ಭೂತಾನ್ ದೊರೆ ಜಿಗ್ಮೆ ಖೈಸರ್ ನ್ಯಾಮ್‌ಗೈಲ್ ವಾಂಗ್‌ಚುಕ್ ಅವರು ಇಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ ಕರೆ ಮಾಡಿ 18 ನೇ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದಕ್ಕಾಗಿ ಶುಭಾಶಯ ತಿಳಿಸಿದರು. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಭಾರತದ ಜನರ ನಿರಂತರ ಪ್ರಗತಿ ಮತ್ತು ಸಮೃದ್ಧಿಗಾಗಿ ಭೂತಾನ್ ದೊರೆಗಳು ಶುಭಾಶಯ ತಿಳಿಸಿದರು. ಪ್ರಧಾನಮಂತ್ರಿಯವರು ಭೂತಾನ್ ದೊರೆಗಳಿಗೆ ಧನ್ಯವಾದ ತಿಳಿಸಿದರು.
ಭೂತಾನ್ ಮತ್ತು ಭಾರತ ನಡುವಿನ ಸ್ನೇಹದ ಸಂಬಂಧಗಳ ಬಗ್ಗೆ ಪುನರುಚ್ಚರಿಸಿದ ಪ್ರಧಾನಮಂತ್ರಿಗಳು, ಭೂತಾನ್ ಸರ್ಕಾರದೊಂದಿಗೆ ಕೆಲಸ ಮಾಡಲು ಮತ್ತು ದ್ವಿಪಕ್ಷೀಯ ಪಾಲುದಾರಿಕೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ಭಾರತದ ಬದ್ಧತೆಯನ್ನು ಪುನರುಚ್ಚರಿಸಿದರು.
ಭಾರತ-ಭೂತಾನ್ ಪಾಲುದಾರಿಕೆಯು ಎಲ್ಲಾ ಹಂತಗಳಲ್ಲಿ ಅತ್ಯಂತ ನಂಬಿಕೆ, ಸದ್ಭಾವನೆ ಮತ್ತು ಪರಸ್ಪರ ತಿಳಿವಳಿಕೆಯಿಂದ ನಿರೂಪಿಸಲ್ಪಟ್ಟಿದೆ ಮತ್ತು ಜನರ ಸಂಪರ್ಕಗಳು ಮತ್ತು ನಿಕಟ ಆರ್ಥಿಕ ಮತ್ತು ಅಭಿವೃದ್ಧಿ ಪಾಲುದಾರಿಕೆಯಿಂದ ಬಲಪಡಿಸಲಾಗಿದೆ.
I thank His Majesty the King of Bhutan for his call and warm wishes. Bhutan-Bharat partnership is unique and exemplary. I look forward to continue working together and taking this extraordinary partnership to higher levels.
— Narendra Modi (@narendramodi) June 5, 2024