ಜಪಾನಿನ ವಿದೇಶಿ ವ್ಯವಹಾರಗಳ ಸಚಿವರಾದ ಶ್ರೀ ತೋಷಿಮಿಟ್ಸು ಮತ್ತು ರಕ್ಷಣಾ ಸಚಿವರಾದ ಶ್ರೀ ತಾರೋ ಕೋನೋ ಅವರು ಭಾರತ-ಜಪಾನ್ ವಿದೇಶಾಂಗ ಮತ್ತು ರಕ್ಷಣಾ ಸಚಿವಾಲಯ ಮಟ್ಟದ ಮಾತುಕತೆಗೆ (2+2 ) ಭಾರತಕ್ಕೆ ಆಗಮಿಸಿದ್ದು, ಅವರು ಇಂದು ಪ್ರಧಾನ ಮಂತ್ರಿ ಅವರನ್ನು ಭೇಟಿ ಮಾಡಿದರು.
ಭಾರತ ಭೇಟಿಯಲ್ಲಿರುವ ಸಚಿವರನ್ನು ಪ್ರಧಾನ ಮಂತ್ರಿ ಅವರು ಸ್ವಾಗತಿಸಿದರು ಮತ್ತು 2018 ರ ಅಕ್ಟೋಬರ್ ತಿಂಗಳಲ್ಲಿ ಜಪಾನಿನಲ್ಲಿ ನಡೆದ 13 ನೇ ಭಾರತ –ಜಪಾನ್ ವಾರ್ಷಿಕ ಶೃಂಗದಲ್ಲಿ ನಿರ್ದಿಷ್ಟಪಡಿಸಲಾದ ಗುರಿಗಳನ್ನು ಸಾಧಿಸುವಲ್ಲಿ ಉಭಯ ಕಡೆಯವರೂ ಸಮರ್ಥರಾಗಿರುವ ಬಗ್ಗೆ ತಮ್ಮ ತೃಪ್ತಿಯನ್ನು ವ್ಯಕ್ತಪಡಿಸಿದರು. ಸಭೆಯು ಭಾರತ ಮತ್ತು ಜಪಾನ್ ನಡುವೆ ದ್ವಿಪಕ್ಷೀಯ ವ್ಯೂಹಾತ್ಮಕ, ಭದ್ರತಾ, ಮತ್ತು ರಕ್ಷಣಾ ಸಹಕಾರವನ್ನು ಇನ್ನಷ್ಟು ಬಲಪಡಿಸುವ ಆಶಯವನ್ನು ಪ್ರಧಾನ ಮಂತ್ರಿ ಶ್ರೀ ಮೋದಿ ಅವರು ವ್ಯಕ್ತಪಡಿಸಿದರು.
ವಿಶ್ವದ, ಪ್ರಾದೇಶಿಕ ವಲಯದ ಮತ್ತು ಉಭಯ ದೇಶಗಳ ಜನತೆಯ ಪ್ರಯೋಜನಕ್ಕಾಗಿ ಭಾರತ- ಜಪಾನ್ ಬಾಂಧವ್ಯಗಳು ಸರ್ವಾಂಗೀಣವಾಗಿ ಅಭಿವೃದ್ಧಿಯಾಗಬೇಕಿರುವ ಅವಶ್ಯಕತೆಯನ್ನು ಪ್ರಧಾನ ಮಂತ್ರಿ ಅವರು ಒತ್ತಿ ಹೇಳಿದರು. ಉಭಯ ದೇಶಗಳ ನಡುವಿನ ನಿಯಮಿತ, ಉನ್ನತ ಮಟ್ಟದ ವಿನಿಮಯಗಳು ಬಾಂಧವ್ಯದ ಆಳ ಮತ್ತು ಅದರ ಬಲಿಷ್ಟತೆಗೆ ನಿದರ್ಶನ ಎಂಬುದನ್ನೂ ಪ್ರಧಾನ ಮಂತ್ರಿ ಅವರು ಉಲ್ಲೇಖಿಸಿದರು.
ತಾವು ಮತ್ತು ಪ್ರಧಾನ ಮಂತ್ರಿ ಅಬೆ ಅವರು ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಬಾಂಧವ್ಯ ಅಭಿವೃದ್ಧಿಗೆ ಹೆಚ್ಚಿನ ಮಹತ್ವ ಕೊಡುವುದಾಗಿ ಪ್ರಧಾನ ಮಂತ್ರಿ ಅವರು ಹೇಳಿದರು. ಮುಂದಿನ ತಿಂಗಳಲ್ಲಿ ನಡೆಯುವ ಭಾರತ-ಜಪಾನ್ ವಾರ್ಷಿಕ ಶೃಂಗದಲ್ಲಿ ಪ್ರಧಾನ ಮಂತ್ರಿ ಅಬೆ ಅವರನ್ನು ಭಾರತಕ್ಕೆ ಸ್ವಾಗತಿಸುವುದನ್ನು ತಾವು ಎದುರು ನೋಡುತ್ತಿರುವುದಾಗಿಯೂ ಅವರು ತಿಳಿಸಿದರು. ಜಪಾನಿನೊಡನೆ ಭಾರತದ ಬಾಂಧವ್ಯ ಭಾರತ –ಫೆಸಿಫಿಕ್ ಗಾಗಿ ನಮ್ಮ ಚಿಂತನೆ ಮತ್ತು ಮುನ್ನೋಟವು ಈ ಪ್ರಾದೇಶಿಕ ವಲಯದಲ್ಲಿ ಶಾಂತಿ, ಸ್ಥಿರತೆ ಹಾಗು ಸಮೃದ್ದಿಯನ್ನು ಮುಖ್ಯಾಂಶವನ್ನಾಗಿ ಹೊಂದಿದೆ ಮತ್ತು ಅದು ಭಾರತದ ಪೂರ್ವದಲ್ಲಿ ಕಾರ್ಯಾಚರಿಸುವ ನೀತಿಯ ಮೈಲಿಗಲ್ಲಾಗಿದೆ ಎಂದೂ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದರು.