ಮಹಾರಾಜರವರೇ,

ಮಹನೀಯರುಗಳೇ,

ಎಲ್ಲರಿಗೂ ನಮಸ್ಕಾರಗಳು.

ಮೊದಲನೆಯದಾಗಿ, "ಟೈಫೂನ್ ಯಾಗಿ" ಯಲ್ಲಿ ಹಾನಿಗೊಳಗಾದವರಿಗೆ ನನ್ನ ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತೇನೆ.

ಈ ಸವಾಲಿನ ಸಂದಿಗ್ಧ ಸಮಯದಲ್ಲಿ ನಾವು ಆಪರೇಷನ್ "ಸದ್ಭವ" ಮೂಲಕ ಮಾನವೀಯ ನೆರವು ನೀಡಿದ್ದೇವೆ.

 ಸ್ನೇಹಿತರೇ,

ಭಾರತವು ಆಸಿಯಾನ್‌ ನ ಏಕತೆ ಮತ್ತು ಕೇಂದ್ರೀಕರಣವನ್ನು ಸತತವಾಗಿ ಬೆಂಬಲಿಸುತ್ತಿದೆ.   ಭಾರತದ ಇಂಡೋ-ಪೆಸಿಫಿಕ್ ದೃಷ್ಟಿಕೋನ ಮತ್ತು ಕ್ವಾಡ್ ಸಹಕಾರಕ್ಕೆ ಆಸಿಯಾನ್ ಪ್ರಮುಖ ಆಧಾರವಾಗಿದೆ.  ಭಾರತದ "ಇಂಡೋ-ಪೆಸಿಫಿಕ್ ಓಷನ್ಸ್ ಇನಿಶಿಯೇಟಿವ್" ಮತ್ತು "ಇಂಡೋ-ಪೆಸಿಫಿಕ್ ಮೇಲಿನ ಆಸಿಯಾನ್ ಔಟ್‌ಲುಕ್" ನಡುವೆ ಪ್ರಮುಖ ಸಾಮ್ಯತೆಗಳಿವೆ.  ಸಂಪೂರ್ಣ ಪ್ರದೇಶದ ಸಮಗ್ರ ಶಾಂತಿ ಮತ್ತು ಪ್ರಗತಿಗೆ ಮುಕ್ತ, ತೆರೆದ, ಅಂತರ್ಗತ, ಸಮೃದ್ಧ ಮತ್ತು ನಿಯಮಗಳ-ಆಧಾರಿತ ಇಂಡೋ-ಪೆಸಿಫಿಕ್ ನಿರ್ಣಾಯಕಗಳು ಅಗತ್ಯವಾಗಿದೆ. 

ದಕ್ಷಿಣ ಚೀನಾ ಸಮುದ್ರದಲ್ಲಿ ಶಾಂತಿ, ಭದ್ರತೆ ಮತ್ತು ಸ್ಥಿರತೆ ಇಡೀ ಇಂಡೋ-ಪೆಸಿಫಿಕ್ ಪ್ರದೇಶದ ಹಿತಾಸಕ್ತಿಯಲ್ಲಿದೆ.

ಯು.ಎನ್.ಸಿ.ಎಲ್.ಒ.ಎಸ್. ಗೆ ಅನುಗುಣವಾಗಿ ಕಡಲ ಚಟುವಟಿಕೆಗಳನ್ನು ನಡೆಸಬೇಕು ಎಂದು ನಾವು ನಂಬುತ್ತೇವೆ.  ನ್ಯಾವಿಗೇಷನ್ ಮತ್ತು ವಾಯುಪ್ರದೇಶದ ಸ್ವಾತಂತ್ರ್ಯವನ್ನು ಖಚಿತಪಡಿಸಿಕೊಳ್ಳುವುದು ಅತ್ಯಗತ್ಯವಾಗಿದೆ.  ಸದೃಢ ಮತ್ತು ಪರಿಣಾಮಕಾರಿ ನೀತಿ ಸಂಹಿತೆ ರೂಪಿಸಬೇಕು.  ಮತ್ತು, ಇದು ಪ್ರಾದೇಶಿಕ ದೇಶಗಳ ವಿದೇಶಾಂಗ ನೀತಿಗಳ ಮೇಲೆ ನಿರ್ಬಂಧಗಳನ್ನು ಹೇರಬಾರದು.

ನಮ್ಮ ವಿಧಾನವು ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸಬೇಕೇ ಹೊರತು ವಿಸ್ತರಣಾವಾದವಲ್ಲ.

ಸ್ನೇಹಿತರೇ,

ಮ್ಯಾನ್ಮಾರ್‌ ನಲ್ಲಿನ ಪರಿಸ್ಥಿತಿಗೆ ಆಸಿಯಾನ್ ನ ವಿಧಾನವನ್ನು ನಾವು ಅನುಮೋದಿಸುತ್ತೇವೆ ಮತ್ತು ಐದು ಅಂಶಗಳ ಒಮ್ಮತವನ್ನು ಬೆಂಬಲಿಸುತ್ತೇವೆ.  ಇದಲ್ಲದೆ, ಮಾನವೀಯ ಸಹಾಯವನ್ನು ಉಳಿಸಿಕೊಳ್ಳುವುದು ಮತ್ತು ಪ್ರಜಾಪ್ರಭುತ್ವದ ಮರುಸ್ಥಾಪನೆಗೆ ಸೂಕ್ತವಾದ ಕ್ರಮಗಳನ್ನು ಜಾರಿಗೊಳಿಸುವುದು ನಿರ್ಣಾಯಕ ಎಂದು ನಾವು ನಂಬುತ್ತೇವೆ.  ಮ್ಯಾನ್ಮಾರ್ ಈ ಪ್ರಕ್ರಿಯೆಯಲ್ಲಿ ಪ್ರತ್ಯೇಕವಾಗಿರುವುದಕ್ಕಿಂತ ಹೆಚ್ಚಾಗಿ ಸ್ವತಃ ತೊಡಗಿಸಿಕೊಳ್ಳಬೇಕು ಎಂದು ನಾವು ನಂಬುತ್ತೇವೆ.

ನೆರೆಯ ರಾಷ್ಟ್ರವಾಗಿ, ಭಾರತವು ತನ್ನ ಜವಾಬ್ದಾರಿಗಳನ್ನು ಎತ್ತಿಹಿಡಿಯುವುದನ್ನು ಮುಂದುವರಿಸುತ್ತದೆ.

ಸ್ನೇಹಿತರೇ,

ಪ್ರಪಂಚದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಸಂಘರ್ಷಣೆಗಳಿಂದಾಗಿ ಹೆಚ್ಚು ಋಣಾತ್ಮಕವಾಗಿ ಪ್ರಭಾವಿತವಾಗಿರುವ ದೇಶಗಳು ಜಾಗತಿಕ ದಕ್ಷಿಣದಿಂದ ಬಂದ ರಾಷ್ಟ್ರಗಳಾಗಿವೆ.  ಯುರೇಷಿಯಾ ಮತ್ತು ಮಧ್ಯಪ್ರಾಚ್ಯದಂತಹ ಪ್ರದೇಶಗಳಲ್ಲಿ ಆದಷ್ಟು ಬೇಗ ಶಾಂತಿ ಮತ್ತು ಸ್ಥಿರತೆಯ ಮರುಸ್ಥಾಪನೆಗಾಗಿ ಸಾಮೂಹಿಕ ಬಯಕೆ ಇದೆ.

ನಾನು ಬುದ್ಧನ ಭೂಮಿಯಿಂದ ಬಂದಿದ್ದೇನೆ ಮತ್ತು ಇದು ಯುದ್ಧದ ಯುಗವಲ್ಲ ಎಂದು ನಾನು ಪದೇ ಪದೇ ಹೇಳಿದ್ದೇನೆ. ಯುದ್ಧಭೂಮಿಯಲ್ಲಿ ಸಮಸ್ಯೆಗಳಿಗೆ ಪರಿಹಾರ ಸಿಗುವುದಿಲ್ಲ.

ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆ ಮತ್ತು ಅಂತಾರಾಷ್ಟ್ರೀಯ ಕಾನೂನುಗಳನ್ನು ಗೌರವಿಸುವುದು ಅತ್ಯಗತ್ಯ.  ಮಾನವೀಯ ದೃಷ್ಟಿಕೋನದಿಂದ, ಸಂವಾದ ಮತ್ತು ರಾಜತಾಂತ್ರಿಕತೆಗಳಿಗೆ ನಾವು ಬಲವಾದ ಒತ್ತು ನೀಡಬೇಕು

ವಿಶ್ವಬಂಧುವಾಗಿ ತನ್ನ ಜವಾಬ್ದಾರಿಗಳನ್ನು ಪೂರೈಸುವಲ್ಲಿ, ಭಾರತವು ಈ ದಿಕ್ಕಿನಲ್ಲಿ ಇನ್ನೂ ಉತ್ತಮ ಕೊಡುಗೆ ನೀಡಲು ತನ್ನ ಎಲ್ಲ ಪ್ರಯತ್ನಗಳನ್ನು ಮಾಡುವುದನ್ನು ಮುಂದುವರಿಸುತ್ತದೆ.

ಜಾಗತಿಕ ಶಾಂತಿ ಮತ್ತು ಭದ್ರತೆಗೆ ಭಯೋತ್ಪಾದನೆ ಗಂಭೀರ ಸವಾಲನ್ನೂ ಒಡ್ಡಿದೆ.  ಇದನ್ನು ಎದುರಿಸಲು ಮಾನವೀಯತೆಯಲ್ಲಿ ನಂಬಿಕೆಯಿರುವ ಶಕ್ತಿಗಳು ಒಗ್ಗೂಡಿ ಕೆಲಸ ಮಾಡಬೇಕು.

ಮತ್ತು, ನಾವು ಸೈಬರ್, ಸಾಗರ ಮತ್ತು ಬಾಹ್ಯಾಕಾಶ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರವನ್ನು ಬಲಪಡಿಸಬೇಕು.

ಸ್ನೇಹಿತರೇ,

ನಳಂದಾದ ಪುನರುಜ್ಜೀವನವು ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ನಾವು ಮಾಡಿದ ಬದ್ಧತೆಯಾಗಿದೆ. ಈ ಜೂನ್‌ ನಲ್ಲಿ, ನಳಂದ ವಿಶ್ವವಿದ್ಯಾಲಯದ ಹೊಸ ಕ್ಯಾಂಪಸ್ ಅನ್ನು ಉದ್ಘಾಟಿಸುವ ಮೂಲಕ ನಾವು ಆ ಬದ್ಧತೆಯನ್ನು ಪೂರೈಸಿದ್ದೇವೆ. ನಳಂದದಲ್ಲಿ ನಡೆಯಲಿರುವ 'ಉನ್ನತ ಶಿಕ್ಷಣ ಮುಖ್ಯಸ್ಥರ ಸಮಾವೇಶ'ದಲ್ಲಿ ಭಾಗವಹಿಸಲು ಇಲ್ಲಿ ಹಾಜರಿರುವ ಎಲ್ಲಾ ದೇಶಗಳನ್ನು ನಾನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತಿದ್ದೇನೆ.

ಸ್ನೇಹಿತರೇ,

ಪೂರ್ವ ಏಷ್ಯಾ ಶೃಂಗಸಭೆಯು ಭಾರತದ ಕಾಯಿದೆ ಪೂರ್ವ ನೀತಿಯ ಪ್ರಮುಖ ಆಧಾರಸ್ತಂಭವಾಗಿದೆ.

ಇಂದಿನ ಶೃಂಗಸಭೆಯನ್ನು ಅತ್ಯುತ್ತಮವಾಗಿ ಆಯೋಜಿಸಿದ್ದಕ್ಕಾಗಿ ನಾನು ಪ್ರಧಾನಮಂತ್ರಿ ಶ್ರೀ ಸೋನೆಕ್ಸೆ ಸಿಫಾಂಡೋನ್ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಮುಂದಿನ ಅಧ್ಯಕ್ಷತೆಗೆ ಆಯ್ಕೆಯಾದ ಮಲೇಷ್ಯಾಕ್ಕೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ ಮತ್ತು ಮುಂದಿನ ಯಶಸ್ವಿ ಅಧ್ಯಕ್ಷೀಯ ಹುದ್ದೆಗಾಗಿ ಅವರಿಗೆ ಭಾರತದ ಸಂಪೂರ್ಣ ಬೆಂಬಲವನ್ನು ಮತ್ತು ಭರವಸೆ ನೀಡುತ್ತೇನೆ.

ತುಂಬಾ ಧನ್ಯವಾದಗಳು.

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Cabinet approves minimum support price for Copra for the 2025 season

Media Coverage

Cabinet approves minimum support price for Copra for the 2025 season
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಡಿಸೆಂಬರ್ 2024
December 21, 2024

Inclusive Progress: Bridging Development, Infrastructure, and Opportunity under the leadership of PM Modi