ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆತ್ಮನಿರ್ಭರ ಭಾರತ ಕುರಿತು ಕೆಲವು ಆಲೋಚನೆಗಳನ್ನು @LinkedInನಲ್ಲಿ ಹಂಚಿಕೊಂಡಿದ್ದಾರೆ. ವಿಶ್ವವ್ಯಾಪಿ ಸ್ವೀಕೃತವಾಗುವ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸುವಂತೆ ಅವರು ಕರೆ ಕೊಟ್ಟಿದ್ದಾರೆ.
ಪ್ರಧಾನ ಮಂತ್ರಿಯವರು ಹಂಚಿಕೊಂಡಿರುವ ಆಲೋಚನೆಗಳು ಹೀಗಿವೆ:
"ಕೆಲವು ದಿನಗಳ ಹಿಂದೆ, ನಾನು ಮಾಪನಶಾಸ್ತ್ರದ ರಾಷ್ಟ್ರೀಯ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಿದ್ದೆ.
ಇದೊಂದು ವ್ಯಾಪಕವಾಗಿ ಚರ್ಚೆಯಾಗದ ಪ್ರಮುಖ ವಿಷಯವಾಗಿದೆ.
ಅಂದಿನ ಭಾಷಣದಲ್ಲಿ ನಾನು ಪ್ರಸ್ತಾಪಿಸಿದ ವಿಷಯವೆಂದರೆ, ಮಾಪನಶಾಸ್ತ್ರ ಅಥವಾ ಮಾಪನದ ಅಧ್ಯಯನವು ಆತ್ಮನಿರ್ಭರ ಭಾರತ (ಸ್ವಾವಲಂಬಿ ಭಾರತ) ಮತ್ತು ನಮ್ಮ ಉದ್ಯಮಿಗಳ ಆರ್ಥಿಕ ಸಮೃದ್ಧಿಗೆ ಹೇಗೆ ಸಹಾಯ ಮಾಡುತ್ತದೆ ಎಂಬುದು.
ಭಾರತವು ಕೌಶಲ್ಯ ಮತ್ತು ಪ್ರತಿಭೆಯ ಶಕ್ತಿಕೇಂದ್ರವಾಗಿದೆ.
ನಮ್ಮ ನವೋದ್ಯಮದ ಯಶಸ್ಸು ನಮ್ಮ ಯುವಜನತೆಯ ಹೊಸತನದ ಉತ್ಸಾಹವನ್ನು ತೋರಿಸುತ್ತದೆ.
ಹೊಸ ಉತ್ಪನ್ನಗಳು ಮತ್ತು ಸೇವೆಗಳನ್ನು ವೇಗವಾಗಿ ಸೃಷ್ಟಿಸಲಾಗುತ್ತಿದೆ.
ದೇಶೀಯವಾಗಿ ಮತ್ತು ಜಾಗತಿಕವಾಗಿ ಅವಕಾಶಗಳಿರುವ ಬೃಹತ್ ಮಾರುಕಟ್ಟೆಯೂ ಇದೆ.
ಜಗತ್ತು ಇಂದು ಕೈಗೆಟುಕುವ, ದೀರ್ಘ ಬಾಳಿಕೆಯ ಮತ್ತು ಬಳಸಬಹುದಾದ ಉತ್ಪನ್ನಗಳ ಅನ್ವೇಷಣೆಯಲ್ಲಿದೆ.
ಆತ್ಮನಿರ್ಭರ ಭಾರತವು ಪ್ರಮಾಣ ಮತ್ತು ಗುಣಮಟ್ಟ ಎಂಬ ಅವಳಿ ತತ್ವಗಳ ಮೇಲೆ ನಿಂತಿದೆ.
ನಾವು ಹೆಚ್ಚು ಉತ್ಪಾದನೆಯನ್ನು ಮಾಡಲು ಬಯಸುತ್ತೇವೆ. ಹಾಗೆಯೇ, ಉತ್ತಮ ಗುಣಮಟ್ಟದ ಉತ್ಪನ್ನಗಳ ಉತ್ಪಾದನೆಯನ್ನು ನಾವು ಬಯಸುತ್ತೇವೆ.
ತನ್ನ ಉತ್ಪನ್ನಗಳಿಂದ ಜಾಗತಿಕ ಮಾರುಕಟ್ಟೆಗಳನ್ನು ತುಂಬಲು ಭಾರತ ಬಯಸುವುದಿಲ್ಲ.
ಭಾರತೀಯ ಉತ್ಪನ್ನಗಳು ವಿಶ್ವದಾದ್ಯಂತ ಜನರ ಮನಸ್ಸನ್ನು ಗೆಲ್ಲಬೇಕೆಂದು ನಾವು ಬಯಸುತ್ತೇವೆ.
ನಾವು ‘ಮೇಕ್ ಇನ್ ಇಂಡಿಯಾ’ದಿಂದ ಜಾಗತಿಕ ಬೇಡಿಕೆಯನ್ನು ಪೂರೈಸುವುದು ಮಾತ್ರವಲ್ಲದೆ ಜಾಗತಿಕ ಸ್ವೀಕೃತಿಯನ್ನೂ ಪಡೆಯುತ್ತೇವೆ.
ನೀವು ಉತ್ಪಾದಿಸುವ ಯಾವುದೇ ಉತ್ಪನ್ನ ಅಥವಾ ಸೇವೆಯಲ್ಲಿ ‘ಶೂನ್ಯ ಪರಿಣಾಮ, ಶೂನ್ಯ ದೋಷ’ ಕುರಿತು ಯೋಚಿಸಬೇಕು ಎಂದು ನಾನು ನಿಮ್ಮೆಲ್ಲರನ್ನೂ ಕೋರುತ್ತೇನೆ.
ಉದ್ಯಮದ ಮುಖಂಡರು, ವ್ಯಾಪಾರ ಪ್ರತಿನಿಧಿಗಳು, ನವೋದ್ಯಮದ ಕ್ಷೇತ್ರದ ಯುವಕರು ಮತ್ತು ವೃತ್ತಿಪರರೊಂದಿಗಿನ ನನ್ನ ಸಂವಾದದ ಸಂದರ್ಭದಲ್ಲಿ, ಈ ಬಗ್ಗೆ ಈಗಾಗಲೇ ಹೆಚ್ಚಿನ ಮಟ್ಟದ ಜಾಗೃತಿ ಇರುವುದನ್ನು ನೋಡಿದ್ದೇನೆ.
ಇಂದು, ಜಗತ್ತೇ ನಮ್ಮ ಮಾರುಕಟ್ಟೆಯಾಗಿದೆ.
ಭಾರತದ ಜನರಿಗೆ ಸಾಮರ್ಥ್ಯವಿದೆ.
ವಿಶ್ವದ ನಂಬುಗೆಯ ರಾಷ್ಟ್ರವಾಗಿ, ಭಾರತವು ವಿಶ್ವಾಸಾರ್ಹತೆ ಹೊಂದಿರುವ ರಾಷ್ಟ್ರವಾಗಿದೆ.
ನಮ್ಮ ಜನರ ಸಾಮರ್ಥ್ಯ ಮತ್ತು ದೇಶದ ವಿಶ್ವಾಸಾರ್ಹತೆಯೊಂದಿಗೆ, ಉನ್ನತ ಗುಣಮಟ್ಟದ ಭಾರತೀಯ ಉತ್ಪನ್ನಗಳು ಬಹು ದೂರದವರೆಗೆ ಸಾಗುತ್ತವೆ. ಇದು ಜಾಗತಿಕ ಸಮೃದ್ಧಿಗೆ ಶಕ್ತಿ ವರ್ಧಕವಾದ ಆತ್ಮನಿರ್ಭರ ಭಾರತಕ್ಕೆ ಸಲ್ಲಿಸುವ ನಿಜವಾದ ಗೌರವವಾಗಿದೆ."
A few thoughts on Aatmanirbhar Bharat and how it is as much about scale and standards.
— Narendra Modi (@narendramodi) January 5, 2021
We want Indian products to be accepted and admired worldwide.
My @LinkedIn post. https://t.co/edYTvDclhM