ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘಟನೆ (ಆಸಿಯಾನ್)ನ ಸದಸ್ಯ ರಾಷ್ಟ್ರಗಳ ಸರ್ಕಾರ/ರಾಷ್ಟ್ರದ ಮುಖ್ಯಸ್ಥರಾದ ನಾವು ಮತ್ತು ಭಾರತ ಗಣರಾಜ್ಯ 2018ರ ಜನವರಿ 25ರಂದು ನವ ದೆಹಲಿಯಲ್ಲಿ, ‘ಹಂಚಿಕೆಯ ಮೌಲ್ಯಗಳು, ಸಮಾನ ಗುರಿ’ ಎಂಬ ಧ್ಯೇಯದ ಅಡಿಯಲ್ಲಿ ಆಸಿಯಾನ್ – ಭಾರತ ಸಂವಾದದ ಬಾಂಧವ್ಯದ 25ನೇ ವಾರ್ಷಿಕೋತ್ಸವಕ್ಕಾಗಿ ನೆರೆದಿದ್ದೆವು.”;

ಆಸಿಯಾನ್ – ಭಾರತ ಸಂವಾದದ ಬಾಂಧವ್ಯವನ್ನು ವಿಶ್ವ ಸಂಸ್ಥೆಯ ಚಾರ್ಟರ್ ಮತ್ತು ಆಗ್ನೇಯ ಏಷ್ಯಾ ಸಹಕಾರ ಮತ್ತು  ಅನ್ಯೋನ್ಯತೆಯ ಒಪ್ಪಂದ (ಟಿಎಸಿ), ಪರಸ್ಪರ ಉಪಯುಕ್ತವಾದ ನೀತಿಗಳ ಕುರಿತ ಮತ್ತು ಆಸಿಯಾನ್ ಭಾರತ ಸಂವಾದದ ಬಾಂಧವ್ಯದ 20ನೇ ವಾರ್ಷಿಕೋತ್ಸವದ ಅಂಗವಾಗಿ 2012ರ ಡಿಸೆಂಬರ್ 20ರಂದು ನಡೆದ ಆಸಿಯಾನ್ ಭಾರತ ಸ್ಮರಣಾರ್ಥ ಶೃಂಗಸಭೆಯಲ್ಲಿ ಅಳವಡಿಸಿಕೊಳ್ಳಲಾದ ಮುನ್ನೋಟದ ಹೇಳಿಕೆ ಮತ್ತು ಆಸಿಯಾನ್ ಚಾರ್ಟರ್ ಗೆ ಪೂರಕವಾದ  ಪೂರ್ವ ಏಷ್ಯಾ ಶೃಂಗದ ಘೋಷಣೆ ನಲ್ಲಿ ಉಲ್ಲೇಖಿಸಲಾಗಿರುವ, ನೀತಿ, ಉದ್ದೇಶ, ಹಂಚಿಕೆಯ ಮೌಲ್ಯ ಮತ್ತು ನಿಯಮಗಳ ಮಾರ್ಗದರ್ಶನದ ನಮ್ಮ ಬದ್ಧತೆಯನ್ನು ಪುನರುಚ್ಚರಿಸಿದ್ದೇವೆ; 

 

ಹಲವಾರು ಸಹಸ್ರಮಾನಗಳಿಂದ ಆಗ್ನೇಯ ಏಷ್ಯಾ ಮತ್ತು ಭಾರತ ನಡುವೆ ಇರುವ ಸಾಂಸ್ಕೃತಿಕ ವಿನಿಮಯ ಮತ್ತು ನಾಗರಿಕ ಸಂಪರ್ಕವು ಹೆಚ್ಚುತ್ತಿರುವ ಅಂತರ-ಸಂಪರ್ಕಿತ ವಿಶ್ವದಲ್ಲಿ ಆಸಿಯಾನ್ ಮತ್ತು ಭಾರತ ನಡುವಿನ ಸಹಕಾರಕ್ಕಾಗಿ ಬಲವಾದ ಅಡಿಪಾಯವಾಗಿದೆ;

 

ಕಳೆದ 25 ವರ್ಷಗಳಲ್ಲಿ ಆಸಿಯಾನ್ – ಭಾರತ ಸಂವಾದದ ಬಾಂಧವ್ಯದಲ್ಲಿ ಮೂರು ಆಸಿಯಾನ್ ಸಮುದಾಯ ಸ್ತಂಬಗಳಾದ ರಾಜಕೀಯ ಭದ್ರತೆ, ಆರ್ಥಿಕ ಮತ್ತು ಸಾಮಾಜಿಕ – ಸಾಂಸ್ಕೃತಿಕದಲ್ಲಿ ಮಾಡಿರುವ ಸಾಧನೆಯನ್ನು ಮೆಚ್ಚುಗೆಯೊಂದಿಗೆ ಗುರುತಿಸಲಾಯಿತು;

 

ಶಾಂತಿ, ಪ್ರಗತಿ ಮತ್ತು ಹಂಚಿಕೆಯ ಪ್ರಗತಿ (2016-2020) ಗಾಗಿ ಆಸಿಯಾನ್ ಭಾರತ ಪಾಲುದಾರಿಕೆ ಅನುಷ್ಠಾನಕ್ಕೆ ಕ್ರಿಯಾ ಯೋಜನೆಯ ಅನುಷ್ಠಾನದ ಪ್ರಗತಿಯ ಬಗ್ಗೆ ಮತ್ತು 2016-2018ಗಾಗಿ ಆದ್ಯತೆಯ ಪಟ್ಟಿಯ ಜಾರಿಗೆ ಆಸಿಯಾನ್ – ಭಾರತ ಕ್ರಿಯಾ ಯೋಜನೆಯನ್ನು ಸಂತೃಪ್ತಿಯಿಂದ ಉಲ್ಲೇಖಿಸಲಾಯಿತು;

 

ವಿಕಸಿಸುತ್ತಿರುವ ಪ್ರಾದೇಶಿಕ ವಾಸ್ತುಶೈಲಿಯಲ್ಲಿ ಆಸಿಯಾನ್ ಕೇಂದ್ರೀತತ್ವಕ್ಕೆ ಮತ್ತು ಪ್ರಾದೇಶಿಕ ಶಾಂತಿ, ಭದ್ರತೆ ಮತ್ತು ಸಮೃದ್ಧಿಗೆ ನಿರಂತರ ಬೆಂಬಲ ಮತ್ತು ಆಸಿಯಾನ್ಸಮನ್ವಯತೆಗೆ ಮತ್ತು ಆಸಿಯಾನ್2025 ರ ಅನುಷ್ಠಾನಕ್ಕೆ ಬೆಂಬಲ ನೀಡುವುದೂ ಸೇರಿದಂತೆಆಸಿಯಾನ್ಸಮುದಾಯ ನಿರ್ಮಾಣ ಪ್ರಕ್ರಿಯೆಗೆ ಭಾರತದ ಬೆಂಬಲವನ್ನು ಅಭಿನಂದಿಸಲಾಯಿತು. ಆಸಿಯಾನ್ ಸಂಪರ್ಕ (ಎಂ.ಪಿ.ಎ.ಸಿ)2025, ಮತ್ತು ಆಸಿಯಾನ್ಸಮನ್ವಯತೆ (ಐಎಐ) ಕಾರ್ಯ ಯೋಜನೆ III ನ ಉಪಕ್ರಮಕ್ಕೆ ಅಭಿನಂದಿಸಲಾಯಿತು;

 

ಆಸಿಯಾನ್ – ಭಾರತ ವ್ಯೂಹಾತ್ಮಕ ಪಾಲುದಾರಿಕೆಯನ್ನು ಆಸಿಯಾನ್ – ಭಾರತ ಯುವ ಶೃಂಗ ಆಯೋಜನೆ, ಆಸಿಯಾನ್ – ಭಾರತ ಯುವ ಪ್ರಶಸ್ತಿ ಮತ್ತು ಯುವ ನಾಯಕತ್ವ ಕಾರ್ಯಕ್ರಮ ಮತ್ತು ಆಸಿಯಾನ್ ಭಾರತ ಸಂಗೀತೋತ್ಸವದ ಮೂಲಕ ಯವಜನರ ಬಳಿಗೆ ಮತ್ತು  ನಮ್ಮ ಸಮುದಾಯಗಳ  ಬಳಿಗೆ ತಂದ ಆಸಿಯಾನ್ ಸದಸ್ಯ ರಾಷ್ಟ್ರಗಳಲ್ಲಿ ಮತ್ತು ಭಾರತದಲ್ಲಿ 2017ರಾದ್ಯಂತ ಮತ್ತು 2018ರ ಆರಂಭದಲ್ಲಿ ನಡೆದ ವಿವಿಧ ಸ್ಮರಣಾರ್ಥ ಕಾರ್ಯಕ್ರಮಗಳಿಗೆ ಮೆಚ್ಚುಗೆ ವ್ಯಕ್ತಪಡಿಸಲಾಯಿತು;

 

ಈ ಕೆಳಗಿನವುಗಳಿಗೆ ಈ ಮೂಲಕ ಒಪ್ಪಿಗೆ ಸೂಚಿಸಲಾಯಿತು:

  1. ಶಾಂತಿಯುತ, ಸೌಹಾರ್ದಯುತ, ಕಾಳಜಿಯ ಮತ್ತು ವಲಯದ ಸಮುದಾಯದ ಹಂಚಿಕೆಗಾಗಿ ಸೂಕ್ತ ಸಾಂಸ್ಥಿಕ ಕಾರ್ಯವಿಧಾನಗಳನ್ನು ಮತ್ತಷ್ಟು ಬಲಪಡಿಸುವ ಮೂಲಕ ಮತ್ತು ಸರ್ಕಾರಿ ಸಂಸ್ಥೆಗಳು, ಸಂಸತ್ ಸದಸ್ಯರು, ವಾಣಿಜ್ಯ ವಲಯ, ವಿಜ್ಞಾನಿಗಳು, ಶಿಕ್ಷಣತಜ್ಞರು, ಚಿಂತಕರ ಚಾವಡಿ, ಮಾಧ್ಯಮ, ಯುವಕರು ಮತ್ತು ಇತರ ಬಾಧ್ಯಸ್ಥರ ಜಾಲದ ವಿಸ್ತರಣೆ ಮೂಲಕ,ಪರಸ್ಪರರ ಉಪಯೋಗಕ್ಕಾಗಿ ರಾಜಕೀಯ – ಭದ್ರತೆ, ಆರ್ಥಿಕ, ಸಾಮಾಜಿಕ- ಸಾಂಸ್ಕೃತಿಕ ಮತ್ತು ಅಭಿವೃದ್ಧಿಯ ಸಹಕಾರದಲ್ಲಿನ ಸಂಪೂರ್ಣ ಆಯಾಮವನ್ನು ಮತ್ತಷ್ಟು ಆಳಗೊಳಿಸುವುದು ಮತ್ತು ಬಲಪಡಿಸುವುದು, ಆಸಿಯಾನ್ ಭಾರತ ವ್ಯೂಹಾತ್ಮಕ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವುದು ಮತ್ತು ಆಳಗೊಳಿಸುವುದು.
  2. ಶಾಂತಿ, ಪ್ರಗತಿ ಮತ್ತು ಹಂಚಿಕೆಯ ಸಮೃದ್ಧಿ (2016-2020) ಗಾಗಿ ಆಸಿಯಾನ್-ಭಾರತ ಪಾಲುದಾರಿಕೆಯನ್ನು ಅನುಷ್ಠಾನಗೊಳಿಸುವ ಕ್ರಿಯಾ ಯೋಜನೆಯ ಸಮರ್ಥ ಮತ್ತು ಸಕಾಲಿಕ ಜಾರಿಯ ನಿಟ್ಟಿನಲ್ಲಿ ಪ್ರಯತ್ನ ಮತ್ತು ಸಹಕಾರವನ್ನು ಮುಂದುವರಿಸುವುದು.
  3. ಹಾಲಿ ಇರುವ ಆಸಿಯಾನ್ – ಭಾರತ ಸಂವಾದದ ಪಾಲುದಾರಿಕೆ ಮತ್ತು ಆಸಿಯಾನ್ ನೇತೃತ್ವದ ವ್ಯವಸ್ಥೆಗಳು ಅಂದರೆ ಆಸಿಯಾನ್ – ಭಾರತ ಶೃಂಗ, ಪೂರ್ವ ಏಷ್ಯಾ ಶೃಂಗ (ಇ.ಎ.ಎಸ್.), ಭಾರತದೊಂದಿಗೆ ಸಚಿವರ ಮಟ್ಟದೋತ್ತರ ಸಮಾವೇಶ (ಪಿಎಂಸಿ +1), ಆಸಿಯಾನ್ ಪ್ರಾದೇಶಿಕ ವೇದಿಕೆ (ಎ.ಆರ್.ಎಫ್.), ಆಸಿಯಾನ್ ರಕ್ಷಣಾ ಸಚಿವರುಗಳ ಸಭೆ (ಎ.ಡಿ.ಎಂ.ಎಂ.) ಪ್ಲಸ್, ಮತ್ತು ಇತರ ಆಸಿಯಾನ್ ಭಾರತ ಸಚಿವರುಗಳ/ವಲಯ ಮಟ್ಟದ ವ್ಯವಸ್ಥೆಗಳ ಚೌಕಟ್ಟಿನೊಳಗೆ ಉನ್ನತ ಮಟ್ಟದ ಕಾರ್ಯಕ್ರಮಗಳನ್ನು ಮತ್ತು ಸಹಕಾರವನ್ನು ಮತ್ತಷ್ಟು ಹೆಚ್ಚಿಸುವುದು.
  4. ಆಸಿಯಾನ್ ಮುನ್ನೋಟ 2025ರ ಸಾಕಾರದ ನಿಟ್ಟಿನಲ್ಲಿ ಆಸಿಯಾನ್ ಏಕತೆಗೆ ಮತ್ತು ಆಸಿಯಾನ್ ಸಮುದಾಯ ನಿರ್ಮಾಣ ಪ್ರಕ್ರಿಯೆಗೆ ಬೆಂಬಲ ಮತ್ತು ಕೊಡುಗೆ ಮುಂದುವರಿಸುವುದು.

ರಾಜಕೀಯ ಮತ್ತು ಭದ್ರತೆಯ ಸಹಕಾರ

5.ಭಾರತದೊಂದಿಗೆ ಪಿಎಂಸಿ+1, ಎ.ಆರ್.ಎಫ್., ಇ.ಎ.ಎಸ್., ಎಡಿಎಂಎಂ ಪ್ಲಸ್, ಮತ್ತು ಬಹುರಾಷ್ಟ್ರೀಯ ಅಪರಾಧ ಕುರಿತಂತೆ ಆಸಿಯಾನ್ ಹಿರಿಯ ಅಧಿಕಾರಿಗಳ ಸಭೆ (ಎಸ್.ಓಎಂ.ಟಿ.ಸಿ.)+ ಭಾರತದ ಸಮಾಲೋಚನೆ ಸೇರಿದಂತೆ ಹಾಲಿ ಇರುವ ಆಸಿಯಾನ್ ನೇತೃತ್ವದ ಚೌಕಟ್ಟು ಮತ್ತು ವ್ಯವಸ್ಥೆಯಲ್ಲಿಸಮಾನ ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಸುರಕ್ಷತೆ ಕುರಿತ ಪರಸ್ಪರ ಕಾಳಜಿಯ ವಿಚಾರಗಳಲ್ಲಿ ಮತ್ತು ಮುಕ್ತ, ಪಾರದರ್ಶಕ, ಸಮಗ್ರ ಮತ್ತು ನಿಯಮ ಆಧಾರಿತ ಪ್ರಾದೇಶಿಕ ವಾಸ್ತುವಿನ್ಯಾಸಕ್ಕೆ ಆಪ್ತವಾಗಿ ಮತ್ತು ಒಗ್ಗೂಡಿ ಶ್ರಮಿಸುವ ಬದ್ಧತೆಯ ಪುನರುಚ್ಚಾರ.

6. ಶಾಂತಿ, ಸ್ಥಿರತೆ, ಸಾಗರ ಸುರಕ್ಷತೆ ಮತ್ತು ಭದ್ರತೆ, ಸಾಗರಯಾನದ ಸ್ವಾತಂತ್ರ್ಯ ಮತ್ತು ವಲಯದ ಮೇಲೆ ವಿಮಾನ ಹಾರಾಟ ಮತ್ತು ಸಾಗರದ ಇತರ ಕಾನೂನು ಬದ್ಧ ಬಳಕೆ ಮತ್ತು ತಡೆರಹಿತ ಕಾನೂನುಸಮ್ಮತ ಸಾಗರ ವಾಣಿಜ್ಯಮತ್ತು ಸಾಗರದ ಕುರಿತ ಕಾನೂನುಗಳಿಗೆ ಸಂಬಂಧಿಸಿದಂತೆ 1982 ರ ವಿಶ್ವಸಂಸ್ಥೆಯ ನಿರ್ಣಯ (ಯು.ಎನ್. ಸಿ.ಎಲ್.ಓ.ಎಸ್)  ಮತ್ತು ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ (ಐಸಿಎಓ)ದ ಮತ್ತು ಅಂತಾರಾಷ್ಟ್ರೀಯ ಸಾಗರ ಸಂಸ್ಥೆ (ಐಎಂಓ)ನ ಸಂಬಂಧಿತ ಗುಣಮಟ್ಟ ಮತ್ತು ಶಿಫಾರಸು ಮಾಡಲಾದ ಪದ್ಧತಿಗಳೂ ಸೇರಿದಂತೆ  ಸಾರ್ವತ್ರಿಕವಾಗಿ ಮಾನ್ಯತೆ ಪಡೆದ ಅಂತಾರಾಷ್ಟ್ರೀಯ ಕಾನೂನಿನ ನೀತಿಗಳಿಗೆ ಅನುಗುಣವಾಗಿ ವಿವಾದಗಳ ಶಾಂತಿಯುತ ಇತ್ಯರ್ಥಕ್ಕೆ ಉತ್ತೇಜನ ಮತ್ತು ನಿರ್ವಹಣೆಯ ಮಹತ್ವವನ್ನು ಪುನರುಚ್ಚರಿಸುವುದು. ಈ ನಿಟ್ಟಿನಲ್ಲಿ, ನಾವು ದಕ್ಷಿಣ ಚೀಣಾ ಸಾಗರದಪಕ್ಷಕಾರರ ನಡವಳಿಕೆಯ ಕುರಿತ ಘೋಷಣೆ  (ಡಿಓಸಿ)ಯ ಸಮರ್ಥ ಮತ್ತು ಸಂಪೂರ್ಣ ಅನುಷ್ಠಾನಕ್ಕೆ ಬೆಂಬಲ ನೀಡುತ್ತೇವೆ ಹಾಗೂ ದಕ್ಷಿಣ ಚೀನಾ ಸಾಗರ (ಸಿಓಸಿ)ಯ ನಡೆವಳಿಕೆ ಸಂಹಿತೆ ಕುರಿತಂತೆ ಶೀರ್ಘ ಇತ್ಯರ್ಥಕ್ಕೆ ಎದಿರು ನೋಡುತ್ತೇವೆ.

7. ಸಮಾನ ಸಾಗರ ಸವಾಲುಗಳನ್ನು ಎದುರಿಸಲು ಆಸಿಯಾನ್ ಸಾಗರ ವೇದಿಕೆ (ಇ.ಎ.ಎಂ.ಎಫ್.) ವಿಸ್ತರಣೆಯೂ ಸೇರಿದಂತೆಹಾಲಿ ಇರುವ ಸೂಕ್ತ ವ್ಯವಸ್ಥೆಗಳ ಮೂಲಕ ಸಾಗರ ಸಹಕಾರವನ್ನು ಬಲಪಡಿಸುವುದು.

  1. ಐಸಿಎಓ ಮತ್ತು ಐಎಂಓ ಸೇರಿದಂತೆ ಹಾಲಿ ಪ್ರಕ್ರಿಯೆ ಮತ್ತು ಪದ್ಧತಿಗಳಿಗೆ ಅನುಗುಣವಾಗಿ ಸಾಗರದಲ್ಲಿನ ಅಪಘಾತ ಮತ್ತು ಘಟನೆಗಳನ್ನು ತಡೆಯಲು ಮತ್ತು ನಿರ್ವಹಿಸಲು ಮತ್ತು ಆಸಿಯಾನ್ ಮತ್ತು ಭಾರತದ ನಡುವೆ ಸಾಗರ ಶೋಧ ಮತ್ತು ರಕ್ಷಣೆ ಕಾರ್ಯದಲ್ಲಿ ಒಗ್ಗೂಡಿ ಶ್ರಮಿಸುವುದು. ಜೊತೆಗೆ ಸಾಗರ ವಿಚಾರ ಸಂಸ್ಥೆಗಳ ಸಂಶೋಧನೆ ಮತ್ತು ಕಾರ್ಯಕ್ರಮ ಹೆಚ್ಚಳಕ್ಕೆ ಮತ್ತು ಸಾಗರ ಶಿಕ್ಷಣ, ಸಂಶೋಧನೆ, ಅಭಿವೃದ್ಧಿ ಮತ್ತು ನಾವಿನ್ಯತೆಯನ್ನು ಉತ್ತೇಜಿಸುವುದು.

 

  1. ಹಾಲಿ ಇರುವ ಆಸಿಯಾನ್ ನೇತೃತ್ವದ ವ್ಯವಸ್ಥೆಗಳು ಅಂದರೆ, ಆಸಿಯಾನ್ ಎಸ್.ಓ.ಎಂ.ಟಿ.ಸಿ.+ ಭಾರತ ಸಮಾಲೋಚನೆ ಮತ್ತು ಭಯೋತ್ಪಾದನೆ ನಿಗ್ರಹ ಕುರಿತ ಎಡಿಎಂಎಂ+ ತಜ್ಞರ ಕಾರ್ಯಪಡೆ (ಇಡಬ್ಲ್ಯುಜಿ ಸಿಟಿ) ಮತ್ತು ಚೌಕಟ್ಟುಗಳು ಅಂದರೆ, ಅಂತಾರಾಷ್ಟ್ರೀಯ ಭಯೋತ್ಪಾದನೆ ವಿರುದ್ಧದ ಹೋರಾಟ ಕುರಿತ 2003ರ ಆಸಿಯಾನ್ – ಭಾರತ ಜಂಟಿ ಘೋಷಣೆ, 2015ರ ಹಿಂಸಾತ್ಮಕ ವಿಧ್ವಂಸಕತೆ ನಿಗ್ರಹ ಕುರಿತ ಇ.ಎ.ಎಸ್. ಘೋಷಣೆ ಮತ್ತು ಭಯೋತ್ಪಾದನೆ ಮತ್ತು ಭಯೋತ್ಪಾದನೆಯ ನಿರೂಪಣೆ ಮತ್ತು ಪ್ರಚಾರದ ಸೈದ್ಧಾಂತಿಕ ಸವಾಲುಗಳ ನಿಗ್ರಹಕ್ಕೆ ಇ.ಎ.ಎಸ್. ಹೇಳಿಕೆ ಮತ್ತು 2017ರಲ್ಲಿ ಅಳವಡಿಸಿಕೊಳ್ಳಲಾಗದ ಭಯೋತ್ಪಾದಕರಿಗೆ ಹಣ ಪೂರೈಕೆ ನಿಗ್ರಹ ಹಾಗೂ ಅಕ್ರಮ ಹಣ ವರ್ಗಾವಣೆ ತಡೆ ಕುರಿತ ಇ.ಎ.ಎಸ್. ನಾಯಕರುಗಳ ಘೋಷಣೆ ಮತ್ತು ಬಹುರಾಷ್ಟ್ರೀಯ ಅಪರಾಧ ಮತ್ತು ಭಯೋತ್ಪಾದನೆ ನಿಗ್ರಹಕ್ಕೆ ಎ.ಆರ್.ಎಫ್. ಕ್ರಿಯಾ ಯೋಜನೆ  ಅಡಿಯಲ್ಲಿ ಮಾಹಿತಿಯ ಹಂಚಿಕೆ, ಕಾನೂನು ಅನುಷ್ಠಾನ ಸಹಕಾರ ಮತ್ತು ಸಾಮರ್ಥ್ಯ ವರ್ಧನೆಯ ಮೂಲಕಎಲ್ಲ ಸ್ವರೂಪದಮತ್ತು ಅಭಿವ್ಯಕ್ತಿಯ ಭಯೋತ್ಪಾದನೆ, ಹಿಂಸಾತ್ಮಕ ವಿಧ್ವಂಸಕತೆ ಮತ್ತು  ಮೂಲಭೂತವಾದವನ್ನು ಹತ್ತಿಕ್ಕಲು ಸಹಕಾರ ಆಳಗೊಳಿಸುವುದು. ಇದರ ಜೊತೆಗೆ ಮಾನವ ಕಳ್ಳಸಾಗಣೆ, ವ್ಯಕ್ತಿಗಳಲ್ಲಿ ಕಳ್ಳಸಾಗಣೆ, ಕಾನೂನುಬಾಹಿರ ಮಾದಕವಸ್ತು ಕಳ್ಳಸಾಗಣೆ, ಸೈಬರ್ ಅಪರಾಧ, ಹಡಗುಗಳ ಕಡಲ್ಗಳ್ಳತನ ಮತ್ತು ಸಶಸ್ತ್ರ ದರೋಡೆ ಸೇರಿದಂತೆ ಇತರ ಬಹುರಾಷ್ಟ್ರೀಯ ಅಪರಾಧ ನಿಗ್ರಹಕ್ಕೆ ಸಹಕಾರ ಮತ್ತು ಸಹಯೋಗ ಬಲಪಡಿಸುವುದು.

    10. ಶಾಂತಿ, ಭದ್ರತೆ, ನೆಲದ ಕಾನೂನು ಎತ್ತಿಹಿಡಿಯಲು, ಸುಸ್ಥಿರ ಮತ್ತು ಸಮಗ್ರ ಅಭಿವೃದ್ಧಿ, ಸಮಾನ ಅಭಿವೃದ್ಧಿ ಮತ್ತು ಸಾಮಾಜಿಕ ಸಾಮರಸ್ಯ ಉತ್ತೇಜನಕ್ಕಾಗಿ ಗ್ಲೋಬಲ್ ಮೂವ್ ಮೆಂಟ್  ಆಫ್ ಮಾಡರೇಟ್ಸ್ ಕುರಿತ ಲ್ಯಾಂಗಕ್ವಿ ಘೋಷಣೆಯ ಅನುಷ್ಠಾನಕ್ಕೆ ಬೆಂಬಲ. 

 

  1. ಯಾವುದೇ ಕಾರಣದ ಮೇಲೆ ಯಾವುದೇ ಭಯೋತ್ಪಾದಕ ಕೃತ್ಯಗಳಿಗೆ ಯಾವುದೇ ರೀತಿಯ ಸಮರ್ಥನೆ ಇಲ್ಲ ಎಂಬುದನ್ನು ಒತ್ತಿ ಹೇಳುವ ಮೂಲಕ, ಗಡಿಯಾಚೆ ಭಯೋತ್ಪಾದಕರ ಮತ್ತು ವಿದೇಶೀ ಭಯೋತ್ಪಾದಕ ಹೋರಾಟಗಾರರ ಚಲನವಲನದ ನಿಗ್ರಹ, ಭಯೋತ್ಪಾದಕ ಸಂಸ್ಥೆಗಳಿಂದ ಅಂತರ್ಜಾಲ ಅದರಲ್ಲೂ ಸಾಮಾಜಿಕ ತಾಣಗಳ ದುರ್ಬಳಕೆ ತಡೆ; ಭಯೋತ್ಪಾದಕರಿಗೆ ಹಣ ಪೂರೈಕೆ ಪ್ರಯತ್ನಗಳನ್ನು ನಿಲ್ಲಿಸಲು ಮತ್ತು ಭಯೋತ್ಪಾದಕ ಸಂಘಟನೆಗಳಿಗೆ ಸದಸ್ಯರ ನೇಮಕ ತಡೆಗೆ ಸಹಕಾರ, ಭಯೋತ್ಪಾದಕ ಗುಂಪುಗಳು ಮತ್ತು ಧಾಮಗಳನ್ನು ಗುರಿಯಾಗಿರುವ ಪ್ರಯತ್ನಗಳಿಗೆ ಬೆಂಬಲ; ಮತ್ತು ಭಯೋತ್ಪಾದನೆ ಹಬ್ಬುವಿಕೆಯನ್ನು ನಿಗ್ರಹಿಸಲು ಮತ್ತು ತಡೆಯಲು ಹೆಚ್ಚಿನ ತುರ್ತು ಕ್ರಮ ಕೈಗೊಳ್ಳುವುದೂ ಸೇರಿದಂತೆ ಭಯೋತ್ಪಾದಕರು, ಭಯೋತ್ಪಾದಕ ಗುಂಪುಗಳು ಮತ್ತು ಜಾಲಗಳನ್ನು ಹತ್ತಿಕ್ಕಲು ಮತ್ತು ಎದುರಿಸಲುಆಪ್ತ ಸಹಕಾರದ ಮೂಲಕ ಸಮಗ್ರ ನಿಲುವಿನ ಉತ್ತೇಜನ ಹಾಗೂ ಬದ್ಧತೆಯ ಪುನರುಚ್ಚಾರ.  

    12. ಭಯೋತ್ಪಾದನೆ ನಿಗ್ರಹ ಕುರಿತಂತೆವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸೂಕ್ತ ನಿರ್ಣಯಗಳು ಮತ್ತು ಅಂತಾರಾಷ್ಟ್ರೀಯ ಭಯೋತ್ಪಾದನೆ ಕುರಿತ ಸಮಗ್ರ ಸಮಾವೇಶದ ಮಾತುರಕತೆಯ ಪ್ರಯತ್ನಗಳ ಉಲ್ಲೇಖ(ಸಿಸಿಐಟಿ)ದ ಅನುಸರಣೆಯ ಖಾತ್ರಿಗಾಗಿ ವಿಶ್ವಸಂಸ್ಥೆಯಲ್ಲಿ ಅಂತಾರಾಷ್ಟ್ರೀಯ ಸಮುದಾಯಗಳೊಂದಿಗೆ ಒಗ್ಗೂಡಿ ಶ್ರಮಿಸುವುದು.

 

  1. ಆಸಿಯಾನ್ ಸೈಬರ್ ಭದ್ರತೆ ಸಹಕಾರ ಕಾರ್ಯತಂತ್ರ, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ಐಸಿಟಿಗಳು)ದ ಮತ್ತು ಅದರ ಬಳಕೆಯ ಭದ್ರತೆ ಕುರಿತ ಎ.ಆರ್.ಎಫ್. ಕಾರ್ಯ ಯೋಜನೆ ಮತ್ತು ಐಸಿಟಿಗಳ ಬಳಕೆ ಮತ್ತು ಭದ್ರತೆ ಕುರಿತ ಎ.ಆರ್.ಎಫ್. ಅಂತರ ಅಧಿವೇಶನದ ಸಭೆ ಹಾಗೂ ಇತರ ಆಸಿಯಾನ್ ವಲಯ ಕಾಯಗಳು ಕೈಗೊಂಡಿರುವ ಪ್ರಾದೇಶಿಕ ಸೈಬರ್ ಸಾಮರ್ಥ್ಯ ವರ್ಧನೆ ಕಾರ್ಯದ ಉಪಕ್ರಮ ಮತ್ತು 2015ರಲ್ಲಿ ಆಸಿಯಾನ್ ಭಾರತ ಸೈಬರ್ ಭದ್ರತೆ ಸಮಾವೇಶದಲ್ಲಿ ಚರ್ಚಿಸಲಾದಂತೆ ಮತ್ತು 2018ರಲ್ಲಿ ಉದ್ದೇಶಿಸಲಾಗಿರುವ ಆಸಿಯಾನ್ ಭಾರತ ಪ್ರಥಮ ಸೈಬರ್ ಸಂವಾದಗಳನ್ನು ಮತ್ತಷ್ಟು ಬಲಪಡಿಸುವುದಕ್ಕೆ ಬೆಂಬಲ ನೀಡುವುದು ಸೇರಿದಂತೆ ಸೈಬರ್ ಭದ್ರತೆಯ ಸಾಮರ್ಥ್ಯ ವರ್ಧನೆ ಮತ್ತು ನೀತಿಗಳ ಸಹಯೋಗಕ್ಕೆಆಸಿಯಾನ್ ಮತ್ತು ಭಾರತ ನಡುವಿನ ಸಹಕಾರ ಬಲಪಡಿಸುವುದು.

ಆರ್ಥಿಕ ಸಹಕಾರ

  1. ಆಸಿಯಾನ್ ಭಾರತ ಮುಕ್ತ ವ್ಯಾಪಾರ ಕ್ಷೇತ್ರದ ಸಮರ್ಥ ಅನುಷ್ಠಾನ ಮತ್ತು ಬಳಕೆಯ ಮೂಲಕ ಮತ್ತು ಆಧುನಿಕ, ಸಮಗ್ರ, ಉನ್ನತ ಗುಣಮಟ್ಟದ ಮತ್ತು ಪರಸ್ಪರರಿಗೆ ಉಪಯುಕ್ತವಾದ ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ (ಆರ್.ಸಿ.ಇ.ಪಿ.)ಯನ್ನು ತ್ವರಿತವಾಗಿ ಸಮಾರೋಪಗೊಳಿಸಲು 2018ರಲ್ಲಿ ಪ್ರಯತ್ನಗಳನ್ನು ವೇಗಗೊಳಿಸುವ ಮೂಲಕ ಆಸಿಯಾನ್ ಭಾರತ ಆರ್ಥಿಕ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಲು.
  2. ಅಂತಾರಾಷ್ಟ್ರೀಯ ಕಾನೂನು, ಅದರಲ್ಲೂ ವಿಶ್ವಸಂಸ್ಥೆಯ ಸಾಗರ ಕಾನೂನು ಕುರಿತ ನಿರ್ಣಯ (ಯು.ಎನ್.ಸಿ.ಎಲ್.ಓ.ಎಸ್.) ಅನುಸಾರ ಹಿಂದೂ ಮಹಾಸಾಗರ ಮತ್ತು ಪೆಸಿಫಿಕ್ ಸಾಗರಗಳ ಸಾಗರ ಸಂಪನ್ಮೂಲದ ಸುಸ್ಥಿರ ಬಳಕೆ ಮತ್ತು ಸಂರಕ್ಷಣೆಗಾಗಿ ಮತ್ತು ಅಕ್ರಮ, ವರದಿಯಾಗದ ಮತ್ತು ಅನಿಯಂತ್ರಿತ ಮೀನುಗಾರಿಕೆ, ಕರಾವಳಿಯ ಪರಿಸರ ವ್ಯವಸ್ಥೆಗೆ ಆಗುವ ನಷ್ಟ ಮತ್ತು ಮಾಲಿನ್ಯ, ಸಾಗರ ಆಮ್ಲೀಕರಣ, ಸಾಗರ ತ್ಯಾಜ್ಯ ಮತ್ತುಸಮುದ್ರದ ಪರಿಸರದ ಮೇಲೆ ಆಕ್ರಮಣಕಾರಿ ವರ್ಗಗಳ ಪ್ರತೀಕೂಲ ಪರಿಣಾಮ ಸೇರಿದಂತೆ ಈ ಸಂಪನ್ಮೂಲಗಳಿಗೆ ಎದುರಾಗಿರುವ ಅಪಾಯವನ್ನು ಎದುರಿಸಲು ಸಹಕಾರ. ಈ ನಿಟ್ಟಿನಲ್ಲಿ, ಭಾರತದ ಸಂಭಾವ್ಯ ಸಹಕಾರ ಚೌಕಟ್ಟಿನ ಪ್ರಸ್ತಾವನೆಯ ಉಲ್ಲೇಖ ಮತ್ತು ನೀಲಿ ಆರ್ಥಿಕತೆಯ ಕ್ಷೇತ್ರದಲ್ಲಿನ ಸಹಕಾರವನ್ನು ಅನ್ವೇಷಿಸಲು.
  3. ಆಸಿಯಾನ್ ಭಾರತಕಾರ್ಯಗುಂಪಿನ ಪ್ರಾದೇಶಿಕ ವಾಯು ಸೇವೆಗಳ ವ್ಯವಸ್ಥೆ ಮತ್ತು ಆಸಿಯಾನ್ ಮತ್ತು ಭಾರತ ನಡುವಿನ ತಾಂತ್ರಿಕ, ಆರ್ಥಿಕ, ಮತ್ತು ನಿಯಂತ್ರಕ ವಿಷಯಗಳ ಮೇಲೆ ವಾಯು ಸಾರಿಗೆ ಸಹಕಾರ ಸ್ಥಾಪನೆ ಮಾಡುವ ವಾಯು ಸೇವೆಗಳ ಸಮಾಲೋಚನೆಗಳ ಸಮಾವೇಶವೂ ಸೇರಿದಂತೆಮನಿಲಾದಲ್ಲಿ 2008ರ ನವೆಂಬರ್ 6ರಂದು ನಡೆದ 14ನೇ ಆಸಿಯಾನ್ ಸಾರಿಗೆ ಸಚಿವರ ಸಭೆಯಲ್ಲಿ ಅಳವಡಿಸಿಕೊಂಡ ಆಸಿಯಾನ್ – ಭಾರತ ವಾಯುಯಾನ ಸಹಕಾರ ಚೌಕಟ್ಟಿನ ಅಡಿಯಲ್ಲಿ ವಾಯುಯಾನ ಕ್ಷೇತ್ರದಲ್ಲಿ ಸಹಕಾರ ಆಳಗೊಳಿಸಲು. ಪ್ರವಾಸೋದ್ಯಮ, ವಾಣಿಜ್ಯ ಮತ್ತು ಆಸಿಯಾನ್ ಭಾರತ ನಡುವೆ ಹೆಚ್ಚಿನ ಸಂಪರ್ಕಕ್ಕಾಗಿ ಆಪ್ತವಾದ ಆಸಿಯಾನ್ ಭಾರತ ವಾಯು ಸಂಪರ್ಕ ಸ್ಥಾಪನೆ ಮಾಡಲು.
  4. ಭಾರತ ಮತ್ತು ಆಸಿಯಾನ್ ನಡುವೆ ಸಾಗರ ಸಾರಿಗೆ ಸಹಕಾರ ಉತ್ತೇಜಿಸಲು ಮತ್ತು ಸಾಗರ ಬಂದರುಗಳ, ಸಾಗರ ಸಾರಿಗೆ ಜಾಲ ಮತ್ತು ಹೆಚ್ಚಿನ ಸಮರ್ಥ ಸಂಪರ್ಕ ಸೃಷ್ಟಿಸುವ ನಿಟ್ಟಿನಲ್ಲಿ ಸಾಗರ ಸೇವೆಯ ಅಭಿವೃದ್ಧಿಗೆ ಸಮರ್ಥ ಖಾಸಗಿ ವಲಯದ ಪಾಲುದಾರಿಕೆಯನ್ನು ಪ್ರೋತ್ಸಾಹಿಸಲು;ಮತ್ತು ಈ ಆದ್ಯತೆಯ ವಲಯದಲ್ಲಿ ಭಾರತ ಮತ್ತು ಆಸಿಯಾನ್ ಮಾತುಕತೆ ಮುಂದುವರಿಸಲು.
  5. ವಾಯುಯಾನ ಮತ್ತು ಸಾಗರ ಸಾರಿಗೆ ಕ್ಷೇತ್ರದ ಸಹಕಾರ ವರ್ಧನೆಗಾಗಿ ಮತ್ತು ಆಸಿಯಾನ್ – ಭಾರತ ವಾಯು ಸಾರಿಗೆ ಒಪ್ಪಂದ (ಎ.ಐ-ಎಟಿಎ) ಮತ್ತು ಆಸಿಯಾನ್ – ಭಾರತ ಸಾಗರ ಸಾರಿಗೆ ಒಪ್ಪಂದ (ಎ.ಐ.-ಎಂ.ಟಿ.ಎ)ಯ ತ್ವರಿತ ಆಖೈರಿಗಾಗಿ.

19.ಅನುಕ್ರಮವಾಗಿ ಆಸಿಯಾನ್ ಸಂಪರ್ಕ 2025 ಮತ್ತು ಆಸಿಯಾನ್ ಐಸಿಟಿ ಮಾಸ್ಟರ್ ಪ್ಲಾನ್ 2020ರ ಸಹಕಾರ್ಯದೊಂದಿಗೆ ಐಸಿಟಿ ನೀತಿಗಳನ್ನು ಹೆಚ್ಚಿಸಲು, ಸಾಮರ್ಥ್ಯ ವರ್ಧಿಸಲು, ಡಿಜಿಟಲ್ ಸಂಪರ್ಕ, ಮೂಲಸೌಕರ್ಯ ಮತ್ತು ಸೇವೆಗಳನ್ನು ಸುಧಾರಿಸಲು, ಆಸಿಯಾನ್ ನ ಕೆಲವು ಸದಸ್ಯ ರಾಷ್ಟ್ರಗಳಲ್ಲಿ ತಂತ್ರಾಂಶ ಅಭಿವೃದ್ಧಿ ಮತ್ತು ತರಬೇತಿಯಲ್ಲಿ ಉತ್ಕೃಷ್ಟತಾ ಕೇಂದ್ರ (ಸಿ.ಇ.ಎಸ್.ಡಿ.ಟಿ.)ಗಳನ್ನು ಸ್ಥಾಪಿಸುವ ಮೂಲಕ ಐಸಿಟಿ ಮಾನವ ಸಂಪನ್ಮೂಲವನ್ನು ರೂಪಿಸಲು, ಐಸಿಟಿ ನವೋದ್ಯಮಗಳನ್ನು ಉತ್ತೇಜಿಸಲು, ಅಳವಡಿಕೆಗೆ ಹೊರಹೊಮ್ಮುವ ತಂತ್ರಜ್ಞಾನಗಳನ್ನು ಅನ್ವೇಷಿಸಲು; 

  1. ತಂತ್ರಜ್ಞಾನ ವರ್ಗಾವಣೆ, ಪ್ರಸರಣ, ಅಳವಡಿಕೆ ಮತ್ತು ರೂಪಾಂತರ ಹಾಗೂ ಹೆಚ್ಚಿನ ಸಾಮರ್ಥ್ಯ ವರ್ಧನೆ, ತಾಂತ್ರಿಕ ನೆರವು, ವಿತರಣಾ ವಾಹಿನಿಗಳು, ಹಣಕಾಸು ಸೌಲಭ್ಯ, ನಾವಿನ್ಯತೆಯ ಪ್ರವೇಶ, ಜಾಗತಿಕ ಮತ್ತು ಪ್ರಾದೇಶಿಕ ಮೌಲ್ಯ ಸರಣಿಯೊಂದಿಗೆ ಸೇರಿಸುವ ಅವಕಾಶ ಹಾಗೂ ಸೂಕ್ತವಾದಲ್ಲಿ ಯೋಜನಾ ಅಭಿವೃದ್ಧಿ ನಿಧಿ ಹಾಗೂ ತ್ವರಿತ ಪರಿಣಾಮದ ಯೋಜನಾ ನಿಧಿ ಬಳಕೆಯ ಮೂಲಕವೂ ಸೇರಿದಂತೆ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆ (ಎಂ.ಎಸ್.ಎಂ.ಇ.ಗಳು)ಗಳಲ್ಲಿ ಸ್ಥಿರ ಮತ್ತು ಸುಸ್ಥಿರ ಪ್ರಗತಿಯನ್ನು ಮತ್ತಷ್ಟು ಉತ್ತೇಜಿಸಲು.

21.ಕೃಷಿ ಮತ್ತು ಇಂಧನ ಕ್ಷೇತ್ರಗಳಲ್ಲಿ ಸಹಕಾರವನ್ನು ಬಲಪಡಿಸುವ ಮೂಲಕ ನಮ್ಮ ವಲಯದಲ್ಲಿ ದೀರ್ಘಕಾಲೀನ ಆಹಾರ ಮತ್ತು ಶಕ್ತಿಯ ಭದ್ರತೆಯನ್ನು ಖಾತ್ರಿಪಡಿಸಿಕೊಳ್ಳಲು ಸಹಕಾರವನ್ನು ಮುಂದುವರಿಕೆ ಹೆಚ್ಚಿಸಲು; ಎಲ್ಲಿ ಅನ್ವಯಿಸುತ್ತದೆಯೋ ಅಲ್ಲಿ ಅಂತಾರಾಷ್ಟ್ರೀಯ ಸೌರ ಸಹಯೋಗ (ಐಎಸ್.ಎ) ಸೇರಿದಂತೆ ಅಂತಾರಾಷ್ಟ್ರೀಯ ವೇದಿಕೆಗಳ ಮೂಲಕ ನವೀಕರಿಸಬಹುದಾದ ಇಂಧನ ತಂತ್ರಜ್ಞಾನ ಅಭಿವೃದ್ಧಿ ಉತ್ತೇಜಿಸಲು.

  1. ನ್ಯಾನೋ ತಂತ್ರಜ್ಞಾನ, ಮೆಟೀರಿಯಲ್ ಸೈನ್ಸ್ ಮತ್ತು ಜೈವಿಕ ತಂತ್ರಜ್ಞಾನ ಮತ್ತು ಎಸ್ ಮತ್ತು ಟಿಯಲ್ಲಿ ಸಾಮರ್ಥ್ಯ ವರ್ಧನೆ ಸೇರಿದಂತೆ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ನಾವಿನ್ಯತೆ ಕುರಿತ ಆಸಿಯಾನ್ ಕ್ರಿಯಾ ಯೋಜನೆ (ಎಪಿ.ಎ.ಎಸ್.ಟಿ.ಐ) 2016-2025ರಲ್ಲಿ ಸಂಪರ್ಕಿತವಾದ ಕ್ಷೇತ್ರಗಳಾದ ಆಸಿಯಾನ್ ಭಾರತ ನಾವಿನ್ಯ ವೇದಿಕೆ, ಆಸಿಯಾನ್ ಭಾರತ ಸಂಶೋಧನೆ ಮತ್ತು ತರಬೇತಿ ಶಿಷ್ಯವೇತನ ಯೋಜನೆ, ಮತ್ತು ಆಸಿಯಾನ್ ಭಾರತ ಸಹಯೋಗದ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಕ್ರಮದ ಮೂಲಕ ವಿಜ್ಞಾನ ಮತ್ತು ತಂತ್ರಜ್ಞಾನ (ಎಸ್ ಅಂಡ್ ಟಿ)ದಲ್ಲಿ ವಲಯದ ಬಾಂಧವ್ಯವನ್ನು ಆಳಗೊಳಿಸುವುದನ್ನು ಹೆಚ್ಚಿಸಲು.
  2. ಉಪಗ್ರಹಗಳ ಉಡಾವಣೆ, ಟೆಲಿಮೆಟ್ರಿ ಟ್ರಾಕಿಂಗ್ ಮತ್ತು ನಿಯಂತ್ರಣ ಕೇಂದ್ರಗಳ ಮೂಲಕ ಅವುಗಳ ನಿಗಾ ಮತ್ತು ಭೂ, ಸಮುದ್ರ, ವಾತಾವರಣ ಮತ್ತು ವಲಯದ ಸಮಾನ ಅಭಿವೃದ್ಧಿಗಾಗಿ ಡಿಜಿಟಲ್ ಸಂಪನ್ಮೂಲದ, ಹೊರಹೊಮ್ಮುತ್ತಿರುವ ಬಾಹ್ಯಾಕಾಶ ತಂತ್ರಜ್ಞಾನದ ಸಂಶೋಧನೆ ಮತ್ತು ಅಭಿವೃದ್ಧಿಯ ಬಳಕೆಯ ಸಹಕಾರ ಅಂದರೆ ಸಣ್ಣ ಉಪಗ್ರಹಗಳು, ಅಂತರ ಉಪಗ್ರಹ ಸಂವಹನ, ಉಪಗ್ರಹ ಸಂಚಾಲನೆ ಮತ್ತು ಬಾಹ್ಯಾಕಾಶ ದತ್ತಾಂಶದ ವಿಶ್ಲೇಷಣೆಯ ಸುಸ್ಥಿರ ಉಪಯೋಗಕ್ಕಾಗಿ ಉಪಗ್ರಹ ಚಿತ್ರಗಳ ದತ್ತಾಂಶದ ಬಳಕೆಆಸಿಯಾನ್  ಭಾರತ ಬಾಹ್ಯಾಕಾಶ ಸಹಕಾರ ಕಾರ್ಯಕ್ರಮದ ಮೂಲಕ ಬಾಹ್ಯಾಕಾಶದ ಶಾಂತಿಯುತ ಉಪಯೋಗಕ್ಕಾಗಿ ಸಹಯೋಗವನ್ನು ಮುಂದುವರಿಸಲು.  

 

  1. ಆಸಿಯಾನ್ ಭಾರತ ವಾಣಿಜ್ಯ ಮಂಡಳಿಯ ಮೂಲಕ ಖಾಸಗಿ ವಲಯದ ಕಾರ್ಯಕ್ರಮಗಳನ್ನು ಉತ್ತೇಜಿಸುವುದನ್ನು ಮುಂದುವರಿಸಲು ಮತ್ತು ವ್ಯಾಪಾರಗಳ ಬಾಂಧವ್ಯವನ್ನು ಬಲಪಡಿಸಲು ಮತ್ತು ಆರ್ಥಿಕ ನಂಟನ್ನು ಮತ್ತಷ್ಟು ವಿಸ್ತರಿಸಲು ಮತ್ತು ಉತ್ತೇಜಿಸಲು ಆಸಿಯಾನ್ ಮತ್ತು ಭಾರತ ಉತ್ಪನ್ನ ಹಾಗೂ ಸೇವೆಗಳ ಬ್ರಾಂಡ್ ಜಾಗೃತಿ ಮೂಡಿಸಲು ವಾಣಿಜ್ಯ ಕಾರ್ಯಕ್ರಮ ಉತ್ತೇಜಿಸಲು. ನಾವು ಆಸಿಯಾನ್ ಭಾರತ ವಾಣಿಜ್ಯ ಮತ್ತು ಹೂಡಿಕೆ ಕೇಂದ್ರ ಸ್ಥಾಪನೆಯನ್ನೂ ಎದಿರು ನೋಡುತ್ತಿದ್ದೇವೆ.

ಸಾಮಾಜಿಕ – ಸಾಂಸ್ಕೃತಿಕ ಸಹಕಾರ

25.ನೀತಿ ನಿರೂಪಕರು, ವ್ಯವಸ್ಥಾಪಕರು ಮತ್ತು ಸ್ಪಷ್ಟವಾದ ಹಾಗೂ ಅಸ್ಪಷ್ಟವಾದ ಸಾಂಸ್ಕೃತಿಕ ಪರಂಪರೆಗೆ ಸಂಬಂಧಿಸಿದ ಶಿಕ್ಷಣತಜ್ಞರ ನಡುವೆ ಜ್ಞಾನ ವಿನಿಮಯಕ್ಕಾಗಿ ವೇದಿಕೆಗಳನ್ನು ಒದಗಿಸುವ ಮೂಲಕ ಆಸಿಯಾನ್ಮತ್ತು ಭಾರತ ನಡುವಿನ ನಾಗರಿಕ ಮತ್ತು ಐತಿಹಾಸಿಕ ಸಂಪರ್ಕಗಳ ನಂಟಿಗೆ ಸಹಕರಿಸುವುದು;ಮೆಕಾಂಗ್ ನದಿಯ ಉದ್ದಕ್ಕೂ ಶಾಸನಗಳ ಮ್ಯಾಪಿಂಗ್ ಗಾಗಿ ಭಾರತದ ಪ್ರಸ್ತಾಪ ಹಾಗೂ ಆಸಿಯಾನ್ ಭಾರತ ಸಾಂಸ್ಕೃತಿಕ ಮತ್ತು ನಾಗರಿಕತೆಯ ನಂಟಿನ ಕುರಿತ ಚಟುವಟಿಕೆಗಳು ಮತ್ತು ಸಮಾವೇಶಗಳನ್ನು ಆಯೋಜಿಸುವುದೂ ಸೇರಿದಂತೆ ಪರಸ್ಪರರಿಗೆ ಉಪಯುಕ್ತವಾದ ಆಸಿಯಾನ್ ಭಾರತ ಸಾಂಸ್ಕೃತಿಕ ಮತ್ತು ಐತಿಹಾಸಿಕ ಸಂಪರ್ಕವನ್ನು ಬಿಂಬಿಸುವ ಸಾಂಸ್ಕೃತಿಕ ಮತ್ತು ಐತಿಹಾಸಿಕ ಸಂಕೇತಗಳು ಮತ್ತು ಸ್ಮಾರಕಗಳನ್ನು ಪುನರ್ ಸ್ಥಾಪಿಸುವ ಮತ್ತು ಸಂರಕ್ಷಿಸುವ ಪ್ರಯತ್ನ ತ್ವರಿತಗೊಳಿಸುವುದು.

  1. ಆಸಿಯಾನ್ ನ 2015ರ ನಂತರದ ಆರೋಗ್ಯ ಅಭಿವೃದ್ಧಿ ಕಾರ್ಯಸೂಚಿ, ಅದರಲ್ಲೂಆರೋಗ್ಯ ವ್ಯವಸ್ಥೆ ಬಲಪಡಿಸುವ, ಆರೈಕೆಗೆ ಅವಕಾಶ ನೀಡುವ, ಸುರಕ್ಷಿತ ಮತ್ತು ಉತ್ತಮ ಗುಣಮಟ್ಟದ ವೈದ್ಯಕೀಯ ಉತ್ಪನ್ನ ಮತ್ತು ಸಾಂಪ್ರತಾಯಿಕ ಮತ್ತು ಕಾಂಪ್ಲಿಮೆಂಟರಿಯಾಗಿ ನೀಡುವ ಔಷಧ ಸೇರಿದಂತೆ ಕೈಗೆಟಕುವ ದರದ ಗುಣಮಟ್ಟದ ಔಷಧಗಳ ಕ್ಷೇತ್ರದಲ್ಲಿ ಆರೋಗ್ಯ ಸಹಕಾರ ಉತ್ತೇಜಿಸುವುದು. 

 

  1. ದೆಹಲಿ ಸಂವಾದ, ಆಸಿಯಾನ್ ಭಾರತ ಚಿಂತಕರ ಚಾವಡಿಯ ಆಸಿಯಾನ್ ಭಾರತ ಜಾಲ (ಎ.ಐ.ಎನ್.ಟಿಟಿ), ಆಸಿಯಾನ್ ಭಾರತ ಗಣ್ಯ ವ್ಯಕ್ತಿಗಳ ಉಪನ್ಯಾಸ ಸರಣಿ (ಎ.ಐ.ಇ.ಪಿ.ಎಲ್.ಎಸ್.), ರಾಜತಾಂತ್ರಿಕರ ತರಬೇತಿ ಕೋರ್ಸ್ ಗಳು, ವಿದ್ಯಾರ್ಥಿಗಳ, ಸಂಸತ್ ಸದಸ್ಯರ, ರೈತರ, ಮಾಧ್ಯಮದವರ ವಿನಿಮಯ ಕಾರ್ಯಕ್ರಮ ಮತ್ತು ತರ ಯುವ ಕಾರ್ಯಕ್ರಮಗಳ ಮೂಲಕಸಾಂಸ್ಕೃತಿಕ ಪ್ರವಾಸೋದ್ಯಮ ಉತ್ತೇಜಿಸುವ ಮೂಲಕ ಸಾಂಸ್ಕೃತಿಕ ನಂಟನ್ನು ಮತ್ತಷ್ಟು ಬಲಪಡಿಸುವುದು ಮತ್ತು ಜನರೊಂದಿಗಿನ ಸಂಪರ್ಕವನ್ನು ಪ್ರೋತ್ಸಾಹಿಸುವುದು. 

    28. ಇಂಗ್ಲಿಷ್ ಭಾಷಾ ತರಬೇತಿ, ಉದ್ಯಮಶೀಲತಾ ಅಭಿವೃದ್ಧಿ ಮತ್ತು ವೃತ್ತಿಪರ ತರಬೇತಿ ಕೇಂದ್ರಗಳು, ವಾರ್ಷಿಕ ವಿದ್ಯಾರ್ಥಿ ವೇತನ ಮಂಜೂರು, ಭಾರತೀಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರ (ಐಟಿಇಸಿ) ವಿದ್ಯಾರ್ಥಿವೇತನ, ಆಸಿಯಾನ್ ಭಾರತ ಗುಡ್ ವಿಲ್ ವಿದ್ಯಾರ್ಥಿ ವೇತನ, ನಲಂದ ವಿದ್ಯಾರ್ಥಿ ವೇತನ, ಆಸಿಯಾನ್ ಭಾರತ ಜಾಲದ ವಿಶ್ವವಿದ್ಯಾಲಯ ಸ್ಥಾಪನೆ ಸಾಧ್ಯತೆಯ ಅನ್ವೇಷಣೆ ಮತ್ತು ಆಸಿಯಾನ್ ವಿಶ್ವವಿದ್ಯಾಲಯ ಜಾಲವೂ ಸೇರಿದಂತೆ ವಿಶ್ವವಿದ್ಯಾಲಯಗಳ ನಡುವೆ ವಿನಿಮಯಕ್ಕೆ ಇತರ ವಿಶ್ವವಿದ್ಯಾಲಯಗಳಿಗೆ ಉತ್ತೇಜನದ ಮೂಲಕ,ಶಿಕ್ಷಣ ಮತ್ತು ಯುವ ವಲಯದಲ್ಲಿ ಸಹಕಾರವರ್ಧಿಸುವುದು. 

    29. ವಲಯದ ವಿಪತ್ತು ನಿರ್ವಹಣೆಯಲ್ಲಿ ಉತ್ತಮ ಸಹಯೋಗಕ್ಕಾಗಿ ಎ.ಎಚ್.ಎ. ಕೇಂದ್ರದೊಂದಿಗೆ ಮತ್ತು ಅದರ ಭಾರತದ ಸಹವರ್ತಿಯೊಂದಿಗೆ ಆಪ್ತ ಪಾಲುದಾರಿಕೆ ಸ್ಥಾಪಿಸಲು ಆಸಿಯಾನ್ ವಲಯದೊಳಗೆ ಮತ್ತು ವಲಯದ ಹೊರಗೆ ವಿಪತ್ತಿನ ಸಂದರ್ಭದಲ್ಲಿ ಒಂದಾಗಿ ಸ್ಪಂದಿಸುವ ಕುರಿತಒಂದು ಆಸಿಯಾನ್, ಒಂದೇ ಸ್ಪಂದನೆಯ ಆಸಿಯಾನ್ ಘೋಷಣೆಯಯ ಸಾಕಾರಕ್ಕಾಗಿವಿಪತ್ತು ನಿರ್ವಹಣೆ ಕುರಿತ ಮಾನವೀಯ ನೆರವಿನ ಆಸಿಯಾನ್ ಸಹಯೋಗ ಕೇಂದ್ರ (ಎ.ಎಚ್.ಎ. ಕೇಂದ್ರ)ದ ಕಾರ್ಯವನ್ನು ಬೆಂಬಲಿಸುವುದೂ ಸೇರಿದಂತೆ ವಿಪತ್ತು ನಿರ್ವಹಣೆ ಮತ್ತು ಮಾನವೀಯ ನೆರವಿಗಾಗಿಆಸಿಯಾನ್ ಭಾರತ ಸಹಕಾರವನ್ನು ಬಲಪಡಿಸುವುದು.

 

  1. ಆಸಿಯಾನ್ ಭಾರತ ಕ್ರಿಯಾ ಯೋಜನೆ (ಪಿಓಎ) 2016-2020 ಮತ್ತು ಇದೇ ವಿಷಯಕ್ಕೆ ಸಂಬಂಧಿಸಿದ ಆಸಿಯಾನ್ ನ ಸಂಬಂಧಿತ ಚೌಕಟ್ಟು ಮತ್ತು ವ್ಯವಸ್ಥೆಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಮಹಿಳಾ ಸಬಲೀಕರಣಕ್ಕಾಗಿ, ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳ ಸಂರಕ್ಷಣೆ ಮತ್ತು ಉತ್ತೇಜನಕ್ಕಾಗಿ, ಅವರ ಮೇಲಿನ ಎಲ್ಲ ಸ್ವರೂಪದ ಹಿಂಸಾಚಾರವನ್ನು ನಿರ್ಮೂಲನೆ ಮಾಡಲು ಆಸಿಯಾನ್ ಮತ್ತು ಭಾರತದ ಸರ್ಕಾರಿ ಅಧಿಕಾರಿಗಳು ಮತ್ತು ಸೂಕ್ತ ಬಾಧ್ಯಸ್ಥರೊಂದಿಗೆ ಸಂವಾದವನ್ನು ಪ್ರೋತ್ಸಾಹಿಸುವುದು.
  2. ಎ.ಎಸ್.ಸಿ.ಸಿ. ನೀಲಿನಕ್ಷೆ 2025ರಲ್ಲಿ ಒತ್ತಿ ಹೇಳಲಾಗಿರುವ ವ್ಯೂಹಾತ್ಮಕ ಕ್ರಮಗಳು, ಪರಿಸರ ಕುರಿತ ಆಸಿಯಾನ್ ಹಿರಿಯ ಅಧಿಕಾರಿಗಳ ಆದ್ಯತೆ (ಎ.ಎಸ್.ಓ.ಇ.ಎನ್) ಮತ್ತು ಹವಾಮಾನ ಬದಲಾವಣೆ ಕುರಿತ ಆಸಿಯಾನ್ ಕಾರ್ಯ ಗುಂಪಿನ (ಎ.ಡಬ್ಲ್ಯು.ಜಿ.ಸಿ.ಸಿ.) ಕಾರ್ಯ ಯೋಜನೆ 2016-2025ರ ಜಾರಿಗೆ ಬೆಂಬಲ ನೀಡಲು ಸಹಕಾರದ ಅನ್ವೇಷಣೆಯೂ ಸೇರಿದಂತೆಪರಿಸರ ನಿರ್ವಹಣೆ ಮತ್ತು ಹವಾಮಾನ ಬದಲಾವಣೆಯ ಸಹಕಾರ ಉತ್ತೇಜಿಸಲು.
  3. ಜೀವ ವೈವಿಧ್ಯ ಕುರಿತ ಆಸಿಯಾನ್ ಕೇಂದ್ರ(ಎ.ಸಿ.ಬಿ.)ದ ಚಟುವಟಿಕೆಗೆ ಬೆಂಬಲ ನೀಡುವುದೂ ಸೇರಿದಂತೆ ಜೀವ ವೈವಿಧ್ಯಗಳ ನಷ್ಟ ಮತ್ತು ಪರಿಸರ ವ್ಯವಸ್ಥೆ ಕೆಳದರ್ಜೆಗಿಳಿಯುವುದನ್ನು ತಪ್ಪಿಸಲು ಜ್ಞಾನ ಮತ್ತು ಅನುಭವ ವಿನಿಮಯ, ಜಂಟಿ ಸಂಶೋಧನಾ ಚಟುವಟಿಕೆ ಮತ್ತು ಸಾಮರ್ಥ್ಯ ವರ್ಧನೆ ಕಾರ್ಯಕ್ರಮಜೀವ ವೈವಿಧ್ಯಗಳ ಸಂರಕ್ಷಣೆ ಮತ್ತು ನಿರ್ವಹಣೆಗೆ ಹೆಚ್ಚಿನ ಸಹಕಾರ ನೀಡಲು.
  4. ಆಸಿಯಾನ್ ಮತ್ತು ಭಾರತದ ನಡುವೆ ನಾಗರಿಕ ಸೇವಾ ವಿಚಾರಗಳಲ್ಲಿ, ಇತರರೊಂದಿಗೆ, ಆಸಿಯಾನ್ ಸಮುದಾಯದ ಏಕತೆಯ ಹೆಚ್ಚಳಕ್ಕೆ ಮತ್ತು ಆಸಿಯಾನ್ ಸಮುದಾಯದ ಮುನ್ನೋಟ 2025ರ ಅನುಷ್ಠಾನಕ್ಕೆ ಸಂಬಂಧಿಸಿದಂತೆಆಸಿಯಾನ್ ರಾಷ್ಟ್ರಗಳ ನಾಗರಿಕ ಸೇವಾಧಿಕಾರಿಗಳ ತರಬೇತಿ, ಸಹಯೋಗ ನಿರ್ಮಾಣ, ನೆಟ್ ವರ್ಕಿಂಗ್ ಮತ್ತು ಪಾಲುದಾರಿಕೆ ಸಹಕಾರದ ಸಾಧ್ಯತೆಗಳನ್ನು ಬಳಕೆ ಮಾಡಿಕೊಳ್ಳುವುದು.

ಸಂಪರ್ಕ
34. ಎಂಪಿಎಸಿ 2025 ಮತ್ತು ಎ.ಐ.ಎಂ.2020ರ ನಿಟ್ಟಿನಲ್ಲಿ, ಭೌತಿಕ ಮೂಲ ಸೌಕರ್ಯ ಮತ್ತು ಡಿಜಿಟಲ್ ಸಂಪರ್ಕ ಉತ್ತೇಜನಕ್ಕಾಗಿ ಭಾರತ ಘೋಷಿಸಿರುವ 1 ಶತಕೋಟಿ ಅಮೆರಿಕನ್ ಡಾಲರ್ ಲೈನ್ ಆಫ್ ಕ್ರೆಡಿಟ್ ಮೂಲಕ ಭೌತಿಕ ಮತ್ತು ಡಿಜಿಟಲ್ ಸಂಪರ್ಕದ ಹೆಚ್ಚಳಕ್ಕಾಗಿ ನಮ್ಮ ಬದ್ಧತೆಯ ಪುನರುಚ್ಚಾರ.

  1. ಭಾರತ –ಮ್ಯಾನ್ಮಾರ್ – ಥಾಯ್ ಲ್ಯಾಂಡ್ ತ್ರಿಪಕ್ಷೀಯ ಹೆದ್ದಾರಿ ಯೋಜನೆಯನ್ನು ಶೀರ್ಘ ಪೂರ್ಣಗೊಳಿಸಲು ಉತ್ತೇಜಿಸುವುದು ಮತ್ತು ಈ ತ್ರಿಪಕ್ಷೀಯ ಹೆದ್ದಾರಿಯನ್ನು ಕಾಂಬೋಡಿಯಾ, ಲಾವೋ ಪಿಡಿಆರ್ ಮತ್ತು ವಿಯೆಟ್ನಾಂಗೂ ವಿಸ್ತರಿಸುವುದು.

ಅಭಿವೃದ್ಧಿಯ ಕಂದಕವನ್ನು ತಗ್ಗಿಸಲು ಸಹಕಾರ

  1. ಐ.ಎ.ಐ ಕಾರ್ಯ ಯೋಜನೆIIIಜಾರಿ ಮೂಲಕ ಆಸಿಯಾನ್ ಸದಸ್ಯ ರಾಷ್ಟ್ರಗಳೊಂದಿಗೆ ಮತ್ತು ನಡುವೆ ಇರುವ ಅಭಿವೃದ್ಧಿಯ ಕಂದಕವನ್ನು ತಗ್ಗಿಸುವ ಆಸಿಯಾನ್ ನ ಪ್ರಯತ್ನಗಳಿಗೆ ಭಾರತದ ನಿರಂತರ ಬೆಂಬಲವನ್ನು ಶ್ಲಾಘಿಸುವುದು ಮತ್ತು ಸ್ವಾಗತಿಸುವುದು.

 

ಎರಡು ಸಾವಿರದ ಹದಿನೆಂಟನೇ ಇಸವಿ ಜನವರಿ ಇಪ್ಪತ್ತ ಐದನೇ ದಿನದಂದು ನವದೆಹಲಿಯಲ್ಲಿ ಅಳವಡಿಸಿಕೊಳ್ಳಲಾಗಿದೆ.

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
PLI, Make in India schemes attracting foreign investors to India: CII

Media Coverage

PLI, Make in India schemes attracting foreign investors to India: CII
NM on the go

Nm on the go

Always be the first to hear from the PM. Get the App Now!
...

Prime Minister Shri Narendra Modi paid homage today to Mahatma Gandhi at his statue in the historic Promenade Gardens in Georgetown, Guyana. He recalled Bapu’s eternal values of peace and non-violence which continue to guide humanity. The statue was installed in commemoration of Gandhiji’s 100th birth anniversary in 1969.

Prime Minister also paid floral tribute at the Arya Samaj monument located close by. This monument was unveiled in 2011 in commemoration of 100 years of the Arya Samaj movement in Guyana.