“ದಶಕಗಳ ಬಳಿಕ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ ಇಡೀ ತಂಡಕ್ಕೆ ದೇಶದ ಪರವಾಗಿ ನನ್ನ ಅಭಿನಂದನೆಗಳು, ಇದು ಸಣ್ಣ ಸಂಗತಿಯಲ್ಲ”
“ಈಗ ಭಾರತ ಹಿಂದುಳಿಯಲಾರದು. ನಿಮ್ಮ ಜಯಭೇರಿ ಕ್ರೀಡೆಗೆ ಸಂಬಂಧಿಸಿ ತಲೆಮಾರುಗಳನ್ನು ಪ್ರೇರೇಪಿಸುತ್ತದೆ”
“ಇಂತಹ ಯಶಸ್ಸು ದೇಶದ ಇಡೀ ಕ್ರೀಡಾ ಪರಿಸರ ವ್ಯವಸ್ಥೆಯಲ್ಲಿ ಬಹಳಷ್ಟು ಶಕ್ತಿ ಮತ್ತು ವಿಶ್ವಾಸವನ್ನು ತುಂಬುತ್ತದೆ”
“ನಮ್ಮ ಮಹಿಳಾ ತಂಡ ತನ್ನ ಸ್ಥಾನಮಾನವನ್ನು ಮತ್ತೆ ಮತ್ತೆ ಕಾಲಾನುಕ್ರಮದಲ್ಲಿ ಸಾಬೀತು ಮಾಡಿದೆ. ಇದು ಬರೇ ಕಾಲಕ್ಕೆ ಸಂಬಂಧಿಸಿದ ವಿಷಯ, ಈ ಬಾರಿ ಅಲ್ಲದಿದ್ದರೂ, ಮುಂದಿನ ಬಾರಿ ನಾವು ಖಚಿತವಾಗಿ ಗೆಲ್ಲುತ್ತೇವೆ”
“ಅಭಿ ತೋ ಬಹುತ್ ಖೇಲ್ನಾ ಭೀ ಹೈ ಔರ್ ಖಿಲ್ನಾ ಭೀ ಹೈ-ನೀವು ಇನ್ನಷ್ಟು ಆಟವಾಡಬೇಕು ಮತ್ತು ಬಹಳಷ್ಟನ್ನು ಸಾಧಿಸಬೇಕು”
“ನಾನಿದನ್ನು ಮಾಡಬಲ್ಲೆ ಎಂಬುದು ನವಭಾರತದ ಮನಸ್ಥಿತಿಯಾಗಿದೆ”
ಭಾರತದ ಕ್ರೀಡಾ ಇತಿಹಾಸದಲ್ಲಿ ಇದೊಂದು ಸುವರ್ಣ ಅಧ್ಯಾಯದಂತೆ ಮತ್ತು ನಿಮ್ಮಂತಹ ಚಾಂಪಿಯನ್ ಗಳು ಹಾಗು ನಿಮ್ಮ ತಲೆಮಾರಿನ ಆಟಗಾರರು ಇದರ ರಚನಕಾರರು. ನಾವು ಈ ಚಲನೆ ಮುಂದೆ ಸಾಗುತ್ತಿರುವಂತೆ ಗಮನವಿಡಬೇಕು”
ದೂರವಾಣಿ ಕರೆಯಲ್ಲಿ ಭರವಸೆ ಕೊಟ್ಟಂತೆ “ಬಾಲ್ ಮಿಥಾಯಿ” ತಂದುದಕ್ಕೆ ಲಕ್ಷ್ಯಾ ಸೇನ್ ಅವರಿಗೆ ಪ್ರಧಾನ ಮಂತ್ರಿ ಧನ್ಯವಾದ.

ಪ್ರಧಾನ ಮಂತ್ರಿ: ಹೌದು, ಶ್ರೀಕಾಂತ್‌, ಹೇಳಿ .

ಶ್ರೀಕಾಂತ್‌ : ಸರ್‌, ಮೊದಲನೆಯದಾಗಿ ನಿಮಗೆ ತುಂಬಾ ಧನ್ಯವಾದಗಳು. ಪಂದ್ಯಾವಳಿಯ ನಂತರ ಶೀಘ್ರದಲ್ಲೇ ನಮ್ಮನ್ನು ಕರೆಯಲು ನೀವು ನಿಮ್ಮ ವೇಳಾಪಟ್ಟಿಯಿಂದ ಪ್ರಮುಖ ಸಮಯವನ್ನು ತೆಗೆದುಕೊಂಡಿದ್ದೀರಿ. ಮಾನ್ಯರೆ, ವಿಶ್ವದ ಬೇರೆ ಯಾವ ಕ್ರೀಡಾಪಟುವೂ ಈ ಬಗ್ಗೆ ಹೆಮ್ಮೆಪಡಲು ಸಾಧ್ಯವಿಲ್ಲ ಎಂದು ನಾನು ಹೆಮ್ಮೆಯಿಂದ ಹೇಳಬಲ್ಲೆ. ವಿಜಯದ ನಂತರ ತಕ್ಷ ಣವೇ ನಿಮ್ಮೊಂದಿಗೆ ಮಾತನಾಡುವ ಸುಯೋಗ ನಮಗೆ ಮಾತ್ರ ಇದೆ, ಸರ್‌.

ಪ್ರಧಾನ ಮಂತ್ರಿ: ಇದನ್ನು ಹೇಳಿ ಶ್ರೀಕಾಂತ್‌. ಸಾಮಾನ್ಯವಾಗಿ, ಬ್ಯಾಡ್ಮಿಂಟನ್‌ ಜನರ ಹೃದಯಕ್ಕೆ ತುಂಬಾ ಹತ್ತಿರವಾಗಿರುವುದಿಲ್ಲ. ನಿಮ್ಮನ್ನು ತಂಡದ ನಾಯಕನನ್ನಾಗಿ ಮಾಡಿದಾಗ ಮತ್ತು ದೊಡ್ಡ ಸವಾಲುಗಳು ಮತ್ತು ಜವಾಬ್ದಾರಿಗಳು ಮತ್ತು ನಿಮ್ಮ ಮುಂದೆ ಅಂತಹ ದೊಡ್ಡ ಗುರಿ ಇದ್ದಾಗ ನಿಮಗೆ ಏನು ಅನಿಸಿತು?

ಶ್ರೀಕಾಂತ್‌: ಸರ್‌, ಎಲ್ಲರೂ ವೈಯಕ್ತಿಕವಾಗಿ ಚೆನ್ನಾಗಿ ಆಡುತ್ತಿದ್ದರು. ನಾವು ತಂಡದ ಕಾರ್ಯಕ್ರಮಗಳಿಗೆ ಎಲ್ಲರನ್ನೂ ಒಟ್ಟುಗೂಡಿಸಬೇಕಾಗಿತ್ತು ಮತ್ತು ಕೊನೆಯವರೆಗೂ ಹೋರಾಡಬೇಕಾಗಿತ್ತು. ಎಲ್ಲಾ ಆಟಗಾರರು ಒಟ್ಟಿಗೆ ಚರ್ಚಿಸುತ್ತಿದ್ದರು. ಎಲ್ಲಾ ಆಟಗಾರರು ಅದ್ಭುತವಾಗಿ ಆಡುತ್ತಿದ್ದರಿಂದ ಒಬ್ಬ ನಾಯಕನಾಗಿ, ನಾನು ಹೆಚ್ಚಿನದನ್ನು ಮಾಡಬೇಕಾಗಿರಲಿಲ್ಲ.

ಪ್ರಧಾನ ಮಂತ್ರಿ: ಇಲ್ಲ, ಇಲ್ಲ! ಎಲ್ಲರೂ ಚೆನ್ನಾಗಿ ಆಡಿದರು, ಆದರೆ ಅದು ಸಣ್ಣ ಕೆಲಸವಾಗಿರಲಿಲ್ಲ. ನೀವು ವಿನಮ್ರರಾಗಿದ್ದೀರಿ, ಆದರೆ ನೀವು ಒಂದು ಹಂತದಲ್ಲಿ ಒತ್ತಡವನ್ನು ಅನುಭವಿಸಿರಬೇಕು. ಏಕೆಂದರೆ ಕ್ರಿಕೆಟ್‌ ತಂಡದ ನಾಯಕ ಕೂಡ ಕೊನೆಯ ಓವರ್‌ನಲ್ಲಿ ಲಿಟ್ಮಸ್‌ ಪರೀಕ್ಷೆಯನ್ನು ಎದುರಿಸುತ್ತಾರೆ.

ಶ್ರೀಕಾಂತ್‌: ಫೈನಲ್‌ ನಲ್ಲಿ ಭಾರತ ತಂಡಕ್ಕೆ ಇದು ನಿರ್ಣಾಯಕವಾಗಿದ್ದರಿಂದ ಕೊನೆಯ ಪಂದ್ಯವು ಬಹಳ ಮುಖ್ಯವಾಗಿತ್ತು. ನಾನು ಆ ಪಂದ್ಯವನ್ನು ಆಡಲು ಸಾಧ್ಯವಾಯಿತು ಎಂಬುದೇ ನನ್ನ ಭಾಗ್ಯ. ನಾನು ಅಂಗಣಕ್ಕೆ ಕಾಲಿಟ್ಟಾಗ, ನಾನು ನನ್ನ ಅತ್ಯುತ್ತಮ ಬ್ಯಾಡ್ಮಿಂಟನ್‌ ಆಡಬೇಕು ಮತ್ತು ಶೇಕಡ 100 ರಷ್ಟು ಪ್ರಯತ್ನ ಮಾಡಬೇಕು ಎಂದು ನಾನು ಭಾವಿಸಿದೆ.

ಪ್ರಧಾನ ಮಂತ್ರಿ: ಸರಿ, ನೀವು ವಿಶ್ವ ರಾರ‍ಯಂಕಿಂಗ್‌ನಲ್ಲಿ ನಂ.1 ಆಗಿದ್ದೀರಿ ಮತ್ತು ನೀವು ಥಾಮಸ್‌ ಕಪ್‌ನಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದೀರಿ. ಪ್ರತಿಯೊಂದು ಯಶಸ್ಸಿಗೆ ತನ್ನದೇ ಆದ ಮೌಲ್ಯವಿರುವುದರಿಂದ ನಾನು ಇದನ್ನು ಕೇಳಬಾರದು, ಆದರೂ ಪತ್ರಕರ್ತರು ಆಗಾಗ್ಗೆ ಮಾಡುವಂತೆ ನಾನು ಕೇಳಲು ಬಯಸುತ್ತೇನೆ. ಈ ಎರಡು ಗೆಲುವುಗಳಲ್ಲಿ ಯಾವುದನ್ನು ನೀವು ಅತ್ಯಂತ ಮುಖ್ಯವೆಂದು ಪರಿಗಣಿಸುತ್ತೀರಿ?

ಶ್ರೀಕಾಂತ್‌: ಸರ್‌, ಇವೆರಡೂ ನನ್ನ ಕನಸುಗಳು. ವಿಶ್ವ ನಂ.1 ಇದು ಪ್ರತಿಯೊಬ್ಬ ಆಟಗಾರನ ಕನಸು ಮತ್ತು ಥಾಮಸ್‌ ಕಪ್‌ ಒಂದು ತಂಡದ ಪಂದ್ಯಾವಳಿಯಾಗಿದ್ದು, ಇದರಲ್ಲಿ ಹತ್ತು ಆಟಗಾರರು ಒಂದು ತಂಡದಂತೆ ಆಡುತ್ತಾರೆ. ಥಾಮಸ್‌ ಕಪ್‌ನಲ್ಲಿ ಭಾರತ ಎಂದಿಗೂ ಪದಕವನ್ನು ಗೆಲ್ಲದ ಕಾರಣ ಇದು ಕನಸಾಗಿತ್ತು ಮತ್ತು ನಾವೆಲ್ಲರೂ ಅದ್ಭುತವಾಗಿ ಆಡುತ್ತಿರುವುದರಿಂದ ಈ ವರ್ಷ ಇದು ನಮಗೆ ದೊಡ್ಡ ಅವಕಾಶವಾಗಿತ್ತು. ನಾನು ನನ್ನ ಎರಡೂ ಕನಸುಗಳನ್ನು ಈಡೇರಿಸಬಲ್ಲೆ ಎಂದು ನನಗೆ ಸಂತೋಷವಾಯಿತು.

ಪ್ರಧಾನ ಮಂತ್ರಿ: ಈ ಹಿಂದೆ ಥಾಮಸ್‌ ಕಪ್‌ ನಲ್ಲಿ ನಮ್ಮ ಪ್ರದರ್ಶನವು ಸರಾಸರಿಗಿಂತಲೂ ಕಡಿಮೆ ಇತ್ತು ಮತ್ತು ದೇಶದಲ್ಲಿ ಯಾರೂ ಅಂತಹ ಪಂದ್ಯಾವಳಿಗಳ ಬಗ್ಗೆ ಚರ್ಚಿಸಲಿಲ್ಲಎಂಬುದು ನಿಜ. ಅಂತಹ ದೊಡ್ಡ ಪಂದ್ಯಾವಳಿಯ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿರಲಿಲ್ಲ. ಆದ್ದರಿಂದ, ನಾನು ನಿಮಗೆ ದೂರವಾಣಿ ಕರೆ ಮಾಡಿ, ನೀವು ಏನು ಸಾಧಿಸಿದ್ದೀರಿ ಎಂದು ತಿಳಿಯಲು ಭಾರತದಲ್ಲಿ 4-6 ಗಂಟೆಗಳು ಬೇಕಾಗುತ್ತದೆ ಎಂದು ಹೇಳಿದೆ. ನೀವು ಭಾರತದ ಕೀರ್ತಿ ಪತಾಕೆಯನ್ನು ಎತ್ತರಕ್ಕೆ ಹಾರಿಸಿರುವುದರಿಂದ ನಾನು ನಿಮಗೆ ಮತ್ತು ಇಡೀ ತಂಡವನ್ನು ದೇಶದ ಪರವಾಗಿ ಅಭಿನಂದಿಸುತ್ತೇನೆ. ಇದು ಸಣ್ಣ ಸಾಧನೆಯಲ್ಲ.

ಶ್ರೀಕಾಂತ್‌: ಧನ್ಯವಾದಗಳು ಸರ್‌!

ಪ್ರಧಾನ ಮಂತ್ರಿ: ಒಬ್ಬ ಆಟಗಾರನಾಗಿ ಮತ್ತು ನಾಯಕನಾಗಿ ನೀವು ಕೊನೆಯ ಕ್ಷಣದಲ್ಲಿ ಹೊಂದಿರಬೇಕಾದ ಒತ್ತಡವನ್ನು ನಾನು ಅರಿತುಕೊಳ್ಳಬಲ್ಲೆ. ಆದರೆ, ಇಡೀ ತಂಡವನ್ನು ತಾಳ್ಮೆಯಿಂದ ನಿಭಾಯಿಸುವ ಮೂಲಕ ನೀವು ದೇಶಕ್ಕೆ ಕೀರ್ತಿ ತಂದ ರೀತಿ ಪ್ರಶಂಸನೀಯ. ನಾನು ನಿಮ್ಮನ್ನು ದೂರವಾಣಿಯಲ್ಲಿ ಅಭಿನಂದಿಸಿದೆ. ಆದರೆ ನಿಮ್ಮನ್ನು ವೈಯಕ್ತಿಕವಾಗಿ ಅಭಿನಂದಿಸಲು ನನಗೆ ಸಂತೋಷವಾಗಿದೆ.

ಶ್ರೀಕಾಂತ್‌ : ಧನ್ಯವಾದಗಳು ಸರ್‌!

ಪ್ರಧಾನ ಮಂತ್ರಿ: ಸಾತ್ವಿಕ್‌, ಆಟದ ಬಗ್ಗೆ ಹೇಳಿ. ನಿಮ್ಮ ಅನುಭವವನ್ನು ನನಗೆ ತಿಳಿಸಿ.

ಸಾತ್ವಿಕ್‌: ಖಂಡಿತವಾಗಿಯೂ! ಕೊನೆಯ 10 ದಿನಗಳು ನನ್ನ ಜೀವನದಲ್ಲಿ ಬಹಳ ಸ್ಮರಣೀಯ ಕ್ಷ ಣಗಳು. ನಾನು ಆಡುತ್ತಿದ್ದಾಗ ಸಹಾಯಕ ಸಿಬ್ಬಂದಿಯಿಂದ ನನಗೆ ಭಾರಿ ಬೆಂಬಲ ಸಿಗುತ್ತಿತ್ತು. ನಮಗೆ ಭಾರತದಿಂದ ಬೆಂಬಲವೂ ಸಿಗುತ್ತಿತ್ತು. ಭೌತಿಕವಾಗಿ ನಾವು ಇಲ್ಲಿದ್ದರೂ, ನನ್ನ ಮನಸ್ಸು ಇನ್ನೂ ಥಾಯ್ಲೆಂಡ್‌ನಲ್ಲಿದೆ. ಶ್ರೀಕಾಂತ್‌ ಭಾಯ್‌ ಗೆದ್ದ ಕೊನೆಯ ಅಂಕ ಇನ್ನೂ ನನ್ನ ಕಣ್ಣಮುಂದೆಯೇ ಇದೆ. ಆದರೂ, ನಾವು ಆ ಕ್ಷಣವನ್ನು ಇನ್ನೂ ಆನಂದಿಸುತ್ತಿದ್ದೇವೆ, ಸರ್‌.

ಪ್ರಧಾನ ಮಂತ್ರಿ: ನಿಮ್ಮ ಕ್ಯಾಪ್ಟನ್‌ ರಾತ್ರಿಯಲ್ಲಿ ನಿಮ್ಮನ್ನು ಬೈಯುತ್ತಾರೆಂದು ನೀವು ಕನಸು ಕಾಣುತ್ತೀರಾ?

ಸಾತ್ವಿಕ್‌: ಫೈನಲ್‌ ಪಂದ್ಯದ ನಂತರ ನಾವೆಲ್ಲರೂ ಪದಕಗಳೊಂದಿಗೆ ಮಲಗಿದ್ದೇವೆ. ಯಾರೂ ಅವರ ಪದಕವನ್ನು ತೆಗೆಯಲಿಲ್ಲ.

ಪ್ರಧಾನ ಮಂತ್ರಿ: ನಾನು ಯಾರದೋ ಟ್ವೀಟ್‌ ನೋಡಿದ್ದೇನೆ. ಪ್ರಾಯಶಃ, ಪ್ರಣೋಯ…, ಪದಕದೊಂದಿಗೆ ಕುಳಿತು ತನಗೆ ನಿದ್ರೆ ಬರುತ್ತಿಲ್ಲ ಎಂದು ಹೇಳುತ್ತಿದ್ದರು. ನಿಮ್ಮ ಉತ್ತಮ ಪ್ರದರ್ಶನದ ಹೊರತಾಗಿಯೂ ವೀಡಿಯೊವನ್ನು ನೋಡಿದ ನಂತರ ನೀವು ಎಂದಾದರೂ ನಿಮ್ಮ ನ್ಯೂನತೆಗಳನ್ನು ವಿಶ್ಲೇಷಿಸುತ್ತೀರಾ?

ಸಾತ್ವಿಕ್‌: ಹೌದು ಸರ್‌. ಪಂದ್ಯಕ್ಕೆ ಮೊದಲು, ನಾವು ತರಬೇತುದಾರರೊಂದಿಗೆ ಕುಳಿತು ಮುಂದೆ ಆಡಬೇಕಾದ ನಮ್ಮ ಎದುರಾಳಿಯ ಆಟವನ್ನು ವಿಶ್ಲೇಷಿಸುತ್ತೇವೆ.

ಪ್ರಧಾನ ಮಂತ್ರಿ: ಸಾತ್ವಿಕ್‌, ನಿಮ್ಮ ಯಶಸ್ಸು ನಿಮ್ಮ ತರಬೇತುದಾರ ಹೇಳಿದ್ದು ಸರಿಯಾಗಿದೆ ಎಂದು ಸಾಬೀತುಪಡಿಸಿದೆ ಮಾತ್ರವಲ್ಲ, ನೀವು ಉತ್ತಮ ಆಟಗಾರ ಎಂದು ಸಾಬೀತುಪಡಿಸಿದೆ. ಉತ್ತಮ ಆಟಗಾರನೆಂದರೆ ಆಟದ ಅಗತ್ಯಗಳಿಗೆ

ಅನುಗುಣವಾಗಿ ತನ್ನನ್ನು ತಾನು ಸಿದ್ಧಪಡಿಸಿಕೊಳ್ಳುವವನು, ತನ್ನನ್ನು ತಾನೇ ರೂಪಿಸಿಕೊಳ್ಳುವವನು ಮತ್ತು ಬದಲಾವಣೆಯನ್ನು ಸ್ವೀಕರಿಸುವವನು. ಆಗ ಮಾತ್ರ ಅವನು ಸಾಧಿಸಲು ಸಾಧ್ಯ ಮತ್ತು ನಿಮ್ಮನ್ನು ನೀವು ಬೆಳೆಯಲು ಅಗತ್ಯವಿರುವ ಬದಲಾವಣೆಯನ್ನು ನೀವು ಸ್ವೀಕರಿಸಿದ್ದೀರಿ. ಇದರ ಪರಿಣಾಮವಾಗಿ, ದೇಶವು ನಿಮ್ಮ ಬಗ್ಗೆ ಹೆಮ್ಮೆ ಪಡುತ್ತದೆ. ನಿಮಗೆ ನನ್ನ ಶುಭ ಹಾರೈಕೆಗಳು. ನೀವು ಬಹಳ ದೂರ ಹೋಗಬೇಕಾಗಿದೆ, ನಿಲ್ಲಿಸಬೇಡಿ. ಅದೇ ಶಕ್ತಿಯೊಂದಿಗೆ ಮುಂದುವರಿಯಿರಿ. ಶುಭ ಹಾರೈಕೆಗಳು!

ಅನೌನ್ಸರ್‌: ಚಿರಾಗ್‌ ಶೆಟ್ಟಿ.

ಪ್ರಧಾನ ಮಂತ್ರಿ: ಸಾತ್ವಿಕ್‌ ನಿಮ್ಮನ್ನು ತುಂಬಾ ಹೊಗಳಿದ್ದಾರೆ, ಚಿರಾಗ್‌.

ಚಿರಾಗ್‌ ಶೆಟ್ಟಿ: ಸರ್‌, ನಮಸ್ತೆ. ಕಳೆದ ವರ್ಷ ನಾವು ಇಲ್ಲಿಗೆ ಬಂದಿದ್ದೆವು ಎಂದು ನನಗೆ ಇನ್ನೂ ನೆನಪಿದೆ. ಒಲಿಂಪಿಕ್‌ ನಂತರ ನೀವು ನಮ್ಮನ್ನು ಕರೆದಿದ್ದಿರಿ. ಅಲ್ಲಿ 120 ಅಥ್ಲೀಟ್‌ಗಳಿದ್ದರು ಮತ್ತು ನೀವು ಎಲ್ಲರನ್ನೂ ನಿಮ್ಮ ಮನೆಗೆ ಆಹ್ವಾನಿಸಿದ್ದಿರಿ ಮತ್ತು ಪದಕಗಳನ್ನು ಗೆಲ್ಲದವರೂ ಇಲ್ಲಿಗೆ ಬಂದರು. ನಾವು ನಮ್ಮ ದೇಶಕ್ಕಾಗಿ ಪದಕಗಳನ್ನು ಗೆಲ್ಲಲು ಸಾಧ್ಯವಾಗಲಿಲ್ಲಎಂದು ನಮಗೆ ತುಂಬಾ ದುಃಖವಾಯಿತು ಆದರೆ ಈ ಬಾರಿ ನಾವು ಥಾಮಸ್‌ ಕಪ್‌ಗೆ ಹೋದಾಗ, ಪದಕವನ್ನು ಪಡೆಯಲು ಏನನ್ನಾದರೂ ಮಾಡಲು ನಮಗೆ ಉತ್ಸಾಹವಿತ್ತು. ಅದು ಚಿನ್ನ ಎಂದು ನಾವು ಭಾವಿಸಿರಲಿಲ್ಲ, ಆದರೆ ಹೌದು ನಾವು ಪದಕದ ಬಗ್ಗೆ ಯೋಚಿಸಿದೆವು. ನಮ್ಮ ದೇಶಕ್ಕೆ ಇದಕ್ಕಿಂತ ಉತ್ತಮ ಸಂತೋಷವನ್ನು ನೀಡಲು ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ.

ಪ್ರಧಾನ ಮಂತ್ರಿ: ಕಳೆದ ಬಾರಿ ನೀವು ಇಲ್ಲಿಗೆ ಬಂದಾಗ, ನಾನು ಅನೇಕರ ಮುಖಗಳಲ್ಲಿ ನಿರಾಶೆಯನ್ನು ನೋಡಿದೆ ಮತ್ತು ನಿಮ್ಮಲ್ಲಿ ಹೆಚ್ಚಿನವರು ನಾವು ಪದಕಗಳಿಲ್ಲದೆ ಇಲ್ಲಿಗೆ ಬಂದಿದ್ದೇವೆ ಎಂದು ಭಾವಿಸಿದ್ದರು. ಆ ದಿನ ನಾನು ಅಲ್ಲಿ ತಲುಪುವುದು ಪದಕಕ್ಕೆ ಸಮಾನ ಎಂದು ಹೇಳಿದ್ದೆ. ಆದರೆ ಇಂದು ನೀವು ಸೋಲು ಸೋಲಲ್ಲ ಎಂದು ಸಾಬೀತುಪಡಿಸಿದ್ದೀರಿ, ಜೀವನದಲ್ಲಿ ಗೆಲ್ಲಲು ನಿಮಗೆ ಧೈರ್ಯ ಮತ್ತು ಉತ್ಸಾಹ ಬೇಕು ಮತ್ತು ನಿಮ್ಮ ಹೆಜ್ಜೆಗಳನ್ನು ಚುಂಬಿಸಲು ಗೆಲುವು ಇದೆ. ನಾನು ನಿಮ್ಮ ಇಬ್ಬರು ಜತೆಗಾರರಲ್ಲಿ ಒಬ್ಬರನ್ನು ಕೇಳಿದೆ ಮತ್ತು ಅವರು ನನಗೆ ಹೇಳಿದರು. ಟೋಕಿಯೋ ಒಲಿಂಪಿಕ್ಸ್‌ ನಂತರ ನೀವು ಇಲ್ಲಿಗೆ ಬಂದಾಗ ನೀವು ಉದಾಸೀನರಾಗಿದ್ದಿರಿ ಎಂದು ನನಗೆ ತಿಳಿದಿದೆ. ಆದರೆ ಇಂದು ನೀವು ಅದನ್ನು ಬಡ್ಡಿಯಿಂದ ಸರಿದೂಗಿಸಿದ್ದೀರಿ ಮತ್ತು ದೇಶವನ್ನು ವೈಭವೀಕರಿಸಿದ್ದೀರಿ. ಒಲಿಂಪಿಕ್‌ ನಿರಾಶೆಯ ನಂತರ ಬಹಳ ಸಮಯವಾಗಿಲ್ಲ, ಆದರೆ ಇಷ್ಟು ಕಡಿಮೆ ಸಮಯದಲ್ಲಿ ನಿಮ್ಮನ್ನು ಗೆಲ್ಲುವಂತೆ ಮಾಡಿದ್ದು ಯಾವುದು? ಅದಕ್ಕೆ ಕಾರಣವೇನು?

ಚಿರಾಗ್‌ ಶೆಟ್ಟಿ: ನಾನು ಮೊದಲೇ ಹೇಳಿದಂತೆ, ಒಲಿಂಪಿಕ್ಸ್‌ನಲ್ಲಿ ನಮ್ಮ ಪ್ರದರ್ಶನದ ಬಗ್ಗೆ ನಮಗೆ ತುಂಬಾ ನಿರಾಶೆಯಾಯಿತು. ಏಕೆಂದರೆ ನಾವು ಸೋಲಿಸಿದ ನಮ್ಮ ಎದುರಾಳಿ ಅಂತಿಮವಾಗಿ ಚಿನ್ನದ ಪದಕವನ್ನು ಗೆದ್ದರು. ಅವರು ನಮಗೆ ಕೇವಲ ಒಂದು ಪಂದ್ಯವನ್ನು ಮಾತ್ರ ಬಿಟ್ಟುಕೊಟ್ಟರು. ಅದಕ್ಕೂ ಮೊದಲು ಅವರು ಯಾರಿಗೂ ಸೋಲಲಿಲ್ಲ. ಆದರೆ ಈ ಬಾರಿ, ಅದು ತದ್ವಿರುದ್ಧವಾಗಿ ನಡೆಯಿತು. ಪ್ರೀ ಕ್ವಾರ್ಟರ್‌ ಫೈನಲ್‌ ಗ್ರೂಪ್‌ ಹಂತದಲ್ಲಿ ನಾವು ಅವರ ವಿರುದ್ಧ ಸೋತೆವು, ಆದರೆ ನಾವು ಚಿನ್ನದ ಪದಕವನ್ನು ಗೆದ್ದಿದ್ದೇವೆ. ಇದು ನಿಜವಾಗಿಯೂ ತುಂಬಾ ಚೆನ್ನಾಗಿತ್ತು. ಅದನ್ನು ವಿಧಿ ಅಥವಾ ಇನ್ನಾವುದೋ ಎಂದು ಕರೆಯಿರಿ. ಆದರೆ ನಾವು ಏನನ್ನಾದರೂ ಮಾಡಬೇಕು ಎಂದು ನಾವು ಭಾವೋದ್ರಿಕ್ತರಾದೆವು. ಈ ಭಾವನೆಯನ್ನು ಹೊಂದಿದ್ದವನು ನಾನು ಮಾತ್ರವಲ್ಲ, ಇಲ್ಲಿ ಕುಳಿತಿರುವ ಎಲ್ಲ 10 ಜನರು ಒಂದೇ ಭಾವನೆಯನ್ನು ಹೊಂದಿದ್ದರು. ನಾವಿಬ್ಬರೂ ಒಟ್ಟಿಗೆ ಇದ್ದೆವು. ಈ 10 ಆಟಗಾರರು ನಿಜವಾಗಿಯೂ ಭಾರತದ ಜನಸಂಖ್ಯೆಯನ್ನು ಪ್ರತಿನಿಧಿಸುತ್ತಾರೆ ಎಂದು ನಾನು ಭಾವಿಸುತ್ತೇನೆ, ಏನೇ ಆದರೂ ನಾವು ಹೋರಾಡುತ್ತೇವೆ.

ಪ್ರಧಾನ ಮಂತ್ರಿ: ಗ್ರೇಟ್‌! ಚಿರಾಗ್‌ ಮತ್ತು ನಿಮ್ಮ ಇಡೀ ತಂಡಕ್ಕೆ ನಾನು ಇದನ್ನು ಹೇಳುತ್ತೇನೆ, ನೀವು ಇನ್ನೂ ಅನೇಕ ಪದಕಗಳನ್ನು ಪಡೆಯಬೇಕು. ನೀವು ಆಡಲು ಮತ್ತು ಅಭಿವೃದ್ಧಿ ಹೊಂದಲು ಮತ್ತು ದೇಶವನ್ನು ಕ್ರೀಡಾ ಜಗತ್ತಿನಲ್ಲಿ ಮುಂದೆ ಕೊಂಡೊಯ್ಯಲು ಬಹಳ ದೂರವಿದೆ . ಏಕೆಂದರೆ ಈಗ ಭಾರತವು ಹಿಂದೆ ಬೀಳಲು ಸಾಧ್ಯವಿಲ್ಲ. ವಿಜಯಗಳನ್ನು ಗಳಿಸುತ್ತಿರುವ ನೀವೆಲ್ಲರೂ ಕ್ರೀಡೆಗಾಗಿ ಭವಿಷ್ಯದ ಪೀಳಿಗೆಗೆ ಸ್ಫೂರ್ತಿ ನೀಡುತ್ತಿದ್ದೀರಿ. ಇದು ಸ್ವತಃ ಒಂದು ದೊಡ್ಡ ಸಾಧನೆ ಎಂದು ನಾನು ಭಾವಿಸುತ್ತೇನೆ. ನಿಮಗೆ ಅನೇಕ ಶುಭ ಹಾರೈಕೆಗಳು.

ಚಿರಾಗ್‌ ಶೆಟ್ರಿ: ತುಂಬಾ ಧನ್ಯವಾದಗಳು ಸರ್‌.

ಅನೌನ್ಸರ್‌: ಲಕ್ಷ್ಯ ಸೇನ್‌.

ಪ್ರಧಾನ ಮಂತ್ರಿಗಳು: ನಾನು ಮೊದಲು ಲಕ್ಷ್ಯ ಸೇನ್ಗೆ ಕೃತಜ್ಞತೆ ಸಲ್ಲಿಸುತ್ತೇನೆ. ಏಕೆಂದರೆ ನಾನು ನಿಮ್ಮಿಂದ ‘ಬಾಲ್‌ ಮಿಠಾಯಿ’ ತಿನ್ನುತ್ತೇನೆ ಎಂದು ಅಭಿನಂದಿಸುವಾಗ ದೂರವಾಣಿಯಲ್ಲಿಅವರಿಗೆ ತಿಳಿಸಿದ್ದೆ. ಅವರು ಅದನ್ನು ನೆನಪಿಸಿಕೊಂಡು ಮತ್ತು ಇಂದು ಅದರೊಂದಿಗೆ ಬಂದ್ದಿದಾರೆ. ಹೌದು, ಲಕ್ಷ್ಯ ಸೇನ್‌., ಹೇಳಿ

ಲಕ್ಷ್ಯ ಸೇನ್‌.: ನಮಸ್ತೆ ಸರ್‌! ನಾನು ಯೂತ್‌ ಒಲಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಾಗ ನಿಮ್ಮನ್ನು ಮೊದಲು ಭೇಟಿಯಾದೆ ಮತ್ತು ಇಂದು ನಾನು ನಿಮ್ಮನ್ನು ಎರಡನೇ ಬಾರಿಗೆ ಭೇಟಿಯಾಗುತ್ತಿದ್ದೇನೆ. ನೀವು ನಮ್ಮನ್ನು ಭೇಟಿಯಾದಾಗ ನಾವು ತುಂಬಾ ಪ್ರೇರೇಪಿತರಾಗುತ್ತೇವೆ ಎಂದು ನಾನು ಹೇಳಲು ಬಯಸುತ್ತೇನೆ. ನಾನು ಭಾರತಕ್ಕಾಗಿ ಪದಕಗಳನ್ನು ಗೆಲ್ಲುವುದನ್ನು ಮುಂದುವರಿಸುತ್ತೇನೆ ಮತ್ತು ನಿಮ್ಮನ್ನು ಭೇಟಿಯಾಗುತ್ತೇನೆ ಮತ್ತು ನಿಮಗಾಗಿ ‘ಬಾಲ್‌ ಮಿಠಾಯಿ’ ತರುತ್ತೇನೆ ಎಂದು ನಾನು ಹೇಳಲು ಬಯಸುತ್ತೇನೆ.

ಪ್ರಧಾನ ಮಂತ್ರಿ: ನೀವು ಅಲ್ಲಿ ಆಹಾರ ವಿಷದಿಂದ ಬಳಲಿದಿರಿ ಎಂದು ನನಗೆ ತಿಳಿಸಲಾಯಿತು.

ಲಕ್ಷ್ಯ ಸೇನ್‌: ಹೌದು ಸರ್‌! ನಾನು ಅಲ್ಲಿಗೆ ತಲುಪಿದ ದಿನ, ಆಹಾರ ಸೇವನೆಯಿಂದಾಗಿ ಆರೋಗ್ಯದಲ್ಲಿ ಏರುಪೇರಾಯಿತು. ನನಗೆ ಎರಡು ದಿನ ಆಡಲು ಸಾಧ್ಯವಾಗಲಿಲ್ಲ, ಆದರೆ ಗುಂಪು ಹಂತದ ಪಂದ್ಯಗಳು ಪ್ರಾರಂಭವಾದಾಗ ನಾನು ಉತ್ತಮ ಭಾವನೆಯನ್ನು ಹೊಂದಲು ಪ್ರಾರಂಭಿಸಿದೆ. ನಾನು ಒಂದು ಪಂದ್ಯವನ್ನು ಆಡಿದೆ. ಆದರೆ ಆಹಾರ ವಿಷದಿಂದಾಗಿ ಮತ್ತೊಂದು ಪಂದ್ಯಕ್ಕಾಗಿ ವಿಶ್ರಾಂತಿ ಪಡೆಯಬೇಕಾಯಿತು.

ಪ್ರಧಾನ ಮಂತ್ರಿ: ಏನಾದರೂ ತಿನ್ನುವುದರಿಂದ ಇದು ಕಾರಣವೇ?

ಲಕ್ಷ್ಯ ಸೇನ್‌.: ಇಲ್ಲಸರ್‌. ನಾನು ವಿಮಾನ ನಿಲ್ದಾಣದಲ್ಲಿ ತಿಂದಿದ್ದು ನನ್ನ ಆರೋಗ್ಯ ಕೆಡಲು ಕಾರಣವಾಯಿತು. ಆದರೆ ಪಂದ್ಯಾವಳಿಯು ಮುಂದುವರಿದಂತೆ, ನಾನು ದಿನದಿಂದ ದಿನಕ್ಕೆ ಉತ್ತಮವಾಗಿದ್ದೇನೆ ಎಂದು ಭಾವಿಸಿದೆ.

ಪ್ರಧಾನ ಮಂತ್ರಿ: ಈಗ, ದೇಶದ ಚಿಕ್ಕ ಮಕ್ಕಳು ಸಹ ಹೋಗಿ ಆಡಲು ಬಯಸುತ್ತಾರೆ. 8-10 ವರ್ಷ ವಯಸ್ಸಿನ ಮಕ್ಕಳಿಗೆ ನಿಮ್ಮ ಸಂದೇಶವೇನು?

ಲಕ್ಷ್ಯ ಸೇನ್‌.: ವಿಮಲ್‌ ಸರ್‌ ಹೇಳಿದಂತೆ ನಾನು ತುಂಬಾ ತುಂಟನಾಗಿದ್ದೆ ಮತ್ತು ಸಾಕಷ್ಟು ತುಂಟತನ ಮಾಡುತ್ತಿದ್ದೆ. ನಾನು ಸ್ವಲ್ಪ ಕಡಿಮೆ ಕಿಡಿಗೇಡಿತನವನ್ನು ಮಾಡಿ, ಆಡುವುದರ ಮೇಲೆ ಗಮನ ಹರಿಸಿದ್ದರೆ, ಅದು ಉತ್ತಮವಾಗುತ್ತಿತ್ತು ಎಂದು ನಾನು ನನ್ನ ಬಗ್ಗೆ ಹೇಳಲು ಬಯಸುತ್ತೇನೆ. ಆದರೆ ಉಳಿದ ಜನರಿಗೆ ಅವರು ಏನೇ ಮಾಡಿದರೂ ಅವರು ತಮ್ಮ ಅದರಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು ಮತ್ತು ಪೂರ್ಣ ಗಮನದಿಂದ ಕೆಲಸ ಮಾಡಬೇಕು ಎಂದು ನಾನು ಹೇಳಲು ಬಯಸುತ್ತೇನೆ.

ಪ್ರಧಾನ ಮಂತ್ರಿ: ದೈಹಿಕ ಸಮಸ್ಯೆಗಳು ಇದ್ದಿರಬೇಕು ಆದರೆ ಆಹಾರ ವಿಷದ ನಂತರ ನೀವು ಸಾಕಷ್ಟು ಮಾನಸಿಕ ಸಮಸ್ಯೆಗಳನ್ನು ಅನುಭವಿಸಿರಬೇಕು. ಏಕೆಂದರೆ ಆಟ ನಡೆಯುತ್ತಿರುವಾಗ ಮತ್ತು ದೇಹವು ಬೆಂಬಲಿಸದಿದ್ದಾಗ ನೀವು ಕಾಪಾಡಿಕೊಳ್ಳಬೇಕಾದ ಸಮತೋಲನವನ್ನು ನೀವು ಕಾಪಾಡಿಕೊಳ್ಳಬೇಕು. ಆಹಾರದ ವಿಷ ಮತ್ತು ದೈಹಿಕ ದೌರ್ಬಲ್ಯದ ಹೊರತಾಗಿಯೂ ನಿಮ್ಮನ್ನು ಸುಮ್ಮನೆ ಕುಳಿತುಕೊಳ್ಳಲು ಬಿಡದ ಆ ಶಕ್ತಿ ಅಥವಾ ತರಬೇತಿ ಯಾವುದು ಎಂದು ನೀವು ನಂತರ ಅದರ ಬಗ್ಗೆ ಯೋಚಿಸುತ್ತೀರಿ. ಮತ್ತು ನೀವು ಅದರಿಂದ ಹೊರಬಂದಿದ್ದೀರಿ. ಆ ಕ್ಷಣವನ್ನು ಮತ್ತೊಮ್ಮೆ ನೆನಪಿಡಿ, ಇದನ್ನು ಸಾಧಿಸಲು ನಿಮಗೆ ಸಹಾಯ ಮಾಡಿದ ಶಕ್ತಿ. ಚಿಂತಿಸಬೇಡ ಎಂದು ಹತ್ತು ಜನರು ಹೇಳಿರಬೇಕು, ಆದರೆ ನಿಮ್ಮೊಳಗೆ ಅಂತರ್ಗತ ಶಕ್ತಿ ಇದ್ದಿರಬೇಕು. ಎರಡನೆಯದಾಗಿ, ನಿಮ್ಮ ತುಂಟತನವನ್ನು ಬಿಡಬೇಡಿ ಏಕೆಂದರೆ ಅದು ನಿಮ್ಮ ಶಕ್ತಿಯೂ ಆಗಿದೆ. ನಿಮ್ಮ ಜೀವನವನ್ನು ವಿನೋದದಿಂದ ಬದುಕಿ. ಅಭಿನಂದನೆಗಳು.

ಪ್ರಧಾನ ಮಂತ್ರಿ: ಹೌದು, ಪ್ರಣಯ್‌ ಇದು ನಿಮ್ಮ ಟ್ವೀಟ್‌ ಆಗಿತ್ತು.

ಪ್ರಣಯ್‌ . ಹೌದು ಸರ್‌. ಇದು ನನ್ನ ಟ್ವೀಟ್‌ ಆಗಿತ್ತು. ಸರ್‌, ಇದು ನಮಗೆಲ್ಲರಿಗೂ ತುಂಬಾ ಸಂತೋಷದ ಕ್ಷಣವಾಗಿದೆ ಏಕೆಂದರೆ ನಾವು 73 ವರ್ಷಗಳ ನಂತರ ಥಾಮಸ್‌ ಕಪ್‌ ಗೆದ್ದಿದ್ದೇವೆ ಮತ್ತು ಇದು ಇನ್ನೂ ಹೆಚ್ಚು ಹೆಮ್ಮೆಯ ಕ್ಷಣವಾಗಿದೆ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ನಮ್ಮ 75 ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ನಾವು ನಮ್ಮ ದೇಶಕ್ಕಾಗಿ ಅದನ್ನು ಗೆಲ್ಲಬಹುದು. ಆದ್ದರಿಂದ ಇದು ದೇಶಕ್ಕೆ ದೊಡ್ಡ ಉಡುಗೊರೆ ಎಂದು ನಾನು ಭಾವಿಸುತ್ತೇನೆ ಮತ್ತು ನಾನು ತುಂಬಾ ಸಂತೋಷವಾಗಿದ್ದೇನೆ.

ಪ್ರಧಾನ ಮಂತ್ರಿ: ಪ್ರಣಯ್‌ , ಮಲೇಷ್ಯಾ ಮತ್ತು ಡೆನ್ಮಾರ್ಕ್‌ ಬಹಳ ಬಲಿಷ್ಠ ತಂಡಗಳಾಗಿವೆ. ಕ್ವಾರ್ಟರ್‌ ಫೈನಲ್‌ ಮತ್ತು ಸೆಮಿಫೈನಲ್‌ನಲ್ಲಿ ಅವರ ವಿರುದ್ಧದ ನಿರ್ಣಾಯಕ ಪಂದ್ಯಗಳಲ್ಲಿ ಎಲ್ಲರ ಕಣ್ಣುಗಳು ನಿಮ್ಮ ಮೇಲೆ ಇರಬೇಕು. ನೀವು ಆ ಒತ್ತಡವನ್ನು ಹೇಗೆ ನಿರ್ವಹಿಸಿದಿರಿ ಮತ್ತು ಆಕ್ರಮಣಕಾರಿ ಫಲಿತಾಂಶಗಳನ್ನು ಹೇಗೆ ಉಂಟುಮಾಡಿದಿರಿ?

ಪ್ರಣಯ್‌ : ಸರ್‌, ಆ ದಿನ, ವಿಶೇಷವಾಗಿ ಕ್ವಾರ್ಟರ್‌ ಫೈನಲ್ಸ್‌ ದಿನದಂದು ಒತ್ತಡ ವಿಪರೀತವಾಗಿತ್ತು. ಏಕೆಂದರೆ ನಾನು ಈ ಪಂದ್ಯವನ್ನು ಸೋತರೆ ನಮಗೆ ಪದಕ ಸಿಗುವುದಿಲ್ಲ ಮತ್ತು ನಾವು ಪದಕವಿಲ್ಲದೆ ಹಿಂತಿರುಗಬೇಕಾಗುತ್ತದೆ ಎಂದು ನನಗೆ ತಿಳಿದಿತ್ತು. ಆದರೆ ಇಡೀ ಪಂದ್ಯಾವಳಿಯುದ್ದಕ್ಕೂ ತಂಡದ ಹುರುಪು ಮತ್ತು ಉತ್ಸಾಹವು ಎಷ್ಟಿತ್ತೆಂದರೆ, ನಾವು ಪದಕವನ್ನು ಗೆಲ್ಲಬೇಕಾಗಿತ್ತು ಮತ್ತು ಅದು ಮೊದಲ ದಿನದಿಂದಲೇ ನಮಗೆ ಶಕ್ತಿ ತುಂಬುತ್ತಿತ್ತು. ಒಮ್ಮೆ ಅಂಗಣದ ಒಳಗೆ ಹೋದಾಗ, ಹೇಗಾದರೂ ಮಾಡಿ ನಾನು ಗೆಲ್ಲಬೇಕು ಎಂದು ನನಗೆ ಅನಿಸಿತು. ಸೆಮಿಫೈನಲ್‌ನಲ್ಲಿಯೂ ಇದೇ ಪರಿಸ್ಥಿತಿ ಇತ್ತು. ತುಂಬಾ ಒತ್ತಡವಿತ್ತು, ಏಕೆಂದರೆ ನಾವು ಫೈನಲ್‌ ತಲುಪಿದರೆ ನಾವು ಚಿನ್ನವನ್ನು ಪಡೆಯಬಹುದು ಎಂದು ನನಗೆ ತಿಳಿದಿತ್ತು. ಆದ್ದರಿಂದ, ನಾನು ಆ ಪಂದ್ಯವನ್ನು ಗೆಲ್ಲಬೇಕಾಯಿತು. ಬೆಂಬಲ ಮತ್ತು ಶಕ್ತಿಗಾಗಿ ನಾನು ಇಡೀ ತಂಡಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇನೆ!

ಪ್ರಧಾನ ಮಂತ್ರಿ: ಪ್ರಣಯ್‌ , ನೀವೊಬ್ಬ ಯೋಧ. ಆಟಕ್ಕಿಂತ ಹೆಚ್ಚಾಗಿ, ಗೆಲುವಿನ ಉತ್ಸಾಹವು ನಿಮ್ಮ ಅತಿದೊಡ್ಡ ಶಕ್ತಿಯಾಗಿದೆ. ನಿಮ್ಮ ದೈಹಿಕ ಗಾಯಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳುವುದಿಲ್ಲ ಮತ್ತು ಬದ್ಧರಾಗಿರುತ್ತೀರಿ. ಇದು ಇದರ ಪರಿಣಾಮವಾಗಿದೆ. ನೀವು ಅಪಾರ ಶಕ್ತಿ ಮತ್ತು ಉತ್ಸಾಹವನ್ನು ಹೊಂದಿದ್ದೀರಿ. ನಿಮಗೆ ಶುಭ ಹಾರೈಕೆಗಳು!

ಪ್ರಣಯ್‌ : ತುಂಬಾ ಧನ್ಯವಾದಗಳು ಸರ್‌.

ಅನೌನ್ಸರ್‌: ಉನ್ನತಿ ಹೂಡಾ.

ಪ್ರಧಾನ ಮಂತ್ರಿ: ಉನ್ನತಿ ಅತ್ಯಂತ ಕಿರಿಯವಳೇ?

ಉನ್ನತಿ: ಗುಡ್‌ ಈವಿನಿಂಗ್‌ ಸರ್‌.

ಪ್ರಧಾನ ಮಂತ್ರಿ: ಹೇಳು, ಉನ್ನತಿ.

ಉನ್ನತಿ: ಮಾನ್ಯರೆ, ಮೊದಲನೆಯದಾಗಿ ನಾನು ಇಲ್ಲಿ ಭಾಗವಾಗಿದ್ದೇನೆ ಮತ್ತು ಇಂದು ತುಂಬಾ ಸಂತೋಷವಾಗಿದ್ದೇನೆ. ನನ್ನನ್ನು ಪ್ರೇರೇಪಿಸುವ ಒಂದು ವಿಷಯವೆಂದರೆ ನೀವು ಪದಕ ವಿಜೇತ ಮತ್ತು ಪದಕ ವಿಜೇತರಲ್ಲದವರ ನಡುವೆ ತಾರತಮ್ಯ ಮಾಡುವುದಿಲ್ಲ.

ಪ್ರಧಾನ ಮಂತ್ರಿ: ಗ್ರೇಟ್‌! ಇಷ್ಟು ಚಿಕ್ಕ ವಯಸ್ಸಿನಲ್ಲಿ ನೀವು ಅನೇಕ ಹಿರಿಯರೊಂದಿಗೆ ತಂಡದ ಭಾಗವಾಗಿದ್ದಾಗ ನಿಮಗೆ ಹೇಗನಿಸಿತು? ತಂಡದಲ್ಲಿ ಹಲವಾರು ಒಲಿಂಪಿಕ್‌ ವಿಜೇತರು ಸಹ ಇದ್ದಾರೆ. ನೀವು ಭಯಭೀತರಾಗಿದ್ದಿರಾ ಅಥವಾ ನೀವು ಸಹ ಅವರಿಗೆ ಸಮಾನರು ಎಂದು ನೀವು ಭಾವಿಸಿದ್ದೀರಾ?

ಉನ್ನತಿ: ಮಾನ್ಯರೆ, ನಾನು ಈ ಪಂದ್ಯಾವಳಿಯಿಂದ ಸಾಕಷ್ಟು ಕಲಿತಿದ್ದೇನೆ ಮತ್ತು ಸಾಕಷ್ಟು ಅನುಭವವನ್ನು ಪಡೆದಿದ್ದೇನೆ. ಹುಡುಗರ ತಂಡವು ಗೆದ್ದಾಗ ಅದು ಉತ್ತಮವೆನಿಸಿತು. ಬಾಲಕಿಯರ ತಂಡವು ಮುಂದಿನ ಬಾರಿ ಗೆದ್ದು ಪದಕ ಗೆಲ್ಲಬೇಕು ಎಂದು ನಾನು ಭಾವಿಸಿದೆ.

ಪ್ರಧಾನ ಮಂತ್ರಿ: ಸರಿ, ಹೇಳಿ, ಹರಿಯಾಣದ ಮಣ್ಣಿನಲ್ಲಿ ಅನೇಕ ಉತ್ತಮ ಆಟಗಾರರು ಹೊರಹೊಮ್ಮುತ್ತಿದ್ದಾರೆ.ಆ ಮಣ್ಣಿನಲ್ಲಿ ಅಂತಹುದು ಏನಿದೆ?

ಉನ್ನತಿ: ಸರ್‌, ಮೊದಲನೆಯದಾಗಿ, ಅದು ಹಾಲು ಮತ್ತು ಮೊಸರು.

ಪ್ರಧಾನ ಮಂತ್ರಿ: ಉನ್ನತಿ, ನೀವು ಖಂಡಿತವಾಗಿಯೂ ನಿಮ್ಮ ಹೆಸರನ್ನು ಅರ್ಥಪೂರ್ಣಗೊಳಿಸುತ್ತೀರಿ ಎಂಬುದು ನನ್ನ ಮತ್ತು ಇಡೀ ದೇಶದ ನಂಬಿಕೆಯಾಗಿದೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ನಿಮಗೆ ಅವಕಾಶ ಸಿಕ್ಕಿದೆ. ಇದು ಆರಂಭ. ಮಾಡಬೇಕಾದ್ದು ಬಹಳಷ್ಟಿದೆ. ಈ ಹಂತದಲ್ಲಿ ವಿಜಯಗಳು ನಿಮ್ಮನ್ನು ಮುಳುಗಿಸಬಾರದು. ನೀವು ಬಹಳ ದೀರ್ಘ ವೃತ್ತಿಜೀವನವನ್ನು ಹೊಂದಿರುವುದರಿಂದ ಬಹಳಷ್ಟು ಮಾಡಬೇಕಾಗಿದೆ. ನೀವು ಬಹಳ ಚಿಕ್ಕ ವಯಸ್ಸಿನಲ್ಲಿಯೇ ಅನುಭವವನ್ನು ಪಡೆದಿದ್ದೀರಿ. ನೀವು ಈ ಯಶಸ್ಸನ್ನು ಜೀರ್ಣಿಸಿಕೊಂಡು ಮುಂದೆ ಸಾಗಬೇಕು. ಅದು ನಿಮಗೆ ಬಹಳ ಸಹಾಯ ಮಾಡುತ್ತದೆ. ಮತ್ತು ನೀವು ಇದನ್ನು ಅನುಸರಿಸುತ್ತೀರಿ ಎಂದು ನನಗೆ ಖಾತ್ರಿಯಿದೆ. ನಾನು ನಿಮಗೆ ಶುಭ ಹಾರೈಸುತ್ತೇನೆ. ಅಭಿನಂದನೆಗಳು.

ಉನ್ನತಿ: ಧನ್ಯವಾದಗಳು ಸರ್‌.

ಟ್ರೆಸಾ ಜಾಲಿ: ಗುಡ್‌ ಈವಿನಿಂಗ್‌, ಸರ್‌. ಒಬ್ಬ ಯುವ ಆಟಗಾರನಾಗಿ, ಭಾರತಕ್ಕಾಗಿ ಆಡುವುದು ಒಂದು ಗೌರವವಾಗಿದೆ. ಮುಂಬರುವ ವರ್ಷಗಳಲ್ಲಿ, ನಾನು ಭಾರತವನ್ನು ಹೆಮ್ಮೆಪಡುವಂತೆ ಮಾಡುತ್ತೇನೆ ಮತ್ತು ನಮ್ಮ ದೇಶಕ್ಕಾಗಿ ಹೆಚ್ಚಿನ ಪದಕಗಳನ್ನು ಪಡೆಯುತ್ತೇನೆ.

ಪ್ರಧಾನ ಮಂತ್ರಿ: ಕುಟುಂಬದ ಬೆಂಬಲ ಹೇಗಿದೆ?

ಟ್ರೆಸಾ ಜಾಲಿ: ಸರ್‌, ಪಾಪಾ ಈ ಹಿಂದೆ ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದರು. ಆದ್ದರಿಂದ ಅವರು ಈಗಾಗಲೇ ಕ್ರೀಡೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದ್ದರಿಂದ ಅವರು ಉತ್ತಮ ಬ್ಯಾಡ್ಮಿಂಟನ್‌ ಆಡಲು ನನ್ನನ್ನು ಬೆಂಬಲಿಸುತ್ತಿದ್ದರು. ಅವರು ನನಗಾಗಿ ಮನೆಯಲ್ಲಿ ಬ್ಯಾಡ್ಮಿಂಟನ್‌ ಅಂಕಣವನ್ನು ಮಾಡಿದರು. ನಂತರ, ನಾನು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪದಕಗಳನ್ನು ಗೆದ್ದೆ. ನಂತರ ನಾನು ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಬಹುದು ಎಂದು ನಾನು ಭರವಸೆ ಹೊಂದಿದ್ದೆ.

ಪ್ರಧಾನ ಮಂತ್ರಿ: ಈಗ ಕುಟುಂಬದ ಎಲ್ಲಾ ಸದಸ್ಯರು ತೃಪ್ತರಾಗಿದ್ದಾರೆಯೇ?

ಟ್ರೆಸಾ ಜಾಲಿ: ಹೌದು ಸರ್‌. ತುಂಬಾ!

ಪ್ರಧಾನ ಮಂತ್ರಿ: ಈಗ ನಿಮ್ಮ ತಂದೆಯವರು ನಿಮಗಾಗಿ ಸಾಕಷ್ಟು ಶ್ರಮವಹಿಸಿರುವುದರಿಂದ ಅವರು ತೃಪ್ತರಾಗಿರಬೇಕು.

ಟ್ರೆಸಾ ಜಾಲಿ: ಹೌದು.

ಪ್ರಧಾನ ಮಂತ್ರಿ: ಗ್ರೇಟ್‌. ಟ್ರೆಸಾ ನೋಡಿ, ನೀವು ಉಬರ್‌ ಕಪ್‌ ನಲ್ಲಿ ಆಡಿದ ರೀತಿ, ದೇಶವು ಅದರ ಬಗ್ಗೆ ತುಂಬಾ ಹೆಮ್ಮೆಪಡುತ್ತದೆ ಎಂದು ನನಗೆ ಖಾತ್ರಿಯಿದೆ. ಮತ್ತು ನೀವೆಲ್ಲರೂ ನಿಮ್ಮ ಗುರಿಗಳಿಗೆ ಅಂಟಿಕೊಂಡಿದ್ದೀರಿ. ನೀವು ಅಪೇಕ್ಷಿತ ಫಲಿತಾಂಶವನ್ನು ಪಡೆಯದಿರಬಹುದು, ಆದರೆ ನೀವು ಮತ್ತು ನಿಮ್ಮ ತಂಡವು ಶೀಘ್ರದಲ್ಲೇ ಅಪೇಕ್ಷಿತ ಫಲಿತಾಂಶಗಳನ್ನು ಪಡೆಯುತ್ತೀರಿ ಎಂದು ನನಗೆ ಖಾತ್ರಿಯಿದೆ. ನೀವು ಉತ್ತಮ ಆರಂಭವನ್ನು ಮಾಡಿದ್ದೀರಿ. ನೀವು ದೇಶದ ಯುವ ಪೀಳಿಗೆಗೆ ಶಕ್ತಿ ನೀಡಿದ್ದೀರಿ. ಮತ್ತು 125 ಕೋಟಿ ಜನಸಂಖ್ಯೆಯ ಈ ದೇಶವು ಇದಕ್ಕಾಗಿ ಏಳು ದಶಕಗಳ ಕಾಲ ಕಾಯಬೇಕಾಯಿತು.

ಏಳು ದಶಕಗಳಲ್ಲಿ ನಮ್ಮ ಆಟಗಾರರ ಅನೇಕ ತಲೆಮಾರುಗಳ ಕನಸುಗಳನ್ನು ನೀವು ಈಡೇರಿಸಿರುವುದು ಸಣ್ಣ ಸಾಧನೆಯಲ್ಲ. ಮತ್ತು ನಾನು ಟ್ರೆಸಾ ಅವರೊಂದಿಗೆ ಮಾತನಾಡುತ್ತಿದ್ದಾಗ, ನೀವು ನಿಜವಾಗಿಯೂ ಉತ್ತಮ ಕೆಲಸವನ್ನು ಮಾಡಿದ್ದೀರಿ ಎಂದು ನಿಮಗೆ ತಿಳಿದಿಲ್ಲ. ಮತ್ತು ಈಗ ನೀವು ಏನನ್ನಾದರೂ ಮಾಡಿದ್ದೀರಿ ಎಂದು ನೀವು ಭಾವಿಸುತ್ತಿರಬೇಕು.

ನೀವು ಸಂಬಂಧಿಸಿದ ಕ್ರೀಡೆಗಳಲ್ಲಿಅಂತಹ ದೊಡ್ಡ ಯಶಸ್ಸನ್ನು ಪಡೆದಾಗ, ನಿಮ್ಮ ಗೆಲುವು ಭಾರತದ ಕ್ರೀಡಾ ಪರಿಸರ ವ್ಯವಸ್ಥೆಗೆ ಹೊಸ ಉತ್ಸಾಹ ಮತ್ತು ಆತ್ಮವಿಶ್ವಾಸವನ್ನು ನೀಡುತ್ತದೆ. ಇದನ್ನು ಅತ್ಯುತ್ತಮ ತರಬೇತುದಾರರು ಮಾಡಲು ಸಾಧ್ಯವಿಲ್ಲ, ಪ್ರಮುಖ ನಾಯಕರ ಭರವಸೆಯ ಭಾಷಣಗಳು ಅದನ್ನು ಮಾಡಲು ಸಾಧ್ಯವಿಲ್ಲ.

ಉಬರ್‌ ಕಪ್‌ನಲ್ಲಿಇನ್ನೂ ಸ್ವಲ್ಪ ಕೆಲಸವಿದೆ, ನಾವು ಕಾಯುತ್ತೇವೆ, ಆದರೆ ನಾವು ವಿಜಯವನ್ನು ಖಚಿತಪಡಿಸಿಕೊಳ್ಳುತ್ತೇವೆ. ಮತ್ತು ನಾವು ಹೆಚ್ಚು ಸಮಯ ಕಾಯಬೇಕಾಗಿಲ್ಲಎಂದು ನನಗೆ ಖಾತ್ರಿಯಿದೆ ಏಕೆಂದರೆ ನೀವು ಅಲ್ಲಿಏನು ಮಾಡಿದ್ದೀರಿ ಎಂಬುದರ ನಂತರ ನಿಮ್ಮ ಕಣ್ಣುಗಳಲ್ಲಿಆ ಉತ್ಸಾಹವನ್ನು ನಾನು ನೋಡಬಹುದು. ನಮ್ಮ ಮಹಿಳಾ ತಂಡವು ತಮ್ಮ ಸಾಮರ್ಥ್ಯ‌ವನ್ನು ಮತ್ತೆ ಮತ್ತೆ ತೋರಿಸಿದೆ ಮತ್ತು ಅವರು ಉನ್ನತ ದರ್ಜೆಯ ಆಟಗಾರರು. ಇದು ಸಮಯದ ವಿಷಯವಾಗಿದೆ ಎಂದು ನಾನು ತುಂಬಾ ಸ್ಪಷ್ಟವಾಗಿ ಸ್ನೇಹಿತರನ್ನು ನೋಡಬಲ್ಲೆ. ಈ ಬಾರಿ ಅಲ್ಲದಿದ್ದರೆ, ಮುಂದಿನ ಬಾರಿ ಖಂಡಿತವಾಗಿಯೂ! ಗೆಲುವು ನಿಮ್ಮದಾಗುತ್ತದೆ.

ನೀವೆಲ್ಲರೂ ಹೇಳಿದಂತೆ, ಸ್ವಾತಂತ್ರ್ಯದ ಅಮೃತ ಮಹೋತ್ಸವ, ಸ್ವಾತಂತ್ರ್ಯದ 75 ವರ್ಷಗಳು ನಡೆಯುತ್ತಿವೆ ಮತ್ತು ಕ್ರೀಡಾ ಜಗತ್ತಿನಲ್ಲಿಭಾರತದ ಈ ಏರಿಕೆಯು ಭಾರತವನ್ನು ಹೆಮ್ಮೆಪಡುವಂತೆ ಮಾಡುತ್ತದೆ. ಯಶಸ್ಸಿನ ಉತ್ತುಂಗವನ್ನು ತಲುಪುವುದು ಪ್ರತಿಯೊಬ್ಬ ಭಾರತೀಯನು ಹೆಮ್ಮೆಪಡುವಂತೆ ಮಾಡುತ್ತದೆ. ‘ಹೌದು, ನಾನು ಅದನ್ನು ಮಾಡಬಲ್ಲೆ’ - ಇದು ಹೊಸ ವಿಶ್ವಾಸದೊಂದಿಗೆ ಭಾರತದ ಚೈತನ್ಯವಾಗಿದೆ. ಪ್ರಣಯ್‌ ಹೇಳಿದಂತೆ, ಈ ಬಾರಿ ಸೋಲಬಾರದು, ಹಿಂದೆ ಸರಿಯಬಾರದು ಎಂದು ತಾನು ಮನಸ್ಸು ಮಾಡಿದ್ದೆ.

‘ಹೌದು, ನಾವು ಅದನ್ನು ಮಾಡಬಹುದು’ ಎಂಬ ಈ ಮನೋಭಾವವು ಭಾರತದಲ್ಲಿಒಂದು ಹೊಸ ಶಕ್ತಿಯಾಗಿ ಮಾರ್ಪಟ್ಟಿದೆ. ಮತ್ತು ನೀವು ಅದನ್ನು ಪ್ರತಿನಿಧಿಸುತ್ತೀರಿ. ನಮ್ಮ ಪ್ರತಿಸ್ಪರ್ಧಿ ಎಷ್ಟೇ ಪ್ರಬಲರಾಗಿದ್ದರೂ ಮತ್ತು ಅವರ ಹಿಂದಿನ ದಾಖಲೆಗಳು ಏನೇ ಇರಲಿ, ಇಂದು ಭಾರತಕ್ಕೆ ಮುಖ್ಯವಾಗಿರುವುದು ಪ್ರದರ್ಶನ! ಈ ಮನೋಭಾವದಿಂದ ನಮ್ಮ ಗುರಿಗಳನ್ನು ತಲುಪಲು ನಾವು ಮುಂದುವರಿಯಬೇಕು.

ಆದರೆ ಸ್ನೇಹಿತರೇ, ನೀವೆಲ್ಲರೂ ಇನ್ನೂ ಒಂದು ವಿಷಯವನ್ನು ನೆನಪಿಟ್ಟುಕೊಳ್ಳಬೇಕು. ಈಗ ನಿಮ್ಮೆಲ್ಲರಿಂದ ದೇಶದ ನಿರೀಕ್ಷೆ ಹೆಚ್ಚಾಗಿದೆ ಮತ್ತು ಆದ್ದರಿಂದ, ಹೆಚ್ಚಿನ ಒತ್ತಡವಿರುತ್ತದೆ. ಈ ಒತ್ತಡವು ಕೆಟ್ಟದ್ದಲ್ಲ. ಆದರೆ ಈ ಒತ್ತಡದಲ್ಲಿಹೂಳುವುದು ಕೆಟ್ಟದ್ದು. ನಾವು ಒತ್ತಡವನ್ನು ಶಕ್ತಿಯಾಗಿ ಪರಿವರ್ತಿಸಬೇಕು; ನಾವು ಅದನ್ನು ಅಧಿಕಾರವಾಗಿ ಪರಿವರ್ತಿಸಬೇಕು. ನಾವು ಅದನ್ನು ಪ್ರೋತ್ಸಾಹವಾಗಿ ತೆಗೆದುಕೊಳ್ಳಬೇಕು. ಯಾರೋ ಒಬ್ಬರು ಬಕ್‌-ಅಪ್‌ ಎಂದು ಹೇಳುತ್ತಾರೆ, ಆದರೆ ಅವರು ನಿಮ್ಮ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಇದರ ಅರ್ಥವಲ್ಲ. ವಾಸ್ತವವಾಗಿ, ನಿಮ್ಮ ಅತ್ಯುತ್ತಮ ಪ್ರಯತ್ನಗಳನ್ನು ಮಾಡುವಂತೆ ಅವನು ನಿಮ್ಮನ್ನು ಉತ್ತೇಜಿಸುತ್ತಿದ್ದಾರೆ. ನಾವು ಅದನ್ನು ನಮ್ಮ ಶಕ್ತಿಯ ಮೂಲವೆಂದು ಪರಿಗಣಿಸಬೇಕು. ಮತ್ತು ನೀವು ಅದನ್ನು ಸಾಬೀತುಪಡಿಸುತ್ತೀರಿ ಎಂದು ನನಗೆ ಖಾತ್ರಿಯಿದೆ.

ಕಳೆದ ಕೆಲವು ವರ್ಷಗಳಲ್ಲಿ, ಭಾರತದ ಯುವಕರು ಬಹುತೇಕ ಎಲ್ಲಾ ಕ್ರೀಡೆಗಳಲ್ಲಿಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಮತ್ತು ಹೊಸದನ್ನು, ಅದಕ್ಕಿಂತ ಉತ್ತಮವಾದುದನ್ನು ಮಾಡುವ ಪ್ರಯತ್ನ ನಡೆದಿದೆ. ಅದರಲ್ಲಿಯೂ ಸಹ, ಭಾರತವು ಕಳೆದ ಏಳೆಂಟು ವರ್ಷಗಳಲ್ಲಿಅನೇಕ ಹೊಸ ದಾಖಲೆಗಳನ್ನು ಮಾಡಿದೆ. ನಮ್ಮ ಯುವಕರು ಫಲಿತಾಂಶಗಳನ್ನು ತೋರಿಸಿದ್ದಾರೆ. ಅದು ಒಲಿಂಪಿಕ್ಸ್‌ ಮತ್ತು ಪ್ಯಾರಾಲಿಂಪಿಕ್ಸ್‌ನಲ್ಲಿದಾಖಲೆಯ ಪ್ರದರ್ಶನವಾಗಿರಬಹುದು. ಇಂದು ಬೆಳಿಗ್ಗೆ ನಾನು ಡೆಫ್ಲಿಂಪಿಕ್ಸ್‌ ಆಟಗಾರರನ್ನು ಭೇಟಿಯಾದೆ. ನಮ್ಮ ಮಕ್ಕಳು ತುಂಬಾ ಚೆನ್ನಾಗಿ ಪ್ರದರ್ಶನ ನೀಡಿದ್ದಾರೆ. ಇದು ಬಹಳ ಸಂತೃಪ್ತಿ ಮತ್ತು ಆನಂದದ ವಿಷಯವಾಗಿದೆ.

ನೀವೆಲ್ಲರೂ ಹೇಳಿದಂತೆ ಇಂದು ಕ್ರೀಡೆಗಳ ಬಗ್ಗೆ ಹಳೆಯ ನಂಬಿಕೆಗಳು ಸಹ ಬದಲಾಗುತ್ತಿವೆ. ಪೋಷಕರು ಸಹ ನಮಗೆ ಪೋ›ತ್ಸಾಹಿಸುತ್ತಿದ್ದಾರೆ ಮತ್ತು ಸಹಾಯ ಮಾಡುತ್ತಿದ್ದಾರೆ. ಪೋಷಕರು ತಮ್ಮ ಮಕ್ಕಳು ಈ ಕ್ಷೇತ್ರದಲ್ಲಿಮುಂದುವರಿಯಬೇಕು ಎಂಬ ಮಹತ್ವಾಕಾಂಕ್ಷೆಯನ್ನು ಹೊಂದುತ್ತಿದ್ದಾರೆ. ಒಂದು ಹೊಸ ಸಂಸ್ಕೃತಿ, ಹೊಸ ಪರಿಸರವನ್ನು ಸೃಷ್ಟಿಸಲಾಗಿದೆ ಮತ್ತು ಇದು ಭಾರತದ ಕ್ರೀಡಾ ಇತಿಹಾಸದಲ್ಲಿಒಂದು ಸುವರ್ಣ ಅಧ್ಯಾಯವಾಗಿದೆ ಮತ್ತು ಅದರ ಸೃಷ್ಟಿಕರ್ತರು ನೀವೆಲ್ಲರೂ, ನಿಮ್ಮ ಪೀಳಿಗೆಯ ಆಟಗಾರರು ಇಂದು ಭಾರತವನ್ನು ವಿಜಯದ ಬಾವುಟಗಳೊಂದಿಗೆ ಹೊಸ ಸ್ಥಳಗಳಿಗೆ ಕೊಂಡೊಯ್ಯುತ್ತಿದ್ದಾರೆ.

ನಾವು ಈ ಆವೇಗವನ್ನು ಉಳಿಸಿಕೊಳ್ಳಬೇಕು. ನಾವು ಯಾವುದೇ ಆಲಸ್ಯಕ್ಕೆ ಅವಕಾಶ ನೀಡಬಾರದು. ಸರ್ಕಾರವು ನಿಮ್ಮೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಸಾಗುತ್ತದೆ ಮತ್ತು ನಿಮಗೆ ಸಾಧ್ಯವಿರುವ ಎಲ್ಲಸಹಾಯ ಮತ್ತು ಪ್ರೋತ್ಸಾಹವನ್ನು ನೀಡುತ್ತದೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳನ್ನು ಸಹ ನಾವು ಒದಗಿಸುತ್ತೇವೆ. ಮತ್ತು ನನ್ನ ಮುಂದೆ ಇರುವ ನಿಮಗೆ ಮಾತ್ರವಲ್ಲ, ದೇಶದ ಎಲ್ಲಾ ಆಟಗಾರರಿಗೆ ನಾನು ಭರವಸೆ ನೀಡುತ್ತಿದ್ದೇನೆ. ಈಗ ನಾವು ವಿರಮಿಸಬೇಕಾಗಿಲ್ಲ, ನಾವು ಹಿಂತಿರುಗಿ ನೋಡಬೇಕಾಗಿಲ್ಲ. ನಾವು ಮುಂದೆ ನೋಡಬೇಕು, ನಮ್ಮ ಗುರಿಗಳನ್ನು ಹೊಂದಿಸಬೇಕು ಮತ್ತು ವಿಜಯಶಾಲಿಗಳಾಗಬೇಕು. ನಾನು ನಿಮಗೆ ಶುಭ ಹಾರೈಸುತ್ತೇನೆ.

ತುಂಬಾ ಧನ್ಯವಾದಗಳು!

ಹಕ್ಕು ನಿರಾಕರಣೆ: ಇದು ಪ್ರಧಾನಮಂತ್ರಿ ಅವರ ಭಾಷಣದ ಅಂದಾಜು ಅನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ನೀಡಲಾಗಿದೆ.

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
India’s Tourism Sector on the Rise: Growth, Innovation, and Future Prospects

Media Coverage

India’s Tourism Sector on the Rise: Growth, Innovation, and Future Prospects
NM on the go

Nm on the go

Always be the first to hear from the PM. Get the App Now!
...
Prime Minister Narendra Modi congratulates President Trump on historic second term
January 27, 2025
Leaders reaffirm their commitment to work towards a mutually beneficial and trusted partnership
They discuss measures for strengthening cooperation in technology, trade, investment, energy and defense
PM and President Trump exchange views on global issues, including the situation in West Asia and Ukraine
Leaders reiterate commitment to work together for promoting global peace, prosperity and security
Both leaders agree to meet soon

Prime Minister Shri Narendra Modi spoke with the President of the United States of America, H.E. Donald J. Trump, today and congratulated him on his historic second term as the 47th President of the United States of America.

The two leaders reaffirmed their commitment for a mutually beneficial and trusted partnership. They discussed various facets of the wide-ranging bilateral Comprehensive Global Strategic Partnership and measures to advance it, including in the areas of technology, trade, investment, energy and defence.

The two leaders exchanged views on global issues, including the situation in West Asia and Ukraine, and reiterated their commitment to work together for promoting global peace, prosperity and security.

The leaders agreed to remain in touch and meet soon at an early mutually convenient date.