ಜಪಾನಿನ ಮಾಜಿ ಪ್ರಧಾನ ಮಂತ್ರಿ ಗೌರವಾನ್ವಿತ ಶ್ರೀ ಯೋಶಿಹಿಡೆ ಸುಗಾ ಅವರು 2022 ರ ಮೇ 24 ರಂದು ಟೋಕಿಯೋದಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
2021 ರ ಸೆಪ್ಟೆಂಬರ್ ನಲ್ಲಿ ವಾಷಿಂಗ್ಟನ್ ಡಿ.ಸಿ.ಯಲ್ಲಿ ನಡೆದ ಕ್ವಾಡ್ ನಾಯಕರ ಶೃಂಗ ಸಭೆಯ ನೇಪಥ್ಯದಲ್ಲಿ ಮೊದಲ ಬಾರಿಗೆ ಪರಸ್ಪರ ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಿದ ಸಂದರ್ಭವೂ ಸೇರಿದಂತೆ ತಮ್ಮ ಹಿಂದಿನ ಮಾತುಕತೆಗಳನ್ನು ಅವರು ಸ್ಮರಿಸಿಕೊಂಡರು. ಭಾರತ-ಜಪಾನ್ ಬಾಂಧವ್ಯವನ್ನು ಬಲಪಡಿಸುವಲ್ಲಿ ಸುಗಾ ಅವರ ಕೊಡುಗೆಯ ಬಗ್ಗೆ ಪ್ರಧಾನ ಮಂತ್ರಿ ಪ್ರಶಂಸೆ ವ್ಯಕ್ತಪಡಿಸಿದರು.
ಭಾರತ-ಜಪಾನ್ ವಿಶೇಷ ವ್ಯೂಹಾತ್ಮಕ ಮತ್ತು ಜಾಗತಿಕ ಸಹಭಾಗಿತ್ವವನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಉಭಯ ನಾಯಕರು ಪರಸ್ಪರ ಮಾಹಿತಿ ವಿನಿಮಯ ಮಾಡಿಕೊಂಡರು. ಜಪಾನೀ ಸಂಸತ್ ಸದಸ್ಯರ ನಿಯೋಗದ ನಾಯಕತ್ವ ವಹಿಸಿಕೊಂಡು ಭಾರತಕ್ಕೆ ಬರುವಂತೆ ಸುಗಾ ಅವರಿಗೆ ಪ್ರಧಾನ ಮಂತ್ರಿ ಅವರು ಆಹ್ವಾನವಿತ್ತರು.
Glad to have met former PM @sugawitter in Tokyo. pic.twitter.com/9zdyWIBb8n
— Narendra Modi (@narendramodi) May 24, 2022