ಫ್ರಾನ್ಸ್ ನ ಯುರೋಪ್ ಮತ್ತು ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಶ್ರೀಜೀನ್-ವೈಸ್ಲೆ ಡ್ರಯಾನ್ ಅವರಿಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
2017ರ ಜೂನ್ ನಲ್ಲಿ ಪ್ರಧಾನಮಂತ್ರಿಯವರು ಫ್ರಾನ್ಸ್ ಗೆ ನೀಡಿದ ಭೇಟಿಯ ತರುವಾಯ ದ್ವಿಪಕ್ಷೀಯ ಬಾಂಧವ್ಯದಲ್ಲಿ ಆಗಿರುವ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಅವರು ಪ್ರಧಾನಿಯವರಿಗೆ ವಿವರಿಸಿದರು.
ಭಾರತ – ಫ್ರಾನ್ಸ್ ನ ವೃದ್ಧಿಸುತ್ತಿರುವ ಕಾರ್ಯಕ್ರಮಗಳಿಗಾಗಿ ಪ್ರಧಾನಮಂತ್ರಿಯವರು, ಶ್ರೀ ಲಿ ಡ್ರಯಾನ್ ಅವರು ಹಾಲಿ ಹುದ್ದೆಯಲ್ಲಿ ಮತ್ತು ಈ ಹಿಂದೆ ಫ್ರಾನ್ಸ್ ನ ರಕ್ಷಣಾ ಸಚಿವರಾಗಿ ನೀಡಿದ ಕೊಡುಗೆಯನ್ನು ಪ್ರಶಂಸಿಸಿದರು.
ಭಾರತ- ಫ್ರಾನ್ಸ್ ನಡುವಿನ ವ್ಯೂಹಾತ್ಮಕ ಪಾಲುದಾರಿಕೆಯು ಕೇವಲ ದ್ವಿಪಕ್ಷೀಯ ವಿಚಾರಗಳಿಗಷ್ಟೇ ಸೀಮಿತವಾಗಿಲ್ಲ, ಜೊತೆಗೆ ಪ್ರಾದೇಶಿಕ ಮತ್ತು ಜಾಗತಿಕ ಶಾಂತಿ ಮತ್ತು ಸ್ಥಿರತೆಯಲ್ಲೂ ಶಕ್ತಿಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು.
ಅನುಕೂಲಕರವಾದ ಹತ್ತಿರದ ದಿನಾಂಕದಲ್ಲಿ ಅಧ್ಯಕ್ಷ ಮೆಕ್ರಾನ್ ಅವರನ್ನು ಭಾರತದಲ್ಲಿ ಸ್ವಾಗತಿಸಲು ತಾವು ಎದಿರು ನೋಡುತ್ತಿರುವುದಾಗಿ ಪ್ರಧಾನಮಂತ್ರಿ ಹೇಳಿದರು.