ಯುವ ಫಿಕ್ಕಿ (ಎಫ್.ಐ.ಸಿ.ಸಿ.ಐ) ಮಹಿಳಾ ಸಂಘಟನೆಯ 25 ಸದಸ್ಯರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
ನಿಯೋಗವು ಪ್ರಧಾನಮಂತ್ರಿಯವರೊಂದಿಗೆ ಮಹಿಳಾ ಉದ್ಯಮಶೀಲತೆ ಮತ್ತು ಮಹಿಳಾ ಸಬಲೀಕರಣದಂಥ ವಿಷಯಗಳ ಬಗ್ಗೆ ಚರ್ಚಿಸಿತು. ಪ್ರಧಾನಮಂತ್ರಿಯವರು ನಿಯೋಗದ ಸದಸ್ಯರು ಕೇಳಿದ ವಿವಿಧ ಪ್ರಶ್ನೆಗಳಿಗೆ ಉತ್ತರ ನೀಡಿದರು.
ಸ್ವಚ್ಛ ಭಾರತ ಅಭಿಯಾನವು ಸಮುದಾಯ ಆರೋಗ್ಯಕ್ಕೆ ಗಣನೀಯ ಲಾಭದೊಂದಿಗೆ ಮಹಿಳೆಯರಿಗೆ “ಕಸವನ್ನೇ ಸಂಪತ್ತಾಗಿ” ಪರಿವರ್ತಿಸುವ ಉದ್ಯಮಶೀಲತೆಯ ದೊಡ್ಡ ಅವಕಾಶ ನೀಡಿದೆ ಎಂದರು.
ಜಲ ಸಂರಕ್ಷಣೆ ಕುರಿತ ಪ್ರಶ್ನೆಗಳಿಗೆ ಉತ್ತರ ನೀಡಿದ ಪ್ರಧಾನಮಂತ್ರಿಯವರು, ನಾವೆಲ್ಲರೂ ವೈಯಕ್ತಿಕವಾಗಿ ನೀರನ್ನು ವಿವೇಚನೆಯಿಂದ ಬಳಸುವ ಬಗ್ಗೆ ಮತ್ತು ಸೂಕ್ಷ್ಮ ಮತ್ತು ಹನಿ ನೀರಾವರಿಯತ್ತ ಗಮನ ಹರಿಸಬೇಕು ಎಂದರು.
ಕೌಟುಂಬಿಕ ಮೌಲ್ಯಗಳು, ವಿವಿಧತೆಯನ್ನು ಒಪ್ಪಿಕೊಳ್ಳುವುದು ಮತ್ತು ಪರಿಸರ ಪ್ರಜ್ಞೆ ಈ ಮೂರೂ ಭಾರತದ ಶ್ರೇಷ್ಠ ಸಂಪ್ರದಾಯವಾಗಿದ್ದು, ನಾವು ಅದನ್ನು ಪೋಷಿಸಬೇಕು ಎಂದು ಪ್ರಧಾನಮಂತ್ರಿ ಹೇಳಿದರು.
ಶಿಕ್ಷಣ, ಕೌಶಲ ಅಭಿವೃದ್ಧಿ, ಕಲೆ ಮತ್ತು ಸಂಸ್ಕೃತಿ ಹಾಗೂ ಮಹಿಳಾ ಸುರಕ್ಷತೆ ಮೊದಲಾದ ವಿಷಯಗಳು ಚರ್ಚೆಗೆ ಬಂದವು.