ಜಪಾನ್ ಸಂಸತ್ ಸದಸ್ಯರ ನಿಯೋಗ ಇಂದು ದೆಹಲಿಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿತ್ತು. ನಿಯೋಗದ ನೇತೃತ್ವವನ್ನು ಶ್ರೀ ತೋಷಿಹಿರೋ ವಹಿಸಿದ್ದರು ಮತ್ತು ಶ್ರೀ ಮೊಟ್ಟೋ ಹಯಾಶಿ ಮತ್ತು ಶ್ರೀ ತಾತ್ಸೂ ಹಿರಾನೋ ಅವರೂ ಇದ್ದರು
ಸೆಪ್ಟೆಂಬರ್ ನಲ್ಲಿ ಸ್ನೇಹ ಕೂಟದಲ್ಲಿ ಜಪಾನ್ – ಭಾರತ ಸಂಸತ್ ಸದಸ್ಯರೊಂದಿಗೆ ಸಂವಾದ ನಡೆಸಿದ್ದನ್ನು ಪ್ರಧಾನಿ ಸ್ಮರಿಸಿದರು, ಮತ್ತು ಎರಡೂ ರಾಷ್ಟ್ರಗಳ ಶಾಸಕಾಂಗ ಸದಸ್ಯರೊಂದಿಗೆ ನಡೆಯುತ್ತಿರುವ ಹೆಚ್ಚಿನ ಸಂವಾದವನ್ನು ಸ್ವಾಗತಿಸಿದರು. ರಾಜ್ಯ ಮಟ್ಟದ ಶಾಸಕಾಂಗ ಸದಸ್ಯರೊಂದಿಗಿನ ವಿನಿಮಯವನ್ನು ಬಲಪಡಿಸುವಂತೆಯೂ ಪ್ರಧಾನಿ ಕರೆ ನೀಡಿದರು. ಸುನಾಮಯಿಂದ ಎದುರಾಗುವ ಭೀತಿಯ ಬಗ್ಗೆ ಜಾಗೃತಿ ಮೂಡಿಸುವ ಶ್ರೀ ತೋಷಿಹಿರೋ ನಿಕಾಯ್ ಅವರ ಪ್ರಯತ್ನವನ್ನು ಸ್ವಾಗತಿಸಿದ ಪ್ರಧಾನಮಂತ್ರಿಯವರು, ವಿಕೋಪ ನಿರ್ವಹಣೆ ಮತ್ತು ವಿಕೋಪ ಅಪಾಯ ತಗ್ಗಿಸುವ ಕ್ಷೇತ್ರದಲ್ಲಿ ದ್ವಿಪಕ್ಷೀಯ ಸಹಕಾರ ಬಲಪಡಿಸುವಂತೆ ಕೋರಿದರು.
ಮುಂದಿನ ವಾರ ತಾವು ಜಪಾನ್ ಗೆ ಭೇಟಿ ನೀಡುವುದನ್ನು ಎದಿರು ನೋಡುತ್ತಿರುವುದಾಗಿ ಪ್ರಧಾನಮಂತ್ರಿಯವರು ಹೇಳಿದರು.