ಮಾನ್ಯರೇ,

ಇಂದಿನ ನಮ್ಮ ಸಕಾರಾತ್ಮಕ ನಿರ್ಧಾರಗಳಿಗೆ ಮತ್ತು ನಿಮ್ಮ ಅಮೂಲ್ಯ ಆಲೋಚನೆಗಳು ಮತ್ತು ಸಲಹೆಗಳಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ.

ಇಂದಿನ ಶೃಂಗಸಭೆಯನ್ನು ಯಶಸ್ವಿಯಾಗಿ ಆಯೋಜಿಸಿದ ಪ್ರಧಾನಿ ಸೋನಾಕ್ಸೇ ಸಿಫಾಂಡನ್ ಅವರಿಗೆ ನನ್ನ ವಿನಮ್ರ ವಂದನೆಗಳನ್ನು ಹೇಳಲು ಬಯಸುತ್ತೇ‌ನೆ.

ಇಂದು ನಾವು ಅಳವಡಿಸಿಕೊಂಡಿರುವ ಎರಡು ಜಂಟಿ ಹೇಳಿಕೆಗಳು ಡಿಜಿಟಲ್ ರೂಪಾಂತರವನ್ನು ಬಲಪಡಿಸಲಿವೆ ಮತ್ತು ಭವಿಷ್ಯದಲ್ಲಿ ಸಹಕಾರಕ್ಕೆ ನಮ್ಮ ಸಮಗ್ರ ತಾಂತ್ರಿಕ ಪಾಲುದಾರಿಕೆಗೆ ಅಡಿಪಾಯ ಹಾಕಲಿವೆ. ಈ ಸಾಧನೆಯ ಕಾರಣಕರ್ತರೆಲ್ಲರಿಗೂ ನನ್ನ ಶ್ಲಾಘನೆ. 

ಕಳೆದ ಮೂರು ವರ್ಷಗಳಲ್ಲಿ ಆಸಿಯಾನ್‌ನಲ್ಲಿ ಭಾರತದ ರಾಷ್ಟ್ರ ಸಂಯೋಜಕವಾಗಿ ಸಕಾರಾತ್ಮಕ ಪಾತ್ರ ವಹಿಸಿದ ಸಿಂಗಾಪುರಕ್ಕೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ.  ನಿಮ್ಮ ಬೆಂಬಲಕ್ಕೆ ಧನ್ಯವಾದಗಳು, ನಾವು ಭಾರತ-ಆಸಿಯಾನ್ ಸಂಬಂಧಗಳಲ್ಲಿ ಅಭೂತಪೂರ್ವ ಪ್ರಗತಿಯನ್ನು ಸಾಧಿಸಿದ್ದೇವೆ. ಹೊಸ ರಾಷ್ಟ್ರ ಸಂಯೋಜಕವಾಗಿ ಫಿಲಿಪ್ಪೈನ್ಸ್ ಅನ್ನು ನಾನು ಸ್ವಾಗತಿಸುತ್ತೇನೆ ಮತ್ತು ಅಭಿನಂದಿಸುತ್ತೇನೆ.

ಎರಡು ಶತಕೋಟಿ ಜನರ ಉಜ್ವಲ ಭವಿಷ್ಯಕ್ಕಾಗಿ ಹಾಗೂ ಪ್ರಾದೇಶಿಕ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗಾಗಿ ಪರಸ್ಪರ ಸಹಕಾರವನ್ನು ಮುಂದುವರಿಸುತ್ತೇವೆ ಎಂದು ನನಗೆ ವಿಶ್ವಾಸವಿದೆ.

ಆಸಿಯಾನ್ ನ ಅಧ್ಯಕ್ಷತೆಯನ್ನು ಮಾದರಿಯಾಗಿ ನಿರ್ವಹಿಸಿದ ಲಾವೊದ ಪಿ.ಡಿ.ಆರ್ ಪ್ರಧಾನಮಂತ್ರಿಗಳಿಗೆ ನಾನು ಮತ್ತೊಮ್ಮೆ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸುತ್ತೇ‌ನೆ.  

ಮುಂದಿನ ವರ್ಷದ ಅಧ್ಯಕ್ಷತೆಯನ್ನು ಮಲೇಷ್ಯಾ ವಹಿಸಿಕೊಳ್ಳುತ್ತಿದ್ದು, 1.4 ಶತಕೋಟಿ ಭಾರತೀಯರ ಪರವಾಗಿ ಶುಭಾಶಯಗಳನ್ನು ತಿಳಿಸುತ್ತೇನೆ.

ನಿಮ್ಮ ಅಧ್ಯಕ್ಷತೆಯ ಯಶಸ್ಸಿಗೆ ನೀವು ಭಾರತದ ಅಚಲ ಬೆಂಬಲವನ್ನು ಅವಲಂಬಿಸಬಹುದು.

ಅನಂತ ಧನ್ಯವಾದಗಳು.

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Mutual fund industry on a high, asset surges Rs 17 trillion in 2024

Media Coverage

Mutual fund industry on a high, asset surges Rs 17 trillion in 2024
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 25 ಡಿಸೆಂಬರ್ 2024
December 25, 2024

PM Modi’s Governance Reimagined Towards Viksit Bharat: From Digital to Healthcare