ಶ್ರೀ ನರೇಂದ್ರ ಮೋದಿ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ( ಆರ್.ಎಸ್.ಎಸ್) ಮೂಲಕ ಬೆಳೆದವರು ಮತ್ತು ಸುಮಾರು 1980ರ ಅವಧಿಯಲ್ಲಿ ಭಾರತೀಯ ಜನತಾ ಪಕ್ಷ (ಬಿ.ಜೆ.ಪಿ) ಸೇರಿದರು. ಸ್ವಾತಂತ್ರ್ಯಾನಂತರದ ಅತ್ಯಂತ ಸಂದಿಗ್ದತೆ ಭಾರತದಲ್ಲಿ 1990ರ ಪೂರ್ವ ದಶಕದಲ್ಲಿತ್ತು. ದೇಶದ ಉದ್ದಗಲಕ್ಕೂ ವಿಂಘಡನೆಯ ಮಾತು ಎಲ್ಲಡೆ ಹಬ್ಬಿತ್ತು. ಭಾರತಮಾತೆಯ ಸವಾಲಿನಲ್ಲಿ, ಪಂಜಾಬ್ ಮತ್ತು ಅಸ್ಸಾಮ್ ಅತ್ಯಂತ ಕ್ಲಿಷ್ಟಕರವಾಗಿತ್ತು. ವಿಭಜನಾಕಾರಿ ರಾಜಕೀಯತೆ ಎಲ್ಲಡೆ ಹಬ್ಬಿತ್ತು. ತಾಯಿನಾಡಿನ ಏಕತೆಗೆ ಅಸ್ಸಾಂ, ಪಂಜಾಬ್ ಕೋವಿಯ ಶಬ್ದಗಳು, ರಾಜಕೀಯ ಸ್ಥಾಪಿತ ಹಿತಾಸಕ್ತಿಗಳು ಕಾರಣವಾದವು. ಇವರ ಜವಾಬ್ದಾರಿ ಹುದ್ದೆಗಳು ಮೇಲೆಮೇಲೆ ಏರುತ್ತಳೇ ಹೋಯಿತು 1990ರಲ್ಲಿ ಸ್ವತಂತ್ರ್ಯಾ ನಂತರ ಅತ್ಯಂತ ದೇಶದಲ್ಲಿ ಪ್ರಪ್ರಥಮಬಾರಿಗೆ ಪ್ರಕ್ಷುಬ್ದತೆ ನೆಲೆಕಂಡಿತು.

ಗುಜರಾತಲ್ಲಿ ಕರ್ಫ್ಯೂ ಹೇರಲಾಯಿತು, ಸಹೋದರಭಾವ ಮರೆತು ಮತಬ್ಯಾಂಕುಗಳಾಗಿ ಸಮುದಾಯ-ಜಾತಿ-ಧರ್ಮಗಳ ವಿಂಘಡನೆಯಾಯಿತು. ಗುಜರಾತಿನಲ್ಲಿ, ಕರ್ಫ್ಯೂ ದೈನಂದಿನ ಸಾಮಾನ್ಯ ಮಾತಾಗಿತ್ತು. ಸಹೋದರರ ನಡುವೆ ದ್ವೇಷ, ಸಮುದಾಯಗಳ ನಡುವೆ ದ್ವೇಷ, ಕೇವಲ ಸಮೂಹ ಮತ ಬ್ಯಾಂಕು ಹೆಸರಲ್ಲಿ ರಾಜಕೀಯ ಆಟ ನಡೆಯುತ್ತಿತ್ತು. ಇಂತಹ ಪರಿಸ್ಥಿತಿಯಲ್ಲಿ ಒಬ್ಬ ವ್ಯಕ್ತಿ ಬೆಳೆದು ನಿಂತರು, ಅದೂ ಸರ್ದಾರ್ ವಲ್ಲಭಬಾಯಿ ಚಿಂತನೆಯಲ್ಲಿ. ಭಲಿಷ್ಠಭಾರತದ ಪ್ರಜಾತಂತ್ರದ ಮಹತ್ವ ಮತ್ತು ವ್ಯವಸ್ಥೆಯ ಮೌಲ್ಯಕ್ಕಾಗಿ ಧೃಡ ನಿಶ್ಚಯದೊಂದಿಗೆ ಮುಕ್ತ ವಾಕ್ ಸ್ವಾತಂತ್ರದ ಜೊತೆ ಬೆಳೆದರು, ಅವರೇ ಶ್ರೀ ನರೇಂದ್ರ ಮೋದಿ.

ಆಗ ಸರ್ದಾರ್ ವಲ್ಲಭ ಭಾಯಿ ಪಟೇಲ್ ಸ್ಥರದಲ್ಲಿ ಒಬ್ಬ ವ್ಯಕ್ತಿ ಭಲಿಷ್ಠ ಭಾರತಕ್ಕಾಗಿ, ಅದರ ಪ್ರಜಾಪ್ರಭುತ್ವ ಮತ್ತು ಮುಕ್ತ ಅಭಿವ್ಯಕ್ತಿ  ಸ್ವಾತಂತ್ರ್ಯಕ್ಕಾಗಿ ಹೋರಾಡಲು ಸನ್ನದ್ಧರಾದರು, ಅವರೇ ಆಸಂದರ್ಭದಲ್ಲಿ ,ವ್ಯವಸ್ಥೆಯ ಇತಿಮಿತಿ ಮೀರಿ, ಉತ್ತಮ ಸಂಘಟಕರಾಗಿ, ಯುವನಾಯಕರಾಗಿ ತಮ್ಮ ಕಾರ್ಯವೈಕರ್ಯಗಳಿಂದ ದೇಶದ ಅಹಿತಕರ ಮತ್ತು ಅನಾರೋಗ್ಯಕರ ಸಾಮಾಜಿಕ ಪರಿಸ್ಥಿತಿಯ ಅಡೆತಡೆ ವಿರೋಧಿಸಿ ಮಿಂಚಿದರು.

ಶ್ರೀ ನರೇಂದ್ರ ಮೋದಿ ಅವರು ಏಕ್ತಾಯಾತ್ರೆ ಸಂದರ್ಭದಲ್ಲಿ ಅಹಮ್ಮದಾಬಾದ್ ನಲ್ಲಿ. 

1980ರ ಕೊನೆಯಲ್ಲಿ ಭೂಮಿಯ ಸ್ವರ್ಗವೆಂದೇ ಕರೆಯಲ್ಪಡುವ ದೇಶದ ಹೆಮ್ಮೆಯ ಸುಂದರ ಜಮ್ಮು ಮತ್ತು ಕಾಶ್ಮೀರ ಅತ್ಯಂತ ಹೀನ ಹೋರಾಟದ ಗಲಭೆ-ಅಶಾಂತಿಯ ರಾಜ್ಯವಾಯಿತು. 1987ರಲ್ಲಿ ಭಾರತ ವಿರೋಧಿ ಶಕ್ತಿಗಳ ತಾಣವಾಯಿತು. ಇಂತಹ ಸಮಾಜ ವಿರೋಧಿಕೃತ್ಯಗಳನ್ನು ಹತೋಟಿಗೆ ತರುವ ಬದಲಾಗಿ, ಕೇಂದ್ರ ಸರಕಾರ ಅಸಹಾಯಕವಾಗಿ ಇಂತಹ ದೇಶವಿರೋಧಿ ಚಟುವಟಿಕೆಗಳ ಪ್ರೇರಕವಾಗಿ ವರ್ತಿಸಿತು.

1989ರಲ್ಲಿ ಕೇಂದ್ರ ಸಚಿವ ಮುಫ್ತಿ ಮೊಹಮ್ಮದ್ ಸಯೀದ್ ಅವರ ಮಗಳು ರುಬಿಯಾ ಸಯೀದ್ ಅವರನ್ನು ಉಗ್ರಗಾಮಿಗಳು ಅಪಹರಿಸಿದರು. ಭಾರತದ ಮನಸ್ಥಿತಿಯನ್ನೂ ಗಣನೆಗೆತೆಗೆದುಕೊಳ್ಳದೆ, ಬೆದರಿಕೆಗೆ ಹೆದರಿ ಕೇಂದ್ರ ಸರಕಾರ ಉಗ್ರರ ಬಿಡುಗಡೆ ಮಾಡಿತು.

ದೇಶದ ಅಖಂಡತೆಗೆ ಕುತ್ತು ತರುವ ಉಗ್ರ ಕಾರ್ಯವಿಧಾನಗಳ ಕುರಿತಾಗಿ ಬಿಜೆಪಿ ಸುಮ್ಮನೆ ಕೂರಲಿಲ್ಲ. ಪಕ್ಷಾಧ್ಯಕ್ಷ ಡಾ. ಮುರಳಿ ಮನೋಹರ  ಜೋಷಿ ಅವರು ಏಕ್ತಾ ಯಾತ್ರೆ ಗೆ ಮುಂದಾದರು. ಸ್ವಾಮಿವಿವೇಕಾನಂದರು ಜೀವಿತದ ಉದ್ದೇಶ ಕಂಡ ಜಾಗದಲ್ಲೇ , ಅದೇ ಕಾಶ್ಮೀರದ ಲಾಲ್ ಚೌಕ್ ನಲ್ಲಿ ತ್ರಿವರ್ಣಧ್ವಜಹಾರಿಸುವ ಸಂಕಲ್ಪ ಮಾಡಿ, ಕನ್ಯಾಕುಮಾರಿಯಿಂದ ಜಾತಾ ಮೂಲಕ ದೇಶದಾಧ್ಯಂತ ನಡೆದು ಸಾಗಿದರು.

ಇದು ಶ್ರೀ ನರೇಂದ್ರ ಮೋದಿ ಅವರಿಗೆ ತಮ್ಮ ನಾಯಕತ್ವ ಪ್ರತಿಪಾದಿಸುವ ಸವಾಲುಗಳನ್ನು ಎದುರಿಸುವ ವಿಶೇಷ ಅವಕಾಶವಾಯಿತು. ವಿವಿಧ ರಾಜ್ಯಗಳ ಸಾವಿರಾರು ಗ್ರಾಮ-ನಗರ-ಪಟ್ಟಣಗಳ ಲಕ್ಷಾಂತರ ಕಾರ್ಯಕರ್ತರ ಸನಿಹದ ಅನುಭವ ಲಭಿಸಿತು.

ಯಾತ್ರೆ ಯಶಸ್ಸು ಕಂಡಿತು. ನಾಯಕತ್ವದ ಹಿರಿಮೆ ಗರಿಮೆ ಇವರಲ್ಲಿ ಕಾರ್ಯಕರ್ತರು ಕಾಣತೊಡಗಿದರು. ಯಾವುದೇ ಸಂದಿಗ್ಧ ಕ್ಲಿಷ್ಟಕರ ವಿಷಯವನ್ನೂ ಸೂಕ್ಷ್ಮವಾಗಿ ಅರಿಯುವ, ಪರಿಸ್ಥಿತಿ ಮನದಟ್ಟು ಮಾಡಿಕೊಳ್ಳುವ , ತ್ವರಿತ ನಿರ್ಧಾರದ ಮನೋಸ್ಥೈರ್ಯ ಇವರಲ್ಲಿ ಬೆಳೆಯಿತು.

ಶ್ರೀ ನರೇಂದ್ರ ಮೋದಿ ಅವರು ಏಕ್ತಾಯಾತ್ರೆ ಸಂದರ್ಭದಲ್ಲಿ 

ದೇಶದ ಐಕ್ಯತೆ ಗಾಗಿ ಸುಬ್ರಮಣ್ಯ ಭಾರತಿ ಅವರ ಜನ್ಮದಿನ ಮತ್ತು ಗುರು ತೇಜ್ ಬಹಾದೂರ್ ಅವರ ಬಲಿದಾನ ದಿನವಾದ ಡಿಸೆಂಬರ್ 11ರಂದು, ಅಂದರೆ 1991, ಡಿಸೆಂಬರ್ 11ರಂದು ಏಕ್ತಾ ಯಾತ್ರೆ ಪ್ರಾರಂಭ ಗೊಂಡಿತು. ಇದು ಕಾಶ್ಮೀರ ದ ಉಗ್ರರ ಪಾಲಿಗೆ ಸಿಂಹಸ್ವಪ್ನ ಚಳವಳಿಯಾಯಿತು.

ಶ್ರೀ ಮೋದಿ ಎಲ್ಲಿ ಹೋದರೂ ಶ್ರೀ ಶ್ಯಾಮ ಪ್ರಸಾದ್ ಮುಖರ್ಜಿ ಅವರ ಸಂದೇಶವನ್ನು ಪುನರಪಿ ಹೇಳುತ್ತಿದ್ದರು, ಯಾವುದೇ ವರ್ಗವಿರಬಹುದು ಆದರೆ ನಮ್ಮೆಲ್ಲ ಜೀವನ- ಕಾರ್ಯಗಳಿಗಿಂತ ಮಿಗಿಲಾಗಿದೆ ನಮ್ಮ ದೇಶದ ಏಕತೆ. ಡಾ. ಜೋಷಿಯವರು ದೇಶದ ಪುನರುತ್ಥಾನ ಮಾತನಾಡಿದರು, ದೇಶವೇ ಅದನ್ನು ಏಕಕಂಠದಿಂದ ಪ್ರತಿಧ್ವನಿಸಿತು.

ಏಕ್ತಾಯಾತ್ರೆ ಕಾಂಗ್ರೆಸ್ ಸರಕಾರಕ್ಕೆ ಕಣ್ಣುತೆರೆಸುವ ಕಾರ್ಯ ಮಾಡಿತು. ಯುವನಾಯಕ ಶ್ರೀ ನರೇಂದ್ರ ಮೋದಿ ಅವರಲ್ಲಿ ದೇಶ ವಿಶ್ವಾಸವಿರಿಸುವ ಸಕಾರಾತ್ಮಕ ಘಟನಾವಳಿಗಳು ಏಕ್ತಾಯಾತ್ರ ಮೂಲಕ ನಡೆದವು.

ಶ್ರೀ ಮೋದಿ ಮತಬ್ಯಾಂಕು ರಾಜಕೀಯ, ಮತ್ತು ಮಿಥ್ಯಾ-ಧರ್ಮ ನಿರಪೇಕ್ಷತಾ ರಾಜಕೀಯ ಪ್ರವೃತ್ತಿ ವಿರುದ್ದ ಹೋರಾಡಲು ಭಾರತದ ಜನತೆಗೆ ಮನವಿ ಮಾಡಿದರು. 1992ರ, ಜನವರಿ 26ರಂದು ಶ್ರೀ ನಗರದಲ್ಲಿ ದೇಶದ ಅಭಿಮಾನದ ಪತಾಕೆ ತ್ರಿವರ್ಣಧ್ವಜ ಹಾರಾಡುವುದನ್ನು ಕಂಡು ಖುಶಿ ಪಟ್ಟರು. ಇದು ಒಬ್ಬ ನಾಯಕನಲ್ಲಿ ದೇಶವಿರೋಧಿಕೃತ್ಯಗಳ ವಿರುದ್ಧ ಹೋರಾಟದಲ್ಲಿ ನಾವು ಕಾಣಬಹುದಾದ ಯಶಸ್ಸಿನ ಸಂಕೇತ. ಭಾರತ ಮಾತೆಯನ್ನು ದೇಶವಿರೋಧಿ ಶಕ್ತಿಗಳು ಚೆಲ್ಲಾಟವಾಡಲು ಬಿಡಲಾರೆ ಎಂಬ ತಮ್ಮ ಚಿಂತನೆ, ಯೋಚನೆ ಮತ್ತು ಯೋಜನೆ ಮೂಲಕ ಕಾರ್ಯಪ್ರವೃತ್ತರಾಗಿ ಹಾಗೂ ಆನಿಟ್ಟಿನಲ್ಲಿ ಸಫಲತೆ ಕಾಣುವ ಕೌಶಲ್ಯತೆ ಶ್ರೀ ಮೋದಿಯಲ್ಲಿ ದೇಶದ ಜನತೆ ಅರಿತರು.

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Snacks, Laughter And More, PM Modi's Candid Moments With Indian Workers In Kuwait

Media Coverage

Snacks, Laughter And More, PM Modi's Candid Moments With Indian Workers In Kuwait
NM on the go

Nm on the go

Always be the first to hear from the PM. Get the App Now!
...
ಪ್ರಧಾನಿ ಮೋದಿಯವರಿಂದ ಹೃದಯ ಸ್ಪರ್ಶಿ ಪತ್ರ
December 03, 2024

ದಿವ್ಯಾಂಗ್ ಕಲಾವಿದೆ ದಿಯಾ ಗೋಸಾಯಿ ಅವರಿಗೆ, ಸೃಜನಶೀಲತೆಯ ಒಂದು ಕ್ಷಣವು ಜೀವನವನ್ನು ಬದಲಾಯಿಸುವ ಅನುಭವವಾಗಿ ಮಾರ್ಪಟ್ಟಿತು. ಅಕ್ಟೋಬರ್ 29 ರಂದು ಪ್ರಧಾನಿ ಮೋದಿಯವರ ವಡೋದರಾ ರೋಡ್‌ಶೋ ಸಮಯದಲ್ಲಿ, ಅವರು ತಮ್ಮ ರೇಖಾಚಿತ್ರಗಳನ್ನು ಪ್ರಸ್ತುತಪಡಿಸಿದರು ಮತ್ತು ಎಚ್.ಇ. ಶ್ರೀ ಪೆಡ್ರೊ ಸ್ಯಾಂಚೆಜ್, ಸ್ಪೇನ್ ಸರ್ಕಾರದ ಅಧ್ಯಕ್ಷ. ಇಬ್ಬರೂ ನಾಯಕರು ಅವಳ ಹೃತ್ಪೂರ್ವಕ ಉಡುಗೊರೆಯನ್ನು ವೈಯಕ್ತಿಕವಾಗಿ ಸ್ವೀಕರಿಸಲು ಮುಂದಾದರು, ಅವಳನ್ನು ಸಂತೋಷಪಡಿಸಿದರು.

ವಾರಗಳ ನಂತರ, ನವೆಂಬರ್ 6 ರಂದು, ದಿಯಾ ಅವರ ಕಲಾಕೃತಿಯನ್ನು ಶ್ಲಾಘಿಸಿ ಮತ್ತು ಶ್ರೀ ಸ್ಯಾಂಚೆಜ್ ಅದನ್ನು ಮೆಚ್ಚಿದರು. "ವಿಕಸಿತ್ ಭಾರತ್" ನಿರ್ಮಾಣದಲ್ಲಿ ಯುವಕರ ಪಾತ್ರದಲ್ಲಿ ನಂಬಿಕೆಯನ್ನು ವ್ಯಕ್ತಪಡಿಸುವ ಮೂಲಕ ಸಮರ್ಪಣಾ ಭಾವದಿಂದ ಲಲಿತಕಲೆಗಳನ್ನು ಮುಂದುವರಿಸಲು ಪ್ರಧಾನಿ ಮೋದಿ ಅವರನ್ನು ಪ್ರೋತ್ಸಾಹಿಸಿದರು. ಅವರು ತಮ್ಮ ವೈಯಕ್ತಿಕ ಸ್ಪರ್ಶವನ್ನು ಪ್ರದರ್ಶಿಸುವ ಮೂಲಕ ಅವರ ಕುಟುಂಬಕ್ಕೆ ಬೆಚ್ಚಗಿನ ದೀಪಾವಳಿ ಮತ್ತು ಹೊಸ ವರ್ಷದ ಶುಭಾಶಯಗಳನ್ನು ನೀಡಿದರು.

ಸಂತೋಷದಿಂದ ಮುಳುಗಿದ ದಿಯಾ ತನ್ನ ಹೆತ್ತವರಿಗೆ ಪತ್ರವನ್ನು ಓದಿದರು, ಅವರು ಕುಟುಂಬಕ್ಕೆ ಅಪಾರ ಗೌರವವನ್ನು ತಂದರು ಎಂದು ಹರ್ಷ ವ್ಯಕ್ತಪಡಿಸಿದರು. "ನಮ್ಮ ದೇಶದ ಚಿಕ್ಕ ಭಾಗವಾಗಿರುವುದಕ್ಕೆ ನಾನು ಹೆಮ್ಮೆ ಪಡುತ್ತೇನೆ. ಮೋದಿ ಜೀ, ನನಗೆ ನಿಮ್ಮ ಪ್ರೀತಿ ಮತ್ತು ಆಶೀರ್ವಾದ ನೀಡಿದ್ದಕ್ಕಾಗಿ ಧನ್ಯವಾದಗಳು" ಎಂದು ದಿಯಾ ಹೇಳಿದರು, ಪ್ರಧಾನಿಯವರ ಪತ್ರವನ್ನು ಸ್ವೀಕರಿಸುವುದು ಜೀವನದಲ್ಲಿ ದಿಟ್ಟ ಕ್ರಮಗಳನ್ನು ತೆಗೆದುಕೊಳ್ಳಲು ಮತ್ತು ಸಬಲೀಕರಣಗೊಳ್ಳಲು ಆಳವಾಗಿ ಪ್ರೇರೇಪಿಸಿತು. ಇತರರು ಅದೇ ರೀತಿ ಮಾಡಲು.

ದಿವ್ಯಾಂಗರನ್ನು ಸಬಲೀಕರಣಗೊಳಿಸುವ ಮತ್ತು ಅವರ ಕೊಡುಗೆಗಳನ್ನು ಗುರುತಿಸುವ ಅವರ ಬದ್ಧತೆಯನ್ನು ಪಿಎಂ ಮೋದಿಯವರ ಇಂಗಿತ ಪ್ರತಿಬಿಂಬಿಸುತ್ತದೆ. ಸುಗಮ್ಯ ಭಾರತ್ ಅಭಿಯಾನದಂತಹ ಹಲವಾರು ಉಪಕ್ರಮಗಳಿಂದ ದಿಯಾ ಅವರಂತಹ ವೈಯಕ್ತಿಕ ಸಂಪರ್ಕಗಳವರೆಗೆ, ಅವರು ಉಜ್ವಲ ಭವಿಷ್ಯವನ್ನು ರೂಪಿಸುವಲ್ಲಿ ಪ್ರತಿಯೊಂದು ಪ್ರಯತ್ನವೂ ಮುಖ್ಯವೆಂದು ಸಾಬೀತುಪಡಿಸುವ ಮೂಲಕ ಸ್ಫೂರ್ತಿ ಮತ್ತು ಉನ್ನತಿಯನ್ನು ಮುಂದುವರೆಸಿದ್ದಾರೆ.