“ಪ್ರವಾಸಿ ಭಾರತೀಯ ದಿವಸ್“ ನ ಪ್ಯಾನಲ್ ಸದಸ್ಯರು “ಕೈಗೆಟಕುವ ಬೆಲೆಯಲ್ಲಿ ಸೌರಶಕ್ತಿಯ ಸಾಮರ್ಥ್ಯ ನಿರ್ಮಾಣದಲ್ಲಿ ವಿದೇಶೀ ಭಾರತೀಯ ಸಮುದಾಯದ ಪಾತ್ರ” ಎಂಬ ವಿಷಯದ ಕುರಿತಾಗಿ ಪ್ರಧಾನಮಂತ್ರಿ ಅವರನ್ನು ಭೇಟಿ ಮಾಡಿದರು.
ಪ್ಯಾನೆಲ್ ನಲ್ಲಿ ಬಾರತದ ಮತ್ತು ವಿದೇಶೀ ಬಾರತೀಯ ಸಮುದಾಯದ ಪ್ರಸಿದ್ದ ತಜ್ಞರು, ಶೈಕ್ಷಣಿಕ ತಜ್ಞರು, ಕೈಗಾರಿಕೋದ್ಯಮಿಗಳು ಮತ್ತು ವ್ಯವಹಾರಿಕೋದ್ಯಮಿಗಳು ಒಳಗೊಂಡಿದ್ದಾರೆ. ಉಪಯುಕ್ತ ಪ್ರಮಾಣದ ಸೌರಶಕ್ತಿ, ಸಾರ್ವಜನಿಕ ಬಳಕೆಗಾಗಿ ಪೂರೈಕೆಯ ಸಂಗ್ರಹ ವ್ಯವಸ್ಥೆಗೆ ಹೊರತಾಗಿ (ಆಫ್ ಗ್ರಿಡ್ ) ಮತ್ತು ಸಣ್ಣಮಟ್ಟದ ಸಾರ್ವಜನಿಕ ಬಳಕೆಗಾಗಿ ಪೂರೈಕೆಯ ಸಂಗ್ರಹ ವ್ಯವಸ್ಥೆ (ಮೈಕ್ರೋಗ್ರಿಡ್)ಗಳ ಪರಿಹಾರಗಳು, ಸೌರಶಕ್ತಿ ಸಂಗ್ರಹಣೆ, ಮುಂದಿನ ಜನಾಂಗದ ಸೌರಶಕ್ತಿ ತಂತ್ರಜ್ಞಾನಗಳು ಮತ್ತು ಮರುಬಳಕೆ ಇಂಧನ ಕ್ಷೇತ್ರದಲ್ಲಿ ಹಣಕಾಸು ಪೂರೈಕೆಯ(ಲಭ್ಯತೆಯ) ನಾವಿನ್ಯ ಅವಕಾಶಗಳು ಮುಂತಾದ ವಿಷಯಗಳ ಬಗ್ಗೆ ಕಳೆದ ಎರಡು ದಿನಗಳ ಕಾಲ ನಡೆದ ಚರ್ಚೆಯ ಅಂತಿಮ ವರದಿಯನ್ನು ಅವರು ಪ್ರಧಾನಮಂತ್ರಿಗೆ ಸಲ್ಲಿಸಿದರು.
ಪ್ರಯೋಗಿಕ ಬಳಕೆಯ ಶಿಫಾರಸ್ಸುಗಳನ್ನು ಪ್ರಧಾನಮಂತ್ರಿ ಸ್ವಾಗತಿಸಿದರು ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ನವ ಮತ್ತು ನವೀಕರಿಸಬಹುದಾದ ಇಂಧನಗಳ ಸಚಿವಾಲಯಗಳಿಗೆ ಈ ತಜ್ಞರ ಮಾತುಕತೆಗಳು ಮತ್ತು ಹೊರಬಂದ ಪ್ರಾಸಂಗಿಕ ವಿಷಯಗಳನ್ನು ನೀತಿ ರೂಪಿಸುವಲ್ಲಿ ಬಳಸಿಕೊಂಡು ಮುಂದುವರಿಸಲು ನಿರ್ದೇಶನ ನೀಡಿದರು.