ಜೋರ್ಡಾನ್ ನ ಹಾಶೆಮೈಟ್ ಕಿಂಗ್ ಡಮ್ ನ ರಾಯಲ್ ಕೋರ್ಟ್ ಮುಖ್ಯಸ್ಥರಾದ ಡಾ. ಫಯೇಜ್ ತಾರಾವ್ ನೆಹ್ ಅವರು ಮಾರ್ಚ್ 10, 2017ರ ಶುಕ್ರವಾರ ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
ಅವರಿಬ್ಬರೂ ದ್ವಿಪಕ್ಷೀಯ ಕಾರ್ಯಕ್ರಮಗಳನ್ನು ಮತ್ತಷ್ಟು ಬಲಪಡಿಸುವ ಕುರಿತಂತೆ ಹಂಚಿಕೆಯ ಬದ್ಧತೆ ಮತ್ತು ಈ ನಿಟ್ಟಿನಲ್ಲಿ ಹಲವು ಅವಕಾಶಗಳ ಬಗ್ಗೆ ಚರ್ಚಿಸಿದರು. ಡಾ. ಫಯೇಜ್ ತಾರಾವ್ ನೆಹ್ ಅವರು ಪಶ್ಚಿಮ ಏಷ್ಯಾದಲ್ಲಿನ ಪರಿಸ್ಥಿತಿ ಮತ್ತು ಸಮಗ್ರ ಅಂತಾರಾಷ್ಟ್ರೀಯ ಸ್ಪಂದನೆ ಅಪೇಕ್ಷಿಸುವ ಭಯೋತ್ಪಾದನೆಯ ಪಿಡುಗು ನಿಗ್ರಹ ಕುರಿತಂತೆ ಪ್ರಧಾನಮಂತ್ರಿಯವರೊಂದಿಗೆ ಅಭಿಪ್ರಾಯ ವಿನಿಮಯ ಮಾಡಿಕೊಂಡರು.
ಡಾ. ಫಯೇಜ್ ತಾರಾವ್ ನೆಹ್ ಅವರು ಘನತೆವೆತ್ತ ದೊರೆ ಅಬ್ದುಲ್ಲಾ II ಇಬ್ನ ಅಲ್ ಹುಸೇನ್ ಅವರ ಶುಭಾಶಯಗಳನ್ನು ಪ್ರಧಾನಮಂತ್ರಿಯವರಿಗೆ ತಿಳಿಸಿದರು.