Published By : Admin |
August 7, 2018 | 18:58 IST
ಹಿಂದುಳಿದ ವರ್ಗಗಳ ಸಂಸದರು ಮತ್ತು ಬಿ.ಜೆ.ಪಿ. ನಾಯಕರ ನಿಯೋಗ ಹೊಸದಿಲ್ಲಿಯಲ್ಲಿ ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನು ಭೇಟಿ ಮಾಡಿತು.
ಒ.ಬಿ.ಸಿ.ಆಯೋಗಕ್ಕೆ ಸಾಂವಿಧಾನಿಕ ಮಾನ್ಯತೆ ನೀಡಿದ್ದಕ್ಕಾಗಿ ಸದಸ್ಯರು ಪ್ರಧಾನಮಂತ್ರಿ ಅವರನ್ನು ಸನ್ಮಾನಿಸಿದರು. ಈ ಚಾರಿತ್ರಿಕ ಕ್ರಮವು ಒ.ಬಿ.ಸಿ. ಸಮುದಾಯವನ್ನು ಬಲಪಡಿಸಲು ಸಹಾಯ ಮಾಡಲಿದೆ ಎಂದು ಸದಸ್ಯರು ಹೇಳಿದರು.
ಮೆಚ್ಚುಗೆಯ ಮಾತುಗಳಿಗಾಗಿ ಮತ್ತು ಬೆಂಬಲಕ್ಕಾಗಿ ಪ್ರಧಾನಮಂತ್ರಿಗಳು ನಿಯೋಗದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು. ಒ.ಬಿ.ಸಿ. ಸಮುದಾಯದ ಏಳಿಗೆಗೆ ಅದರಲ್ಲೂ ತಳ ಮಟ್ಟದಲ್ಲಿ ಕಾರ್ಯಚಟುವಟಿಕೆ ಮುಂದುವರಿಸುವಂತೆ ಪ್ರಧಾನಮಂತ್ರಿ ಅವರು ನಿಯೋಗಕ್ಕೆ ಪ್ರೋತ್ಸಾಹದ ಮಾತುಗಳನ್ನಾಡಿದರು. ಸಮುದಾಯದಲ್ಲಿ ಅವರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವಂತೆಯೂ ಪ್ರಧಾನಮಂತ್ರಿಗಳು ಸದಸ್ಯರಲ್ಲಿ ಮನವಿ ಮಾಡಿದರು.
ಕೇಂದ್ರ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ ಮತ್ತು ಸಹಾಯಕ ಸಚಿವ (ಸ್ವತಂತ್ರ ನಿರ್ವಹಣೆ) ಶ್ರೀ ಸಂತೋಷ ಕುಮಾರ್ ಗಂಗ್ವಾರ್ ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.
Login or Register to add your comment
PM attends the Defence Investiture Ceremony-2025 (Phase-1)
May 22, 2025
The Prime Minister Shri Narendra Modi attended the Defence Investiture Ceremony-2025 (Phase-1) in Rashtrapati Bhavan, New Delhi today, where Gallantry Awards were presented.
He wrote in a post on X:
“Attended the Defence Investiture Ceremony-2025 (Phase-1), where Gallantry Awards were presented. India will always be grateful to our armed forces for their valour and commitment to safeguarding our nation.”
Attended the Defence Investiture Ceremony-2025 (Phase-1), where Gallantry Awards were presented. India will always be grateful to our armed forces for their valour and commitment to safeguarding our nation. pic.twitter.com/cwT056n2e6
— Narendra Modi (@narendramodi) May 22, 2025