Time Magazine wrote that if there was one person who could unite the nation and heal its wounds, it was Sardar Patel: PM Modi during #MannKiBaat
Sardar Patel’s Jayanti on October 31st this year will be special, as on this day we will pay him the true homage by dedicating ‘State of Unity’ to the nation: PM Modi #MannKiBaat
Spirit, strength, skill, stamina - these are all critical elements in sports: PM Narendra Modi during #MannKiBaat
Was glad to meet the medal winners of Asian Para Games 2018 held in Jakarta. The players won a staggering 72 medals, thus creating a new record and elevating the pride of India: PM Modi #MannKiBaat
Had the opportunity to meet the winners of Summer Youth Olympics 2018 which were held in Argentina. Our players have performed the best ever in the Youth Olympics 2018: PM during #MannKiBaat
India has a golden history in hockey. In the past, not only India has got gold medals in many competitions but has also won the World Cup once: PM during #MannKiBaat
The way in which Indians are stepping forward to volunteer towards social causes is turning out to be an inspiration for the entire nation and thrusting its people with passion: PM #MannKiBaat
Living in harmony with nature has been involved in the culture of our tribal communities. Our tribal communities worship the trees and flowers as gods and goddesses: PM #MannKiBaat
World War I was a landmark event for India. We had no direct contact with that war. Despite this, our soldiers fought bravely and played a big role and gave supreme sacrifice: PM #MannKiBaat
Development of poorest of the poor is the true symbol of peace: PM Narendra Modi during #MannKiBaat
The charm of the Northeast is something else. The natural beauty of Northeast is unique and people here are very talented: PM during #MannKiBaat

ನನ್ನ ಪ್ರಿಯ ದೇಶವಾಸಿಗಳೇ, ತಮ್ಮೆಲ್ಲರಿಗೂ ನಮಸ್ಕಾರ. ಅಕ್ಟೋಬರ್ 31 ನಮ್ಮೆಲ್ಲರ ಪ್ರಿಯ ಸರ್ದಾರ್ ವಲ್ಲಭ್‍ಭಾಯಿ ಪಟೇಲ್ ಅವರ ಜಯಂತಿ ಮತ್ತು ಪ್ರತಿ ವರ್ಷದಂತೆ ದೇಶದ ಯುವಜನತೆ ‘ರನ್ ಫಾರ್ ಯುನಿಟಿ’ಗಾಗಿ ಓಟಕ್ಕೆ ಒಗ್ಗಟ್ಟಿನಿಂದ ಸಿದ್ಧರಾಗಿದ್ದಾರೆ. ಈಗ ವಾತಾವರಣವೂ ಬಹಳ ಆಹ್ಲಾದಕರವಾಗಿರುತ್ತದೆ. ಇದು ‘ರನ್ ಫಾರ್ ಯುನಿಟಿ’ ಯ ಹುಮ್ಮಸ್ಸನ್ನು ಇನ್ನಷ್ಟು ಹೆಚ್ಚಿಸಲಿದೆ. ನೀವೆಲ್ಲರೂ ಬಹು ದೊಡ್ಡ ಸಂಖ್ಯೆಯಲ್ಲಿ ಏಕತೆಯ ಈ ಓಟದಲ್ಲಿ ‘ರನ್ ಫಾರ್ ಯುನಿಟಿ’ಯಲ್ಲಿ ಭಾಗವಹಿಸಬೇಕು ಎಂಬುದು ನನ್ನ ಆಗ್ರಹ. ಸ್ವಾತಂತ್ರ್ಯಕ್ಕೂ ಸುಮಾರು ಆರೂವರೆ ತಿಂಗಳು ಮೊದಲು 1947 ರ ಜನವರಿ 27 ರಂದು ವಿಶ್ವದ ಪ್ರಸಿದ್ಧ ಅಂತಾರಾಷ್ಟ್ರೀಯ ಪತ್ರಿಕೆ ‘ಟೈಮ್ ಮ್ಯಾಗಜಿನ್’ ತನ್ನ ಆವೃತ್ತಿಯ ಮುಖಪುಟದ ಮೇಲೆ  ಸರ್ದಾರ್ ಪಟೇಲ್ ಅವರ ಭಾವಚಿತ್ರವನ್ನು ಪ್ರಕಟಿಸಿತ್ತು. ತಮ್ಮ ಪ್ರಮುಖ ಸುದ್ದಿಯಲ್ಲಿ ಅವರು ಭಾರತದ ನಕಾಶೆಯನ್ನು ತೋರಿಸಿದ್ದರು ಮತ್ತು ಅದು ಇಂದು ನಾವು ಕಾಣುವ ಭೂಪಟವಾಗಿರಲಿಲ್ಲ. ಅದು ಹಲವಾರು ಭಾಗಗಳಾಗಿ ವಿಭಜಿತಗೊಂಡ ಭಾರತದ ಭೂಪಟವಾಗಿತ್ತು. ಅಂದು 550 ಕ್ಕಿಂತ ಹೆಚ್ಚು ದೇಶೀಯ ಸಂಸ್ಥಾನಗಳಿದ್ದವು. ಭಾರತದ ಬಗ್ಗೆ ಬ್ರಿಟಿಷರಲ್ಲಿ ಆಸಕ್ತಿ ಕಡಿಮೆ ಆಗಿತ್ತು, ಆದರೆ ಅವರು ಈ ದೇಶವನ್ನು ಛಿದ್ರ ಛಿದ್ರಗೊಳಿಸಿಬಿಡಬೇಕು ಎಂದುಕೊಂಡಿದ್ದರು. ವಿಭಜನೆ, ಹಿಂಸೆ, ಆಹಾರದ ಅಭದ್ರತೆ, ಹಣದುಬ್ಬರ ಮತ್ತು ಆಡಳಿತಕ್ಕಾಗಿ ರಾಜಕೀಯದಂತಹ ಅಪಾಯಗಳು ತಲೆ ಎತ್ತಿದ್ದವು ಎಂದು ‘ಟೈಮ್ ಮ್ಯಾಗಜಿನ್’ ವರದಿ ಮಾಡಿತ್ತು. ಮುಂದುವರಿದು ಇದೆಲ್ಲದರ ಮಧ್ಯೆ ದೇಶವನ್ನು ಒಗ್ಗಟ್ಟಿನ ಸೂತ್ರದಲ್ಲಿ ಕಟ್ಟುವಂಥ ಮತ್ತು ಗಾಯಗಳನ್ನು ಮಾಸುವಂತೆ ಮಾಡುವ ಸಾಮರ್ಥ್ಯ ಕೇವಲ ಸರ್ದಾರ್ ವಲ್ಲಭ್‍ಭಾಯಿ ಪಟೇಲ್ ಅವರಲ್ಲಿದೆ ಎಂದು ‘ಟೈಮ್ ಮ್ಯಾಗಜಿನ್’ ನಲ್ಲಿ ಬರೆಯಲಾಗಿತ್ತು. ‘ಟೈಮ್ ಮ್ಯಾಗಜಿನ್’ ನ ಸುದ್ದಿ ಲೋಹ ಪುರುಷನ ಜೀವನದ ಇನ್ನೊಂದು ಮಗ್ಗುಲಿನ ಮೇಲೂ ಬೆಳಕು ಚೆಲ್ಲುತ್ತದೆ.

1920 ರ ದಶಕದಲ್ಲಿ ಅಹ್ಮದಾಬಾದ್ ನಲ್ಲಿ ಎದುರಾದ ಪ್ರವಾಹ ಪರಿಸ್ಥಿಯಲ್ಲಿ ರಕ್ಷಣಾ ಕಾರ್ಯವನ್ನು ಹೇಗೆ ನಿಭಾಯಿಸಿದರು, ಹೇಗೆ ಅವರು ಬಾರ್ಡೊಲಿ ಸತ್ಯಾಗ್ರಹಕ್ಕೆ ರಹದಾರಿಯನ್ನು ತೋರಿದರು ಎಂಬುದನ್ನು ತಿಳಿಸಲಾಗಿತ್ತು. ದೇಶದ ಬಗ್ಗೆ ಅವರ ಪ್ರಾಮಾಣಿಕತೆ ಮತ್ತು  ಬದ್ಧತೆ ಎಂಥದ್ದು ಎಂದರೆ ಕೃಷಿಕರು, ಕಾರ್ಮಿಕರಿಂದ ಹಿಡಿದು ಉದ್ಯಮಿಗಳವರೆಗೆ ಎಲ್ಲರೂ ಅವರ ಮೇಲೆ ಭರವಸೆ ಇಟ್ಟಿದ್ದರು. ರಾಜ್ಯಗಳ ಸಮಸ್ಯೆಗಳು ಎಷ್ಟು ಕ್ಲಿಷ್ಟವಾಗಿವೆಯೆಂದರೆ ಅದಕ್ಕೆ ನೀವೇ ಪರಿಹಾರ ಶೋಧಿಸಬಲ್ಲಿರಿ ಎಂದು ಗಾಂಧೀಜಿ, ಸರ್ದಾರ್ ಪಟೇಲ್‍ರಿಗೆ ಹೇಳಿದರು. ಮತ್ತು ಸರ್ದಾರ್ ಪಟೇಲ್‍ರು ಒಂದೊಂದೇ ಸಮಸ್ಯೆಗಳಿಗೆ ಪರಿಹಾರ ಹುಡುಕಿದರು ಮತ್ತು ದೇಶವನ್ನು ಏಕತೆಯ ಸೂತ್ರದಲ್ಲಿ ಕಟ್ಟುವಂಥ ಅಸಂಭವ ಕೆಲಸವನ್ನು ಸಾಧಿಸಿ ತೋರಿದರು. ಅವರು ಎಲ್ಲ ರಾಜ ಸಂಸ್ಥಾನಗಳನ್ನು ಭಾರತದಲ್ಲಿ ವಿಲೀನಗೊಳಿಸಿದರು. ಅದು ಜುನಾಗಡ್ ಆಗಿರಲಿ ಇಲ್ಲವೆ ಹೈದ್ರಾಬಾದ್, ಟ್ರಾವಂಕೋರ್ (ತಿರುವನಂತಪುರಂ) ಆಗಿರಲಿ ಅಥವಾ ರಾಜಸ್ಥಾನದ ಸಂಸ್ಥಾನವಾಗಿರಲಿ – ಇವೆಲ್ಲವನ್ನೂ ಒಗ್ಗೂಡಿಸಿದ್ದು ಸರ್ದಾರ್ ಪಟೇಲ್ ಅವರೇ, ಅವರ ಬುದ್ಧಿಮತ್ತೆ ಮತ್ತು ರಾಜನೈತಿಕ ಕೌಶಲ್ಯದಿಂದಲೇ ಇಂದು ನಾವು ಒಂದು ಅಖಂಡ ಹಿಂದುಸ್ತಾನವನ್ನು ಕಾಣುತ್ತಿದ್ದೇವೆ. ಏಕತೆಯ ಸೂತ್ರದಲ್ಲಿ ಹೆಣೆದ ಈ ರಾಷ್ಟ್ರವನ್ನು, ಭಾರತ ಮಾತೆಯನ್ನು ನೋಡಿ ಸಹಜವಾಗಿಯೇ ನಾವು ಸರ್ದಾರ್ ವಲ್ಲಭ್‍ಭಾಯಿ ಪಟೇಲ್ ಅವರ ಪುಣ್ಯಸ್ಮರಣೆಯನ್ನು ಮಾಡುತ್ತೇವೆ. ಈ ಅಕ್ಟೋಬರ್ 31 ರಂದು ಸರ್ದಾರ್ ಪಟೇಲ್‍ರ   ಜಯಂತಿ ಇನ್ನಷ್ಟು ವಿಶೇಷವಾಗಿರಲಿದೆ – ಅಂದು ಸ್ಟ್ಯಾಚ್ಯೂ ಆಫ್ ಯುನಿಟಿಯನ್ನು ರಾಷ್ಟ್ರಕ್ಕೆ ಸಮರ್ಪಿಸುವ ಮೂಲಕ ಸರ್ದಾರ್ ಪಟೇಲ್ ಅವರಿಗೆ ನಿಜವಾದ ಅರ್ಥದಲ್ಲಿ ಶೃದ್ಧಾಂಜಲಿ ಸಲ್ಲಿಸಲಿದ್ದೇವೆ. ಗುಜರಾತ್‍ನ ನರ್ಮದಾ ನದಿ ದಡದಲ್ಲಿ ಸ್ಥಾಪಿಸಲಾದ ಈ ಪ್ರತಿಮೆಯ ಎತ್ತರ ಅಮೇರಿಕದ ಸ್ಟ್ಯಾಚ್ಯೂ ಆಫ್ ಲಿಬರ್ಟಿಗಿಂತ 2 ಪಟ್ಟು ಎತ್ತರವಿದೆ. ಇದು ವಿಶ್ವದ ಎಲ್ಲಕ್ಕಿಂತ ಎತ್ತರವಾದ ಗಗನಚುಂಬಿ ಪ್ರತಿಮೆಯಾಗಿದೆ. ವಿಶ್ವದ ಅತಿ ಎತ್ತರವಾದ ಪ್ರತಿಮೆ ಭಾರತದಲ್ಲಿದೆ ಎಂಬುದರ ಕುರಿತು ಪ್ರತಿಯೊಬ್ಬ ಭಾರತೀಯನೂ ಈಗ ಹೆಮ್ಮೆ ಪಡಬಹುದಾಗಿದೆ. ಭೂಮಿ ಪುತ್ರನಾಗಿದ್ದ ಸರ್ದಾರ್ ಪಟೇಲ್ ಅವರು ಇಂದು ಆಕಾಶದ ಶೋಭೆಯನ್ನೂ ಹೆಚ್ಚಿಸಲಿದ್ದಾರೆ. ದೇಶದ ಪ್ರತಿಯೊಬ್ಬ ನಾಗರಿಕನೂ ತಾಯಿ ಭಾರತಿಯ ಈ ಮಹಾನ್ ಕೊಡುಗೆಯನ್ನು ವಿಶ್ವದೆದುರು ಹೆಮ್ಮೆಯಿಂದ ತಲೆ ಎತ್ತಿ ಎದೆಯುಬ್ಬಿಸಿ ಇದರ ಗೌರವದ ಬಗ್ಗೆ ಹಾಡಿ ಹೊಗಳಲಿದ್ದಾರೆ ಮತ್ತು ಪ್ರತಿಯೊಬ್ಬ ಭಾರತೀಯನಿಗೂ  ಸ್ಟ್ಯಾಚ್ಯೂ ಆಫ್ ಯುನಿಟಿ ನೋಡುವ ಆಸೆಯಾಗುವುದು ಸಹಜ ಮತ್ತು ಭಾರತದ ಮೂಲೆ ಮೂಲೆಯಿಂದ ಜನರು ಇದನ್ನೂ ತಮ್ಮ ಪ್ರಿಯ   ಪ್ರವಾಸಿ ತಾಣಗಳಲ್ಲಿ ಒಂದಾಗಿಸಿಕೊಳ್ಳಲಿದ್ದಾರೆ ಎಂಬ ವಿಶ್ವಾಸ ನನಗಿದೆ. 

ನನ್ನ ಪ್ರಿಯ ಸೋದರ ಸೋದರಿಯರೇ, ನೆನ್ನೆಯಷ್ಟೇ ನಾವೆಲ್ಲರೂ ಇನ್‍ಫಂಟ್ರಿ ಡೇ ಆಚರಿಸಿದೆವು. ಭಾರತೀಯ ಸೇನೆಯ ಭಾಗವಾಗಿರುವ ಅವರೆಲ್ಲರಿಗೂ ನಾನು ನಮಿಸುತ್ತೇನೆ. ನಮ್ಮ ಸೈನಿಕರ ಕುಟುಂಬಗಳಿಗೂ ಅವರ ಸಾಹಸಕ್ಕಾಗಿ ಸೆಲ್ಯೂಟ್ ಮಾಡುತ್ತೇನೆ. ಆದರೆ ನಾವೆಲ್ಲ ಭಾರತೀಯರು ಇನ್‍ಫಂಟ್ರಿ ಡೇ ಏಕೆ  ಆಚರಿಸುತ್ತೇವೆ ಎಂಬುದು ನಿಮಗೆ ಗೊತ್ತೇ? ಭಾರತೀಯ ಸೇನೆಯ ವೀರರು ಕಾಶ್ಮೀರದ ಗಡಿಯೊಳಗೆ ನುಸುಳುಕೋರರ ವಿರುದ್ಧ ಹೋರಾಡಿ ಕಣಿವೆಯನ್ನು ರಕ್ಷಿಸಿದ್ದರು. ಈ ಐತಿಹಾಸಿಕ ಘಟನೆಗೂ ಸರ್ದಾರ್ ವಲ್ಲಭ್ ಭಾಯಿ ಪಟೇಲ್ ಅವರೊಂದಿಗೆ ನೇರ ಸಂಬಂಧವಿದೆ. ನಾನು ಭಾರತೀಯ ಸೇನೆಯ ಮಹಾದಂಡನಾಯಕ (ಮಹಾನ್ ಸೈನ್ಯಾಧಿಕಾರಿ) ಸ್ಯಾಮ್ ಮಾನಿಕ್‍ಶಾ ಅವರ ಒಂದು ಹಳೆಯ ಸಂದರ್ಶನ ಓದುತ್ತಿದ್ದೆ. ಆ ಸಂದರ್ಶನದಲ್ಲಿ ಫೀಲ್ಡ್ ಮಾರ್ಷಲ್ ಮಾನಿಕ್ ಶಾ ತಾವು ಕರ್ನಲ್ ಆಗಿದ್ದಾಗಿನ ಸಮಯದ ಬಗ್ಗೆ ಮೆಲುಕು ಹಾಕಿದ್ದರು. ಆ ಸಮಯದಲ್ಲಿ ಅಕ್ಟೋಬರ್ 1947 ರಲ್ಲಿ ಕಾಶ್ಮೀರದಲ್ಲಿ ಸೈನ್ಯ ಅಭಿಯಾನ ಆರಂಭವಾಗಿತ್ತು. ಒಂದು ಮಾತುಕತೆಯ ಸಂದರ್ಭದಲ್ಲಿ ಕಾಶ್ಮೀರಕ್ಕೆ ಸೇನೆಯನ್ನು ಕಳುಹಿಸುವುದರಲ್ಲಿ ವಿಳಂಬವಾಗುತ್ತಿರುವುದರ ಕುರಿತು ಸರ್ದಾರ್   ವಲ್ಲಭ್ ಭಾಯಿ ಪಟೇಲ್ ಹೇಗೆ ಕೋಪೋದ್ರಿಕ್ತರಾಗಿದ್ದರು ಎಂದು ಫೀಲ್ಡ್ ಮಾರ್ಷಲ್ ಮಾನಿಕ್ ಶಾ ವಿವರಿಸುತ್ತಿದ್ದರು. ಸರ್ದಾರ್ ಪಟೇಲ್‍ರು ಮಾತುಕತೆ ಸಂದರ್ಭದಲ್ಲಿ ತಮ್ಮ ವಿಶಿಷ್ಟ ರೀತಿಯ ನೋಟವನ್ನು ಅವರತ್ತ ಹರಿಸಿ ಕಾಶ್ಮೀರಕ್ಕೆ ಸೇನಾ ಅಭಿಯಾನದಲ್ಲಿ ಯಾವುದೇ ರೀತಿಯ ವಿಳಂಬವಾಗಕೂಡದು ಮತ್ತು ಇದಕ್ಕೆ ಆದಷ್ಟು ಬೇಗ ಪರಿಹಾರ ಕಂಡುಹಿಡಿಯಬೇಕು ಎಂದು ಹೇಳಿದ್ದರು. ಅದರ ನಂತರವೇ ಸೇನೆಯ ವೀರರು ಕಾಶ್ಮೀರಕ್ಕೆ ತೆರಳಿದರು ಮತ್ತು ಅವರು ಹೇಗೆ ವಿಜಯ ಸಾಧಿಸಿದರು ಎಂಬುದನ್ನು ನಾವೆಲ್ಲ ಕಂಡಿದ್ದೇವೆ.   ಅಕ್ಟೋಬರ್ 31 ರಂದು ನಮ್ಮ ಅಂದಿನ ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಅವರ ಪುಣ್ಯತಿಥಿಯೂ ಇದೆ. ಇಂದಿರಾಜಿಯವರಿಗೂ ಗೌರವಪೂರ್ಣ ಶೃದ್ಧಾಂಜಲಿ.

ನನ್ನ ಪ್ರಿಯ ದೇಶಬಂಧುಗಳೇ, ಕ್ರೀಡೆ ಯಾರಿಗೆ ತಾನೇ ಇಷ್ಟವಿಲ್ಲ. ಕ್ರೀಡಾರಂಗದಲ್ಲಿ ಉತ್ಸಾಹ, ಶಕ್ತಿ, ಕೌಶಲ್ಯ ಮತ್ತು ಸಾಮರ್ಥ್ಯ  – ಇವೆಲ್ಲ ವಿಷಯಗಳು ಬಹಳ ಮಹತ್ವಪೂರ್ಣವಾಗಿವೆ. ಇವು ಯಾವುದೇ ಕ್ರೀಡಾಳುವಿನ ಸಫಲತೆಯ ಮಾನದಂಡವಾಗಿರುತ್ತವೆ ಮತ್ತು ಈ ನಾಲ್ಕು ಗುಣಗಳೇ ಯಾವುದೇ ರಾಷ್ಟ್ರದ ನಿರ್ಮಾಣಕ್ಕೂ ಸಹ ಮಹತ್ವಪೂರ್ಣವಾಗಿರುತ್ತವೆ. ಯಾವುದೇ ದೇಶದ ಯುವಜನತೆಯಲ್ಲಿ ಇವೆಲ್ಲವೂ ಇದ್ದಲ್ಲಿ ಆ ದೇಶ ಆರ್ಥಿಕವಾಗಿ, ವಿಜ್ಞಾನ, ಮತ್ತು ತಂತ್ರಜ್ಞಾನದಂತಹ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸುವುದು ಮಾತ್ರವಲ್ಲದೆ ಕ್ರೀಡೆಯಲ್ಲೂ ತನ್ನ ಛಾಪನ್ನು ಮೂಡಿಸುತ್ತದೆ. ಇತ್ತೀಚೆಗೆ ನನಗೆ 2 ಮರೆಯಲಾಗದಂತಹ ಭೇಟಿಗಳಾದವು. ಮೊದಲನೆಯದ್ದು ಜಕಾರ್ತಾದಲ್ಲಿ ನಡೆದ ಏಷಿಯನ್ ಪ್ಯಾರಾ ಗೇಮ್ಸ್ 2018 ರ ನಮ್ಮ ಪ್ಯಾರಾ ಅಥ್ಲೀಟ್‍ಗಳನ್ನು ಸಂಧಿಸುವ ಅವಕಾಶ ದೊರೆಯಿತು. ಈ ಕ್ರೀಡೆಗಳಲ್ಲಿ ಭಾರತ ಒಟ್ಟು 72 ಪದಕ ಗೆಲ್ಲುವ ಮೂಲಕ ಹೊಸ ದಾಖಲೆ ಬರೆಯಿತು ಮತ್ತು ದೇಶದ ಗೌರವವನ್ನು ಹೆಚ್ಚಿಸಿತು. ಈ ಎಲ್ಲ ಪ್ರತಿಭಾನ್ವಿತ ಪ್ಯಾರಾ ಅಥ್ಲೀಟ್‍ಗಳೊಂದಿಗೆ ಖುದ್ದಾಗಿ ಭೇಟಿಯಾಗುವ ಸೌಭಾಗ್ಯ ದೊರೆಯಿತು ಮತ್ತು ಅವರನ್ನು ನಾನು ಅಭಿನಂದಿಸಿದೆ. ಅವರ ದೃಢ ಇಚ್ಛಾಶಕ್ತಿ ಮತ್ತು ಪ್ರತಿಯೊಂದು ಸಂಕಷ್ಟಗಳೊಂದಿಗೆ ಹೋರಾಡಿ ಮುಂದುವರಿಯುವ ಅವರ ಛಲ ಎಲ್ಲ ದೇಶವಾಸಿಗಳಿಗೆ ಪ್ರೇರಣಾದಾಯಕವಾಗಿದೆ. ಇದೇ ರೀತಿ ಅರ್ಜೆಂಟೀನಾ ದಲ್ಲಿ ನಡೆದ ಸಮ್ಮರ್ ಯುತ್ ಒಲಿಂಪಿಂಕ್ಸ್ 2018 ರ ವಿಜೇತರನ್ನು ಭೇಟಿಯಾಗುವ ಅವಕಾಶ ದೊರೆಯಿತು. ಯುತ್ ಒಲಿಂಪಿಂಕ್ಸ್ 2018 ರಲ್ಲಿ ನಮ್ಮ ಯುವಜನತೆ ಇಲ್ಲಿವರೆಗಿನ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ ಎಂದು ಕೇಳಿ ನಿಮಗೆ ಸಂತೋಷವಾಗಬಹುದು. ಈ ಕ್ರೀಡೆಗಳಲ್ಲಿ ನಾವು 13 ಪದಕಗಳಲ್ಲದೆ ಮಿಶ್ರ ಆಟೋಟಗಳ ಸ್ಪರ್ಧೆಯಲ್ಲಿ 3 ಪದಕಗಳನ್ನು ಸಹ ಗೆದ್ದಿದ್ದೇವೆ.  ಈ ಬಾರಿ ಏಷ್ಯನ್ ಗೇಮ್ಸ್ ನಲ್ಲೂ ಭಾರತದ ಪ್ರದರ್ಶನ ಉತ್ತಮವಾಗಿತ್ತು ಎಂಬುದು ನಿಮಗೆ ನೆನಪಿರಬಹುದು. ನೋಡಿ, ಈ ಕೆಲವು ನಿಮಿಷಗಳಲ್ಲಿ ನಾನು ಎಷ್ಟೊಂದು ಬಾರಿ ಎಲ್ಲಕ್ಕಿಂತ ಉತ್ತಮ ಮತ್ತು ಎಲ್ಲಕ್ಕಿಂತ ಅದ್ಭುತವಾದ ಶಬ್ದಗಳನ್ನು ಬಳಸಿದ್ದೇನೆ. ಇದು ಇಂದಿನ ಭಾರತೀಯ ಕ್ರೀಡಾ ಜಗತ್ತಿನ ಕಥೆ. ಇದು ದಿನ ಕಳೆದಂತೆ ಉತ್ತುಂಗಕ್ಕೆ ಏರುತ್ತಿದೆ. ಭಾರತ ಕೇವಲ ಕ್ರೀಡೆಯಲ್ಲಿ ಮಾತ್ರವಲ್ಲ ಎಂದಿಗೂ ಊಹಿಸದಂತಹ ಕ್ಷೇತ್ರಗಳಲ್ಲೂ ಸಹ ದಾಖಲೆಗಳನ್ನು ಸೃಷ್ಟಿಸುತ್ತಿದೆ. ಉದಾಹರಣೆಗೆ ಪ್ಯಾರಾ ಅಥ್ಲೀಟ್ ನಾರಾಯಣ್ ಥಾಕೂರ್ ಅವರ ಬಗ್ಗೆ ಹೇಳಬಯಸುತ್ತೇನೆ. ಅವರು 2018 ರ ಏಷ್ಯನ್ ಪ್ಯಾರಾ ಗೇಮ್ಸ್ ನ ಅಥ್ಲೆಟಿಕ್ಸ್ ವಿಭಾಗದಲ್ಲಿ ದೇಶಕ್ಕೆ ಚಿನ್ನದ ಪದಕ ತಂದುಕೊಟ್ಟಿದ್ದಾರೆ. ಅವರು ಜನ್ಮತಃ ದಿವ್ಯಾಂಗರಾಗಿದ್ದಾರೆ. ಅವರು 8 ವರ್ಷದವರಿದ್ದಾಗ ತಮ್ಮ ತಂದೆಯನ್ನು ಕಳೆದುಕೊಂಡರು. ಮುಂದಿನ 8 ವರ್ಷಗಳನ್ನು ಅವರು ಅನಾಥಾಲಯದಲ್ಲಿ ಕಳೆದರು. ಅನಾಥಾಲಯದಿಂದ ಹೊರಬಂದ ಮೇಲೆ ಜೀವನ ನಿರ್ವಹಣೆಗೆ ಡಿಟಿಸಿ ಬಸ್‍ಗಳನ್ನು ಸ್ವಚ್ಛಗೊಳಿಸುವುದು ಮತ್ತು ದೆಹಲಿಯ ರಸ್ತೆ ಬದಿಯ ಧಾಬಾಗಳಲ್ಲಿ  ವೇಟರ್ ಆಗಿ ಕೆಲಸ ಮಾಡಿದ್ದಾರೆ. ಇಂದು ಅದೇ ನಾರಾಯಣ್ ಅವರು ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ದೇಶಕ್ಕಾಗಿ ಚಿನ್ನದ ಪದಕ ಗೆಲ್ಲುತ್ತಿದ್ದಾರೆ. ಇಷ್ಟೇ ಅಲ್ಲದೆ, ಭಾರತದ ಕ್ರೀಡೆಗಳಲ್ಲಿ ಸಾಧಿಸುತ್ತಿರುವ ಅಭಿವೃದ್ಧಿಯ ವ್ಯಾಪ್ತಿಯನ್ನು ಅವಲೋಕಿಸಿ, ಭಾರತ ಜೂಡೋದಲ್ಲಿ ಸಿನಿಯರ್ ಲೆವೆಲ್ ಆಗಿರಲಿ ಜ್ಯೂನಿಯರ್ ಲೆವೆಲ್ ಆಗಿರಲಿ ಎಂದೂ ಪದಕವನ್ನು ಗೆದ್ದಿರಲಿಲ್ಲ್ಲ. ಆದರೆ ತಬಾಬಿ ದೇವಿಯವರು ಯುತ್ ಒಲಿಂಪಿಕ್ಸ್‍ನ ಜೂಡೋದಲ್ಲಿ ಬೆಳ್ಳಿ ಪದಕ ಗೆದ್ದು ಇತಿಹಾಸ ಸೃಷ್ಟಿಸಿದ್ದಾರೆ. 16 ರ ವಯೋಮಾನದ ಯುವ ಕ್ರೀಡಾಳು ತಬಾಬಿ ದೇವಿ ಮಣಿಪುರದ ಒಂದು ಗ್ರಾಮ ನಿವಾಸಿ. ಅವರ ತಂದೆ ಒಬ್ಬ ಕಾರ್ಮಿಕ, ತಾಯಿ ಮೀನು ಮಾರುವ ವೃತ್ತಿಯಲ್ಲಿದ್ದಾರೆ. ಎಷ್ಟೋ ಸಲ ಅವರ ಕುಟುಂಬದಲ್ಲಿ ಆಹಾರ ಖರೀದಿಸಲು ಹಣ ಇಲ್ಲದಂತಹ ಪರಿಸ್ಥಿತಿ ಬಂದೊದಗಿತ್ತು. ಇಂಥ ಪರಿಸ್ಥಿತಿಯಲ್ಲೂ ತಬಾಬಿ ದೇವಿ ಎದೆಗುಂದಲಿಲ್ಲ. ಮತ್ತು ದೇಶಕ್ಕಾಗಿ ಪದಕವನ್ನು ಗೆದ್ದು ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಇಂಥ ಎಷ್ಟೋ ಕಥೆಗಳಿವೆ. ಇಂತಹ ಪ್ರತಿಯೊಬ್ಬರ ಜೀವನ ಪ್ರೇರಣಾದಾಯಕವಾಗಿದೆ. ಪ್ರತಿಯೊಬ್ಬ ಯುವ ಕ್ರೀಡಾಳು, ಅವರ ಹುಮ್ಮಸ್ಸು ನವ ಭಾರತದ ಪ್ರತೀಕವಾಗಿದೆ.    

ನನ್ನ ಪ್ರಿಯ ದೇಶಬಾಂಧವರೇ, ನಾವು 2017 ರಲ್ಲಿ ಫಿಫಾ ಅಂಡರ್ 17 ವಿಶ್ವಕಪ್ ಪಂದ್ಯಾವಳಿಯನ್ನು ಯಶಸ್ವಿಯಾಗಿ ಆಯೋಜಿಸಿದ್ದೆವು ಎಂಬುದು ನಿಮ್ಮೆಲ್ಲರಿಗೂ ನೆನಪಿರಬಹುದು. ಇದು ಅತ್ಯಂತ ಸಫಲ ಪಂದ್ಯಾವಳಿ ಎಂದು ಇಡೀ ವಿಶ್ವವೇ ಹೊಗಳಿತ್ತು.  ಫಿಫಾ 17ರ ವಯೋಮಾನದ ಒಳಗಿನವರ ವಿಶ್ವಕಪ್ ವೀಕ್ಷಕರ ಸಂಖ್ಯೆ ವಿಷಯದಲ್ಲೂ ಒಂದು ಹೊಸ ದಾಖಲೆಯನ್ನು ಮೂಡಿಸಿತ್ತು. ದೇಶದ ವಿವಿಧ ಸ್ಟೆಡಿಯಂಗಳಲ್ಲಿ 12 ಲಕ್ಷಕ್ಕಿಂತ ಹೆಚ್ಚು ಜನರು ಫುಟ್ಬಾಲ್ ಮ್ಯಾಚ್ ಅನ್ನು ಆನಂದಿಸಿದರು. ಮತ್ತು ಯುವ ಕ್ರೀಡಾಳುಗಳನ್ನು ಪ್ರೋತ್ಸಾಹಿಸಿದರು. ಈ ವರ್ಷ ಭಾರತಕ್ಕೆ ಭುವನೇಶ್ವರದಲ್ಲಿ 2018 ರ ಸಾಲಿನ ಪುರುಷರ ಹಾಕಿ ವಿಶ್ವ ಕಪ್ ಆಯೋಜನೆಯ ಸೌಭಾಗ್ಯ ದೊರೆತಿದೆ. ಹಾಕಿ ವಿಶ್ವ ಕಪ್ ನವೆಂಬರ್ 28 ರಿಂದ ಆರಂಭವಾಗಿ ಡಿಸೆಂಬರ್ 16 ರವರೆಗೆ ನಡೆಯಲಿದೆ. ಪ್ರತಿಯೊಬ್ಬ ಭಾರತೀಯ ಯಾವುದೇ ಆಟ ಆಡುತ್ತಿರಲಿ ಅಥವಾ ಯಾವುದೇ ಕ್ರೀಡೆಯಲ್ಲಿ ಅಭಿರುಚಿ ಹೊಂದಿರಲಿ ಹಾಕಿ ಬಗ್ಗೆ ಅವರಿಗೆ ವಿಶೇಷ ಒಲವಿದೆ. ಹಾಕಿಯಲ್ಲಿ ಭಾರತ ಸ್ವರ್ಣಮಯ ಇತಿಹಾಸ ಹೊಂದಿದೆ. ಹಿಂದೆ ಭಾರತಕ್ಕೆ ಹಲವು ಬಾರಿ ಪಂದ್ಯಾವಳಿಗಳಲ್ಲಿ ಚಿನ್ನದ ಪದಕ ದೊರೆತಿದೆ. ಅಲ್ಲದೇ ಒಂದು ಬಾರಿ ವಿಶ್ವಕಪ್ ಕೂಡಾ ಗೆದ್ದಿದೆ. ಹಾಕಿ ಗೆ ಭಾರತ ಹಲವಾರು ಮಹಾನ್ ಆಟಗಾರರನ್ನೂ ನೀಡಿದೆ. ವಿಶ್ವದಲ್ಲಿ ಹಾಕಿ ಬಗ್ಗೆ ಎಂದೇ ಚರ್ಚೆಯಾದರೂ ಈ ಮಹಾನ್ ಕ್ರೀಡಾಳುಗಳ   ಹೊರತು, ಹಾಕಿ ಕಥೆ ಅಪೂರ್ಣವಾಗಿರುತ್ತದೆ. ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ ಚಂದ್ ಅವರ ಬಗ್ಗೆ ವಿಶ್ವವೇ ಅರಿತಿದೆ. ಅವರ ನಂತರ ಬಲ್ವಿಂದರ್ ಸಿಂಗ್ ಸಿನಿಯರ್, ಲೆಸ್ಲಿ ಕ್ಲಾಡಿಯಸ್, ಮೊಹಮ್ಮದ್ ಶಾಹೀದ್, ಉಧಂ ಸಿಂಗ್ ರಿಂದ ಹಿಡಿದು ಧನ್‍ರಾಜ್ ಪಿಳ್ಳೈವರೆಗೂ ಹಾಕಿ ಕ್ರೀಡೆ ಬಹು ದೊಡ್ಡ ಹಾದಿಯನ್ನು ಕ್ರಮಿಸಿದೆ.  ಇಂದಿಗೂ ಟೀಂ ಇಂಡಿಯಾದ ಆಟಗಾರರು ತಮ್ಮ ಶ್ರಮ ಮತ್ತು ಸಮರ್ಪಣಾ ಭಾವದಿಂದಾಗಿ ದೊರೆಯುತ್ತಿರುವ ಯಶಸ್ಸಿನಿಂದ ಹಾಕಿಯ ಹೊಸ ಪೀಳಿಗೆಯನ್ನು ಪ್ರೇರೆಪಿಸುತ್ತಿದ್ದಾರೆ. ಕ್ರೀಡಾ ಪ್ರೇಮಿಗಳಿಗೆ ರೋಮಾಂಚಕ ಆಟವನ್ನು ನೋಡುವ ಒಂದು ಒಳ್ಳೇ ಅವಕಾಶ ಇದಾಗಿದೆ. ಭುವನೇಶ್ವರ್ ಗೆ ತೆರಳಿ ಕೇವಲ ಭಾರತೀಯ ತಂಡಕ್ಕೆ ಉತ್ಸಾಹ ತುಂಬುವುದರ ಜೊತೆಗೆ ಇತರ ತಂಡಗಳನ್ನೂ  ಪ್ರೋತ್ಸಾಹಿಸಿ. ಒಡಿಶಾ ಒಂದು ಗೌರವಪೂರ್ಣ ಇತಿಹಾಸ ಹೊಂದಿದ್ದು ಸಮೃದ್ಧ ಸಾಂಸ್ಕೃತಿಕ ಪರಂಪರೆಯುಳ್ಳ ರಾಜ್ಯವಾಗಿದೆ. ಅಲ್ಲಿಯ ಜನ ಕೂಡಾ ಬಹಳ ಉತ್ಸಾಹಿಗಳು. ಕ್ರೀಡಾ ಪ್ರೇಮಿಗಳಿಗೆ ಇದು ಒಡಿಶಾ ದರ್ಶನ ಪಡೆಯುವ ಒಂದು ಒಳ್ಳೇ ಅವಕಾಶವಾಗಿದೆ. ಈ ಸಮಯದಲ್ಲಿ ಕ್ರೀಡೆಗಳನ್ನು ಆನಂದಿಸುವುದರ ಜೊತೆಗೆ ಕೊನಾರ್ಕ್ ನ ಸೂರ್ಯ ದೇವಾಲಯ, ಪುರಿಯ ಭಗವಾನ್ ಜಗನ್ನಾಥ ಮಂದಿರ ಮತ್ತು ಚಿಲ್ಕಾ ಲೇಕ್ ಸೇರಿದಂತೆ ಅನೇಕ ವಿಶ್ವ ಪ್ರಸಿದ್ಧ ಮತ್ತು ಪವಿತ್ರ ಸ್ಥಳಗಳಿಗೆ ಭೇಟಿ ನೀಡಬಹುದಾಗಿದೆ. ನಾನು ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ ಭಾರತೀಯ ಪುರುಷ ಹಾಕಿ ತಂಡಕ್ಕೆ ಶುಭ ಹಾರೈಸುತ್ತೇನೆ ಮತ್ತು 125 ಕೋಟಿ ಭಾರತೀಯರು ಅವರೊಂದಿಗೆ ಅವರ ಬೆಂಬಲವಾಗಿ ನಿಂತಿದ್ದಾರೆ ಎಂಬ ವಿಶ್ವಾಸವನ್ನು ಮೂಡಿಸುತ್ತೇನೆ. ಮತ್ತು ಭಾರತಕ್ಕೆ ಆಗಮಿಸುವ ವಿಶ್ವದ ಎಲ್ಲ ತಂಡಗಳಿಗೂ ಶುಭ ಹಾರೈಸುತ್ತೇನೆ.

ನನ್ನ ಪ್ರಿಯ ದೇಶವಾಸಿಗಳೇ, ಸಾಮಾಜಿಕ ಕೆಲಸಗಳಿಗೆ ಜನರು ಹೇಗೆ ಮುಂದೆ ಬರುತ್ತಿದ್ದಾರೆ ಮತ್ತು ಸ್ವಯಂ ಸೇವೆಯನ್ನು ಸಲ್ಲಿಸುತ್ತಿದ್ದಾರೆ, ಎಂಬುದು ಇಡೀ ದೇಶದ ಜನತೆಗೆ ಪ್ರೇರಣೆಯನ್ನು ನೀಡುತ್ತಿದೆ ಮತ್ತು ಹುರುಪು ತುಂಬುವಂಥದ್ದಾಗಿದೆ. ಸೇವಾ ಪರಮೋಧರ್ಮ ಎಂಬುದು ಭಾರತೀಯ ಪರಂಪರೆಯಾಗಿದೆ. ನಮ್ಮ ಪರಂಪರೆ ನೂರಾರು ವರ್ಷಗಳಷ್ಟು ಪುರಾತನವಾಗಿದ್ದು ಸಮಾಜದ ಮೂಲೆ ಮೂಲೆಯಲ್ಲಿ, ಪ್ರತಿ ಕ್ಷೇತ್ರದಲ್ಲಿ ಇದರ ಸುಗಂಧವನ್ನು ನಾವು ಇಂದಿಗೂ ಅನುಭವಿಸಬಹುದಾಗಿದೆ. ಆದರೆ ಹೊಸ ಯುಗದಲ್ಲಿ, ಹೊಸ ರೀತಿಯಲ್ಲಿ, ಹೊಸ ಪೀಳಿಗೆ, ಹೊಸ ಹುರುಪು ಉತ್ಸಾಹದಿಂದ, ಹೊಸ ಕನಸುಗಳೊಂದಿಗೆ ಈ ಕೆಲಸಗಳನ್ನು ಮಾಡಲು ಇಂದು ಮುಂದೆ ಬರುತ್ತಿದೆ. ಇತ್ತೀಚೆಗೆ ಒಂದು ಕಾರ್ಯಕ್ರಮಕ್ಕೆ ಹೋಗಿದ್ದೆ, ಅಲ್ಲಿ ಒಂದು ಪೋರ್ಟಲ್ ಚಾಲನೆ ನೀಡಲಾಯಿತು. ಅದರ ಹೆಸರು ‘ಸೆಲ್ಫ್ ಫಾರ್ ಸೊಸೈಟಿ’, ಮೈ ಗೌ ಮತ್ತು ದೇಶದ ಐ.ಟಿ. ಮತ್ತು ಎಲೆಕ್ಟ್ರಾನಿಕ್ಸ್ ಉದ್ಯಮ ಸಾಮಾಜಿಕ ಕೆಲಸಗಳನ್ನು ಮಾಡಲು ತಮ್ಮ ಉದ್ಯೋಗಿಗಳನ್ನು ಪ್ರೊತ್ಸಾಹಿಸಲು ಮತ್ತು ಅವರಿಗೆ ಇಂಥ ಅವಕಾಶಗಳನ್ನು ಒದಗಿಸಲು ಈ ಪೋರ್ಟಲ್ ನ್ನು ಪ್ರಾರಂಭಿಸಲಾಗಿದೆ. ಈ ಕೆಲಸಕ್ಕಾಗಿ ಅವರಲ್ಲಿರುವ ಉತ್ಸಾಹ ಮತ್ತು ಆಸ್ಥೆ ಪ್ರತಿ ಭಾರತೀಯನಿಗೂ ಹೆಮ್ಮೆ ಮೂಡಿಸುವಂಥದ್ದಾಗಿದೆ. ಐಟಿ ಟು ಸೊಸೈಟಿ, ನಾನು ಅಲ್ಲ ನಾವು, ಅಹಂ ಅಲ್ಲ ವಯಮ್, ಸ್ವ ದಿಂದ ಸಮಷ್ಟಿ ಯ ಯಾತ್ರೆಯ ಸುಗಂಧ ಇದರಲ್ಲಿದೆ. ಯಾರೋ ಮಕ್ಕಳಿಗೆ ವಿದ್ಯಭ್ಯಾಸ ಮಾಡಿಸುತ್ತಿದ್ದಾರೆ ಇನ್ನಾರೋ ಹಿರಿಯರಿಗೆ ಓದು ಹೇಳಿಕೊಡುತ್ತಿದ್ದಾರೆ, ಯಾರೋ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ, ಇನ್ನಾರೋ ರೈತರಿಗೆ ಸಹಾಯ ಮಾಡುತ್ತಿದ್ದಾರೆ ಆದರೆ ಇದೆಲ್ಲವನ್ನೂ ಮಾಡುವುದರ ಹಿಂದೆ ಯಾವುದೇ ಲಾಲಸೆಯಿಲ್ಲ. ಬದಲಾಗಿ ಸಮರ್ಪಣೆ ಮತ್ತು ಸಂಕಲ್ಪದ ನಿಸ್ವಾರ್ಥ ಭಾವ ತುಂಬಿದೆ. ಓರ್ವ ಯುವಕ ದಿವ್ಯಾಂಗರ ವೀಲ್ ಚೇರ್ ಬಾಸ್ಕೆಟ್ ಬಾಲ್ ತಂಡಕ್ಕೆ ಸಹಾಯ ಮಾಡಲೆಂದು ಸ್ವತಃ ವೀಲ್ ಚೇರ್ ಬಾಸ್ಕೆಟ್ ಬಾಲ್ ಕಲಿತ. ಈ ಉತ್ಸಾಹ, ಇಂಥ ಸಮರ್ಪಣೆ ಇದೆಲ್ಲ ಅಭಿಯಾನ ರೀತಿಯ ಚಟುವಟಿಕೆಯಾಗಿದೆ. ಪ್ರತಿ ಭಾರತೀಯನಿಗೂ ಇದರ ಬಗ್ಗೆ ಹೆಮ್ಮೆ ಎನ್ನಿಸುವುದಿಲ್ಲವೇ! ಖಂಡಿತ ಅನ್ನಿಸುತ್ತದೆ. ನಾನ ಅಲ್ಲ ನಾವು ಎಂಬ ಭಾವನೆ ನಮ್ಮೆಲ್ಲರಿಗೂ ಪ್ರೇರಣೆ ನೀಡುತ್ತದೆ.

 

ನನ್ನ ಪ್ರೀತಿಯ ಸೋದರ-ಸೋದರಿಯರೆ,

ಈ ಬಾರಿಯ ‘ಮನ್ ಕೀ ಬಾತ್’ಗಾಗಿ ತಮ್ಮ ಸಲಹೆಗಳನ್ನು ಗಮನಿಸುತ್ತಿದ್ದಾಗ ನನಗೆ ಪುದುಚೇರಿಯ ಶ್ರೀ ಮನೀಶ್ ಮಹಾಪಾತ್ರ ಅವರ ಒಂದು ರೋಚಕ ಟಿಪ್ಪಣಿ ದೃಷ್ಟಿಗೆ ಬಿತ್ತು. ಅವರು MyGov.ನಲ್ಲಿ ಬರೆದಿದ್ದರು. “ ದಯಮಾಡಿ, ಭಾರತದ ಬುಡಕಟ್ಟು ಜನಾಂಗ, ಅವರ ಸಂಪ್ರದಾಯ ಮತ್ತು ಪರಂಪರೆಗಳು ಪ್ರಕೃತಿಯ ಜೊತೆಗಿನ ಸಹಬಾಳ್ವೆಗೆ ಯಾವರೀತಿ ಸರ್ವಶ್ರೇಷ್ಠ ಉದಾಹರಣೆಯಾಗಿವೆ ಎಂಬುದರ ಬಗ್ಗೆ ಮನ್ ಕಿ ಬಾತ್ ನಲ್ಲಿ ಮಾತನಾಡಿ” ಎಂದು ಬರೆದಿದ್ದರು. ಸುಸ್ಥಿರ ಅಭಿವೃದ್ಧಿಗೆ ಅವರ ಸಂಪ್ರದಾಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ತಮ್ಮದಾಗಿಸಿಕೊಳ್ಳುವ ಅವಶ್ಯಕತೆಯಿದೆ, ಅವರಿಂದ ಕೆಲವನ್ನು ಕಲಿಯುವ ಅಗತ್ಯವಿದೆ.                                

ಮನೀಶ್ ಜಿ,  – ಈ ವಿಷಯವನ್ನು ಮನದ ಮಾತಿನಲ್ಲಿ ಕೇಳುಗರ ನಡುವೆ ಪ್ರಸ್ತಾವಿಸಲು ಸೂಚಿಸಿದ್ದಕ್ಕೆ ತಮ್ಮನ್ನು ಅಭಿನಂದಿಸುತ್ತೇನೆ. ಇದುಎಂತಹ ವಿಚಾರವೆಂದರೆ, / ಇದು ನಮ್ಮ ಹೆಮ್ಮೆಯ ಪ್ರಾಚೀನತೆಯ ಮತ್ತು ಸಂಸ್ಕೃತಿಯ ಕಡೆಗೆ ದೃಷ್ಟಿ ಹಾಯಿಸಲು ಪ್ರೇರೇಪಿಸುತ್ತದೆ. ಇಂದು ಪ್ರಪಂಚವು ವಿಶೇಷವಾಗಿ ಪಶ್ಚಿಮ ದೇಶಗಳು ಪರಿಸರ-ಸಂರಕ್ಷಣೆಯ ವಿಚಾರವಾಗಿಚರ್ಚೆ ಮಾಡುತ್ತದೆ ಮತ್ತು ಸಂತುಲಿತ ಜೀವನಶೈಲಿಗಾಗಿ ಹೊಸ ಮಾರ್ಗಗಳನ್ನು ಹುಡುಕುತ್ತಿವೆ. ಅದೇ ರೀತಿ ನಮ್ಮ ಭಾರತದೇಶವೂ ಸಹ ಈ ಸಮಸ್ಯೆಯಿಂದ ಹೊರತಾಗಿಲ್ಲ. ಆದರೆ ಇದರ ಪರಿಹಾರಕ್ಕೆ ನಮ್ಮ ಸಮುದಾಯದಲ್ಲಿಯೇ ದೃಷ್ಟಿ ಹಾಯಿಸಬೇಕಿದೆ. ನಮ್ಮ ಸಮೃದ್ಧ ಇತಿಹಾಸ, ಪರಂಪರೆಯನ್ನು ಗಮನಿಸಬೇಕಿದೆ. ಮತ್ತು ವಿಶೇಷವಾಗಿ ನಮ್ಮ ಬುಡಕಟ್ಟು ಸಮುದಾಯಗಳ ಜೀವನಶೈಲಿಯನ್ನು ಅರಿತುಕೊಳ್ಳಬೇಕಿದೆ.

ಪ್ರಕೃತಿಯೊಂದಿಗೆ ಸಾಮರಸ್ಯ ಕಾಯ್ದುಕೊಳ್ಳುವುದು ನಮ್ಮ ಆದಿವಾಸಿ ಸಮುದಾಯಗಳ ಸಂಸ್ಕೃತಿಯಲ್ಲೇ ಬೆಸೆದುಕೊಂಡಿದೆ.ನಮ್ಮ ಆದಿವಾಸಿ ಸೋದರ-ಸೋದರಿಯರು ಗಿಡ-ಮರಗಳ ಮತ್ತು ಪುಷ್ಪಗಳ ಆರಾಧನೆಯನ್ನೂ ದೇವತಾರಾಧನೆಯಂತೆಯೇ ಮಾಡುತ್ತಾರೆ.

•          ಮಧ್ಯಭಾರತದ ಭಿಲ್ ಬುಡಕಟ್ಟಿನಲ್ಲಿ ವಿಶೇಷವಾಗಿ ಮಧ್ಯಪ್ರದೇಶ ಮತ್ತು ಛತ್ತೀಸ್‍ಘಡದ ಜನರು ಅಶ್ವತ್ಥ ವೃಕ್ಷ ಮತ್ತು ಅರ್ಜುನ ವೃಕ್ಷದಂತಹ ಮರಗಳನ್ನು ಶ್ರದ್ಧೆಯಿಂದ ಪೂಜಿಸುತ್ತಾರೆ.

•          ರಾಜಸ್ಥಾನದಂತಹ ಮರುಭೂಮಿ ಪ್ರದೇಶದಲ್ಲೂ ಸಹ ಬಿಷ್ಣೋಈ ಪಂಗಡದವರು [ವೈಷ್ಣವರು] ನಮಗೆ ಪರಿಸರದ ರಕ್ಷಣೆಯ ಪಥವನ್ನೇ ತೋರಿಸಿದ್ದಾರೆ. ವಿಶೇಷವಾಗಿ ವೃಕ್ಷಗಳ ಸಂರಕ್ಷಣೆಯ ಸಂದರ್ಭದಲ್ಲಿ ಪ್ರಾಣವನ್ನಾದರೂ ತ್ಯಾಗಮಾಡಿಯಾರು, ಆದರೆ ಒಂದೇ-ಒಂದು ಮರಕ್ಕೂ ಹಾನಿಯುಂಟಾಗುವುದು ಅವರಿಗೆ ಒಪ್ಪಿಗೆಯಾಗುವ ವಿಷಯವಲ್ಲ.

•          ಅರುಣಾಚಲದ ಮಿಶ್ಮೀ ಜನಾಂಗ ಹುಲಿಗಳೊಡನೆ ತಮಗೆ ಅವಿನಾಭಾವ ಸಂಬಂಧವಿರುವುದನ್ನು ಸಮರ್ಥಿಸಿಕೊಳ್ಳುತ್ತಾರೆ. ವ್ಯಾಘ್ರಗಳನ್ನು ತಮ್ಮ ಸೋದರ-ಸೋದರಿಯರೆಂದು ಭಾವಿಸುತ್ತಾರೆ.

•          ನಾಗಾಲ್ಯಾಂಡ್‍ನಲ್ಲೂ ಸಹ ಹುಲಿಯನ್ನು ‘ವನರಕ್ಷಕ’ನ ರೂಪದಲ್ಲಿ ನೋಡಲಾಗುತ್ತದೆ.

•          ಮಹಾರಾಷ್ಟ್ರದ ವಾರ್ಲಿ ಸಮುದಾಯದಜನ ಹುಲಿಯನ್ನು ಅತಿಥಿಯೆಂದು ಭಾವಿಸುತ್ತಾರೆ. ಅವರಿಗೆ ಹುಲಿಯ ಉಪಸ್ಥಿತಿ ಸಮೃದ್ಧಿಯನ್ನು ತರುವುದಾಗಿದೆ.  

•          ಮಧ್ಯ ಭಾರತದ ಕೋಲ ಸಮುದಾಯದವರಲ್ಲಿ ಒಂದು ನಂಬಿಕೆಯಿದೆ. ಅವರಿಗೆ ಅವರ ಭಾಗ್ಯವೇ ಹುಲಿಯೊಡನೆ ಸಂಬಂಧಿಸಿದೆ. ಒಂದು ವೇಳೆಗೆ ಹುಲಿಗಳಿಗೆ ಒಂದು ಬಾರಿಗೆ ಆಗುವಷ್ಟು ಆಹಾರ [ನೈವೇದ್ಯ] ದೊರಕದಿದ್ದಲ್ಲಿ, ಆ ಗ್ರಾಮದ ಜನತೆಯೂ ಉಪವಾಸ ಇರಬೇಕಾಗುತ್ತದೆ. ಇದು ಅವರ ಶ್ರದ್ಧಾವಂತಿಕೆ.

•          ಮಧ್ಯ ಭಾರತದ ಗೊಂಡ ಬುಡಕಟ್ಟಿನ ಸಮುದಾಯ ಮೀನು ತಳಿ ಸಂವರ್ಧನೆಯ [breeding season ] ಕಾಲದಲ್ಲಿ ಕೇಥನ್ ನದಿಯ ಕೆಲವು ಭಾಗಗಳಲ್ಲಿ ಮೀನುಗಾರಿಕೆಯನ್ನು ನಿಲ್ಲಿಸುತ್ತಾರೆ. ಈ ಪ್ರದೇಶಗಳನ್ನು ಅವರು ಮತ್ಸ್ಯಗಳ ಆಶ್ರಯತಾಣ ಎಂಬುದಾಗಿ ಭಾವಿಸುತ್ತಾರೆ.  ಈ ವಾಡಿಕೆಯ ಅನುಸರಣಯಿಂದಾಗಿ ಅವರಿಗೆ ಸಾಕಷ್ಟು ಪ್ರಮಾಣದಲ್ಲಿ ಮೀನುಗಳು ದೊರಕುತ್ತವೆ. 

•          ಆದಿವಾಸಿ ಸಮುದಾಯ ತಮ್ಮ ಮನೆಗಳನ್ನು ನೈಸರ್ಗಿಕ ವಸ್ತುಗಳಿಂದಲೇ ನಿರ್ಮಿಸಿಕೊಳ್ಳುತ್ತಾರೆ. ಇವು ಗಟ್ಟಿಮುಟ್ಟಾಗಿ ಇರುವುದರ ಜೊತೆಗೆ ಪರಿಸರಕ್ಕೆ ಪೂರಕವೂ ಆಗುತ್ತವೆ.

•          ದಕ್ಷಿಣ ಭಾರತದ ನೀಲಗಿರಿ ಪ್ರಸ್ಥದ ಏಕಾಂತ ಕ್ಷೇತ್ರಗಳಲ್ಲಿ ಚಿಕ್ಕ ಅಲೆಮಾರಿ ‘ತೋಡಾ’ ಸಮುದಾಯದ ತಾಣಗಳಲ್ಲಿ ಸ್ಥಳೀಯವಾಗಿ ದೊರಕುವ ಸಾಮಗ್ರಿಗಳಿಂದಲೇ, ಪರಂಪರಾನುಗತ ರೀತಿಯಲ್ಲೇ ನಿರ್ಮಿತವಾಗಿರುತ್ತವೆ.

 

ನನ್ನ ಪ್ರೀತಿಯ ಸೋದರ-ಸೋದರಿಯರೆ,

 

            ಸತ್ಯ ಸಂಗತಿಯೆಂದರೆ ಆದಿವಾಸಿ ಸಮುದಾಯವು ಬಹಳ ಶಾಂತಿಪೂರ್ಣವಾಗಿ ಮತ್ತು ತಮ್ಮ-ತಮ್ಮಲ್ಲೇ ಬೆರೆತು ಸಹಬಾಳ್ವೆ ನಡೆಸುವುದರಲ್ಲೇ ವಿಶ್ವಾಸವಿರಿಸುತ್ತಾರೆ. ಆದರೆ ಯಾರಾದರೂ ಪ್ರಾಕೃತಿಕ ಸಂಪನ್ಮೂಲಗಳಿಗೆ ಹಾನಿಯುಂಟುಮಾಡುತ್ತಿದ್ದರೆ, ಆಗ ತಮ್ಮ ಅಧಿಕಾರಕ್ಕಾಗಿ ಹೋರಾಡಲೂ ಅಂಜುವುದಿಲ್ಲ. ನಮ್ಮ ಪ್ರಥಮ ಸ್ವತಂತ್ರ ಸೇನಾನಿಗಳಲ್ಲಿ ಆದಿವಾಸಿ ಸಮುದಾಯದ ಜನರೇ ಇದ್ದರು ಎಂಬುದು ಆಶ್ಚರ್ಯಕರ ಸಂಗತಿಯಲ್ಲ. ಆದರಣೀಯ ಬಿರ್ಸಾ ಮುಂಡಾನನ್ನು ಯಾರು ತಾನೇ ಮರೆಯಲು ಸಾಧ್ಯ. ಅರಣ್ಯ ಭೂಮಿಯ ರಕ್ಷಣೆಗಾಗಿ ಬ್ರಿಟಿಷ್ ಆಡಳಿತದ ವಿರುದ್ಧ ಭೀಕರ ಸಂಘರ್ಷಕ್ಕೆ ಇಳಿದಿದ್ದವನು.

 

            ನಾನು ಯಾವ ವಿಚಾರವನ್ನು ಪ್ರಸ್ತಾಪಿಸಿದ್ದೇನೋ ಅದರ ಪಟ್ಟಿ ಸುದೀರ್ಘವಾಗಿಯೇ ಇದೆ. ಪ್ರಕೃತಿಯೊಡನೆ ಸಾಮರಸ್ಯವನ್ನು ಉಳಿಸಿಕೊಳ್ಳುವುದು ಹೇಗೆ? ಎಂಬುದರ ಬಗ್ಗೆ ಆದಿವಾಸಿ ಸಮುದಾಯವು ನಮಗೆ ವಿಷಯಗಳನ್ನು ತಿಳಿಸಿದ ಅನೇಕ ಉದಾಹರಣೆಗಳಿವೆ. ಇಂದು ನಮ್ಮ ಬಳಿ ಏನು   ವನಸಂಪತ್ತು ಉಳಿದಿದೆ, ಅದಕ್ಕೆದೇಶವು ನಮ್ಮ ಆದಿವಾಸಿ ಜನಾಂಗಕ್ಕೆ ಋಣಿಯಾಗಿದೆ. ಬನ್ನಿ. ಅವರ ಬಗ್ಗೆ ನಮ್ಮಆದರವನ್ನು ವ್ಯಕ್ತಪಡಿಸೋಣ.  [ಅವರಿಗೆ ಗೌರವ ಸಲ್ಲಿಸೋಣ]

 

ಪ್ರಿಯದೇಶಬಾಂಧವರೆ,

            ‘ಮನದ ಮಾತಿನಲ್ಲಿ’ ನಾವು ಸಮಾಜಕ್ಕಾಗಿಅಸಾಮಾನ್ಯ ಕೆಲಸ ಮಾಡಿದ ವ್ಯಕ್ತಿ-ಸಂಸ್ಥೆಗಳ ಬಗ್ಗೆ ಮಾತನಾಡುತ್ತೇವೆ. ನೋಡುವುದಕ್ಕೆ ಸಾಧಾರಣ ಎನಿಸುತ್ತದೆ ಆದರೆ ವಾಸ್ತವದಲ್ಲಿ ನಮ್ಮ ಮನಸ್ಥಿತಿಯನ್ನು ಬದಲಿಸಲು, ಸಮಾಜದದೃಷ್ಟಿಕೋನವನ್ನು ಬದಲಿಸಲು ಅದು ಬಹಳ ಆಳವಾದ ಪ್ರಭಾವ ಬೀರುತ್ತದೆ.

            ಕೆಲವು ದಿನಗಳ ಹಿಂದೆ ನಾನು ಪಂಜಾಬ್‍ನ ಕೃಷಿಕ ಸೋದರ ಗುರ್‍ಬಚನ್ ಸಿಂಗ್ ಬಗ್ಗೆ ಓದುತ್ತಿದ್ದೆ. ಓರ್ವ ಸಾಮಾನ್ಯ ಆದರೆ ಪರಿಶ್ರಮೀ ರೈತ ಗುರ್‍ಬಚನ್ ಸಿಂಘ್‍ನ ಮಗನ ಮದುವೆಯಿತ್ತು.ಈ ವಿವಾಹದ ಪೂರ್ವದಲ್ಲಿಗುರ್‍ಬಚನ್ ವಧುವಿನ ಮಾತಾಪಿತರೊಡನೆ‘ಮದುವೆ ಸರಳವಾಗಿ ಮಾಡೋಣ’ಎಂದೇ ಹೇಳಿದ್ದರು. ‘ಇದನ್ನು ಅತ್ಯಂತ ಸರಳ ಸಂದರ್ಭವಾಗೇ ಮಾಡೋಣ. ಮೆರವಣಿಗೆ ಇರಬಹುದು, ಬೇರಾವುದೇ ಸಮಾರಂಭವಿರಲಿ,  ಯಾವುದಕ್ಕೂ ಹೆಚ್ಚು ಖರ್ಚು ಮಾಡುವ ಅವಶ್ಯಕತೆಯಿಲ್ಲ’  ಎಂದು ಹೇಳಿದ್ದರು. ಆದರೆ ಇದ್ದಕ್ಕಿದ್ದಂತೆ ಒಂದು ಶರತ್ತು ಇದೆ ಎಂದರು.

ಇಂದು ಮದುವೆಯ ಸಂದರ್ಭದಲ್ಲಿ ಷರತ್ತಿನ ಮಾತು ಬಂತೆಂದರೆ, ಸಾಮಾನ್ಯವಾಗಿ ಎದುರಿನವರು ಯಾವುದೋ ದೊಡ್ಡದಾದ ಬೇಡಿಕೆಯನ್ನಿಡಬಹುದು ಎಂದೆನಿಸಬಹುದು. ಬಹುಶಃ ವಧುವಿನ ಕಡೆಯವರಿಗೆ ಕಷ್ಟ ತಂದೊಡ್ಡುವ ರೀತಿಯಲ್ಲಿ ಬೃಹತ್ ವಸ್ತುವಿನ ಬೇಡಿಕೆಯನ್ನೇ ಇಡಬಹುದು ಎಂದೇ ಭಾವಿಸುತ್ತೇವೆ.  ಆದರೆ ನಿಮಗೆ ಇದನ್ನು ಕೇಳಿ ಆಶ್ಚರ್ಯವಾಗಬಹುದು. ಸೋದರಗುರ್‍ಬಚನ್ ಸಿಂಘ್ ಅತ್ಯಂತ ಸರಳ ಕೃಷಿಕ. ಅವರು ವಧುವಿನ ತಂದೆಗೆ ಹೇಳಿದ ವಿಷಯ, ವಿಧಿಸಿದ ಷರತ್ತನ್ನು ನಮ್ಮ ಸಮಾಜಕ್ಕೆ ಬಲ, ಪುಷ್ಟಿ ನೀಡುವಂಥದ್ದಾಗಿದೆ. ಗುರ್‍ಬಚನ್ ಸಿಂಘ್ ವಧುವಿನ ತಂದೆಗೆ “ನೀವು ನಿಮ್ಮ ಜಮೀನಿನಲ್ಲಿ ಬೆಳೆಯುವ ಕಳೆ ಸೋಗೆಯನ್ನು ಸುಟ್ಟುಹಾಕುವುದಿಲ್ಲ ಎಂದು ಮಾತುಕೊಡಿ” ಎಂದು ಕೇಳಿದರು. ಈ ಮಾತಿಗೆ ಸಾಮಾಜಿಕವಾಗಿ ಎಂತಹ ಶಕ್ತಿಯಿದೆ ಎಂಬುದನ್ನು ನೀವು ಕಲ್ಪನೆ ಮಾಡಿಕೊಳ್ಳಬಹುದು.

ಗುರ್‍ಬಚನ್ ಸಿಂಘ್‍ರ ಈ ಮಾತು ಬಹಳ ಸಾಧಾರಣ ಎನಿಸಿದರೂ, ಅವರ ವ್ಯಕ್ತಿತ್ವದ ವೈಶಾಲ್ಯತೆಯು ತಿಳಿಯುತ್ತದೆ. ನಮ್ಮ ಸಮಾಜದಲ್ಲಿ ಎಷ್ಟೋ ಪರಿವಾರಗಳು ವೈಯಕ್ತಿಕ ವಿಚಾರಗಳನ್ನು ಸಮಾಜೋಪಯೋಗಿ ಪ್ರಸಂಗಗಳಾಗಿ ಪರಿವರ್ತಿಸಿರುವುದನ್ನು ಕಾಣುತ್ತೇವೆ. ಶ್ರೀಮಾನ್ ಗುರ್‍ಬಚನ್ ಸಿಂಘರ ಪರಿವಾರ ಅಂತಹ ಒಂದು ದೃಷ್ಟಾಂತವನ್ನು [ಆದರ್ಶವನ್ನು] ನಮ್ಮ ಮುಂದಿರಿಸಿದೆ.

ನಾನು ಪಂಜಾಬ್‍ನ ಮತ್ತೊಂದು ಹಳ್ಳಿ ನಾಭಾದ ಹತ್ತಿರ ಇರುವ ಕಲ್ಲರ್ ಮಾಜ್ರಾ ಬಗ್ಗೆ ಓದಿದೆ. ಕಲ್ಲರ್ ಮಾಜ್‍ರಾದ ಜನ ಭತ್ತದ ಸೋಗೆಯನ್ನು ಸುಡುವುದರ ಬದಲು, ಭೂಮಿಯನ್ನು ಉಳುಮೆ ಮಾಡಿ ಮಣ್ಣಿನಲ್ಲೇ ಬೆರೆಸಿಬಿಡುತ್ತಾರೆ. ಅದಕ್ಕಾಗಿ ಯಾವ ತಂತ್ರಜ್ಞಾನವನ್ನು ಬಳಸಬೇಕೋ ಅದನ್ನು ಅವಶ್ಯವಾಗಿ ಬಳಸುತ್ತಾರೆ.

ಸಹೋದರ ಗುರ್‍ಬಚನ್ ಸಿಂಘ್ ಗೆ ಅಭಿನಂದನೆ. ಕಲ್ಲರ್ ಮಾಜ್‍ರಾ ಮತ್ತು ಆ ಕ್ಷೇತ್ರದಲ್ಲಿ ವಾತಾವರಣವನ್ನು ಸ್ವಚ್ಛವಾಗಿಡುವುದಕ್ಕೆ ಯಾರ್ಯಾರು ಒಳ್ಳೇ  ಪ್ರಯತ್ನವನ್ನು ಮಾಡುತ್ತಿದ್ದಾರೋ ಅವರೆಲ್ಲರಿಗೂ ಅಭಿನಂದನೆಗಳು. ತಾವೆಲ್ಲರೂ ಭಾರತದ ಸ್ವಚ್ಛಜೀವನ ಶೈಲಿಯ ಪರಂಪರೆಯ ಉತ್ತರಾಧಿಕಾರಿಯರೂಪದಲ್ಲಿ ಮುಂದೆ ನಡೆಯುತ್ತಿದ್ದೀರಿ.ಯಾವರೀತಿ ಹನಿ-ಹನಿ ನೀರು ಸೇರಿ ಸಾಗರವಾಗುತ್ತದೋ, ಅದೇ ರೀತಿ ಚಿಕ್ಕ-ಚಿಕ್ಕಜಾಗೃತ, ಸಕ್ರಿಯ ಹಾಗೂ ಸಕಾರಾತ್ಮಕ ಚಿಂತನೆಯ ಕಾರ್ಯಗಳು ಯಾವಾಗಲೂ ಸಕಾರಾತ್ಮಕ ವಾತಾವರಣವನ್ನು ನಿರ್ಮಾಣ ಮಾಡುವಲ್ಲಿ ಉನ್ನತ ಪಾತ್ರವನ್ನು ವಹಿಸುತ್ತದೆ.

ನನ್ನ ಪ್ರಿಯ ದೇಶವಾಸಿಗಳೆ, ನಮ್ಮ ಗ್ರಂಥಗಳಲ್ಲಿ ಹೇಳಲಾಗಿದೆ :

 

ಓಂ ದ್ಯೌಃ ಶಾಂತಿಃ | ಅಂತರಿಕ್ಷ ಶಾಂತಿಃ | ಪೃಥಿವೀ ಶಾಂತಿಃ | ಆಪಃ ಶಾಂತಿಃ | 

ಓಷಧಯಃ ಶಾಂತಿಃ | ವನಸ್ಪತಯಃ ಶಾಂತಿಃ | ವಿಶ್ವೇದೇವಾ ಶಾಂತಿಃ |

ಬಹ್ಮ ಶಾಂತಿಃ | ಸರ್ವಮ್ ಶಾಂತಿಃ |        

ಶಾಂತಿರೇವ ಶಾಂತಿಃ | ಸಾ ಮಾ ಶಾಂತಿರೇಧಿ ||    

ಓಂ ಶಾಂತಿಃ,  ಶಾಂತಿಃ ,  ಶಾಂತಿಃ ||         ಅಂದರೆ

 

ಹೇ ಈಶ್ವರ, ಮೂರೂ ಲೋಕಗಳಲ್ಲಿ ಎಲ್ಲೆಡೆಯೂ ಶಾಂತಿ ನೆಲೆಸಲಿ.ನೀರಿನಲ್ಲಿ,ಭೂಮಿಯಲ್ಲಿ, ಆಕಾಶದಲ್ಲಿ, ಅಂತರಿಕ್ಷದಲ್ಲಿ, ಅಗ್ನಿಯಲ್ಲಿ, ಔಷಧಿಗಳಲ್ಲಿ, ಗಾಳಿಯಲ್ಲಿ, ವನಸ್ಪತಿಗಳಲ್ಲಿ, ಉಪವನಗಳಲ್ಲಿ, ಉಪಪ್ರಜ್ಞೆಗಳಲ್ಲಿ, ಸಂಪೂರ್ಣ ಬ್ರಹ್ಮಾಂಡದಲ್ಲಿ ಶಾಂತಿ ಸ್ಥಾಪಿತವಾಗಲಿ.ಜೀವಿಗಳಲ್ಲಿ, ಹೃದಯದಲ್ಲಿ, ನನ್ನಲ್ಲಿ-ನಿನ್ನಲ್ಲಿ, ಜಗತ್ತಿನಕಣ-ಕಣದಲ್ಲಿ, ಎಲ್ಲಕಡೆಯಲ್ಲೂ ಶಾಂತಿ ನೆಲೆಸಲಿ. ಓಂ ಶಾಂತಿಃ,  ಶಾಂತಿಃ ,  ಶಾಂತಿಃ ||

            ಎಲ್ಲೇ ಆಗಲಿ, ಯಾವಾಗಲೇ ಆಗಲಿ ವಿಶ್ವ ಶಾಂತಿಯ ವಿಚಾರ ಬಂದಾಗ ಇದಕ್ಕೆ ಸಂಬಂಧಿಸಿದಂತೆ ಭಾರತದ ಹೆಸರು ಮತ್ತು ಕೊಡುಗೆ ಸ್ವರ್ಣಾಕ್ಷರಗಳಲ್ಲಿ ದಾಖಲಾಗಿರುವುದು ಗೋಚರವಾಗುತ್ತದೆ. ಭಾರತಕ್ಕೆ ಈ ವರ್ಷದ ನವಂಬರ್ ಹನ್ನೊಂದನೇ ತಾರೀಖು ಮಹತ್ವದ ದಿನವಾಗಿದೆ. ಏಕೆಂದರೆ, ನವಂಬರ್ 11ಕ್ಕೆ ನೂರು ವರ್ಷಗಳ ಹಿಂದೆ ಮೊದಲ ಜಾಗತಿಕ ಯುದ್ಧ ಅಂತ್ಯಗೊಂಡಿತ್ತು. ಆ ಯುದ್ಧ ಪರಿಸಮಾಪ್ತಿಯಾಗಿಒಂದು ನೂರು ವರ್ಷಗಳು ಆಗಲಿದೆ. ಅಂದರೆ, ಆ ಸಮಯದಲ್ಲಿ ಆದಂತಹ ಭಾರೀ ವಿನಾಶ ಮತ್ತು ಜೀವಹಾನಿಯ ಅಂತ್ಯಕ್ಕೂ ಒಂದು ನೂರು ವರ್ಷಗಳಾಗಲಿವೆ. ಭಾರತಕ್ಕೆ ಪ್ರಥಮ ಜಾಗತಿಕ ಯುದ್ಧ ಒಂದು ಮಹತ್ವಪೂರ್ಣ ಘಟನೆ. ನಿಜಾರ್ಥದಲ್ಲಿ ಗಮನಿಸಿದರೆ ಆ ಯುದ್ಧದಲ್ಲಿ ನೇರವಾಗಿ ನಮ್ಮ ಪಾತ್ರವೇನೂ ಇರಲಿಲ್ಲ. ಇದರ ಹೊರತಾಗಿಯೂ, ನಮ್ಮ ಸೈನಿಕರು ಶೌರ್ಯದಿಂದ ಹೋರಾಡಿದರು.ಮುಖ್ಯ ಪಾತ್ರ ವಹಿಸಿದರು. ಸರ್ವೋಚ್ಚ ಬಲಿದಾನಗೈದರು. ಯುದ್ಧದ ಸನಿವೇಶ ಎದುರಾದರೆ, ಭಾರತೀಯ ಸೈನಿಕರು ಹಿಂದಡಿ ಇಡುವುದಿಲ್ಲ ಎಂಬುದನ್ನು ವಿಶ್ವಕ್ಕೆ ತೋರಿಸಿಕೊಟ್ಟರು.ನಮ್ಮ ಸೈನಿಕರುದುರ್ಗಮ ಪ್ರದೇಶಗಳಲ್ಲಿ, ವಿಷಮ ಪರಿಸ್ಥಿತಿಗಳಲ್ಲೂ ಸಹ ತಮ್ಮ ಶೌರ್ಯಪ್ರದರ್ಶಿಸಿದ್ದಾರೆ. ಇದೆಲ್ಲದರ ಹಿಂದೆ ಶಾಂತಿಯ ಮರುಸ್ಥಾಪನೆಯ ಏಕೈಕ ಉದ್ದೇಶವಿತ್ತು

            ಪ್ರಥಮ ಜಾಗತಿಕ ಯುದ್ಧದಲ್ಲಿ ಪ್ರಪಂಚವು ವಿನಾಶದ ಭೀಕರತೆಯನ್ನು ಕಂಡಿತು. ಸರಿಸುಮಾರು ಒಂದು ಕೋಟಿ ಸೈನಿಕರು, ಇಷ್ಟೇ ಪ್ರಮಾಣದಲ್ಲಿ ನಾಗರಿಕರೂ ಸಹ ತಮ್ಮ ಪ್ರಾಣ ಕಳೆದುಕೊಂಡರು. ಇದರಿಂದ ಪ್ರಪಂಚವು ಶಾಂತಿಯ ಮಹತ್ವವೇನು ಎಂಬುದನ್ನು ಅರಿತುಕೊಂಡಿತು. ಕಳೆದ ನೂರು ವರ್ಷಗಳಲ್ಲಿ ಶಾಂತಿ ಪದದ ವ್ಯಾಖ್ಯಾನ ಬದಲಾಗಿದೆ. ಇಂದು ಶಾಂತಿ, ಸೌಹಾರ್ದತೆಯ ಅರ್ಥ ಯುದ್ಧ ಆಗದಿರುವುದು ಎಂದಲ್ಲ. ಶಾಂತಿ ಎಂದರೆ ಆತಂಕವಾದವೇ ಮೊದಲ್ಗೊಂಡು, ಜಲ-ವಾಯುವಿನ ಪರಿವರ್ತನೆ, / ಆರ್ಥಿಕ ಪ್ರಗತಿಯಿಂದಾರಂಭಿಸಿ ಸಾಮಾಜಿಕ ನ್ಯಾಯ ಒದಗಿಸುವುದು / ಜಾಗತಿಕ ಸಹಯೋಗ ಮತ್ತು ಸಮನ್ವಯತೆಯೊಂದಿಗೆ ಕೆಲಸ ಮಾಡುವ ಅವಶ್ಯಕತೆಯಿದೆ. ಬಡವರಲ್ಲಿ ಬಡವನ ವಿಕಾಸವನ್ನು ಕಾಣುವುದೇ ಶಾಂತಿಯ ನೈಜ ದ್ಯೋತಕವಾಗಿದೆ.

ನನ್ನ ಪ್ರಿಯ ದೇಶವಾಸಿಗಳೆ,

            ನಮ್ಮ ಭಾರತದ ಈಶಾನ್ಯ ಪ್ರದೇಶದ ಸಂಗತಿಯೇ ವಿಭಿನ್ನ. ಪೂರ್ವೋತ್ತರ ಪ್ರದೇಶದ ಪ್ರಾಕೃತಿಕ ಸೌಂದರ್ಯ ಅನುಪಮವಾದದ್ದು. ಇಲ್ಲಿಯ ಜನರೂ ಸಹ ಅಷ್ಟೇ ಪ್ರತಿಭಾಶಾಲಿಗಳು. ನಮ್ಮ ಈಶಾನ್ಯ ಭಾಗವು ಉತ್ತಮ ಕಾರ್ಯಗಳಿಂದ ಗುರುತಿಸಲ್ಪಡುತ್ತದೆ. ಭಾರತದ ಈಶಾನ್ಯ ಪ್ರದೇಶ ಸಾವಯವ ಕೃಷಿಯಲ್ಲಿ ಬಹಳ ಪ್ರಗತಿಯನ್ನು ಸಾಧಿಸಿದೆ. ಕೆಲವು ದಿನಗಳ ಹಿಂದೆ ಸಿಕ್ಕಿಮ್ ರಾಜ್ಯವು ಸುಸ್ಥಿರ ಆಹಾರ ಪದ್ಧತಿಯನ್ನುಉತ್ತೇಜಿಸುತ್ತಿರುವ ಹಿನ್ನೆಲೆಯಲ್ಲಿ 2018 ರ ಪ್ರತಿಷ್ಠಿತ Future Policy Gold Award  ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಈ ಪ್ರಶಸ್ತಿಯು ಸಂಯುಕ್ತ ರಾಷ್ಟ್ರಗಳ F.A.O. ಅಂದರೆ Food & Agriculture Organisation ಕೊಡಮಾಡುವ ಪುರಸ್ಕಾರವಾಗಿದೆ.

            ನಿಮಗೆ ಮತ್ತೊಂದು ವಿಚಾರವನ್ನು ಕೇಳಿದರೆ ಸಂತಸವಾಗುತ್ತದೆ. ಈ ವಿಭಾಗದಲ್ಲಿ ಉತ್ತಮ ಕಾರ್ಯಸೂಚಿಯ ಅನುಷ್ಠಾನಕ್ಕಾಗಿ ನೀಡುವ ಈ ಪುರಸ್ಕಾರವು, ‘ಆಸ್ಕರ್’ ಪ್ರಶಸ್ತಿಗೆ ಸಮಾನವಾದದ್ದು. ಇಷ್ಟೇ ಅಲ್ಲ ನಮ್ಮ ಸಿಕ್ಕಿಮ್ ಇಪ್ಪತ್ತೈದು ದೇಶಗಳ ನಾಮನಿರ್ದೇಶಿತ ಐವತ್ತೊಂದು ಪಾಲಿಸಿಗಳನ್ನು ಹಿಂದಿಕ್ಕಿ ಈ ಪ್ರಶಸ್ತಿ ತನ್ನದಾಗಿಸಿಕೊಂಡಿದೆ. ಇದಕ್ಕಾಗಿ ನಾನು ಸಿಕ್ಕಿಮ್ ಜನತೆಗೆ ಅನಂತ ಅಭಿನಂದನೆಗಳನ್ನು ತಿಳಿಸುತ್ತೇನೆ.

ಪ್ರಿಯ ದೇಶವಾಸಿಗಳೆ,

            ಅಕ್ಟೋಬರ್ ತಿಂಗಳು ಮುಕ್ತಾಯದ ಹಂತದಲ್ಲಿದೆ. ವಾತಾವರಣದಲ್ಲಿಯೂ ಭಾರೀ ಪರಿವರ್ತನೆಯ ಅನುಭವವಾಗುತ್ತಿದೆ. ಈಗಾಗಲೇ ಥಂಡಿಯ, ಛಳಿಯ ದಿನಗಳು ಆರಂಭವಾಗಿವೆ. ವಾತಾವರಣದ ಪರಿವರ್ತನೆಯ ಜೊತೆ-ಜೊತೆಗೇ ಹಬ್ಬಗಳ ಋತು ಬಂದಿದೆ. ಧನ್‍ತೇರಸ್ [ಧನಲಕ್ಷ್ಮೀಪೂಜೆ] ದೀಪಾವಳಿ, ಭಾಯ್ ದೂಜ್ – ಛಟ್ ಒಂದು ರೀತಿಯಲ್ಲಿ ಹೇಳುವುದಾದರೆ ನವಂಬರ್ ಮಾಸ ಹಬ್ಬಗಳ ಮಾಸವೇ ಆಗಿದೆ. ದೇಶವಾಸಿಗಳೆಲ್ಲರಿಗೆ ಈ ಎಲ್ಲಾ ಹಬ್ಬಗಳಿಗಾಗಿ ಅನೇಕಾನೇಕ ಶುಭಕಾಮನೆಗಳು.

            ನಾನು ತಮ್ಮೆಲ್ಲರಲ್ಲಿ ಒತ್ತಾಯಿಸುತ್ತೇನೆ. ಎಲ್ಲಾ ಪರ್ವಗಳಲ್ಲೂ ನಿಮ್ಮಬಗ್ಗೆ ಕಾಳಜಿಯಿರಲಿ. ನಿಮ್ಮ ಆರೋಗ್ಯದ ಕಡೆಗೂ ಗಮನ ನೀಡಿ, ಸಾಮಾಜಿಕ ಹಿತದ ಕಡೆಗೂ ಲಕ್ಷ್ಯವಿರಲಿ. ಈ ಹಬ್ಬಗಳು ಹೊಸ ನಿರ್ಣಯಗಳನ್ನು ತೆಗೆದುಕೊಳ್ಳುವ ಸಂದರ್ಭವೂ ಆಗಿದೆ. ಈ ಪರ್ವದಿನವು ನಿಮ್ಮ ಜೀವನದಲ್ಲೂ ಸಹ,  ಒಂದು ಅಭಿಯಾನದ ದಿಕ್ಕಿನಲ್ಲಿ  ಸಾಗುವ,ಹೊಸ  ಸಂಕಲ್ಪ ಕೈಗೊಳ್ಳುವ ಅವಕಾಶದ ದಿನವಾಗಲಿ. ನಿಮ್ಮ ಪ್ರಗತಿ ದೇಶದ ಪ್ರಗತಿಯ ಒಂದು ಮುಖ್ಯ ಭಾಗ. ನಿಮ್ಮಪ್ರಗತಿ ಎಷ್ಟು  ಅಧಿಕ ಅಷ್ಟೇ ದೇಶದ ಪ್ರಗತಿಯೂ ಆಗುತ್ತದೆ.

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Snacks, Laughter And More, PM Modi's Candid Moments With Indian Workers In Kuwait

Media Coverage

Snacks, Laughter And More, PM Modi's Candid Moments With Indian Workers In Kuwait
NM on the go

Nm on the go

Always be the first to hear from the PM. Get the App Now!
...
PM to attend Christmas Celebrations hosted by the Catholic Bishops' Conference of India
December 22, 2024
PM to interact with prominent leaders from the Christian community including Cardinals and Bishops
First such instance that a Prime Minister will attend such a programme at the Headquarters of the Catholic Church in India

Prime Minister Shri Narendra Modi will attend the Christmas Celebrations hosted by the Catholic Bishops' Conference of India (CBCI) at the CBCI Centre premises, New Delhi at 6:30 PM on 23rd December.

Prime Minister will interact with key leaders from the Christian community, including Cardinals, Bishops and prominent lay leaders of the Church.

This is the first time a Prime Minister will attend such a programme at the Headquarters of the Catholic Church in India.

Catholic Bishops' Conference of India (CBCI) was established in 1944 and is the body which works closest with all the Catholics across India.