ನಾಗಾಲ್ಯಾಂಡ್ ಜಿಬಿ (ಗಾವೂನ್ ಬುರ್ರಾಸ್) ಒಕ್ಕೂಟದ ಹದಿನೈದು ಸದಸ್ಯರ ನಿಯೋಗ ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿತು. ನಾಗಾಲ್ಯಾಂಡ್ ಜಿಬಿ ಒಕ್ಕೂಟವು ಗಾವೊನ್ ಬುರ್ರಾಸ್ (ಗ್ರಾಮದ ಮುಖ್ಯಸ್ಥರ) ಕಾಯವಾಗಿದೆ.
ಪ್ರಧಾನಮಂತ್ರಿಯವರನ್ನು ಭೇಟಿ ಮಾಡಿದ್ದು ತಮಗೆ ಸಂತಸ ತಂದಿತು ಎಂದು ನಿಯೋಗದ ಸದಸ್ಯರು ತಿಳಿಸಿದ್ದಾರೆ ಮತ್ತು ನಾಗಾ ಶಾಂತಿ ಪ್ರಕ್ರಿಯೆಗೆ ಪ್ರಧಾನಮಂತ್ರಿಯವರಿಗೆ ತಮ್ಮ ಹೃತ್ಪೂರ್ವಕ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಪ್ರಧಾನಮಂತ್ರಿ ಮೋದಿ ಅವರು ಈ ಪ್ರಕ್ರಿಯೆಯನ್ನು ನಿರ್ಣಾಯಕ ಪರಿಹಾರದೆಡೆಗೆ ತೆಗೆದುಕೊಂಡು ಹೋಗಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ ಮತ್ತು ನಾಗರಿಕ ಸಮಾಜದ ಎಲ್ಲ ಸಂಘಟನೆಗಳು ಮತ್ತು ಬುಡಕಟ್ಟು ಜನರು ಶಾಂತಿಗಾಗಿ ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ ಎಂದರು.
ನಿಯೋಗವನ್ನು ಬರಮಾಡಿಕೊಳ್ಳಲು ತಮಗೆ ಸಂತೋಷವಾಗಿದೆ ಎಂದು ತಿಳಿಸಿದ ಪ್ರಧಾನಮಂತ್ರಿಯವರು, ಅವರು ಶಾಂತಿಯ ಸಂದೇಶದೊಂದಿಗೆ ಬಂದಿದ್ದಾರೆ ಎಂದು ತಿಳಿಸಲು ಸಂತೋಷ ಪಡುವುದಾಗಿ ಹೇಳಿದರು. ಅವರ ಮೆಚ್ಚುಗೆಯ ಮಾತುಗಳಿಗೆ ಮತ್ತು ಬೆಂಬಲಕ್ಕೆ ಪ್ರಧಾನಿ ಧನ್ಯವಾದ ಅರ್ಪಿಸಿದರು.
.