ಮೂರನೇ ಬಾರಿಗೆ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು ಪಿ ಎಂ ಕಿಸಾನ್ ನಿಧಿಯಡಿ 17 ನೇ ಕಂತು ಬಿಡುಗಡೆ ಮಾಡುವ ಆದೇಶದ ಕಡತಕ್ಕೆ ಮೊದಲು ಸಹಿ ಮಾಡಿದರು. ಇದರಿಂದ ಸುಮಾರು ರೂ. 20,000 ಕೋಟಿ ಹಂಚಿಕಯಾಗಿ 9.3 ಕೋಟಿ ರೈತರಿಗೆ ಅನುಕೂಲವಾಗಲಿದೆ.
ಕಡತಕ್ಕೆ ಸಹಿ ಮಾಡಿದ ಬಳಿಕ ಮಾತನಾಡಿದ ಪ್ರಧಾನಿ ಮೋದಿ, “ತಮ್ಮ ಸರ್ಕಾರ ರೈತರ ಕಲ್ಯಾಣಕ್ಕೆ ಸಂಪೂರ್ಣ ಬದ್ಧವಾಗಿದೆ. ಹೀಗಾಗಿ, ಅಧಿಕಾರ ವಹಿಸಿಕೊಂಡ ಬಳಿಕ ಕೃಷಿಕರ ಕಲ್ಯಾಣಕ್ಕೆ ಸಂಬಂಧಿತ ಕಡತವನ್ನು ಮೊದಲು ಸಹಿ ಮಾಡಿದ್ದು. ಮುಂದಿನ ದಿನಗಳಲ್ಲಿ ರೈತರ ಹಿತಕ್ಕಾಗಿ ಮತ್ತು ಕೃಷಿ ವಲಯಕ್ಕಾಗಿ ಇನ್ನಷ್ಟು ಕೆಲಸ ಮಾಡಲು ನಾವು ಬಯಸುತ್ತೇವೆ” ಎಂದು ಹೇಳಿದರು.
देशभर के अपने किसान भाई-बहनों का जीवन आसान बनाने के लिए हमारी सरकार प्रतिबद्ध है। यह मेरे लिए सौभाग्य की बात है कि लगातार तीसरी बार प्रधानमंत्री के रूप में कार्यभार संभालने के बाद पहला काम उनके लिए ही करने का अवसर मिला है। इसके तहत पीएम किसान सम्मान निधि की 17वीं किस्त से जुड़ी… pic.twitter.com/YZQK3VCXIH
— Narendra Modi (@narendramodi) June 10, 2024