ಕೆಂಪುಕೋಟೆ ಆವರಣದಿಂದ ಪ್ರಧಾನ ಮಂತ್ರಿ ಅವರಿಂದು ಮಾಡಿದ ಸ್ವಾತಂತ್ರ್ಯ ದಿನದ ಭಾಷಣವನ್ನು ವಿವಿಧ ಕ್ಷೇತ್ರಗಳ ಗಣ್ಯರು ಶ್ಲಾಘಿಸಿದರು. ಪದ್ಮ ಪ್ರಶಸ್ತಿ ಪುರಸ್ಕೃತರು, ಶಿಕ್ಷಣ ತಜ್ಞರು, ತಂತ್ರಜ್ಞಾನ, ಉದ್ಯಮ, ವ್ಯಾಪಾರ ವಲಯದ ನಾಯಕರು, ಪ್ರಮುಖ ಮಹಿಳಾ ವೃತ್ತಿಪರರು, ನಟರು ಮತ್ತು ಕ್ರೀಡಾಪಟುಗಳು ಪ್ರಧಾನಿ ಅವರ ಭಾಷಣದ ದೃಷ್ಟಿಕೋನವನ್ನು ಶ್ಲಾಘಿಸಿ, ಪ್ರತಿಕ್ರಿಯೆ ನೀಡಿದ್ದಾರೆ.

ಎಫ್‌ಐಎಸ್‌ಎಂಇ ಪ್ರಧಾನ ಕಾರ್ಯದರ್ಶಿ ಅನಿಲ್ ಭಾರದ್ವಾಜ್, ಭಾರತದ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆ(ಎಂಎಸ್‌ಎಂಇ)ಗಳ ವಲಯದಲ್ಲಿ ಇರುವ  ಜನಸಂಖ್ಯೆ, ಪ್ರಜಾಪ್ರಭುತ್ವ ಮತ್ತು ವೈವಿಧ್ಯತೆ ಅಂದರೆ 3ಡಿ ಕುರಿತು ಪ್ರಧಾನಿ ಅವರ ಅಭಿಪ್ರಾಯ ನಿಜಕ್ಕೂ ಅನುರಣನಗೊಂಡಿದೆ ಎಂದಿದ್ದಾರೆ.

 

ಸಿಐಐ ಮಹಾನಿರ್ದೇಶಕ ಚಂದ್ರಜಿತ್ ಬ್ಯಾನರ್ಜಿ ಅವರು ವಿಕ್ಷಿತ್ ಭಾರತ್‌ನ ದೃಷ್ಟಿಕೋನವನ್ನು ಶ್ಲಾಘಿಸಿದ್ದಾರೆ.

 

ಸಿಎಲ್‌ಎಸ್‌ಎ ಕಂಪನಿಯ ಇಂಡಿಯಾ ರಿಸರ್ಚ್ ವಿಭಾಗದ ಮುಖ್ಯಸ್ಥ ಇಂದ್ರನೀಲ್ ಸೇನ್ ಗುಪ್ತಾ ಅವರು, ಭಾರತವು ಶೀಘ್ರದಲ್ಲೇ 3ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ ಎಂದು ಆಶಾವಾದ ಹೊರಹಾಕಿದ್ದಾರೆ. ಸುಧಾರಣೆ, ಸಾಧನೆ ಮತ್ತು ಪರಿವರ್ತನೆಗಾಗಿ ಪ್ರಧಾನಿ ಇಂದು ಸ್ಪಷ್ಟ ಕರೆ ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

 

ನ್ಯಾಷನಲ್ ಎಜುಕೇಶನ್ ಟೆಕ್ನಾಲಜಿ ಫೋರಂನ ಅಧ್ಯಕ್ಷ ಪ್ರೊ. ಅನಿಲ್ ಸಹಸ್ರಬುಧೆ ಅವರು, 3ಡಿಗಳು ಭಾರತವನ್ನು ಅದರ ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ಹೇಗೆ ಸಹಾಯ ಮಾಡುತ್ತಿವೆ ಎಂಬುದರ ಕುರಿತು ಮಾತನಾಡಿದ್ದಾರೆ.

 

ಐಐಟಿಇ ಗಾಂಧಿನಗರದ ಉಪಕುಲಪತಿ ಹರ್ಷದ್ ಪಟೇಲ್, ಕಳೆದ 9 ವರ್ಷಗಳಲ್ಲಿ ಪ್ರಧಾನಿ ಅವರ ಸುಧಾರಣೆ, ಕಾರ್ಯಕ್ಷಮತೆ ಮತ್ತು ಪರಿವರ್ತನೆಯ ಸಂದೇಶವು ನಮಗೆ ಹೇಗೆ ಸಹಾಯ ಮಾಡಿದೆ ಮತ್ತು ಮುಂದಿನ 25 ವರ್ಷಗಳಲ್ಲಿ ಭಾರತವು ಹೇಗೆ ವಿಷ ಮಿತ್ರವಾಗಬಹುದು ಎಂಬುದನ್ನು ವಿವರಿಸುತ್ತದೆ ಎಂದಿದ್ದಾರೆ.

 

ಜಾಮಿಯಾ ಮಿಲಿಯಾ ಇಸ್ಲಾಮಿಯಾ ಉಪಕುಲಪತಿ ನಜ್ಮಾ ಅಖ್ತರ್ ಅವರು ಪ್ರಧಾನ ಮಂತ್ರಿ ಅವರ ಸಾಮೂಹಿಕ ಪ್ರಯತ್ನಗಳ ಕರೆಯನ್ನು ಅನುಮೋದಿಸಿದ್ದಾರೆ.

 

ವಿಶ್ವ ಚಾಂಪಿಯನ್, ಅರ್ಜುನ ಪ್ರಶಸ್ತಿ ಪುರಸ್ಕೃತ, ಭಾರತೀಯ ಬಿಲ್ಲುಗಾರಿಕೆ ಕ್ರೀಡಾಪಟು ಅಭಿಷೇಕ್ ವರ್ಮಾ ಅವರು, 77ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಜನರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಪ್ರಧಾನಿ ಅವರ ಭ್ರಷ್ಟಾಚಾರ-ವಿರೋಧಿ ಧ್ಯೇಯವಾಕ್ಯವನ್ನು ಎಲ್ಲರೂ ಬೆಂಬಲಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

 

ಅಂತಾರಾಷ್ಟ್ರೀಯ ಪದಕ ವಿಜೇತ ಗೌರವ್ ರಾಣಾ ಅವರು, ರಾಷ್ಟ್ರ ಪ್ರಥಮ, ಯಾವಾಗಲೂ ಪ್ರಥಮ ಎಂಬ ಪ್ರಧಾನಿ ಅವರ ಸಂದೇಶ ಕುರಿತು ಮಾತನಾಡಿದ್ದಾರೆ. ಅಂತಾರಾಷ್ಟ್ರೀಯ ಕ್ರೀಡಾ ಪದಕ ವಿಜೇತ ನಿಹಾಲ್ ಸಿಂಗ್ ಸಹ ರಾಷ್ಟ್ರ ಪ್ರಥಮ್ ಕಲ್ಪನೆಯನ್ನು ವಿವರಿಸಿದ್ದಾರೆ.

 

ಅಂತರರಾಷ್ಟ್ರೀಯ ಕ್ರೀಡಾ ಪದಕ ವಿಜೇತ ನಿಹಾಲ್ ಸಿಂಗ್ ಅವರು ರಾಷ್ಟ್ರ ಪ್ರಥಮದ ಕಲ್ಪನೆಯನ್ನು ವಿವರಿಸಿದರು

 

ಅಂತಾರಾಷ್ಟ್ರೀಯ ಪದಕ ವಿಜೇತೆ ಫೆನ್ಸರ್ ಜಾಸ್ಮಿನ್ ಕೌರ್ ಅವರು ಸಹ ರಾಷ್ಟ್ರ ಪ್ರಥಮ ಬಗ್ಗೆ ಮಾತನಾಡಿದ್ದಾರೆ.

 

ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪುರಸ್ಕೃತ ಕಿರಣ್ ಮಾಡಿರುವ ಟ್ವೀಟ್ ಇಲ್ಲಿದೆ.

 

ಕೆಂಪುಕೋಟೆಯಿಂದ ಇಂದು ಪ್ರಧಾನಿ ನೀಡಿರುವ ಸಂದೇಶವನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಅಂತಾರಾಷ್ಟ್ರೀಯ ಪದಕ ವಿಜೇತೆ ಪ್ರಿಯಾ ಸಿಂಗ್ ಮನವಿ ಮಾಡಿದ್ದಾರೆ.

 

ಪದ್ಮಶ್ರೀ ಭರತ್ ಭೂಷಣ ತ್ಯಾಗಿ ಅವರು ರೈತರಿಗೆ ಪ್ರಧಾನಿ ನೀಡಿದ ಸ್ಮರಣಿಕೆ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಅವರ ಕೊಡುಗೆಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

 

ಅದೇ ರೀತಿ, ಶ್ರೀ ವೇದವ್ರತ ಆರ್ಯ ಅವರು ಇತ್ತೀಚಿನ ಉಪಕ್ರಮಗಳು ರೈತರಿಗೆ ಪ್ರಗತಿ ತಂದಿವೆ ಎಂದಿದ್ದಾರೆ.

 

ಖ್ಯಾತ ನಟಿ, ಸರಿತಾ ಜೋಶಿ, ರಾಷ್ಟ್ರ ನಿರ್ಮಾಣದಲ್ಲಿ ಮಹಿಳೆಯರ ಪಾತ್ರವನ್ನು ಎತ್ತಿ ತೋರಿಸುವ ಪ್ರಧಾನ ಮಂತ್ರಿ ಅವರು ಕೆಂಪುಕೋಟೆಯಿಂದ ಮಾಡಿದ ಭಾಷಣವು ಮಹಿಳೆಯರಿಗೆ ಹೇಗೆ ಹೊಸ ಶಕ್ತಿ ನೀಡಿದೆ ಎಂಬುದನ್ನು ಪ್ರಸ್ತಾಪಿಸಿದ್ದಾರೆ.

 

ಪ್ರಖ್ಯಾತ ಕಥಕ್ ನರ್ತಕಿ ನಳಿನಿ ಅಸ್ತಾನ ಅವರು ರಾಷ್ಟ್ರವನ್ನು ಉದ್ದೇಶಿಸಿ ಪ್ರಧಾನಿ ಮಾಡಿದ ಭಾಷಣವು ಯುವಕರಿಗೆ ಸುಧಾರಣೆ, ಕಾರ್ಯಕ್ಷಮತೆ(ಕಾರ್ಯ ನಿರ್ವಹಣೆ) ಮತ್ತು ಪರಿವರ್ತನೆಗೆ ಹೇಗೆ ಉತ್ತಮ ನಿರ್ದೇಶನ ನೀಡಿದ್ದಾರೆ ಎಂಬುದನ್ನು ಎತ್ತಿ ತೋರಿಸಿದರು.

 

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮತ್ತು ಪ್ರಸಿದ್ಧ ಸ್ತ್ರೀರೋಗ ತಜ್ಞೆ ಡಾ. ಅಲ್ಕಾ ಕೃಪಲಾನಿ ಅವರು, ಮಹಿಳಾ ಸಬಲೀಕರಣಕ್ಕೆ ಪ್ರಾಮುಖ್ಯತೆ ನೀಡಿದ್ದಕ್ಕಾಗಿ ಎಲ್ಲಾ ಮಹಿಳೆಯರ ಪರವಾಗಿ ಪ್ರಧಾನ ಮಂತ್ರಿ ಅವರಿಗೆ ಧನ್ಯವಾದ ಅರ್ಪಿಸಿದರು.

 

ಎಮ್‌ಡಿ ಕಲಾರಿ ಕ್ಯಾಪಿಟಲ್‌ನ ವ್ಯವಸ್ಥಾಪಕ ನಿರ್ದೇಶಕಿ ವಾಣಿ ಕೋಲಾ ಅವರು, ಮಹಿಳೆಯರ ಉನ್ನತಿ ಮತ್ತು ಮಹಿಳೆಯರ ಮೇಲಿನ ಅಪರಾಧ ಕುರಿತು ಮಾತನಾಡಿದ್ದಕ್ಕಾಗಿ ಪ್ರಧಾನ ಮಂತ್ರಿ ಅವರನ್ನು ಶ್ಲಾಘಿಸಿದರು.

 

ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಖ್ಯಾತ ಗಾಯಕಿ ಕೆ.ಎಸ್. ಚಿತ್ರಾ ಅವರು, ಮಹಿಳಾ ಸಬಲೀಕರಣಕ್ಕೆ ಪ್ರಧಾನ ಮಂತ್ರಿ ಹೊಂದಿರುವ ಕಾಳಜಿ ಮತ್ತು ಮಹಿಳೆಯರಿಗಾಗಿ ಹೊಸ ಉಪಕ್ರಮಗಳ ಸರಣಿಯ ಹೊಸ ಘೋಷಣೆಗಳನ್ನು ಶ್ಲಾಘಿಸಿದ್ದಾರೆ.

 

ಪೈಲಟ್ ಕ್ಯಾಪ್ಟನ್ ಜೋಯಾ ಅಗರವಾಲ್ (ಸ್ಯಾನ್ ಫ್ರಾನ್ಸಿಸ್ಕೋದಿಂದ ಬೆಂಗಳೂರಿಗೆ ಅತಿ ಉದ್ದದ ವಿಮಾನಯಾನದ ಎಲ್ಲಾ ಮಹಿಳಾ ಸಿಬ್ಬಂದಿಯ ಕ್ಯಾಪ್ಟನ್) ಅವರು, ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಮಹಿಳಾ ವಾಣಿಜ್ಯ ಪೈಲಟ್‌ಗಳನ್ನು ಹೊಂದಿದ್ದು, ಆ ಮೂಲಕ ಮಹಿಳೆಯರನ್ನು ಮುನ್ನಡೆಸುತ್ತಿದೆ ಎಂಬ ಪ್ರಧಾನಿ ಅವರ ಉಲ್ಲೇಖದ ಬಗ್ಗೆ ಸಂತೋಷ ವ್ಯಕ್ತಪಡಿಸಿದರು. ವಿಮಾನಯಾನ ಕ್ಷೇತ್ರದಲ್ಲಿ ಮಾತ್ರವಲ್ಲದೆ ಇತರ ಕ್ಷೇತ್ರಗಳಲ್ಲಿಯೂ ಭಾರತ ಅಭಿವೃದ್ಧಿ ಕಾಣುತ್ತಿದೆ ಎಂದು ಶ್ಲಾಘಿಸಿದ್ದಾರೆ.

 

ಲೆಫ್ಟಿನೆಂಟ್ ಜನರಲ್ (ನಿವೃತ್ತ) ಮಾಧುರಿ ಕಾನಿಟ್ಕರ್, ಮಹಾರಾಷ್ಟ್ರ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಉಪಕುಲಪತಿ ಅವರು, ನಮ್ಮ ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಕುರಿತು ಪ್ರಧಾನ ಮಂತ್ರಿ ಅವರು ಒತ್ತು ನೀಡಿರುವುದನ್ನು ಶ್ಲಾಘಿಸಿದ್ದಾರೆ.

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
India's Economic Growth Activity at 8-Month High in October, Festive Season Key Indicator

Media Coverage

India's Economic Growth Activity at 8-Month High in October, Festive Season Key Indicator
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 22 ನವೆಂಬರ್ 2024
November 22, 2024

PM Modi's Visionary Leadership: A Guiding Light for the Global South