ಉತ್ತರ ಪ್ರದೇಶದ ಕುಶಿನಗರ ಲೋಕಸಭಾ ಕ್ಷೇತ್ರದ ಖಿರ್ಕಿಯಾದಿಂದ ಜಟಾಹ ಬಜಾರ್‌ವರೆಗೆ 17 ಕಿಲೋಮೀಟರ್ ಉದ್ದದ ರಸ್ತೆ ನಿರ್ಮಾಣವು ಖುಶಿನಗರದ ಅಭಿವೃದ್ಧಿಗೆ ಮತ್ತಷ್ಟು ಉತ್ತೇಜನ ನೀಡಲಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ.
ಕುಶಿನಗರ ಸಂಸದ ಶ್ರೀ ವಿಜಯ್ ಕುಮಾರ್ ದುಬೆ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿ ಅವರು ಟ್ವೀಟ್ ಮಾಡಿ;
"ಇದು ಕುಶಿನಗರದ ಅಭಿವೃದ್ಧಿಯನ್ನು ಮತ್ತಷ್ಟು ಬಲಪಡಿಸುತ್ತದೆ.'' ಎಂದು ಬರೆದಿದ್ದಾರೆ.
इससे कुशीनगर के विकास को और बल मिलेगा। https://t.co/XkQB1GGBhu
— Narendra Modi (@narendramodi) February 27, 2023