ಭಾರತದ ಕಿನಾರೆಯನ್ನು ಅವರು ತೊರೆದು ಜೀವಿತ ಹಾದಿ ಕಾಣಬಯಸಿದು, ಆದರೆ ಭಾರತದ ಬಗ್ಗೆ ಅವರ ಪ್ರೀತಿಗೇನೂ ಕಡಿಮೆಯಾಗಿಲ್ಲ. ಭಾರತದಿಂದ ಅವರು ದೂರವಾಗಿರಬಹುದು ಆದರೆ ಹೃದಯದಿಂದ ಎಂದೂ ಭಾರತದೂರವಾಗಿಲ್ಲ. ವಿದೇಶದಲ್ಲಿರುವ ಭಾರತತೀಯ ಸಮುದಾಯ ಅತ್ಯಂತ ಶಕ್ತಿಶಾಲಿ ಮತ್ತು ಅತ್ಯಂತ ಯಶಸ್ಸಾಗಿರುವ ವಿದೇಶಿ ಸಮುದಾಯಗಳಲ್ಲೊಂದಾಗಿದೆ. ಭಾರತದ ವಿದೇಸದಲ್ಲಿರುವ ಜನಸಮುದಾಯದ ಹೃದಯ ಯಾವತ್ತೂ ದೇಶದ ಪ್ರೀತಿ-ಕಾಳಜಿಗಳಿಗಾಗಿ ಸದಾ ತುಡಿಯುತ್ತಿರುತ್ತದೆ.
ಪ್ರಧಾನಿ ಶ್ರೀ ನರೇಂದ್ರ ಮೋದಿ ಈ ಜನಸಮುದಾಯದಲ್ಲಿ ಅತ್ಯಂತ ಜನಪ್ರಿಯರಾಗಿದ್ದಾರೆ. ಅವರು ತನ್ನ ಪ್ರತಿಯೊಂದೂ ವಿದೇಶ ಪ್ರವಾಸದಲ್ಲೂ ಅಲ್ಲಿನ ಅನಿವಾಸಿ ಜನತೆಯನ್ನು ತಾಯಿನಾಡಿಗೆ ಮತ್ತೊಮ್ಮೆ ಬೆಸೆಯುವ ಕೊಂಡಿಯಾಗಿ ಬೆಸೆಯಲು, ನೆನಪಿಸಲು, ಹಂಚಿಕೊಳ್ಳಲು ಮತ್ತು ಪಾಲ್ಗೊಳ್ಳಲು ಹಾಗೂ ಸಕಾರಾತ್ಮಕವಾಗಿ ಬದಲಾಯಿಸಲು ಸಿಗುವ ಅವಕಾಶವನ್ನಾಗಿ ಸೃಷ್ಠಿಸುತ್ತಿದ್ದರು.
“ಮೋದಿ, ಮೋದಿ, ಮೋದಿ..” ಹೋದಲ್ಲಿ ಎಲ್ಲಡೆ ಇದೇ ಕೂಗು.. ಹೋದಲ್ಲಿ ಎಲ್ಲಡೆ ಜನಸಾಗರದ ಹರ್ಷೋದ್ಗಾರ... ಸಮುದಾಯಗಳ ಸತ್ಕಾರ ಹೊರತಾಗಿ, ವಿಮಾನ ನಿಲ್ದಾಣದಿಂದ ತೊಡಗಿ ಜಯಕಾರದ ಸದ್ದು ಎಲ್ಲಡೆ ಪ್ರತಿಧ್ವನಿಸುತ್ತಿತ್ತು. ವಿದೇಶದ ಹಲವು ಕಾರ್ಯಕ್ರಮಗಳು, ಹಲವು ಸಮಾರಂಭಗಳು.. ಹಲವು ಸಭೆಗಳು.. ಆದರೆ ಎಲ್ಲಿ ಸೇರಿದರೂ ಅಲ್ಲಿನ ಜನಸಾಮಾನ್ಯ ಕೂಡಾ ಇದನ್ನೇ ಪ್ರತಿಧ್ವನಿಸುತ್ತಿದ್ದರು.
ಫ್ರಾನ್ಸ್ ನಲ್ಲಿ ಯುದ್ದ ಸ್ಮಾರಕದಲ್ಲಿ ಪ್ರಧಾನಿ ಹೇಳಿದರು” ಶಾಹಿದೋ ಅಮರ್ ರಹೇ” (ನಮ್ಮ ಧೈರ್ಯಶಾಲಿ ಹುತಾತ್ಮರು ಚಿರಂಜೀವಿಗಳಾಗಲಿ)
ಜಾಗತಿಕ ಭಾರತೀಯ ಸಮದಾಯದ ಮಹತ್ವ ಮತ್ತು ಅವರೊಂದಿಗಿನ ನಿರಂತರ ಸಂಪರ್ಕ ಹಾಗೂ ಅವರ ಪಾಲ್ಗೊಳ್ಳುವಿಕೆ ಯನ್ನು ಭಾರತದ ಅಭಿವೃದ್ಧಿ ನಿಟ್ಟಿನಲ್ಲಿ ಅನಿವಾರ್ಯವಾಗಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುರುತಿಸಿದರು.