QuoteFor me, Rising India means the rise of 125 crores Indians: PM Modi
QuoteIn many countries it is believed that government leads change. But now common citizens lead change and government follows: PM at #News18RisingIndia Summit
Quote#SwachhBharatMission has become a public revolution. The country's people have accepted digital payments and made it their weapon: PM at #News18RisingIndia
QuoteIndia is the fastest growing country to make digital payments at large: PM Modi at #News18RisingIndia
QuoteThe transformational shift in India is due to people and their will power: PM at #News18RisingIndia Summit
QuoteThe #UjjwalaYojana is not only changing the face of kitchens, but also face of the nation: PM Modi at #News18RisingIndia summit
QuoteOur Govt is focused on Act East and India Act Fast for East: PM Modi at #News18RisingIndia summit
QuoteIsolation to Integration, is the only way to a ‘Rising India.’ And we have adopted this mantra: PM at #News18RisingIndia summit
QuoteThis Government is focused on the mantra – No Silos, only Solution: PM Narendra Modi at #News18RisingIndia summit
QuoteWe now have nearly 80% sanitation coverage in the country: PM Modi at #News18RisingIndia Summit
QuoteYoga has become a mass movement today: PM Modi at #News18RisingIndia summit
QuoteIt’s very important to have affordable and easily accessible healthcare. Government has opened Jan Aushadhi Kendras that provide medicines at affordable prices: PM Modi at #News18RisingIndia summit
QuoteWe aim to bring health wellness in every panchayat and make healthcare affordable to people. We have reduced prices of heart stents and knee implants: PM at #News18RisingIndia summit
QuoteWe have launched #NationalNutritionMission. This will have a positive impact on health of mother and child: PM Modi at #News18RisingIndia summit
QuoteThe power sector is undergoing transformation to fight power shortage: PM Narendra Modi at #News18RisingIndia summit
QuoteIndia is moving from power shortage to power surplus, network failure to exporter. We have also moved towards 'One Nation One Grid': PM Modi at #News18RisingIndia Summit
QuoteIndia is spearheading solar revolution in the world. In the last 4 years, India's influence on world stage has increased consistently: PM at #News18RisingIndia Summit
QuoteIndia is working towards eradicating TB by 2025, which is fine years ahead of global aim: PM Modi at #News18RisingIndia Summit
QuoteIndia helped 48 countries during the crisis in Yemen. Our motto of 'Sabka Saath, Sabka Vikas' is not just restricted to our country, but covers the world: PM Modi at #News18RisingIndiaSummit
QuoteIndia has contributed massively to world economy. Our contribution has increased by 7 times: PM Modi at #News18RisingIndia Summit
QuoteIndia is today among the top two emerging economies and one of the most popular FDI destinations: PM Modi at #News18RisingIndia Summit
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನೆಟ್ವರ್ಕ್ 18 ಆಯೋಜಿಸಿದ್ದ ರೈಸಿಂಗ್ ಇಂಡಿಯಾ ಶೃಂಗಸಭೆ ಉದ್ದೇಶಿಸಿ ಭಾಷಣ ಮಾಡಿದರು.
 
ನಾವು Rising ಬಗ್ಗೆ ಮಾತನಾಡಿದಾಗ, ಅದು ದೇಶದ ವಿಚಾರದಲ್ಲಿ, ಅದಕ್ಕೆ ವಿಶಾಲ ವ್ಯಾಪ್ತಿಯಿದೆ ಎಂದರು. ಆರ್ಥಿಕತೆಯ ಉದಯಕ್ಕೆ ಹೊರತಾಗಿ, ಭಾರತದ ಉದಯ, ಭಾರತ ದೇಶದ ಜನರ ಸ್ವಾಭಿಮಾನದ ಉದಯಕ್ಕೂ ಅನ್ವಯಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಜನರ ಸಂಘಟಿತ ಇಚ್ಛಾಶಕ್ತಿಯಿಂದ ಅಸಾಧ್ಯವಾದ್ದನ್ನೂ ಸಾಧಿಸಬಹುದು ಎಂದರು. ಇಂದು ಈ ಸಂಘಟಿತ ಇಚ್ಛಾಶಕ್ತಿ ನವಭಾರತದ ಸಂಕಲ್ಪ ಸಾಧನೆಯತ್ತ ಕಾರ್ಯ ಮಾಡುತ್ತಿದೆ ಎಂದರು.
 
ಹಲವು ರಾಷ್ಟ್ರಗಳ ಸರ್ಕಾರದ ನೇತೃತ್ವದಲ್ಲಿ ಅಭಿವೃದ್ದಿ ಮತ್ತು ಬದಲಾವಣೆ ಆಗಬೇಕು,  ನಾಗರಿಕರು ಅದನ್ನು ಅನುಸರಿಸಬೇಕು ಎಂಬ ಸಮಾನ ಗ್ರಹಿಕೆ ಇದೆ. ಇದಕ್ಕೆ ವಿರುದ್ಧವಾಗಿ ಭಾರತದಲ್ಲಿ, ಕಳೆದ ನಾಲ್ಕುವರ್ಷಗಳಲ್ಲಿ ಈ ಪ್ರವೃತ್ತಿ ತದ್ವಿರುದ್ಧವಾಗಿದೆ. ಈಗ ಜನರು ನೇತೃತ್ವ ವಹಿಸುತ್ತಿದ್ದಾರೆ, ಸರ್ಕಾರ ಅದನ್ನು ಅನುಸರಿಸುತ್ತಿದೆ ಎಂದೂ ಹೇಳಿದರು. 
|
ಸ್ವಚ್ಛ ಭಾರತ ಅಭಿಯಾನ ಅಲ್ಪಾವಧಿಯಲ್ಲೇ ಒಂದು ಜನಾಂದೋಲನವಾಗಿದೆ. ನಾಗರಿಕರು ಡಿಜಿಟಲ್ ಪಾವತಿಯನ್ನು ಭ್ರಷ್ಟಾಚಾರ ಮತ್ತು ಕಪ್ಪುಹಣದ ವಿರುದ್ಧ ಒಂದು ಸಾಧನವಾಗಿ ಬಳಸುತ್ತಿದ್ದಾರೆ ಎಂದರು. ದೇಶದ ಜನರು ಸರ್ಕಾರಕ್ಕೆ ದೊಡ್ಡ ನಿರ್ಧಾರ ಕೈಗೊಂಡು ಅದರ ಜಾರಿಗೆ ಸ್ಪೂರ್ತಿ ನೀಡಿದರು ಎಂದರು. ಭಾರತದಲ್ಲಿನ ಪರಿವರ್ತನಾತ್ಮಕ ಬದಲಾವಣೆ, ಜನರ ಸಂಕಲ್ಪದಿಂದ ಸಾಧ್ಯವಾಗಿದೆ ಎಂದರು. ರಾಷ್ಟ್ರೀಯ ಮಟ್ಟದಲ್ಲಿ ಅಸಮತೋಲನೆ ತಗ್ಗಿಸಲು ಸರ್ಕಾರ ಕಾರ್ಯೋನ್ಮುಖವಾಗಿದೆ ಎಂದರು. ದೃಶ್ಯ ತುಣುಕಿನ ನೆರವಿನಿಂದ ಅವರು ಉಜ್ವಲ ಯೋಜನೆ ಅಡುಗೆ ಮನೆಗಳನ್ನಷ್ಟೇ ಅಲ್ಲ, ಇಡೀ ಕುಟುಂಬವನ್ನು ಹೇಗೆ ಬದಲಾವಣೆ ಮಾಡಿದೆ ಎಂಬುದನ್ನು ತೋರಿಸಿದರು. ಇದು ನಮ್ಮ ಸಾಮಾಜಿಕ ಸ್ವರೂಪದ ದೊಡ್ಡ ಅಸಮತೋಲನೆಯನ್ನು ನಿವಾರಿಸುತ್ತಿದೆ ಎಂದರು.
 
ಮಣಿಪುರದಲ್ಲಿ ಒಂದು ದಿನ ಕಳೆದು ತಾವು ಮರಳಿದ್ದಾಗಿ ಹೇಳಿದ ಪ್ರಧಾನಿ, ಅಲ್ಲಿ ತಾವು ವಿಜ್ಞಾನ ಕಾಂಗ್ರೆಸ್ ಉದ್ಘಾಟಿಸಿ, ಕ್ರೀಡಾ ವಿಶ್ವವಿದ್ಯಾಲಯಕ್ಕೆ ಶಂಕುಸ್ಥಾಪನೆ ನೆರವೇರಿಸಿ, ಈಶಾನ್ಯ ವಲಯಕ್ಕೆ ಹಲವು ಇತರ ಮಹತ್ವದ ಯೋಜನೆ ಆರಂಭಿಸಿದ್ದಾಗಿ ತಿಳಿಸಿದರು. ಈಶಾನ್ಯ ಭಾರತದ ಭಾವನಾತ್ಮಕ ಬೆಸುಗೆ ಮತ್ತು ಜನಸಂಖ್ಯೆಯ ಲಾಭವನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದರು. ಭಾರತದ ಪೂರ್ವಕ್ಕಾಗಿ ಪೂರ್ವದತ್ತ ಕ್ರಮ ಮತ್ತು ತ್ವರಿತ ಕ್ರಮ ಮಂತ್ರದೊಂದಿಗೆ ಸರ್ಕಾರ ಕಾರ್ಯೋನ್ಮುಖವಾಗಿದೆ ಎಂದರು. ಇದರಲ್ಲಿ ಕೇವಲ ಈಶಾನ್ಯ ಮಾತ್ರವಲ್ಲ, ಪೂರ್ವ ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ಹಾಗೂ ಒಡಿಶಾ ಇತ್ಯಾದಿ ಸೇರಿದೆ ಎಂದರು.
 
|
ಅವರು ಅಸ್ಸಾಂನ ಅನಿಲ ಕ್ರಾಕರ್ ಯೋಜನೆ ಉದಾಹರಣೆ ನೀಡಿದರು, ಗೋರಖ್ಪುರ, ಬರೌನಿ ಮತ್ತು ಸಿಂದ್ರಿಯ ಗೊಬ್ಬರ ಘಟಕಗಳ ಪುನಶ್ಚೇತನ, ಜಗದೀಶ್ಪುರ ಹಾಲ್ಡಿಯಾ ಅನಿಲ ಕೊಳವೆ ಮಾರ್ಗ, ಮತ್ತು ದೋಲಾ ಸಾಡಿಯಾ ಸೇತುವೆಗಳು ಈ ವಲಯಕ್ಕೆ ಯೋಜನೆಗಳ ಆರಂಭದ ಮೂಲಕ ಹೇಗೆ ಒತ್ತು ನೀಡಲಾಗುತ್ತಿದೆ ಎಂಬುದನ್ನು ಬಿಂಬಿಸುತ್ತವೆ ಎಂದರು. ಪೂರ್ವ ಭಾರತದಲ್ಲಿ 12 ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದೂ ತಿಳಿಸಿದರು.
 
ವಿದ್ಯುದ್ದೀಕರಣವೇ ಆಗದ 18 ಸಾವಿರ ಹಳ್ಳಿಗಳ ಪೈಕಿ ಸುಮಾರು 13 ಸಾವಿರ ಪೂರ್ವ ಭಾರತದಲ್ಲೇ ಇತ್ತು ಮತ್ತು 5 ಸಾವಿರ ಈಶಾನ್ಯ ಭಾಗದಲ್ಲಿತ್ತು ಎಂದು  ಪ್ರಧಾನಮಂತ್ರಿ ತಿಳಿಸಿದರು. ಈ ಗ್ರಾಮಗಳಿಗೆ ವಿದ್ಯುತ್ ನೀಡುವ ಕಾರ್ಯ ಶೀಘ್ರವೇ ಆಗಲಿದೆ ಎಂದೂ ತಿಳಿಸಿದರು. ಸೌಭಾಗ್ಯ ಯೋಜನೆ ಪ್ರತಿಯೊಂದು ಮನೆಗೂ ವಿದ್ಯುತ್ ಸಂಪರ್ಕ ಒದಗಿಸುತ್ತದೆ ಎಂದರು. ಪೂರ್ವ ಭಾರತದ ಈ ನಡೆ, ಚದುರುವಿಕೆಯಿಂದ ಒಗ್ಗೂಡಿಸುವಿಕೆಯತ್ತ ಸಾಗಿದೆ. ಇದು ರೈಸಿಂಗ್ ಇಂಡಿಯಾಕ್ಕೆ ಬಲ ನೀಡುತ್ತದೆ ಎಂದರು.
 
ಆರೋಗ್ಯ ವಲಯದ ಬಗ್ಗೆ ಮಾತನಾಡಿದ ಪ್ರಧಾನಿ, ಸರ್ಕಾರವು ವಲಯದ ನಾಲ್ಕು ಆಧಾರ  ಸ್ತಂಭಗಳ ಮೇಲೆ ಗಮನ ಹರಿಸಿದೆ ಎಂದರು.
 
·        ಆರೋಗ್ಯ ರಕ್ಷಣೆ
 
·        ಕೈಗೆಟಕುವ ದರದ ಆರೋಗ್ಯ ಆರೈಕೆ,
 
·        ಪೂರೈಕೆ ಕಡೆಯ ಮಧ್ಯಸ್ಥಿಕೆ
 
·        ಯಂತ್ರೋಪಾದಿಯ ಮಧ್ಯಪ್ರವೇಶ. 
 
ಆರೋಗ್ಯ ರಕ್ಷಣೆಯ ಕುರಿತಂತೆ ಇಂದು 13 ಕೋಟಿ ಮನೆಗಳಲ್ಲಿ ಶೌಚಾಲಯವಿದೆ, 2014ರಲ್ಲಿ ಈ ಪ್ರಮಾಣ 6.5 ಕೋಟಿ ಆಗಿತ್ತು ಎಂದರು. ನೈರ್ಮಲ್ಯದ ಪ್ರಮಾಣ ಶೇ.38ರಿಂದ ಶೇ.80ಕ್ಕೆ ಏರಿಕೆ ಆಗಿದೆ ಎಂದರು. ಯೋಗ ಒಂದು ಸಾಮೂಹಿಕ ಚಳವಳಿಯಾಗಿದೆ ಎಂದರು. ಇತ್ತೀಚಿನ ಬಜೆಟ್ ನಲ್ಲಿ ಪ್ರಕಟಿಸಲಾದ ಕ್ಷೇಮ ಕೇಂದ್ರಗಳ ಪ್ರಸ್ತಾಪ ಮಾಡಿದರು. ರೋಗ ನಿರೋಧಕ ಲಸಿಕೀಕರಣದ ಬಗ್ಗೆಯೂ ಅವರು ಪ್ರಸ್ತಾಪಿಸಿದರು. 3 ಸಾವಿರ ಜನೌಷಧಿ ಕೇಂದ್ರಗಳನ್ನು ದೇಶದಾದ್ಯಂತ ಸ್ಥಾಪಿಸಲಾಗಿದೆ. ಅಲ್ಲಿ 800ಕ್ಕೂ ಹೆಚ್ಚು ಔಷಧಗಳು ಕಡಿಮೆ ದರದಲ್ಲ ದೊರೆಯುತ್ತಿವೆ ಎಂದರು. ಸ್ಟಂಟ್ ಗಳ ಮತ್ತು ಮಂಡಿ ಚಿಪ್ಪುಗಳ ಬೆಲೆಯನ್ನೂ ನಿಯಂತ್ರಿಸಲಾಗಿದೆ ಎಂದರು.
 
ಆಯುಷ್ಮಾನ್ ಭಾರತ ಯೋಜನೆಯು 10 ಕೋಟಿ ಕುಟುಂಬಗಳಿಗೆ ಆರೋಗ್ಯದ ಖಾತ್ರಿ ಒದಗಿಸುತ್ತದೆ ಎಂದು ಹೇಳಿದರು.
 
ವೈದ್ಯರುಗಳ ಕೊರತೆಯನ್ನು ನೀಗಿಸಲು ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶದ ಸಂಖ್ಯೆಯನ್ನು ಹೆಚ್ಚಿಸಲಾಗಿದೆ ಎಂದರು. ಅಂತಾರಾಷ್ಟ್ರೀಯ ಮಹಿಳಾ ದಿನದಂದು ಆರಂಭಿಸಲಾದ ರಾಷ್ಟ್ರೀಯ ಪೌಷ್ಟಿಕ ಅಭಿಯಾನವನ್ನು ಪ್ರಸ್ತಾಪಿಸಿದರು.
 
ಪ್ರತಿಯೊಂದು ವಲಯದ ಅನನ್ಯ ಅಭಿವೃದ್ಧಿ ಮಾದರಿಗಾಗಿ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿರುವುದನ್ನು ಪ್ರಧಾನಿ ವಿವರಿಸಿದರು.
ಇಂಧನ ವಲಯದ ಬಗ್ಗೆ ಮಾತನಾಡಿದ ಪ್ರಧಾನಿ, ಬಿಕ್ಕಟ್ಟು ನಿವಾರಿಸಿ, ಪರಿಹಾರ ಹುಡುಕುವ ಬಗ್ಗೆ ಒತ್ತಿ ಹೇಳಿದರು. ಇಂಧನ ಸಚಿವಾಲಯ, ನವೀಕರಿಸಬಹುದಾದ ಇಂಧ ಸಚಿವಾಲಯ ಮತ್ತು ಕಲ್ಲಿದ್ದಲು ಸಚಿವಾಲಯಗಳು ಒಂದು ಘಟಕವಾಗಿ ಈಗ ಕಾರ್ಯ ನಿರ್ವಹಿಸುತ್ತಿವೆ ಎಂದರು. ಭಾರತ ವಿದ್ಯುತ್ ಕೊರತೆಯಿಂದ ಹೆಚ್ಚುವರಿ ವಿದ್ಯುತ್ ಉತ್ಪಾದನೆಯತ್ತ ಮತ್ತು ನೆಟ್ವರ್ಕ್ ಫೈಲ್ಯೂರ್ ನಿಂದ ನೆಟ್ ರಪ್ತುದಾರಿಕೆಯತ್ತ ಸಾಗಿದೆ ಎಂದು ತಿಳಿಸಿದರು. 
|
ಭಾರತ ತನ್ನ ನ್ಯೂನತೆಗಳನ್ನು ಹಿಮ್ಮೆಟ್ಟಿ, ಮುಂದೆ ಸಾಗುತ್ತದೆ ಎಂಬ ವಿಶ್ವಾಸ ಇಂದು ಜನರಲ್ಲಿದೆ ಎಂದು ಪ್ರಧಾನಿ ಹೇಳಿದರು. ರೈಸಿಂಗ್ ಇಂಡಿಯಾಗೆ ನಂಬಿಕೆಯ ಬುನಾದಿ ಎಂದು ಅವರು ಹೇಳಿದರು. ಇಂದು, ಇಡೀ ವಿಶ್ವ ಭಾರತದ ಉದಯವನ್ನು ಗುರುತಿಸಿದೆ ಎಂದರು. ಭಾರತವು ತನ್ನ ಅಭಿವೃದ್ಧಿಗೆ ಮಾತ್ರವೇ ಅಲ್ಲ, ಜೊತೆಗೆ ಇಡೀ ವಿಶ್ವದ ಅಭಿವೃದ್ಧಿಗೆ ಹೊಸ ದಿಕ್ಕು ತೋರಿದೆ ಎಂದರು. ಇಂದು ಭಾರತವು ಸೌರ ಕ್ರಾಂತಿಯ ನೇತೃತ್ವ ವಹಿಸಿದೆ. ಇದನ್ನು ಇತ್ತೀಚೆಗೆ ನಡೆದ ಅಂತಾರಾಷ್ಟ್ರೀಯ ಸೌರ ಸಹಯೋಗದಲ್ಲಿ ಪ್ರದರ್ಶಿಸಲಾಗಿದೆ ಎಂದರು. ಅಂತಾರಾಷ್ಟ್ರೀಯ ವೇದಿಕೆಗಳಾದ ಜಿ-20 ಮತ್ತು ವಿಶ್ವಸಂಸ್ಥೆಗಳಲ್ಲಿ ಭಾರತ ಇಡೀ ವಿಶ್ವಕ್ಕೆ ಪರಿಣಾಮ ಬೀರಿದ ವಿಷಯಗಳಾದ ಭಯೋತ್ಪಾದನೆ, ಕಪ್ಪುಹಣ ಮತ್ತು ಭ್ರಷ್ಟಾಚಾರದ ಬಗ್ಗೆ ಪ್ರಸ್ತಾಪಿಸಿದೆ ಎಂದು ಅವರು ಹೇಳಿದರು. 
ಆರ್ಥಿಕ ರಂಗದಲ್ಲಿ ಕಳೆದ ಮೂರರಿಂದ ನಾಲ್ಕು ವರ್ಷಗಳಲ್ಲಿ ಭಾರತವು ಜಾಗತಿಕ ಆರ್ಥಿಕ ಪ್ರಗತಿಗೆ ಬಲ ನೀಡಿದೆ ಎಂದು ಪ್ರಧಾನಿ ಹೇಳಿದರು. ದೇಶವು ಎಲ್ಲ ಮ್ಯಾಕ್ರೋ ಆರ್ಥಿಕ ಮಾನದಂಡಗಳಲ್ಲೂ ಪ್ರದರ್ಶನ ನೀಡುತ್ತಿದೆ ಎಂದರು. ಎಲ್ಲ ಶ್ರೇಣೀಕರಣ ಸಂಸ್ಥೆಗಳು ಭಾರತದ ಶ್ರೇಣಿಯನ್ನು ಮೇಲ್ಮುಖವಾಗಿ ಪರಿಷ್ಕರಿಸುತ್ತಿವೆ ಎಂದರು. 
|
ಬಡವರು, ಕೆಳ ಮಧ್ಯಮವರ್ಗದವರು ಮತ್ತು ಮಧ್ಯಮವರ್ಗದವರ ಆಶೋತ್ತರಗಳನ್ನು ಗಮನದಲ್ಲಿಟ್ಟುಕೊಂಡು ಸಮಗ್ರ ನಿಲುವಿನೊಂದಿಗೆ ಸರ್ಕಾರ ಕಾರ್ಯೋನ್ಮುಖವಾಗಿದೆ ಎಂದು ಪ್ರಧಾನಿ ತಿಳಿಸಿದರು. ಪ್ರಧಾನಮಂತ್ರಿ ಮುದ್ರಾ ಯೋಜನೆ ಯುವಕರು ಮತ್ತು ಮಹಿಳೆಯರನ್ನು ಸಬಲೀಕರಿಸುವ ಸಮರ್ಥ ಮಾಧ್ಯಮವಾಗಿದೆ ಎಂದು ಅವರು ಹೇಳಿದರು. 

Read Full Presentation Here

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Vande Bharat sleeper train achieves peak speed of 180 km per hour; water level in glass remains static

Media Coverage

Vande Bharat sleeper train achieves peak speed of 180 km per hour; water level in glass remains static
NM on the go

Nm on the go

Always be the first to hear from the PM. Get the App Now!
...
India is committed to take the lead in AI: PM Modi
January 04, 2025
QuoteIndian entrepreneur, Shri Vishal Sikka meets Prime Minister

Indian entrepreneur, Shri Vishal Sikka met with Prime Minister, Shri Narendra Modi. Shri Modi remarked this meeting as an insightful interaction and said that India is committed to taking the lead in AI, with a focus on innovation and creating opportunities for the youth. Both have detailed and wide-ranging discussion on AI and its impact on India and several imperatives for the time ahead.

Responding to the X post of Vishal Sikka, the Prime Minister posted on X;

“It was an insightful interaction indeed. India is committed to taking the lead in AI, with a focus on innovation and creating opportunities for the youth.”