ರಾಷ್ಟ್ರೀಯ ವಿಜ್ಞಾನ ದಿನವಾದ ಇಂದು ಸರಕಾರವು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ 11 ಮಂದಿ ಭಾರತೀಯ ಮಹಿಳಾ ವಿಜ್ಞಾನಿಗಳ ಹೆಸರಿನಲ್ಲಿ 11 ಪೀಠಗಳನ್ನು ಘೋಷಿಸಿದೆ. ವಿವಿಧ ಕ್ಷೇತ್ರಗಳ ಯುವ ಮಹಿಳಾ ಸಂಶೋಧಕರಿಗೆ ಮನ್ನಣೆ ನೀಡಲು ಮತ್ತು ಮಹಿಳೆಯರನ್ನು ಸಶಕ್ತೀಕರಣ ಮಾಡಲು , ಅವರಿಗೆ ಪ್ರೋತ್ಸಾಹ ನೀಡಲು ಮತ್ತು ಉತ್ತೇಜನ ನೀಡಲು ಸರಕಾರ ಈ ಕ್ರಮ ಕೈಗೊಂಡಿದೆ.
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಹಿಳಾ ಸಶಕ್ತೀಕರಣಕ್ಕಾಗಿರುವ ಹಲವಾರು ಯೋಜನೆಗಳನ್ನು ಪ್ರಕಟಿಸಿದರು ಮತ್ತು ಈ ವರ್ಷದ ರಾಷ್ಟ್ರಿಯ ವಿಜ್ಞಾನ ದಿನದ ಘೋಷ ವಾಕ್ಯವಾಗಿರುವ “ವಿಜ್ಞಾನದಲ್ಲಿ ಮಹಿಳೆಯರು” ಶೀರ್ಷಿಕೆಯನ್ನು ಅನುಸರಿಸಿ ಈ ಪ್ರಸ್ತಾವಗಳನ್ನು ಮಾಡಲಾಗಿದೆ.
ಈ 11 ಪೀಠಗಳಲ್ಲಿ ಕೃಷಿ, ಜೈವಿಕ ತಂತ್ರಜ್ಞಾನ, ರೋಗನಿರೋಧಕ ವಿಜ್ಞಾನ, ಫೈಟೋವೈದ್ಯಕೀಯ, ಜೀವರಸಾಯನ ವಿಜ್ಞಾನ, ವೈದ್ಯಕೀಯ, ಸಮಾಜ ವಿಜ್ಞಾನ, ಭೂ ವಿಜ್ಞಾನ ಮತ್ತು ಹವಾಮಾನ/ ಪವನ ವಿಜ್ಞಾನ , ಇಂಜಿನಿಯರಿಂಗ್, ಗಣಿತ, ಮತ್ತು ಭೌತ ವಿಜ್ಞಾನ ಹಾಗು ಮೂಲಭೂತ ಸಂಶೋಧನಾ ಕ್ಷೇತ್ರಗಳ ಸಹಿತ ವಿವಿಧ ಸಂಶೋಧನಾ ವಲಯಗಳು ಸೇರಿವೆ.
ಸ್ಥಾಪನೆಯಾಗಿರುವ ಒಂದು ಪೀಠಕ್ಕೆ ಪ್ರಖ್ಯಾತ ಮಾನವಶಾಸ್ತ್ರಜ್ಞೆ ಡಾ. ಇರಾವತಿ ಕರ್ವೆ ಅವರ ಹೆಸರನ್ನಿರಿಸಲಾಗಿದೆ.
ವಿವರಗಳು ಈ ಕೆಳಗಿನಂತಿವೆ
ಕ್ರಮ ಸಂಖ್ಯೆ |
ಸ್ಥಾಪನೆಯಾಗುತ್ತಿರುವ ಪೀಠ ಈ ಕೆಳಗಿನವರ ಹೆಸರಿನಲ್ಲಿರಲಿದೆ |
ಸಂಬಂಧಿತ ವಿಜ್ಞಾನಿ ಕೆಲಸ ಮಾಡಿದ ಕ್ಷೇತ್ರ |
ಡಾ. ಅರ್ಚನಾ ಶರ್ಮಾ (1932-2008) ಪ್ರಖ್ಯಾತ ಕೋಶ- ತಳಿವಿಜ್ಞಾನ |
ಕೃಷಿ ಮತ್ತು ಆ ಸಂಬಂಧಿ ಸಂಶೋಧನೆ |
|
ಡಾ. ಜಾನಕಿ ಅಮ್ಮಾಳ್ (1897-1984) ಸಸ್ಯವಿಜ್ಞಾನಿ |
ಜೀವ ತಂತ್ರಜ್ಞಾನ
|
|
ಡಾ. ದರ್ಶನ್ ರಂಗನಾಥನ್ (1941-2001) ಸಾವಯವ ರಸಾಯನವಿಜ್ಞಾನಿ |
ರೋಗನಿರೋಧಕ ಶಾಸ್ತ್ರ |
|
ಡಾ. ಅಶಿಮಾ ಚಟರ್ಜಿ (1917-2006) ಶ್ರೇಷ್ಟ ರಸಾಯನ ತಜ್ಞೆ |
ಸಾವಯವ ರಸಾಯನ ಶಾಸ್ತ್ರ, ಫೈಟೋಮೆಡಿಸಿನ್
|
|
ಡಾ. ಕದಂಬಿನಿ ಗಂಗೂಲಿ (1861-1923) ವೈದ್ಯರು |
ವೈದ್ಯಕೀಯ |
|
ಡಾ. ಇರಾವತಿ ಕಾರ್ವೆ (1905-1970) ಮಾನವ ಶಾಸ್ತ್ರ ಅಧ್ಯಯನ |
ಸಮಾಜವಿಜ್ಞಾನ |
|
ಡಾ. ಅನ್ನಾ ಮಣಿ (1918-2001) ಆದ್ಯಪ್ರವರ್ತಕ ಭಾರತೀಯ ಹವಾಮಾನ ತಜ್ಞೆ |
ಪವನವಿಜ್ಞಾನ |
|
ಡಾ. ರಾಜೇಶ್ವರಿ ಚಟರ್ಜಿ (1922-2010) ಕರ್ನಾಟಕ ರಾಜ್ಯದಿಂದ ಮೊದಲ ಮಹಿಳಾ ಇಂಜಿನಿಯರ್ |
ಇಂಜಿನಿಯರಿಂಗ್, ತಂತ್ರಜ್ಞಾನ |
|
ಡಾ. ರಾಮನ್ ಪರಿಮಳ (ಜನನ 1948) ಗಣಿತಜ್ಞೆ (ಭಟ್ನಾಗರ್ ಪ್ರಶಸ್ತಿ, 1987) |
ಗಣಿತ |
|
ಬಿಭಾ ಚೌಧುರಿ (1913-1991) |
ಭೌತ ವಿಜ್ಞಾನ |
|
ಕಮಾಲ್ ರಣದಿವೆ (8 ನವೆಂಬರ್ 1917-2001) (ವೈದ್ಯಕೀಯ) |
ಜೀವ ವೈದ್ಯಕೀಯ ಸಂಶೋಧನೆ. |
ಪೀಠಗಳು ಮತ್ತು ಸಂಶೋಧನಾ ಕ್ಷೇತ್ರಗಳ ಇತರ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ. click here