ಸಾರ್ಕ್” ಭಾರತದಪಾಲಿಗೆ ಅತ್ಯುತ್ತಮ ವಿದೇಶನೀತಿಯ ಪ್ರಮುಖ ಭಾಗವಾಗಿದೆ. ಸಾರ್ಕ್ ಪ್ರದೇಶದ ಅತಿ ದೊಡ್ಡ ದೇಶವಾಗಿರುವ ಭಾರತ, ಆರ್ಥಿಕವಾಗಿಯೂ ಬಹು ಮುಖ್ಯವಾಗಿದೆ. ಮೊದಲ ದಿನದಿಂದಲೂ, ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ, ಸಾರ್ಕ್ ತಮ್ಮ ವಿದೇಶ ನೀತಿಯ ಉತ್ತಮ ಬೆಳವಣಿಗೆಗೆ ಕೇಂದ್ರ ಬಿಂಧುವಾಗಿಸಿದ್ದರು.
ತಮ್ಮ ಅಧಿಕಾರ ಸ್ವೀಕಾರ ಸಮಾರಂಭಕ್ಕೆ 26ನೇ ಮೇ, 2014ರಂದು ಸಾರ್ಕ್ ದೇಶಗಳ ಮುಖ್ಯಸ್ಥರನ್ನೆಲ್ಲಾ ವಿಶೇಷಗಣ್ಯರಾಗಿ ಆಹ್ವಾನಿಸಿಲು ನಿರ್ಧರಿಸಿದ್ದರು. ಅಫ್ಘಾನ್ ಅಧ್ಯಕ್ಷ ಹಮೀದ್ ಕರ್ಜಾಯಿ, ಬಂಗ್ಲಾದೇಶ್ ಸ್ಪೀಕರ್ ಶರ್ಮಿನ್ ಚೌಧರಿ, ಭೂತಾನ ಪ್ರಧಾನಿ ಶೆರಿಂಗ್ ತೋಬ್ಗಿ, ಮಾಲ್ದೀವ್ಸ್ ಅಧ್ಯಕ್ಷ ಅಬ್ದುಲ್ಲ ಯಮೀನ್, ನೇಪಾಲ ಪ್ರಧಾನಿ ಸುಶೀಲ್ ಕೊಯಿರಾಲ, ಪಾಕಿಸ್ಥಾನ ಪ್ರಧಾನಿ ನವಾಜ್ ಷರೀಫ್ ಮತ್ತು ಶ್ರೀ ಲಂಕಾ ಅಧ್ಯಕ ರಾಜಪಕ್ಸ ಮುಂತಾದವರೆಲ್ಲಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಮರುದಿನ ಅವರೆಲ್ಲ ಪ್ರತ್ಯೇಕ ಮಾತುಕತೆ ನಡೆಸಿದ್ದರು. ಇದೊಂದು ಆಶಾದಾಯಕ ಪ್ರಕ್ರಿಯೆಗಾಗಿ ಗುರುತಿಸಲಾಗಿತ್ತು.
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಮೊದಲ ವಿದೇಶ ಯಾತ್ರೆಯನ್ನು ಭೂತಾನ್ ಮೂಲಕ 15ನೇ ಜೂನ್ 2014ರಂದು ಪ್ರಾರಂಭಿಸಿದರು.ಭೂತಾನ್ ಸಂಸತ್ತಿನಲ್ಲೂ ಭಾಷಣ ಮಾಡಿದರು.
2014ರಲ್ಲಿ 17 ವರ್ಷಗಳನಂತರ ಭಾರತದ ಪ್ರಧಾನ ಮಂತ್ರಿಯವರು ನೇಪಾಲ್ ಸಂದರ್ಶಿಸಿದರು, ಅದು , ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಐತಿಹಾಸಿಕ ಭೇಟಿಯಾಗಿತ್ತು.
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಫೆಬ್ರವರಿ 2015ರಲ್ಲಿ, ಶ್ರೀಲಂಕಾ ಭೇಟಿಮಾಡಿದಾಗ , ಹಲವು ವರ್ಷಗಳ ನಂತರ ಭಾರತದ ಆಡಳಿತ ಮುಖ್ಯಸ್ಥರ ಸಂದರ್ಶನವೆಂಬ ಹಗ್ಗಳಿಕೆಗೆ ಪಾತ್ರವಾಯಿತು. ಜಾಫ್ನಾ ಸಾಂಸ್ಕೃತಿಕ ಕೇಂದ್ರಕ್ಕೆ ಶಿಲಾನ್ಯಾಸ ಮಾಡಿದರು.
ಅಫ್ಘಾನ್ ಅಧ್ಯಕ್ಷ ಹಮೀದ್ ಕರ್ಜಾಯಿ ಅವರು ಮೇ 2015ರಲ್ಲಿ ಭಾರತ ಭೇಟಿ ಸಮಯದಲ್ಲಿ, ಎರಡೂ ದೇಶಗಳ ಸಂಬಂಧ ವೃದ್ದಿಗೆ ಒಪ್ಪಂದ ಮಾಡಿಕೊಂಡರು
ದಶಕಗಳಕಾಲ ನೆನೆಗುದಿ ಬಿದ್ದಿದ್ದ ಬಾಂಗ್ಲಾ ದೇಶದ ಗಡಿ ಒಪ್ಪಂದ ಮೇ 2015ರಲ್ಲಿ ಐತಿಹಾಸಿಕ ನಿರ್ಣಯವಾಯಿತು. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇದಕ್ಕಾಗಿ ಎಲ್ಲ ಮುಖ್ಯಮಂತ್ರಿಗಳನ್ನೂ, ಬಾಂಗ್ಲಾ ಪ್ರಧಾನಿ ಶೈಖ್ ಹಸೀನಾ ಅವರನ್ನೂ ಅಭಿನಂದಿಸಿ, ಮುಂಬರುವ ದಿನಗಳಿಗೆ ಉತ್ತಮ ಭಾಂದವ್ಯವನ್ನು ವರ್ಣಮಯಗೊಳಿಸಿದರು.
ದ್ವಿಪಕ್ಷೀಯ ಮಾತುಕತೆಗಳು, ಪ್ರಮುಖ ಒಪ್ಪಂದಗಳು ಸೇರಿದಂತೆ ಇನ್ನೂ ಅನೇಕ ವಿಷಯಗಳು, ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಾರ್ಕ್ ನಾಯಕರೊಂದಿಗೆ ಸಧೃಡ ಸಂಬಂಧಕ್ಕಾಗಿ ಯಶಸ್ವಿಯಾಗಿ ಭದ್ರಬುನಾದಿ ಹಾಕಿದರು.