Published By : Admin |
November 13, 2017 | 19:34 IST
Share
Our efforts are aimed at transforming India and ensuring everything in our nation matches global standards: PM
India has always contributed to world peace; our contingent in the UN Peacekeeping Forces is among the biggest, says Prime Minister Modi
India is the land of Mahatma Gandhi; peace is integral to our culture: PM
We must make efforts to ensure 21st century becomes India’s century: PM Narendra Modi
ನಮಸ್ತೆ,
ನಾನು ತಮ್ಮನ್ನು ಭೇಟಿಮಾಡದೆ ಹಿಂದಿರುಗಿದ್ದಿದ್ದರೆ ನನ್ನ ಯಾತ್ರೆ ಅಪೂರ್ಣವಾಗುತ್ತಿತ್ತು. ಬೇರೆ ಬೇರೆ ಪ್ರದೇಶಗಳಿಂದ ತಾವು ಬಿಡುವು ಮಾಡಿಕೊಂಡು ಇಲ್ಲಿಗೆ ಆಗಮಿಸಿದ್ದೀರಿ. ಇಂದು ಕೆಲಸದ ದಿನವಾದರೂ ಕೂಡಾ ತಾವು ಇಲ್ಲಿಗೆ ಆಗಮಿಸಿದ್ದೀರಿ. ಇದು ಭಾರತದ ಬಗೆಗೆನ ತಮ್ಮ ಪ್ರೀತಿ, ಭಾರತದ ಬಗ್ಗೆ ತಮಗಿರುವ ಬಾಂಧವ್ಯದ ಕಾರಣದಿಂದಾಗಿ ಇಂದು ತಾವೆಲ್ಲರೂ ಇಲ್ಲಿ ಸೇರಿದ್ದೀರಿ. ಪ್ರಪ್ರಥಮವಾಗಿ ನಾನು ತಮ್ಮೆಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಯಾಕೆಂದರೆ ನಾನು ಯಾವಾಗಲಾದರೂ ವಿದೇಶಗಳಿಗೆ ಹೋದಾಗ ಅಲ್ಲಿನ ಭಾರತೀಯ ಸಮುದಾಯವನ್ನು ಭೇಟಿ ಮಾಡುವ ಪ್ರಯತ್ನ ಮಾಡುತ್ತೇನೆ. ಆದರೆ ತಾವಿಂದು ತೋರಿಸಿರುವ ಶಿಸ್ತಿಗಾಗಿ ನಾನು ತಮ್ಮೆಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಇದು ಒಂದು ಶಕ್ತಿ, ಇಷ್ಟು ಅಪಾರ ಸಂಖ್ಯೆಯಲ್ಲಿ ನೆರೆದಿರುವ ತಮ್ಮನ್ನು ನಾನು ಇಷ್ಟು ಸುಲಭವಾಗಿ ಭೇಟಿ ಮಾಡುತ್ತಿರುವುದು ನನಗೆ ಬಹಳ ಸಂತಸವನ್ನುಂಟು ಮಾಡಿದೆ, ಇದಕ್ಕಾಗಿ ತಾವುಗಳೆಲ್ಲರೂ ಅಭಿನಂದನೆಗೆ ಅರ್ಹರು,
ನಾನು ಪ್ರಥಮ ಬಾರಿಗೆ ಈ ದೇಶಕ್ಕೆ ಆಗಮಿಸುತ್ತಿದ್ದೇನೆ. ಆದರೆ ಭಾರತಕ್ಕೆ ಈ ಭೂ ಪ್ರದೇಶ ಮಹತ್ವಪೂರ್ಣವಾಗಿದೆ. ನನಗೆ ಪ್ರಧಾನಮಂತ್ರಿಯಾಗಿ ಕಾರ್ಯ ನಿರ್ವಹಿಸಲು ತಾವುಗಳೆಲ್ಲರೂ ಜವಾಬ್ಧಾರಿ ವಹಿಸಿದ ಪ್ರಥಮ ದಿನದಿಂದಲೂ ಆಕ್ಟ್ ಈಸ್ಟ್ ಪಾಲಿಸಿಗಳಿಗೆ ಒತ್ತು ನೀಡಿದೆವು. ಈ ದೇಶಗಳೊಂದಿಗೆ ನಾವು ಬಹಳ ಹತ್ತಿರವಾಗಿದ್ದೇವೆ ಎಂಬ ಭಾವನೆ ಮೂಡುತ್ತದೆ. ಸಹಜವಾಗಿ ನಮ್ಮದೆನ್ನುವ ಭಾವನೆ ಮೂಡುತ್ತದೆ. ಯಾವುದೋ ಕೆಲವು ಕಾರಣಗಳಿಂದ, ಕೆಲವು ಸಂಪ್ರದಾಯಗಳ ಕಾರಣ ನಮ್ಮಲ್ಲಿ ಒಂದು ಭಾವನಾತ್ಮಕ ನಂಟು ಬೆಸೆದಿದೆ. ಇಲ್ಲಿನ ಕೆಲವು ಪ್ರದೇಶಗಳಿಗೆ ರಾಮಾಯಣದ ಅರಿವಿಲ್ಲದಿರಬಹುದು, ರಾಮ ಅಪರಿಚಿತನಿರಬಹುದು, ಆದರೆ ಬುದ್ದನ ಬಗ್ಗೆ ಶ್ರದ್ಧೆ ಇಲ್ಲದಿರುವ ಯಾವೊಂದು ಪ್ರದೇಶವೂ ಇಲ್ಲಿ ಕಾಣಸಿಗುವುದಿಲ್ಲ. ಇದು ಸ್ವತ: ಒಂದು ದೊಡ್ಡ ಪರಂಪರೆಯಾಗಿದ್ದು, ಈ ಪರಂಪರೆಯನ್ನು ಕಾಪಾಡುವ, ಇದನ್ನು ಮುಂದುವರಿಸುವ ಕಾಯಕವನ್ನು ಇಲ್ಲಿ ನೆಲೆಸಿರುವ ಭಾರತೀಯ ಸಮುದಾಯ ಅತ್ಯುತ್ತಮವಾಗಿ ಮಾಡಬಹುದು. ಯಾವುದೇ ಒಂದು ಕಾರ್ಯವನ್ನು ಒಂದು ರಾಯಭಾರ ಕಚೇರಿ ನಿರ್ವಹಿಸಿಬಹುದು. ಆದರೆ ಅದಕ್ಕೆ ಅನೇಕ ಪಟ್ಟು ಹೆಚ್ಚು ಕಾರ್ಯವನ್ನು ಒಬ್ಬ ಸಾಮಾನ್ಯ ಭಾರತೀಯ ನಿರ್ವಹಿಸಬಹುದಾಗಿದೆ. ಪ್ರಪಂಚದಾದ್ಯಂತ ಇರುವ ಎಲ್ಲ ಭಾರತೀಯರು ಗೌರವದಿಂದ ತಲೆ ಎತ್ತಿ ನಾನು ಭಾರತೀಯ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ವಾತಾವರಣ ಸೃಷ್ಟಿಯಾಗಿದೆ ಎಂದು ನನಗೆ ಅನುಭವವಾಗುತ್ತಿದೆ. ಯಾವುದೇ ದೇಶಕ್ಕೆ ಇದು ಒಂದು ದೊಡ್ಡ ಬಂಡವಾಳ. ವಿಶ್ವಾದ್ಯಂತ ಭಾರತೀಯ ಸಮುದಾಯ ಹರಡಿದೆ. ಶತಮಾನಗಳಿಂದ ಭಾರತೀಯ ನಾಗರಿಕರು ವಿದೇಶ ಪರ್ಯಟನೆ ಮಾಡುವ ಸ್ವಭಾವ ಉಳ್ಳವರಾಗಿದ್ದಾರೆ. ಶತಮಾನಗಳ ಮೊದಲು ನಮ್ಮ ಪೂರ್ವಜರು ಪರ್ಯಟನೆ ಪಾರಂಭಿಸಿದ್ದಾರೆ. ನಾವು ಎಲ್ಲಿಗೆ ಹೋದರೂ, ಯಾರನ್ನು ಭೇಟಿ ಮಾಡಿದರು ಅವರನ್ನು ತಮ್ಮವರನ್ನಾಗಿ ಮಾಡಿಕೊಳ್ಳುತ್ತೇವೆ, ಇದು ಭಾರತೀಯರ ವಿಶೇಷತೆ. ತಮ್ಮತನವನ್ನು ಉಳಿಸಿಕೊಂಡು, ಅನ್ಯರನ್ನು ತಮ್ಮವರನ್ನಾಗಿ ಮಾಡಿಕೊಳ್ಳುವುದು, ಇದು ಕಡಿಮೆ ಮಾತಲ್ಲ. ನಮ್ಮೊಳಗೆ ಒಂದು ದೃಢ ವಿಶ್ವಾಸ ಇರುತ್ತದೆ. ತಾವು ಎಲ್ಲೇ ಹೋದರೂ ಆ ದೃಢ ವಿಶ್ವಾಸದ ಪರಿಚಯ ಮಾಡಿ ಕೊಟ್ಟಿದ್ದೀರಿ. ತಾವು ಎಲ್ಲೇ ಇದ್ದರೂ, ಎಷ್ಟೇ ವರ್ಷಗಳಿಂದ ದೇಶದಿಂದ ದೂರ ಇದ್ದರೂ, ಎಷ್ಟೋ ತಲೆಮಾರಿನಿಂದ ನೀವು ವಿದೇಶಗಳಲ್ಲಿ ನೆಲೆಸಿರಬಹುದು, ಭಾಷೆಯನ್ನು ಮರೆತಿರಬಹುದು, ಆದರೆ, ಭಾರತದಲ್ಲಿ ಏನಾದರೂ ಕೆಟ್ಟದ್ದು ಸಂಭವಿಸಿದರೆ, ತಮಗೆ ಇಲ್ಲಿ ನಿದ್ದೆ ಬರುವುದಿಲ್ಲ. ಏನಾದರೂ ಒಳ್ಳೆಯದು ಸಂಭವಿಸಿದರೆ ತಮ್ಮ ಸಂಭ್ರಮಕ್ಕೆ ಎಣೆ ಇರುವುದಿಲ್ಲ. ಆದುದರಿಂದ ಪ್ರಸಕ್ತ ಸರಕಾರ, ದೇಶವನ್ನು ಅಭಿವೃದ್ಧಿಯ ಉತ್ತುಂಗಕ್ಕೆ ಕೊಂಡೊಯ್ಯಲು ಯತ್ನಿಸುತ್ತಿದ್ದು, ಇದರಿಂದ ವಿಶ್ವದ ಇನ್ನಿತರ ದೇಶಗಳೊಂದಿಗೆ ನಾವು ಸರಿ ಸಮಾನವಾಗಿ ನಿಲ್ಲಬಹುದಾಗಿದೆ. ಒಂದು ಬಾರಿ ನಾವು ವಿಶ್ವದ ಇನ್ನಿತರ ದೇಶಗಳೊಂದಿಗೆ ಸರಿ ಸಮಾನವಾಗಿ ನಿಂತರೆ, ಮುಂದುವರೆಯುವ ಭಾರತವನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ ಎಂಬುದು ನನ್ನ ಅಭಿಪ್ರಾಯ. ನಾವು ಒಂದು ಹಂತವನ್ನು ತಲುಪುವ ತನಕ ಕಠಿಣತೆಗಳು ಬರಬಹುದು, ಒಂದು ಬಾರಿ ಈ ಕಠಿಣ ಪರಿಸ್ಥಿತಿಯಿಂದ ಹೊರ ಬಂದದ್ದೇ ಆದಲ್ಲಿ ನಮಗೆ ಸುಗಮ ಕಾರ್ಯ ನಿರ್ವಹಣೆಗೆ ಅನುಕೂಲವಾಗುತ್ತದೆ. ಭಾರತೀಯರ ಹೃದಯದಲ್ಲಿ, ಮನಸ್ಸಿನಲ್ಲಿ, ತೋಳಿನಲ್ಲಿ ಈ ಶಕ್ತಿ ಇದ್ದು ಅವರನ್ನು ತಡೆಯಲು ಯಾರಿಂದಲೂ ಸಾಧ್ಯವಾಗುವುದಿಲ್ಲ. 125 ಕೋಟಿ ಭಾರತೀಯರಲ್ಲಿ ಸಾಮರ್ಥ್ಯ, ಅಪಾರ ಶಕ್ತಿ ಇದ್ದು ಹಾಗೂ ಭಾರತದಲ್ಲಿ ವಿಶಾಲ ಪ್ರಾಕೃತಿಕ ಸಂಪತ್ತು, ಸಾಂಸ್ಕೃತಿಕ ಪರಂಪರೆ ಇದೆ. ಯಾವುದೇ ಯುಗವನ್ನು ತೆಗೆದುಕೊಳ್ಳಿ, ನೂರು ವರ್ಷ ಮೊದಲು, 500 ವರ್ಷ ಮೊದಲು, 1000 ವರ್ಷ ಮೊದಲು, ಯಾವುದೇ ಕಾಲದಲ್ಲೂ ನಾವು ಯಾರಿಗಾದರೂ ಕೆಟ್ಟದ್ದನ್ನು ಮಾಡಿದ ಉದಾಹರಣೆ ಕಂಡು ಬರುವುದಿಲ್ಲ.

ವಿಶ್ವದ ಯಾವುದೇ ದೇಶದ ಪ್ರಜೆಗಳನ್ನು ನಾನು ಭೇಟಿ ಮಾಡಿದಾಗ, ನಾನು ಅವರಿಗೆ ಪ್ರಥಮ ವಿಶ್ವಯುದ್ಧ ಮತ್ತು ದ್ವಿತೀಯ ವಿಶ್ವಯುದ್ಧದಲ್ಲಿ ನಮಗೆ ಯಾವುದೇ ದೇಶದ ಪ್ರದೇಶವನ್ನು ಪಶಪಡಿಸಿಕೊಳ್ಳುವ ಅಥವಾ ಯಾವುದೇ ಪ್ರದೇಶದಲ್ಲಿ ನಮ್ಮ ಧ್ವಜವನ್ನು ಹಾರಿಸುವ ಉದ್ದೇಶವಿರಲಿಲ್ಲ. ನಮಗೆ ವಿಶ್ವವನ್ನು ಪಶಪಡಿಸಿಕೊಳ್ಳುವ ಇರಾದೆ ಇರಲಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತೇನೆ. ಆದರೆ ಶಾಂತಿ ಸ್ಥಾಪನೆಗಾಗಿ ನಮ್ಮ ದೇಶದ ಒಂದೂವರೆ ಲಕ್ಷ ಯೋಧರು ತಮ್ಮ ಬಲಿದಾನ ಮಾಡಿದ್ದಾರೆ. ಪ್ರಥಮ ಮತ್ತು ದ್ವಿತೀಯ ವಿಶ್ವಯುದ್ಧದಲ್ಲಿ ನಮಗೆ ಕೊಡುವುದು, ತೆಗೆದುಕೊಳ್ಳುವುದು ಏನೂ ಇಲ್ಲದಿದ್ದರೂ ಕೇವಲ ಶಾಂತಿ ಸ್ಥಾಪನೆಗಾಗಿ ನಮ್ಮ ಒಂದೂವರೆ ಲಕ್ಷ ಯೋಧರು ಬಲಿದಾನ ಮಾಡಿದರು. ಇದರಿಂದ ಯಾವುದೇ ಭಾರತೀಯ ನಾವು ಕೊಡುವವರು, ತೆಗೆದುಕೊಳ್ಳುವವರಲ್ಲ, ಹಾಗೂ ಕಿತ್ತುಕೊಳ್ಳುವವರಂತೂ ಅಲ್ಲವೇ ಅಲ್ಲ ಎಂದು ಎದೆಯುಬ್ಬಿಸಿ ವಿಶ್ವಕ್ಕೆ ಹೇಳಬಹುದಾಗಿದೆ.
ಇಂದು ನಾವು ವಿಶ್ವಸಂಸ್ಥೆಯ ಶಾಂತಿ ಪಾಲನಾ ಪಡೆಯೊಂದಿಗೆ ಸೇರಿಕೊಂಡಿದ್ದೇವೆ ಎಂಬು ಪ್ರತಿಯೊಬ್ಬ ಭಾರತೀಯನು ಹೆಮ್ಮೆಯಿಂದ ಹೇಳಿಕೊಳ್ಳಬಹುದು. ವಿಶ್ವದ ಯಾವುದೇ ಭಾಗದಲ್ಲಿ ಯಾವುದೇ ರೀತಿಯ ಅಶಾಂತತೆಯ ಪರಿಸ್ಥಿತಿ ಉಂಟಾದಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯಲ್ಲಿ ಸೇರಿಕೊಂಡು ಶಾಂತಿ ಸ್ಥಾಪಿಸುವ ಕಾರ್ಯದಲ್ಲಿ ನಿರತರಾಗುತ್ತಾರೆ. ಸಂಪೂರ್ಣ ವಿಶ್ವದಲ್ಲಿ ಶಾಂತಿ ಪಾಲನಾ ಪಡೆಯಲ್ಲಿ ಅತಿ ಹೆಚ್ಚಿನ ಕೊಡುಗೆ ನೀಡಿದ ಯಾರಾದರೂ ಇದ್ದರೆ ಅದು ಭಾರತೀಯ ಸೈನಿಕರು. ಇಂದು ಕೂಡಾ ವಿಶ್ವದ ಅನೇಕ ಪ್ರದೇಶಗಳಲ್ಲಿ ಭಾರತೀಯ ಯೋಧರು ಕಾರ್ಯ ನಿರ್ವಹಿಸುತ್ತಿದ್ದಾರೆ. ಬುದ್ಧ ಮತ್ತು ಗಾಂಧಿಯ ದೇಶದಲ್ಲಿ ಅಶಾಂತಿಯ ಯಾವುದೇ ಶಬ್ಧವಿಲ್ಲ. ನಾವು ಶಾಂತಿಯಿಂದ ಬಾಳಿ ಬದುಕಿ ತೋರಿಸಿದ ಜನ. ಶಾಂತಿಯನ್ನು ನಾವು ಅಳವಡಿಸಿಕೊಂಡಿದ್ದೇವೆ. ನಮ್ಮ ರಕ್ತದ ಕಣ ಕಣದಲ್ಲಿ ಶಾಂತಿ ಮಂತ್ರವಿದೆ. ಆದುದರಿಂದಲೇ ನಮ್ಮ ಪೂರ್ವಜರು ನಮಗೆ “ವಸುದೈವ ಕುಟುಂಬಕಮ್” – ವಿಶ್ವವೇ ಒಂದು ಕುಟುಂಬ – ಎಂಬ ಮಂತ್ರವನ್ನು ನಮಗೆ ನೀಡಿದ್ದಾರೆ. ಅದೇ ರೀತಿ ನಾವು ಬದುಕಿ ತೋರಿಸಿದ್ದೇವೆ. ಭಾರ ಬಲಿಷ್ಟವಾದಾಗ, ಸಮರ್ಥವಾದಾಗ ಹಾಗು ಎಲ್ಲ ಕ್ಷೇತ್ರಗಳಲ್ಲಿ ಉತ್ತುಂಗವನ್ನು ತಲುಪುವಂತಾದಾಗ ಮಾತ್ರ ವಿಶ್ವ ಈ ಮಾತುಗಳನ್ನು ಸ್ವೀಕರಿಸುತ್ತದೆ. ತತ್ವ ಜ್ಞಾನ ಎಷ್ಟು ಎತ್ತರ ತಲುಪಿದರೂ, ಇತಿಹಾಸ ಎಷ್ಟೇ ಭವ್ಯವಾಗಿದ್ದರೂ, ಪರಂಪರೆಗಳು ಎಷ್ಟೇ ದೊಡ್ಡದಾಗಿದ್ದರೂ, ವರ್ತಮಾನ ಅಷ್ಟೇ, ಉಜ್ವಲ, ತೇಜಸ್ವೀ ಹಾಗೂ ಪರಾಕ್ರಮಿಯಾಗಿರಬೇಕು ಆಗ ಮಾತ್ರ ಜಗತ್ತು ಉಳಿಯುತ್ತದೆ. ನಮ್ಮ ಭೂತಕಾಲದಿಂದ ಪ್ರೇರಣೆ ಪಡೆದುಕೊಂಡು ಅದರಿಂದ ಪಾಠ ಕಲಿತುಕೊಳ್ಳುವುದು ಬಹಳ ಮುಖ್ಯ. 21ನೇ ಶತಮಾನವನ್ನು ಏಷಿಯಾದ ಶತಮಾನ ಎಂದು ಕರೆಯಲಾಗುತ್ತದೆ. 21ನೇ ಶತಮಾನವನ್ನು ಹಿಂದೂಸ್ತಾನದ ಶತಮಾನವನ್ನಾಗಿ ಮಾಡುವುದು ನಮ್ಮ ಕರ್ತವ್ಯ. ಇದು ಕಠಿಣವೆಂದು ನನಗೆ ಅನಿಸುವುದಿಲ್ಲ. ಮೂರು – ಮೂರೂವರೆ ವರ್ಷಗಳ ಅನುಭವದ ಆಧಾರದ ಮೇಲೆ ನಾನು ಹೇಳುತ್ತಿದ್ದೇನೆ, ಇದು ಸಾಧ್ಯ. ಕಳೆದ ಕೆಲವು ದಿನಗಳಿಂದ ಸರ್ಕಾರಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಸಕಾರಾತ್ಮಕ ಸುದ್ಧಿಗಳು ಬರುತ್ತಿರುವುದನ್ನು ತಾವು ಗಮನಿಸಿರಬಹುದು, ಯಾವುದಾದರು ನಕಾರಾತ್ಮಕ ಸುದ್ದಿಯಿಂದ ತಾವು ಕಾರ್ಯಾಲಯ ತಲುಪಿದಾಗ ಅಲ್ಲಿನ ಜನ ಏನು ಕೇಳಬಹುದೆಂಬ ಭಯ ತಮಗೆ ಇರುವುದಿಲ್ಲ. ತಾವು ಮನೆಯಿಂದ ಹೊರಬಿದ್ದಾಗ ಇಂದು ಭಾರತದಿಂದ ಒಳ್ಳೆ ಸುದ್ದಿಯೇ ಬರುತ್ತದೆಂಬ ವಿಶ್ವಾಸ ತಮಗೆ ಮೂಡುತ್ತದೆ. 125 ಕೋಟಿ ಜನರ ದೇಶ. ಅದರ ಮುಖ್ಯವಾಹಿನಿ, ಅದು ಸರ್ಕಾರದ್ದಾಗಿರಲಿ, ಸಮಾಜದ್ದಾಗಿರಲಿ ಅದು ಹೇಗಿದ್ದರೂ ಸಕಾರಾತ್ಮಕವಾಗಿಯೇ ನಡೆಯುತ್ತದೆ. ಪ್ರತಿ ಬಾರಿಯೂ ದೇಶದ ಹಿತಕ್ಕಾಗಿ ನಿರ್ಣಯಗಳನ್ನು ತೆಗೆದುಕೊಳ್ಳಲಾಗುತ್ತಿದೆ. ರೈತರನ್ನು ಗಮನದಲ್ಲಿಟ್ಟುಕೊಂಡು ತೆಗೆದುಕೊಳ್ಳಲಾಗುತ್ತಿದೆ. 125 ಕೋಟಿ ಜನರ ದೇಶ ಸ್ವಾತಂತ್ರ ಬಂದು 70 ವರ್ಷಗಳ ನಂತರವೂ 30 ಕೋಟಿ ಕುಟುಂಬಗಳು ಬ್ಯಾಂಕಿಂಗ್ ವ್ಯವಸ್ಥೆಯಿಂದ ಹೊರಗಿದ್ದರೆ ದೇಶದ ಅರ್ಥವ್ಯವಸ್ಥೆ ಹೇಗೆ ತಾನೇ ನಡೆದೀತು?
ನಾವೊಂದು ನಿರ್ಧಾರ ತೆಗೆದುಕೊಂಡೆವು, ಪ್ರಧಾನ ಮಂತ್ರಿ ಜನಧನ ಯೋಜನೆಯನ್ನು ಪ್ರಾರಂಭಿಸಿದೆವು, ಶೂನ್ಯ ಬ್ಯಾಂಕ್ ಬ್ಯಾಲೆನ್ಸ್ ಇದ್ದರೂ ಕೂಡಾ ಬ್ಯಾಂಕ್ ಖಾತೆಯನ್ನು ತೆರೆದೆವು. ಬ್ಯಾಂಕ್ ನವರಿಗೆ ತೊಂದರೆ ಆಗುತ್ತಿತ್ತು. ಮನೀಲಾದಲ್ಲಿ ಯಾವ ರೀತಿಯ ಬ್ಯಾಂಕ್ ವ್ಯವಸ್ಥೆ ಇದೆ ಎಂಬುದು ಎಲ್ಲರಿಗೂ ತಿಳಿದಿದೆ. ಬ್ಯಾಂಕ್ ನವರು ಕನಿಷ್ಟ ಪಕ್ಷ ಸ್ಟೇಷನರಿಗಳ ಹಣ ವಸೂಲು ಮಾಡುವುದಕ್ಕಾದರೂ ಅವಕಾಶ ಮಾಡಿ ಕೊಡಿ ಎಂದು ನನ್ನೊಂದಿಗೆ ಜಗಳ ಮಾಡುತ್ತಿದ್ದರು, ಇದು ದೇಶದ ಬಡ ಜನರ ಹಕ್ಕು. ಅವರುಗಳಿಗೆ ಬ್ಯಾಂಕ್ ಗಳಲ್ಲಿ ಗೌರವಪೂರ್ಣ ಸ್ವಾಗತ ದೊರಕಬೇಕು. ಈ ಬ್ಯಾಂಕ್ ಹವಾನಿಯಂತ್ರಿತವಾಗಿದೆ, ಬ್ಯಾಂಕ್ ದ್ವಾರದಲ್ಲಿ ಇಬ್ಬರೂ ಬಂದೂಕುಧಾರಿ ಕಾವಲಿನವರು ನಿಂತಿದ್ದಾರೆ, ಬಡವರು ಹೋಗಬಹುದೋ ಇಲ್ಲವೋ ಎಂದು ಅವರು ಯೋಚಿಸುತ್ತಿದ್ದರು. ನಂತರ ಅವರು ಶ್ರೀಮಂತರ ಬಳಿಗೆ ಹೋಗುತ್ತಿದ್ದರು. ಆ ಶ್ರೀಮಂತರು ಏನು ಮಾಡುತ್ತಾರೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. 30ಕೋಟಿ ಕುಟುಂಬಗಳಿಗೆ ಶೂನ್ಯ ಬ್ಯಾಲೆನ್ಸ್ ನಲ್ಲಿ ಬ್ಯಾಂಕ್ ಖಾತೆಯನ್ನು ತೆರೆದೆವು. ತಾವು ಶ್ರೀಮಂತ ಕುಟುಂಬಗಳನ್ನು ನೋಡಿರಬಹುದು. ನಾನು ಶ್ರೀಮಂತರನ್ನೂ ನೋಡಿದ್ದೇನೆ. ಶ್ರೀಮಂತರ ಬಡತನವನ್ನೂ ಕಂಡಿದ್ದೇನೆ. ತಾವು ಬಡವರನ್ನು ನೋಡಿದ್ದೀರಿ, ನಾನು ಬಡವರಲ್ಲಿರುವ ಶ್ರೀಮಂತಿಕೆಯನ್ನು ನೋಡಿದ್ದೇನೆ. ಶೂನ್ಯ ಬ್ಯಾಲೆನ್ಸ್ ಬ್ಯಾಂಕ್ ಖಾತೆ ತೆರೆದೆವು. ಆ ಜನಧನ್ ಖಾತೆಯಲ್ಲಿ ಬಡವರು ಇಂದು ಉಳಿತಾಯ ಮಾಡುವ ಅಭ್ಯಾಸ ಮಾಡಿಕೊಂಡಿದ್ದಾರೆ . ಈ ಮೊದಲ ಜನರು ಗೋಧಿಯ ಡಬ್ಬದಲ್ಲಿ ಹಣ ಬಚ್ಚಿಡುತ್ತಿದ್ದರು, ಹಾಸಿಗೆಯ ಅಡಿಯಲ್ಲಿ ಇಡುತ್ತಿದ್ದರು. ಪತಿಗೆ ದುರಭ್ಯಾಸವಿದ್ದರೆ ಆತ ಹಣವನ್ನು ಬೇರೆಲ್ಲೋ ವೆಚ್ಚ ಮಾಡಿ ಬರುತ್ತಿದ್ದ. ಮನೆಯ ಮಹಿಳೆಯರಿಗೆ ಭಯವಿತ್ತು. ಇಂದು ಅಂತಹ ಜನಧನ್ ಬ್ಯಾಂಕ್ ಖಾತೆಯಲ್ಲಿ 67 ಸಾವಿರ ಕೋಟಿ ರೂಪಾಯಿಗಳನ್ನು ಬಡವರು ಉಳಿತಾಯ ಮಾಡಿದ್ದಾರೆ ಎಂದು ನಾನು ಹೆಮ್ಮೆಯಿಂದ ಹೇಳುತ್ತೇನೆ. ದೇಶದ ಅರ್ಥ ವ್ಯವಸ್ಥೆಯಲ್ಲಿ ದೇಶದ ಬಡವರು ಸಕ್ರಿಯವಾಗಿ ಭಾಗವಹಿಸಿದ್ದಾರೆ. ಇದು ಚಿಕ್ಕ ಪುಟ್ಟ ಬದಲಾವಣೆಯಲ್ಲ. ಯಾರು ಶಕ್ತಿ, ಸಾಮರ್ಥ್ಯ ಮತ್ತು ವ್ಯವಸ್ಥೆಯಿಂದ ಹೊರಗಿದ್ದರೋ ಅವರು ಇಂದು ವ್ಯವಸ್ಥೆಯ ಕೇಂದ್ರಬಿಂದುವಾಗಿದ್ದಾರೆ.
ಇಂತಹ ಯೋಚಿಸಲೂ ಆಗದಂತಹ ಅನೇಕ ಕ್ರಮಗಳಿವೆ, ಇದು ಯಾರ ಕಲ್ಪನೆಯಲ್ಲೂ ಇರಲಿಲ್ಲ, ಹೀಗೂ ಕೂಡಾ ಆಗಬಹುದಾ ಎಂದು ಅನೇಕರು ಚಿಂತಿಸತೊಡಗಿದ್ದಾರೆ. ನಮ್ಮ ದೇಶ ಹೇಗಿದೆಯೋ, ಹಾಗೆ ಇರಬೇಕು ಎಂದು ಅನೇಕರು ನಿರ್ಧರಿಸಿದ್ದರು. ಏಕೆ ಹಾಗೆ ಇರಬೇಕು? ಸಿಂಗಾಪುರ ಸ್ವಚ್ಚವಾಗಬಹುದು, ಫಿಲಿಪ್ಪೀನ್ಸ್ ಸ್ವಚ್ಚವಾಗಬಹುದು, ಮನೀಲಾ ಸ್ವಚ್ಚವಾಗಬಹುದು, ಹಾಗಾದರೆ ಹಿಂದೂಸ್ತಾನ ಸ್ವಚ್ಚವಾಗಿರಲು ಸಾಧ್ಯವಿಲ್ಲವಾ? ದೇಶದ ಯಾವ ನಾಗರೀಕ ಕೊಳಚೆಯಲ್ಲಿ ವಾಸಿಸ ಬಯಸುತ್ತಾನೆ. ಯಾರೂ ಬಯಸುವುದಿಲ್ಲ. ಯಾರಾದರೂ ಈ ಬಗ್ಗೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಯಾರಾದರೂ ಜವಾಬ್ಧಾರಿಗಳನ್ನು ತೆಗೆದುಕೊಳ್ಳಬೇಕು, ಸಫಲತೆ, ವಿಫಲತೆಗಳ ಬಗ್ಗೆ ಚಿಂತಿಸದೆ ಕಾರ್ಯವನ್ನು ಕೈಗೆತ್ತಿಕೊಳ್ಳಬೇಕು. ಮಹಾತ್ಮಾ ಗಾಂಧಿಯವರು ತಮ್ಮ ಕಾರ್ಯವನ್ನು ಎಲ್ಲಿಯ ತನಕ ಸ್ಥಗಿತಗೊಳಿಸಿದ್ದರೋ ಅಲ್ಲಿಂದ ಮುಂದೆ ನಾವು ನಡೆಸಿಕೊಂಡು ಹೋಗುವ ಪ್ರಯತ್ನ ಮಾಡುತ್ತಿದ್ದೇವೆ. ಇಂದು ದೇಶದ ಎರಡು ಲಕ್ಷಕ್ಕೂ ಅಧಿಕ ಹಳ್ಳಿಗಳು ಬಹಿರ್ದೆಶೆ ಮುಕ್ತವಾಗಿವೆ. ಒಬ್ಬ ಸಾಮಾನ್ಯ ಮನುಷ್ಯನ ಜೀವನದಲ್ಲಿ ಬದಲಾವಣೆ ಹೇಗೆ ಆಯಿತು?
ತಮ್ಮಲ್ಲಿ ಅನೇಕರು ಕಳೆದ 20,25,30 ವರ್ಷಗಳಲ್ಲಿ ಭಾರತದಿಂದ ಇಲ್ಲಿಗೆ ಆಗಮಿಸಿರಬಹುದು. ಇಂದೂ ಕೂಡಾ ಭಾರತದೊಂದಿಗೆ ಸಂಪರ್ಕದಲ್ಲಿದ್ದರೆ ತಮಗೆ ತಿಳಿದಿರುತ್ತದೆ. ಭಾರತದಲ್ಲಿ ಅನಿಲ ಸಿಲಿಂಡರ್ ಪಡೆದುಕೊಳ್ಳುವುದು, ಮನೆಗೆ ಅನಿಲ ಸಂಪರ್ಕ ಪಡೆದುಕೊಳ್ಳುವುದು ಎಂದರೆ ಅದೊಂದು ದೊಡ್ಡ ಕಾರ್ಯವೆಂದು ತಿಳಿದುಕೊಳ್ಳಲಾಗಿತ್ತು. ಮನೆಗೆ ಅನಿಲ ಸಿಲೆಂಡರ್ ಬಂದರೆ, ಅನಿಲ ಸಂಪರ್ಕ ಬಂದರೆ ನೆರೆ ಹೊರೆಯವರಿಗೆ ಯಾವುದೋ ಮರ್ಸಿಡಿಸ್ ಬಂತೆಂಬ ಭಾವನೆ ಉಂಟಾಗುತ್ತಿತ್ತು. ಅಂದರೆ ಬಹಳ ದೊಡ್ಡ ಸಾಧನೆ ಎಂದು ತಿಳಿದುಕೊಳ್ಳಲಾಗುತ್ತಿತ್ತು. ಅನಿಲ ಸಂಪರ್ಕ ಎಂದರೆ ಅದೊಂದು ದೊಡ್ಡ ಕಾರ್ಯ ಎಂದು ಭಾವಿಸಲಾಗಿತ್ತು. ನಮ್ಮ ದೇಶದಲ್ಲಿ ಸಂಸತ್ ಸದಸ್ಯನಿಗೆ 25 ಕೂಪನ್ ಗಳನ್ನು ನೀಡಲಾಗುತ್ತಿತ್ತು. ಇದರಿಂದ ತಮ್ಮ ಸಂಸತ್ ಕ್ಷೇತ್ರದಲ್ಲಿ ಪ್ರತಿ ವರ್ಷ 25 ಕುಟುಂಬಗಳಿಗೆ ಇದರ ಉಪಯೋಗ ಮಾಡಿಕೊಡಬಹುದು ಎಂಬ ಉದ್ದೇಶವಿತ್ತು. ಅದು ಏನಾಗುತ್ತಿತ್ತು ಎಂಬುದನ್ನು ನಾನು ಹೇಳುವುದಿಲ್ಲ. ಅದು ಅಂದಿನ ದಿನ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿತ್ತು. 2014 ರಲ್ಲಿ ಸಂಸತ್ ಗೆ ಚುನಾವಣೆಯಾದಾಗ ಒಂದು ಕಡೆ ಬಿಜೆಪಿ ಮತ್ತೊಂದು ಕಡೆ ಕಾಂಗ್ರೆಸ್. ಭಾರತೀಯ ಜನತಾ ಪಕ್ಷ ನನಗೆ ಆ ಚುನಾವಣೆಯ ನೇತೃತ್ವದ ಜವಾಬ್ಧಾರಿ ವಹಿಸಿತ್ತು. ಆಗ ಕಾಂಗ್ರೆಸ್ ಪಕ್ಷದ ಒಂದು ಸಭೆ ನಡೆಯಿತು. ಸಂಪೂರ್ಣ ದೇಶ ಆ ಸಭೆಯಲ್ಲಿ ಕಾಂಗ್ರೆಸ್ ಯಾರ ನೇತೃತ್ವದಲ್ಲಿ ಚುನಾವಣೆಗೆ ಹೋಗುತ್ತಾರೆ ಎಂಬ ಬಗ್ಗೆ ಗಮನಿಸುತ್ತಿತ್ತು. ಸಭೆಯ ನಂತರ ಸಂಜೆ ಕಾಂಗ್ರೆಸ್ ಒಂದು ಪತ್ರಿಕಾಗೋಷ್ಟಿ ನಡೆಸಿತು. ಆ ಪತ್ರಿಕಾ ಗೋಷ್ಟಿಯಲ್ಲಿ, ತಾವು 2014 ರ ಚುನಾವಣೆಯಲ್ಲಿ ಗೆದ್ದು ಬಂದರೆ, ಈಗ ವರ್ಷಕ್ಕೆ ನೀಡುತ್ತಿದ್ದ 9 ಅನಿಲ ಸಿಲೆಂಡರ್ ಗಳನ್ನು 12ಕ್ಕೆ ಹೆಚ್ಚಿಸುತ್ತೇವೆ ಎಂದು ಘೋಷಣೆ ಮಾಡಲಾಯಿತು. ಈ ವಿಷಯವನ್ನಿಟ್ಟುಕೊಂಡು ಕಾಂಗ್ರೆಸ್ ಚುನಾವಣೆ ಎದುರಿಸುತ್ತಿತ್ತು. ದೇಶ ಕೂಡಾ ಚಪ್ಪಾಳೆ ತಟ್ಟುತ್ತಿತ್ತು. ಬಹಳ ಒಳ್ಳೆಯದು, 9 ರಿಂದ 12 ದೊರೆಯುತ್ತದೆ ಎಂದು.
ಅವುಗಳನ್ನು ನಾನು ದೇಶದ ಬಡವರಿಗೆ ನೀಡುತ್ತೇನೆ ಎಂದು ಮೋದಿ ನಿರ್ಣಯ ಮಾಡಿದ್ದರು. ದೇಶದ ಮೂರು ಕೋಟಿ ಬಡವರಿಗೆ ಉಚಿತ ಅನಿಲ ಸಿಲೆಂಡರ್ ನೀಡುವ ದಿಕ್ಕಿನಲ್ಲಿ ನಾವು ಯಶಸ್ವಿಯಾಗಿ ಮುನ್ನಡೆದೆವು. ಮೂರು ಕೋಟಿ ಕುಟುಂಬಗಳಿಗೆ ಅನಿಲ ಸಿಲೆಂಡರ್ ವಿತರಿಸಿದೆವು. ನನ್ನ ಗುರಿ 5 ಕೋಟಿ ಕುಟುಂಬಗಳಿಗೆ ನೀಡುವುದಾಗಿದೆ. ಈಗಾಗಲೇ ಮೂರು ಕೋಟಿ ಕುಟುಂಬಗಳಿಗೆ ನೀಡಿ ಆಗಿದೆ. ಇದರಲ್ಲಿಯೂ ಒಂದು ವಿಶೇಷತೆ ಇದೆ, ನೀವುಗಳೆಲ್ಲರೂ ನನ್ನ ಕುಟುಂಬದ ಸದಸ್ಯರು, ಕೆಲವೊಂದು ವಿಷಯಗಳನ್ನು ತಮ್ಮಲ್ಲಿ ಹೇಳಿಕೊಳ್ಳಬಹುದು. ಕೆಲವೊಮ್ಮೆ ಸರ್ಕಾರದ ಸಹಾಯ ಧನ ನೀಡುವ ಸಂದರ್ಭಗಳಲ್ಲಿ ನಾಗರಿಕರಿಗೆ ಒಳಿತಾಗುತ್ತಿದೆ ಎಂದು ಭಾವಿಸಲಾಗುತ್ತಿತ್ತು. ನಾನು ಬಂದ ನಂತರ ಅದನ್ನು ಆಧಾರ ಜತೆಗೆ ಜೋಡಿಸಿದೆ. ಬಯೋ ಮೆಟ್ರಿಕ್ ಐಡೆಂಟಿಫಿಕೇಷನ್ ನಿಂದ ತಿಳಿದು ಬಂದದ್ದೇನೆಂದರೆ ಹುಟ್ಟೇ ಇಲ್ಲದವರಿಗೂ ಕೂಡಾ ಅನಿಲ ಸಹಾಯ ಧನ ಹೋಗುತ್ತಿತ್ತು. ಇದರರ್ಥ ಈ ಸಹಾಯ ಧನ ಎಲ್ಲಿಗೆ ಹೋಗುತ್ತಿರಬಹುದು. ನೀವೇ ನನಗೆ ತಿಳಿಸಿ, ಈ ಸಹಾಯಧನ ಎಲ್ಲಿಗೆ ಹೋಗುತ್ತಿರಬಹುದು. ಯಾರೋ ಒಬ್ಬರ ಜೇಬಿಗೆ ಈ ಸಹಾಯ ಧನ ಹೋಗುತ್ತಿತ್ತು. ಅದರ ಮೇಲೆ ನಾನು ಪ್ರಹಾರ ಬೀರಿದೆನು, ಅದು ನಿಂತು ಹೋಯಿತು. ಈ ರೀತಿಯ ಸಹಾಯ ಧನ ಯೋಗ್ಯ ವ್ಯಕ್ತಿಗೆ ತಲುಪಬೇಕು, ಯಾರು ಇನ್ನೂ ಹುಟ್ಟೇ ಇಲ್ಲವೋ ಅಂತಹ ವ್ಯಕ್ತಿಗಳ ಹೆಸರಿಗೆ ಹೋಗಬಾರದು ಎನ್ನುವ ಕಾರ್ಯವನ್ನಷ್ಟೇ ಮಾಡಿದೆ. ಇದರ ಪರಿಣಾಮ ಏನು ಎಂಬುದು ತಮಗೆ ಅರಿವಿದೆಯಾ? 57 ಸಾವಿರ ಕೋಟಿ ರೂಪಾಯಿಗಳ ಉಳಿತಾಯವಾಯಿತು. ಇದು ಕೇವಲ ಒಂದು ಬಾರಿಯಲ್ಲ, ಪ್ರತಿವರ್ಷ 57 ಸಾವಿರ ಕೋಟಿ ರೂಪಾಯಿಗಳ ಉಳಿತಾಯವಾಗುತ್ತಿದೆ. ಈಗ ತಾವೇ ಹೇಳಿ ಈ ಹಣ ಎಲ್ಲಿಗೆ ಹೋಗುತ್ತಿತ್ತು. ಯಾರ ಜೇಬಿಗೆ ಈ ಹಣ ಹೋಗುತ್ತಿತ್ತೋ ಅವರು ಮೋದಿಯನ್ನು ಹೇಗೆ ಇಷ್ಟ ಪಡುತ್ತಾರೆ. ಮೋದಿಯ ಬಳಿಗೆ ಫೋಟೋ ತೆಗೆಸಿಕೊಳ್ಳಲು ಬರುತ್ತಾರಾ? ಅವರು ಮೋದಿಯನ್ನು ಇಷ್ಟಪಡುತ್ತಾರಾ? ತಾವೇ ಹೇಳಿ ಈ ಕಾರ್ಯ ಮಾಡಬೇಕೋ ಬೇಡವೋ? ದೇಶದಲ್ಲಿ ಬದಲಾವಣೆ ತರಬೇಕೋ ಬೇಡವೋ? ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕೋ ಬೇಡವೋ? ದೇಶವನ್ನು ಮುಂದೆ ತರಬೇಕೋ ಬೇಡವೋ?
ತಾವು ಇಲ್ಲಿಗೆ ಆಗಮಿಸಿ ನನಗೆ ಆಶೀರ್ವದಿಸುತ್ತಿದ್ದೀರಿ. ಯಾವ ಉದ್ದೇಶದಿಂದ ದೇಶದ ಜನತೆ ನನಗೆ ಜವಾಬ್ಧಾರಿಯನ್ನು ನೀಡಿದ್ದಾರೋ ಆ ಕಾರ್ಯವನ್ನು ಸಂಪೂರ್ಣ ಮಾಡುತ್ತೇನೆ, ಅದರಲ್ಲಿ ಯಾವುದೇ ಕೊರತೆ ಆಗದಂತೆ ನಾನು ಕಾರ್ಯ ನಿರ್ವಹಿಸುತ್ತೇನೆ ಎಂದು ತಮಗೆ ವಿಶ್ವಾಸ ನೀಡುತ್ತೇನೆ. 2014ರ ಮೊದಲು ಯಾವ ರೀತಿಯ ಸುದ್ದಿಗಳು ಪ್ರಕಟಗೊಳ್ಳುತ್ತಿದ್ದವು, ಕಲ್ಲಿದ್ದಲಿನಲ್ಲಿ ಎಷ್ಟು ಹೋಯಿತು, 2 ಜಿ ಯಲ್ಲಿ ಎಷ್ಟು ಹೋಯಿತು, ಎಂಬ ಸುದ್ದಿಗಳು ಪ್ರಕಟವಾಗುತ್ತಿತ್ತು. 2014 ರ ನಂತರ ಮೋದಿಯನ್ನು, ಮೋದಿಯವರೇ ಎಷ್ಟು ಆದಾಯ ಬಂತು ಹೇಳಿ ಎಂದು ಕೇಳುತ್ತಿದ್ದಾರೆ. ನೋಡಿ, ಇದು ಬದಲಾವಣೆ, ಒಂದು ಕಾಲದಲ್ಲಿ ಎಷ್ಟು ಹೋಯಿತು ಎಂಬುದರ ಬಗ್ಗೆ ಜನತೆ ಯೋಚಿಸುತ್ತಿದ್ದರು, ಆದರೆ ಇಂದು ಎಷ್ಟು ಬಂತು ಎಂಬ ಸಂತೋಷದ ಸುದ್ದಿಯನ್ನು ಅರಿಯಲು ಜನತೆ ಮೋದಿಯನ್ನು ಕೇಳುತ್ತಿದ್ದಾರೆ.
ಸ್ನೇಹಿತರೆ, ಇಂದು ದೇಶದಲ್ಲಿ ಯಾವುದಕ್ಕೂ ಕೊರತೆ ಇಲ್ಲ, ದೇಶ ಮುಂದೆ ಬರಲು ಎಲ್ಲ ರೀತಿಯ ಸಾಧ್ಯತೆಗಳೂ ಇವೆ, ಎಲ್ಲ ರೀತಿಯ ಸಾಮರ್ಥ್ಯವಿದೆ, ಇಂದು ಆ ವಿಷಯಗಳನ್ನು ಇಟ್ಟುಕೊಂಡು ಅನೇಕ ಮಹತ್ವಪೂರ್ಣ ನೀತಿಗಳನ್ನು ಇಟ್ಟುಕೊಂಡು ನಾವು ಮುನ್ನಡೆಯುತ್ತಿದ್ದೇವೆ. ದೇಶ ಅಭಿವೃದ್ಧಿಯ ಹೊಸ ಉತ್ತುಂಗವನ್ನು ದಾಟಿ ಮುನ್ನುಗ್ಗುತ್ತಿದೆ. ಜನರ ಸಹಕಾರದಿಂದ ಮುನ್ನಡೆಯುತ್ತಿದೆ. ಸಾಮಾನ್ಯರಿಂದ ಸಾಮಾನ್ಯ ನಾಗರಿಕರನ್ನು ಜತೆಯಾಗಿಟ್ಟುಕೊಂಡು ಮುನ್ನಡೆಯುತ್ತಿದ್ದೇವೆ. ಇದರ ಪರಿಣಾಮ ಎಷ್ಟು ಉತ್ತಮವಾಗಿರುತ್ತದೆ ಎಂದರೆ ತಾವೂ ಕೂಡಾ ಹೆಚ್ಚು ದಿನ ಇಲ್ಲಿ ಇರಲು ಇಷ್ಟ ಪಡುವುದಿಲ್ಲ. ಇಷ್ಟು ಹೆಚ್ಚಿನ ಸಂಖ್ಯೆಯಲ್ಲಿ ತಾವು ಇಲ್ಲಿಗೆ ಆಗಮಿಸಿ ನನಗೆ ಆಶೀರ್ವದಿಸಿರುವುದು ನನಗೆ ಸಂತಸ ತಂದಿದೆ.
President of the European Council, Antonio Costa calls PM Narendra Modi
January 07, 2025
Share
PM congratulates President Costa on assuming charge as the President of the European Council
The two leaders agree to work together to further strengthen the India-EU Strategic Partnership
Underline the need for early conclusion of a mutually beneficial India- EU FTA
Prime Minister Shri. Narendra Modi received a telephone call today from H.E. Mr. Antonio Costa, President of the European Council.
PM congratulated President Costa on his assumption of charge as the President of the European Council.
Noting the substantive progress made in India-EU Strategic Partnership over the past decade, the two leaders agreed to working closely together towards further bolstering the ties, including in the areas of trade, technology, investment, green energy and digital space.
They underlined the need for early conclusion of a mutually beneficial India- EU FTA.
The leaders looked forward to the next India-EU Summit to be held in India at a mutually convenient time.
They exchanged views on regional and global developments of mutual interest. The leaders agreed to remain in touch.
Pleased to speak with President @antoniolscosta. India and the EU are natural partners. We are committed to working closely together to further strengthen the India-EU Strategic Partnership, including in the areas of technology, green energy, digital space, trade and investments.…