ಯುರೋಪ್ ನ ಸಚಿವ ಹಾಗೂ ಫ್ರಾನ್ಸಿನ ವಿದೇಶಾಂಗ ವ್ಯವಹಾರಗಳ ಸಚಿವ ಗೌರವಾನ್ವಿತ ಶ್ರೀ ಜೀನ್ಸ್ – ಯೆವೆಸ್ ಲೆ ಡ್ರಿಯಾನ್ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಇಂದು ಭೇಟಿಯಾದರು.
ಪ್ರಧಾನಮಂತ್ರಿ ಅವರು ಫ್ರಾನ್ಸಿನ ಸ್ಟ್ರಾಸ್ಬೌರ್ಗ ನಲ್ಲಿ ಇತ್ತೀಚೆಗೆ ಸಂಭವಿಸಿದ ಉಗ್ರರ ದಾಳಿಯ ಸಂತ್ರಸ್ತರಿಗೆ ಹೃದಯಪೂರ್ವಕ ಸಂತಾಪ ವ್ಯಕ್ತಪಡಿಸಿದರು ಮತ್ತು ಉಗ್ರರ ವಿರುದ್ದದ ಹೋರಾಟದಲ್ಲಿ ಭಾರತ ಸದಾ ಫ್ರಾನ್ಸಿನ ಜೊತೆ ಇರುತ್ತದೆ ಎಂದು ಹೇಳಿದರು.
ಅಧ್ಯಕ್ಷ ಮಾರ್ಕೊನ್ ಅವರ 2018ರ ಔಪಚಾರಿಕ ಭಾರತ ಭೇಟಿಯನ್ನು ಹಾಗೂ ಇತ್ತೀಚೆಗೆ ಅರ್ಜೆಂಟೀನಾದಲ್ಲಿ ಜರುಗಿದ ಜ-20 ಶೃಂಗಸಭೆಯ ಸಂದರ್ಭದಲ್ಲಿ ಅವರೊಂದಿಗೆ ನಡೆಸಿದ ಮಾತುಕತೆಗಳನ್ನು ಪ್ರಧಾನಮಂತ್ರಿ ಅವರು ಈ ಸಂದರ್ಭದಲ್ಲಿ ಸ್ಮರಿಸಿಕೊಂಡರು.
ಫ್ರೆಂಚ್ ಚಿಂತನೆಯ ಪ್ರಾಂತೀಯ ಹಾಗೂ ಜಾಗತಿಕ ವಿಚಾರಗಳು ಮತ್ತು ದ್ವಿಪಕ್ಷೀಯ ಸಂಬಂಧಗಳಲ್ಲಿ ಆಗಿರುವ ಇತ್ತೀಚೆಗಿನ ಬೆಳವಣಿಗೆಗಳ ಮಾಹಿತಿಯನ್ನು ಶ್ರೀ ಲೆ ಡ್ರಿಯಾನ್ ಅವರು ಪ್ರಧಾನಮಂತ್ರಿ ಅವರಿಗೆ ನೀಡಿದರು. ರಕ್ಷಣೆ, ಬಾಹ್ಯಾಕಾಶ, ಉಗ್ರನಿಗ್ರಹ, ಕಡಲ ಭದ್ರತೆ, ಮತ್ತು ನಾಗರಿಕ ಪರಮಾಣು ಸಹಕಾರ ಮುಂತಾದ ಕ್ಷೇತ್ರಗಳಲ್ಲೆಲ್ಲಾ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವುದನ್ನು ಪ್ರಧಾನಮಂತ್ರಿ ಅವರು ಸ್ವಾಗತಿಸಿದರು.