ಗೌರವಾನ್ವಿತ ಗಣ್ಯರೆ,

ಮಹನೀಯರೆ,

ನಿಮ್ಮ ಅಮೂಲ್ಯವಾದ ಒಳನೋಟಗಳು ಮತ್ತು ಸಲಹೆಗಳನ್ನು ನೀಡಿದ್ದಕ್ಕಾಗಿ ನಿಮ್ಮೆಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಭಾರತ ಮತ್ತು ಆಸಿಯಾನ್ ನಡುವಿನ ಸಮಗ್ರ ಕಾರ್ಯತಂತ್ರ ಪಾಲುದಾರಿಕೆ ಬಲಪಡಿಸಲು ನಾವು ಬದ್ಧರಾಗಿದ್ದೇವೆ. ನಾವು ಒಟ್ಟಾಗಿ ಮನುಕುಲದ ಕಲ್ಯಾಣ, ಪ್ರಾದೇಶಿಕ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗಾಗಿ ಶ್ರಮಿಸುವುದನ್ನು ಮುಂದುವರಿಸುತ್ತೇವೆ ಎಂಬ ವಿಶ್ವಾಸ ನನಗಿದೆ.

ನಾವು ಭೌತಿಕ ಸಂಪರ್ಕ ಮಾತ್ರವಲ್ಲದೆ ಆರ್ಥಿಕ, ಡಿಜಿಟಲ್, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಸಂಬಂಧಗಳನ್ನು ಹೆಚ್ಚಿಸಲು ಅಗತ್ಯವಾದ ಕ್ರಮ ಕೈಗೊಳ್ಳುವುದನ್ನು ಮುಂದುವರಿಸುತ್ತೇವೆ.

ಸ್ನೇಹಿತರೆ,

ಈ ವರ್ಷದ ಆಸಿಯಾನ್ ಶೃಂಗಸಭೆಗೆ ಅಳವಡಿಸಿಕೊಂಡಿರುವ "ಸಂಪರ್ಕ ಮತ್ತು ಚೇತರಿಕೆ ಸಾಮರ್ಥ್ಯ ಹೆಚ್ಚಿಸುವುದು" ವಸ್ತುವಿಷಯ(ಥೀಮ್)ದ ಸ್ದರ್ಭದಲ್ಲೇ ನಾನು ಕೆಲವೊಂದು ಆಲೋಚನೆಗಳನ್ನು ಹಂಚಿಕೊಳ್ಳಲು ಬಯಸುತ್ತೇನೆ.

ಇಂದು 10ನೇ ತಿಂಗಳ 10ನೇ ದಿನ, ಆದ್ದರಿಂದ ನಾನು 10 ಸಲಹೆಗಳನ್ನು ಹಂಚಿಕೊಳ್ಳಲು ಬಯಸುತ್ತೇನೆ.

ಮೊದಲನೆಯದಾಗಿ, ನಮ್ಮ ನಡುವೆ ಪ್ರವಾಸೋದ್ಯಮ ಉತ್ತೇಜಿಸಲು, ನಾವು 2025 ಅನ್ನು "ಆಸಿಯಾನ್-ಭಾರತ ಪ್ರವಾಸೋದ್ಯಮ ವರ್ಷ" ಎಂದು ಘೋಷಿಸಬಹುದು. ಈ ಉಪಕ್ರಮಕ್ಕಾಗಿ, ಭಾರತವು 5 ದಶಲಕ್ಷ ಡಾಲರ್ ನೆರವು ನೀಡುತ್ತದೆ.

ಎರಡನೆಯದಾಗಿ, ಭಾರತದ ಕಾಯಿದೆ ಪೂರ್ವ ನೀತಿಯ ಒಂದು ದಶಕದ ನೆನಪಿಗಾಗಿ, ನಾವು ಭಾರತ ಮತ್ತು ಆಸಿಯಾನ್ ದೇಶಗಳ ನಡುವೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಬಹುದು. ನಮ್ಮ ಕಲಾವಿದರು, ಯುವಕರು, ಉದ್ಯಮಿಗಳು ಮತ್ತು ಚಿಂತಕರ ಚಾವಡಿ ಇತ್ಯಾದಿಗಳನ್ನು ಸಂಪರ್ಕಿಸುವ ಮೂಲಕ, ಈ ಆಚರಣೆಯ ಭಾಗವಾಗಿ ನಾವು ಸಂಗೀತ ಉತ್ಸವ, ಯುವ ಶೃಂಗಸಭೆ, ಹ್ಯಾಕಥಾನ್ ಮತ್ತು ಸ್ಟಾರ್ಟಪ್ ಉತ್ಸವದಂತಹ ಉಪಕ್ರಮಗಳನ್ನು ಸೇರಿಸಬಹುದು.

ಮೂರನೆಯದಾಗಿ, "ಭಾರತ-ಆಸಿಯಾನ್ ವಿಜ್ಞಾನ ಮತ್ತು ತಂತ್ರಜ್ಞಾನ ನಿಧಿ" ಅಡಿ, ನಾವು ವಾರ್ಷಿಕ ಮಹಿಳಾ ವಿಜ್ಞಾನಿಗಳ ಸಮಾವೇಶ ನಡೆಸಬಹುದು.

ನಾಲ್ಕನೆಯದಾಗಿ, ಹೊಸದಾಗಿ ಸ್ಥಾಪಿತವಾದ ನಳಂದ ವಿಶ್ವವಿದ್ಯಾಲಯದಲ್ಲಿ ಆಸಿಯಾನ್ ದೇಶಗಳ ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ವಿದ್ಯಾರ್ಥಿವೇತನ ಸಂಖ್ಯೆಯನ್ನು 2 ಪಟ್ಟು ಹೆಚ್ಚಿಸಲಾಗುವುದು. ಹೆಚ್ಚುವರಿಯಾಗಿ, ಭಾರತದ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಆಸಿಯಾನ್ ವಿದ್ಯಾರ್ಥಿಗಳಿಗೆ ಹೊಸ ವಿದ್ಯಾರ್ಥಿವೇತನ ಯೋಜನೆಯನ್ನು ಈ ವರ್ಷದಿಂದಲೇ ಪ್ರಾರಂಭಿಸಲಾಗುವುದು.

ಐದನೆಯದಾಗಿ, "ಆಸಿಯಾನ್-ಭಾರತದ ಸರಕುಗಳ ಒಪ್ಪಂದ" ಪರಾಮರ್ಶೆ  2025ರ ವೇಳೆಗೆ ಪೂರ್ಣಗೊಳ್ಳಬೇಕು. ಇದು ನಮ್ಮ ಆರ್ಥಿಕ ಸಂಬಂಧಗಳನ್ನು ಇನ್ನಷ್ಟು ಬಲಪಡಿಸುತ್ತದೆ. ಸುರಕ್ಷಿತ, ಚೇತರಿಕೆಯ ಮತ್ತು ವಿಶ್ವಾಸಾರ್ಹ ಪೂರೈಕೆ ಸರಪಳಿ ರಚಿಸಲು ಸಹಾಯ ಮಾಡುತ್ತದೆ.

ಆರನೆಯದಾಗಿ, ಚೇತರಿಕೆಯ ವಿಪತ್ತು ನಿರ್ವಹಣೆಗಾಗಿ,  "ಆಸಿಯಾನ್-ಇಂಡಿಯಾ ನಿಧಿ"ಯಿಂದ 5 ದಶಲಕ್ಷ ಡಾಲರ್ ನೆರವು ಹಂಚಲಾಗುತ್ತದೆ. ಭಾರತದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ಆಸಿಯಾನ್ ಮಾನವೀಯ ನೆರವು ಕೇಂದ್ರವು ಈ ಪ್ರದೇಶದಲ್ಲಿ ಒಟ್ಟಾಗಿ ಕೆಲಸ ಮಾಡಬಹುದು.

ಏಳನೆಯದಾಗಿ, ಆರೋಗ್ಯ ಚೇತರಿಕೆ ಸಾಮರ್ಥ್ಯ ಖಚಿತಪಡಿಸಿಕೊಳ್ಳಲು, ಆಸಿಯಾನ್-ಭಾರತ ಆರೋಗ್ಯ ಸಚಿವರ ಸಭೆಯನ್ನು ಸಾಂಸ್ಥಿಕಗೊಳಿಸಬಹುದು. ಇದಲ್ಲದೆ, ಭಾರತದ ವಾರ್ಷಿಕ ರಾಷ್ಟ್ರೀಯ ಕ್ಯಾನ್ಸರ್ ಗ್ರಿಡ್ ‘ವಿಶ್ವಮ್ ಸಮ್ಮೇಳನ’ದಲ್ಲಿ ಪಾಲ್ಗೊಳ್ಳುವಂತೆ ನಾವು ಪ್ರತಿ ಆಸಿಯಾನ್ ದೇಶದಿಂದ ಇಬ್ಬರು ತಜ್ಞರನ್ನು ಆಹ್ವಾನಿಸುತ್ತೇವೆ.

ಎಂಟನೆಯದಾಗಿ, ಡಿಜಿಟಲ್ ಮತ್ತು ಸೈಬರ್ ವಲಯದ ಚೇತರಿಕೆಗಾಗಿ, ಭಾರತ ಮತ್ತು ಆಸಿಯಾನ್ ನಡುವಿನ ಸೈಬರ್ ನೀತಿ ಸಂವಾದವನ್ನು ಸಾಂಸ್ಥಿಕಗೊಳಿಸಬಹುದು.

ಒಂಬತ್ತನೆಯದಾಗಿ, ಹಸಿರು ಭವಿಷ್ಯ ಉತ್ತೇಜಿಸಲು, ಭಾರತ ಮತ್ತು ಆಸಿಯಾನ್ ದೇಶಗಳ ತಜ್ಞರನ್ನು ಒಳಗೊಂಡ ಹಸಿರು ಹೈಡ್ರೋಜನ್ ಕಾರ್ಯಾಗಾರಗಳನ್ನು ಆಯೋಜಿಸಲು ನಾನು ಪ್ರಸ್ತಾಪಿಸುತ್ತೇನೆ.

ಮತ್ತು ಹತ್ತನೆಯದಾಗಿ, ಹವಾಮಾನ ಹೊಂದಾಣಿಕೆ ಮತ್ತು ಚೇತರಿಕೆ ಸಾಮರ್ಥ್ಯಗಳಿಗಾಗಿ, "ಏಕ್ ಪೆಡ್ ಮಾ ಕೆ ನಾಮ್"(ಭೂತಾಯಿಗಾಗಿ ಒಂದು ಸಸಿ ನೆಡುವ) ಅಭಿಯಾನಕ್ಕೆ ಸೇರುವಂತೆ ನಾನು ನಿಮ್ಮೆಲ್ಲರನ್ನು ಒತ್ತಾಯಿಸುತ್ತೇನೆ.

ನನ್ನ 10 ವಿಚಾರಗಳಿಗೆ ನಿಮ್ಮ ಬೆಂಬಲ ಸಿಗುತ್ತದೆ ಎಂಬ ವಿಶ್ವಾಸ ನನಗಿದೆ. ಅವುಗಳನ್ನು ಕಾರ್ಯಗತಗೊಳಿಸಲು ನಮ್ಮ ತಂಡಗಳು ಸಹಕರಿಸುತ್ತವೆ.

ತುಂಬು ಧನ್ಯವಾದಗಳು.

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Indian economy ends 2024 with strong growth as PMI hits 60.7 in December

Media Coverage

Indian economy ends 2024 with strong growth as PMI hits 60.7 in December
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 17 ಡಿಸೆಂಬರ್ 2024
December 17, 2024

Unstoppable Progress: India Continues to Grow Across Diverse Sectors with the Modi Government