ಜಾಗತಿಕ ಉದ್ಯಮ, ಉತ್ಪಾದಕ ದಿಗ್ಗಜಗಳ ಉತ್ಪನ್ನಗಳ ಪ್ರದರ್ಶನ, ವಿಶ್ವದ ಅತಿ ಪ್ರಸಿದ್ಧ ಹಾಗೂ ಅತಿದೊಡ್ಡ ಕೈಗಾರಿಕಾ ಉತ್ಸವ ಜರ್ಮನಿಯ ಹನ್ನೋವರ್ ಮೆಸ್ಸೆ ಯಲ್ಲಿ ಪ್ರತಿ ವರ್ಷವೂ ನಡೆಯುತ್ತದೆ. 2015ರಲ್ಲಿ ಭಾರತದ ಇದರ ಪಾಲುದಾರ ರಾಷ್ಟ್ರವಾಯಿತು.
ಜರ್ಮನಿಯ ಛಾಂನ್ಸ್ಲರ್ ಅಂಜೆಲಾ ಮೆರ್ಕಲ್ ಮತ್ತು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜಂಟಿಯಾಗಿ ಕೈಗಾರಿಕಾ ಉತ್ಸವವನ್ನು ಉದ್ಘಾಟಿಸಿದರು. ಭಾರತದಲ್ಲಿ ಹೂಡಿಕೆ ಹಾಗೂ ಉತ್ಪಾದನಾ ಅವಕಾಶವನ್ನು ಅತ್ಯುತ್ತಮವಾಗಿ ಜಾಗತಿಕವಾಗಿ ಬಿಂಬಿಸಲು ಇದು ಅವಕಾಶ ಮಾಡಿಕೊಟ್ಟಿತು. ಜಗತ್ತಿನ ಹಲವಾರು ಪ್ರಸಿದ್ಧ ಕೈಗಾರಿಕಾ ಸಂಸ್ಥೆಗಳಿಗೆ, ವಿವಿಧ ದೇಶಗಳ ಮುಖ್ಯಸ್ಥರುಗಳಿಗೆ ಭಾರತದ ಹೂಡಿಕೆ ಅವಕಾಶದ ಬಾಗಿಲು ತೆರೆಯಿತು.
ಮಲೇಷ್ಯಾ, ಪ್ರಧಾನಿ ನಜೀಬ್ ರಜಾಕ್, ಸಿಂಗಾಪೂರ್ ಪ್ರಧಾನಿ ಲೀ ಸೀನ್ , ಆಸ್ಟ್ರೀಲಿಯಾ ಪ್ರಧಾನಿ ಎಬ್ಬೋಟ್ಟ್ , ಜಪಾನ್ ಪ್ರಧಾನಿ ಅಬೆ , ಫ್ರಾನ್ಸ್ ಅಧ್ಯಕ್ಷ ಹೊಲ್ಲಂಡೆ , ಕೆನಡಾ ಪ್ರಧಾನಿ ಹಾರ್ಪರ್ ಅವರುಗಳೊಂದಿಗೆ, “ ಮೇಕ್ ಇನ್ ಇಂಡಿಯಾ” ಬಗ್ಗೆ ನಡೆಸಿದ ದ್ವಿಪಕ್ಷೀಯ ಒಪ್ಪಂದಗಳು ಯಶಸ್ಸು ಪಡೆದಿವೆ.
ಕಳೆದ ಒಂದು ವರ್ಷಗಳಲ್ಲಿ, ಭಾರತದಲ್ಲಿ ಹೂಡಿಕೆ ಮಾಡಲು, ಉತ್ಪಾದಿಸಲು, ಸಂಪನ್ಮೂಲಗಳ ಅವಕಾಶ ಸದುಪಯೋಗ ಮಾಡಲು ವಿದೇಶ ಸಂಸ್ಥೆಗಳ, ಬಂಡವಾಳ ಹೂಡಿಕೆದಾರರ ಮನವೊಲಿಸಲು ಬನ್ನಿ, ಭಾರತದಲ್ಲಿ ತಯಾರಿಸಿ ಅನ್ನುವ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಪ್ರಯತ್ನ ಫಲಕಾರಿಯಾಗಿದೆ.