿಂದ ಹಿಂದುಳಿದ ಪ್ರದೇಶಗಳಲ್ಲಿ ಉದ್ಯಮ ಆರಂಭಿಸಲು ಪ್ರೋತ್ಸಾಹ ನೀಡಲಾಗುತ್ತಿದೆ.  ಈ ಕಾರ್ಯಕ್ರಮದಿಂದ ಗುಜರಾತ್, ಉತ್ತರ ಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಪಂಜಾಬ್, ಆಂಧ‍್ರಪ್ರದೇಶ, ತೆಲಂಗಾಣ, ಒಡಿಶಾ ಮತ್ತಿತರ ರಾಜ್ಯಗಳಲ್ಲಿ ಸಕಾರಾತ್ಮಕ ಪರಿಣಾಮ ಬೀರಲಿದೆ ಎಂದು ಹೇಳಿದರು.  

ಅಂದಾಜು ಐದು ವರ್ಷಗಳಲ್ಲಿ ಈ ಯೋಜನೆಯಡಿ 19,000 ಕೋಟಿಗಿಂತ ಹೆಚ್ಚಿನ ಹೊಸ ಹೂಡಿಕೆ ಜತೆಗೆ ಒಟ್ಟು ಮೂರು ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ವಹಿವಾಟು ಹಾಗೂ ಇದರ ನೆರವಿನಿಂದ ನೇರವಾಗಿ 7.5 ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗಲಿದೆ. ಇದರ ಬೆಂಬಲಿತ ವಲಯದಲ್ಲಿ ಹಲವಾರು ಲಕ್ಷ ಹೆಚ್ಚು ಉದ್ಯೋಗ ಸೃಷ್ಟಿಯಾಗುವ ಜತೆಗೆ 3 ಲಕ್ಷ  ರೂಪಾಯಿ ಹೆಚ್ಚುವರಿ ಉತ್ಪಾದನಾ ವಹಿವಾಟಿಗೆ ಕಾರಣವಾಗುವ ನಿರೀಕ್ಷೆಯಿದೆ. ಜವಳಿ ಉದ್ಯಮದಲ್ಲಿ ಪ್ರಧಾನವಾಗಿ ಮಹಿಳಾ ಉದ್ಯೋಗಿಗಳಿದ್ದು, ಹೀಗಾಗಿ ಈ ಕಾರ್ಯಕ್ರಮ ಮಹಿಳೆಯರನ್ನು ಸಬಲೀಕರಣಗೊಳಿಸುತ್ತದೆ ಮತ್ತು ಆರ್ಥಿಕತೆಯಲ್ಲಿ ಇವರು ಪಾಲ್ಗೊಳ್ಳುವುದನ್ನು ಔಪಚಾರಿಕವಾಗಿ ಹೆಚ್ಚಿಸುತ್ತದೆ.

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Sri Lanka's World Cup-winning stars laud PM Modi after meeting in Colombo: 'Most powerful leader in South Asia'

Media Coverage

Sri Lanka's World Cup-winning stars laud PM Modi after meeting in Colombo: 'Most powerful leader in South Asia'
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 6 ಎಪ್ರಿಲ್ 2025
April 06, 2025

Citizens Appreciate PM Modi’s Solidarity in Action: India-Sri Lanka Bonds