ಚಂದ್ರಯಾನ-3 ಮಿಷನ್‌ ನ ಐತಿಹಾಸಿಕ ಯಶಸ್ಸಿನ ಆಚರಣೆಯಲ್ಲಿ ಕೇಂದ್ರ ಸಚಿವ ಸಂಪುಟವು ರಾಷ್ಟ್ರದೊಂದಿಗೆ ಜೊತೆಯಾಗುತ್ತದೆ. ನಮ್ಮ ವಿಜ್ಞಾನಿಗಳ ಸ್ಮರಣೀಯ ಸಾಧನೆಯನ್ನೂ ಸಚಿವ ಸಂಪುಟ ಶ್ಲಾಘಿಸುತ್ತದೆ. ಇದು ನಮ್ಮ ಬಾಹ್ಯಾಕಾಶ ಸಂಸ್ಥೆಯ ವಿಜಯ ಮಾತ್ರವಲ್ಲ, ಜಾಗತಿಕ ಮಟ್ಟದಲ್ಲಿ ಭಾರತದ ಪ್ರಗತಿ ಮತ್ತು ಆರೋಹಣದ ಉಜ್ವಲ ಸಂಕೇತವಾಗಿದೆ. ಆಗಸ್ಟ್ 23 ಅನ್ನು "ರಾಷ್ಟ್ರೀಯ ಬಾಹ್ಯಾಕಾಶ ದಿನ" ವಾಗಿ ಆಚರಿಸುವುದನ್ನು ಸಂಪುಟವು ಸ್ವಾಗತಿಸುತ್ತದೆ.

ಅದರ ಪ್ರಯತ್ನಗಳಿಗಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಯನ್ನು ಸಂಪುಟ ಅಭಿನಂದಿಸುತ್ತದೆ. ನಮ್ಮ ವಿಜ್ಞಾನಿಗಳಿಗೆ ಧನ್ಯವಾದಗಳು, ಭಾರತವು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದ ಮೊದಲ ದೇಶವಾಗಿದೆ. ಮುನ್ಸೂಚನೆಯ ನಿಖರತೆಯೊಂದಿಗೆ ಚಂದ್ರನ ಮೇಲೆ ಇಳಿಯುವುದೇ ಸ್ವತಃ ಒಂದು ಮಹತ್ವದ ಸಾಧನೆಯಾಗಿದೆ. ಚಂದ್ರನ ದಕ್ಷಿಣ ಧ್ರುವದ ಬಳಿ ಇಳಿಯುವುದು, ಕಠಿಣ ಪರಿಸ್ಥಿತಿಗಳನ್ನು ನಿವಾರಿಸುವುದು, ನಮ್ಮ ವಿಜ್ಞಾನಿಗಳ ಉತ್ಸಾಹಕ್ಕೆ ಸಾಕ್ಷಿಯಾಗಿದೆ, ಅವರು ಶತಮಾನಗಳಿಂದಲೂ ಮಾನವ ಜ್ಞಾನದ ಎಲ್ಲೆಗಳನ್ನು ವಿಸ್ತರಿಸಲು ಪ್ರಯತ್ನಿಸಿದ್ದಾರೆ. ಚಂದ್ರನಿಂದ 'ಪ್ರಜ್ಞಾನ್' ರೋವರ್ ಕಳುಹಿಸುವ ಮಾಹಿತಿಯ ಸಂಪತ್ತು ಜ್ಞಾನವನ್ನು ಹೆಚ್ಚಿಸುತ್ತದೆ ಮತ್ತು ಚಂದ್ರ ಮತ್ತು ಅದರಾಚೆಗಿನ ರಹಸ್ಯಗಳ ಬಗ್ಗೆ ವಿನೂತನ ಆವಿಷ್ಕಾರಗಳು ಮತ್ತು ಒಳನೋಟಗಳಿಗೆ ದಾರಿ ಮಾಡಿಕೊಡುತ್ತದೆ.

ಕ್ಷಿಪ್ರ ತಾಂತ್ರಿಕ ಪ್ರಗತಿಗಳು ಮತ್ತು ನಾವೀನ್ಯತೆಯ ಅನ್ವೇಷಣೆಯ ಈ ಯುಗದಲ್ಲಿ, ಭಾರತದ ವಿಜ್ಞಾನಿಗಳು ಜ್ಞಾನ, ಸಮರ್ಪಣೆ ಮತ್ತು ಪರಿಣತಿಯ ದಾರಿದೀಪಗಳಾಗಿ ನಿಂತಿದ್ದಾರೆ ಎಂದು ಸಂಪುಟವು ದೃಢವಾಗಿ ನಂಬುತ್ತದೆ. ಶೋಧನೆ ಮತ್ತು ಪರಿಶೋಧನೆಗೆ ಉತ್ಕಟವಾದ ಬದ್ಧತೆಯೊಂದಿಗೆ ಅವರ ವಿಶ್ಲೇಷಣಾತ್ಮಕ ಪಾರಮ್ಯವು ಸೇರಿಕೊಂಡು ಜಾಗತಿಕ ವೈಜ್ಞಾನಿಕ ಸಾಧನೆಗಳಲ್ಲಿ ರಾಷ್ಟ್ರವನ್ನು ನಿರಂತರವಾಗಿ ಮುಂಚೂಣಿಗೆ ತಂದಿದೆ. ಉತ್ಕೃಷ್ಟತೆಯ ನಿರಂತರ ಅನ್ವೇಷಣೆ, ತಣಿಯದ ಕುತೂಹಲ ಮತ್ತು ಸವಾಲುಗಳನ್ನು ಜಯಿಸುವ ಅದಮ್ಯ ಚೈತನ್ಯವು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಅವರ ಖ್ಯಾತಿಯನ್ನು ಭದ್ರಪಡಿಸಿರುವುದು ಮಾತ್ರವಲ್ಲದೆ ಅಸಂಖ್ಯಾತ ಇತರರನ್ನು ದೊಡ್ಡ ಕನಸು ಕಾಣಲು ಮತ್ತು ಜಾಗತಿಕ ಜ್ಞಾನದ ವಿಶಾಲವಾದ ಕಸೂತಿಗೆ ಕೊಡುಗೆ ನೀಡಲು ಪ್ರೇರೇಪಿಸಿದೆ.

ಚಂದ್ರಯಾನ-3 ಮತ್ತು ಸಾಮಾನ್ಯವಾಗಿ ಭಾರತದ ಬಾಹ್ಯಾಕಾಶ ಕಾರ್ಯಕ್ರಮದ ಯಶಸ್ಸಿಗೆ ಹೆಚ್ಚಿನ ಸಂಖ್ಯೆಯ ಮಹಿಳಾ ವಿಜ್ಞಾನಿಗಳು ಕೊಡುಗೆ ನೀಡಿರುವುದರ ಬಗ್ಗೆ ಸಂಪುಟವು ಹೆಮ್ಮೆಪಡುತ್ತದೆ. ಇದು ಮುಂಬರುವ ವರ್ಷಗಳಲ್ಲಿ ಹಲವಾರು ಮಹತ್ವಾಕಾಂಕ್ಷಿ ಮಹಿಳಾ ವಿಜ್ಞಾನಿಗಳನ್ನು ಪ್ರೇರೇಪಿಸುತ್ತದೆ.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯ ಮತ್ತು ಮಾದರಿ ನಾಯಕತ್ವಕ್ಕಾಗಿ ಮತ್ತು ಮಾನವ ಕಲ್ಯಾಣ ಮತ್ತು ವೈಜ್ಞಾನಿಕ ಪ್ರಗತಿಗಾಗಿ ಭಾರತದ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಅವರ ಅಚಲ ಬದ್ಧತೆಗಾಗಿ ಸಂಪುಟವು ಪ್ರಧಾನಿಯವರನ್ನು ಅಭಿನಂದಿಸುತ್ತದೆ. ನಮ್ಮ ವಿಜ್ಞಾನಿಗಳ ಸಾಮರ್ಥ್ಯಗಳಲ್ಲಿ ಅವರಿಗಿರುವ ನಂಬಿಕೆ ಮತ್ತು ಅವರ ನಿರಂತರ ಪ್ರೋತ್ಸಾಹವು ಯಾವಾಗಲೂ ವಿಜ್ಞಾನಿಗಳ ಉತ್ಸಾಹವನ್ನು ಬಲಪಡಿಸಿದೆ.
ಮೊದಲು ಗುಜರಾತ್ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಮತ್ತು ನಂತರ ಪ್ರಧಾನ ಮಂತ್ರಿಯಾಗಿ ಸರ್ಕಾರದ ಮುಖ್ಯಸ್ಥರಾಗಿ 22 ವರ್ಷಗಳ ಸುದೀರ್ಘ ಅವಧಿಯಲ್ಲಿ, ಶ್ರೀ ನರೇಂದ್ರ ಮೋದಿ ಅವರು ಎಲ್ಲಾ ಚಂದ್ರಯಾನ ಮಿಷನ್ ಗಳೊಂದಿಗೆ ಭಾವನಾತ್ಮಕ ಬಾಂಧವ್ಯವನ್ನು ಹೊಂದಿದ್ದಾರೆ. ಮಾಜಿ ಪ್ರಧಾನಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರು ಇಂತಹ ಮಿಷನ್ ಘೋಷಿಸಿದಾಗ ಅವರು ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದರು. 2008ರಲ್ಲಿ ಚಂದ್ರಯಾನ-1 ಯಶಸ್ವಿಯಾಗಿ ಉಡಾವಣೆಯಾದಾಗ ಖುದ್ದು ಇಸ್ರೋಗೆ ತೆರಳಿ ವಿಜ್ಞಾನಿಗಳನ್ನು ಅಭಿನಂದಿಸಿದರು. 2019 ರಲ್ಲಿ ಚಂದ್ರಯಾನ-2 ರ ಸಂದರ್ಭದಲ್ಲಿ, ಭಾರತವು ಬಾಹ್ಯಾಕಾಶ ಪರಿಭಾಷೆಯಲ್ಲಿ ಹೇಳುವುದಾದರೆ, ಚಂದ್ರನ ಮೇಲ್ಮೈಯಿಂದ ಕೂದಲೆಳೆಯ ಅಂತರದಲ್ಲಿದ್ದಾಗ, ಪ್ರಧಾನ ಮಂತ್ರಿಯವರ ಸೂಕ್ಷ್ಮ ವಿವೇಚನೆಯ ನಾಯಕತ್ವ ಮತ್ತು ಮಾನವ ಸ್ಪರ್ಶವು ವಿಜ್ಞಾನಿಗಳ ಉತ್ಸಾಹವನ್ನು ಮೇಲಕ್ಕೆತ್ತಿತು, ಅವರ ಸಂಕಲ್ಪವನ್ನು ಹೆಚ್ಚಿಸಿತು ಮತ್ತು ಹೆಚ್ಚಿನ ಉದ್ದೇಶದೊಂದಿಗೆ ಮಿಷನ್ ನಲ್ಲಿ ಮುಂದುವರೆಯಲು ಅವರನ್ನು ಪ್ರೇರೇಪಿಸಿತು. 

ಪ್ರಧಾನಿ ನರೇಂದ್ರ ಮೋದಿ ಅವರು ಯಾವಾಗಲೂ ವಿಜ್ಞಾನ ಮತ್ತು ನಾವೀನ್ಯತೆಯನ್ನು ಪ್ರೋತ್ಸಾಹಿಸಿದ್ದಾರೆ. ಕಳೆದ 9 ವರ್ಷಗಳಲ್ಲಿ, ಸಂಶೋಧನೆ ಮತ್ತು ನಾವೀನ್ಯತೆಯನ್ನು ಸುಲಭಗೊಳಿಸುವ ಸುಧಾರಣೆಗಳ ಸರಣಿಯನ್ನು ಪ್ರಾರಂಭಿಸಲಾಗಿದೆ. ಬಾಹ್ಯಾಕಾಶ ಕ್ಷೇತ್ರಕ್ಕೆ ಸಂಬಂಧಿಸಿದಂತೆ, ಖಾಸಗಿ ವಲಯ ಮತ್ತು ನಮ್ಮ ನವೋದ್ಯಮಗಳಿಗೆ ಭಾರತದಲ್ಲಿ ಹೆಚ್ಚಿನ ಅವಕಾಶಗಳು ಸಿಗುವುದನ್ನು ಪ್ರಧಾನಿ ಮೋದಿ ಖಚಿತಪಡಿಸಿದರು. ಉದ್ಯಮ, ಶೈಕ್ಷಣಿಕ ಮತ್ತು ನವೋದ್ಯಮಗಳ ಪೂರಕ ವ್ಯವಸ್ಥೆಯನ್ನು ರಚಿಸಲು ಮತ್ತು ಜಾಗತಿಕ ಬಾಹ್ಯಾಕಾಶ ಆರ್ಥಿಕತೆಯಲ್ಲಿ ಪ್ರಮುಖ ಪಾಲನ್ನು ಆಕರ್ಷಿಸಲು ಬಾಹ್ಯಾಕಾಶ ಇಲಾಖೆಯ ಅಡಿಯಲ್ಲಿ IN-SPAce ಸ್ವಾಯತ್ತ ಸಂಸ್ಥೆಯನ್ನು ಜೂನ್ 2020 ರಲ್ಲಿ ಸ್ಥಾಪಿಸಲಾಯಿತು. ಇದು ಬಾಹ್ಯಾಕಾಶ ಜಗತ್ತಿನಲ್ಲಿ ಭಾರತದ ಪ್ರಗತಿಯನ್ನು ಹೆಚ್ಚಿಸುವ ಸಾಧನವಾಗಿದೆ. ಹ್ಯಾಕಥಾನ್ ಗಳಿಗೆ ಹೆಚ್ಚಿನ ಒತ್ತು ನೀಡಿರುವುದು ಯುವ ಭಾರತೀಯರಿಗೆ ಅನೇಕ ಅವಕಾಶಗಳನ್ನು ತೆರೆದಿದೆ.

ಚಂದ್ರನ ಮೇಲಿನ ಎರಡು ಪಾಯಿಂಟ್ ಗಳಿಗೆ ತಿರಂಗಾ ಪಾಯಿಂಟ್ (ಚಂದ್ರಯಾನ-2ರ ಹೆಜ್ಜೆಗುರುತು) ಮತ್ತು ಶಿವಶಕ್ತಿ ಪಾಯಿಂಟ್ (ಚಂದ್ರಯಾನ-3ರ ಲ್ಯಾಂಡಿಂಗ್ ಸ್ಥಳ) ಎಂದು ಹೆಸರಿಸಿರುವುದನ್ನು ಸಂಪುಟವು ಸ್ವಾಗತಿಸುತ್ತದೆ. ಈ ಹೆಸರುಗಳು ಆಧುನಿಕತೆಯ ಚೈತನ್ಯವನ್ನು ಅಳವಡಿಸಿಕೊಂಡು  ನಮ್ಮ ಹಿಂದಿನ ಸಾರವನ್ನು ಸುಂದರವಾಗಿ ಸೆರೆಹಿಡಿಯುತ್ತವೆ. ಈ ಹೆಸರುಗಳು ಕೇವಲ ಶೀರ್ಷಿಕೆಗಳಿಗಿಂತ ಹೆಚ್ಚು. ಅವು ನಮ್ಮ ಸಹಸ್ರಮಾನಗಳಷ್ಟು ಹಳೆಯದಾದ ಪರಂಪರೆಯನ್ನು ನಮ್ಮ ವೈಜ್ಞಾನಿಕ ಮಹತ್ವಾಕಾಂಕ್ಷೆಗಳೊಂದಿಗೆ ಜೋಡಿಸುವ ಒಂದು ಎಳೆಯನ್ನು ಪ್ರತಿಷ್ಠಾಪಿಸುತ್ತವೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ “ಜೈ ವಿಜ್ಞಾನ, ಜೈ ಅನುಸಂಧಾನ”ಎಂಬ ಘೋಷಣೆಗೆ ಚಂದ್ರಯಾನ-3 ರ ಯಶಸ್ಸು ಒಂದು ದೊಡ್ಡ ಸಾಕ್ಷಿಯಾಗಿದೆ. ಬಾಹ್ಯಾಕಾಶ ಕ್ಷೇತ್ರವು ಈಗ ಭಾರತೀಯ ಸ್ವದೇಶಿ ನವೋದ್ಯಮಗಳು ಮತ್ತು ಎಂ ಎಸ್ ಎಂ ಇ ಗಳಿಗೆ ಮತ್ತಷ್ಟು ತೆರೆದುಕೊಳ್ಳುತ್ತದೆ ಮತ್ತು ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸುತ್ತದೆ ಮತ್ತು ಹೊಸ ಆವಿಷ್ಕಾರಗಳಿಗೆ ಅವಕಾಶವನ್ನು ನೀಡುತ್ತದೆ. ಇದು ಭಾರತದ ಯುವಜನರಿಗೆ ಸಾಧ್ಯತೆಗಳ ಜಗತ್ತನ್ನು ತೆರೆಯುತ್ತದೆ.

ಚಂದ್ರಯಾನ-3 ಮಿಷನ್ ನ ಯಶಸ್ಸಿನಿಂದ ಬರುವ ಜ್ಞಾನವನ್ನು ಮಾನವೀಯತೆಯ, ವಿಶೇಷವಾಗಿ ಗ್ಲೋಬಲ್ ಸೌತ್ (ಆರ್ಥಿಕವಾಗಿ ಹಿಂದುಳಿದ) ದೇಶಗಳ ಪ್ರಯೋಜನ ಮತ್ತು ಪ್ರಗತಿಗೆ ಬಳಸಲಾಗುತ್ತದೆ ಎಂದು ಸ್ಪಷ್ಟವಾಗಿ ಹೇಳುವ ಮೂಲಕ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಸುಧೈವ ಕುಟುಂಬಕಂನಲ್ಲಿ ನಮ್ಮ ಅನಾದಿಕಾಲದ ನಂಬಿಕೆಯ ಮನೋಭಾವವನ್ನು ಮತ್ತೊಮ್ಮೆ ವ್ಯಕ್ತಪಡಿಸಿದ್ದಾರೆ.

ಭಾರತದಲ್ಲಿ ಪ್ರಗತಿಯ ಪ್ರಭೆಯು ಯಾವಾಗಲೂ ಇತರೆಡೆಯ ಜನರ ಜೀವನವನ್ನು ಬೆಳಗಿಸಲು ಪ್ರಯತ್ನಿಸುತ್ತದೆ.

ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಪ್ರಗತಿಯು ಕೇವಲ ವೈಜ್ಞಾನಿಕ ಸಾಧನೆಗಳಿಗಿಂತ ಹೆಚ್ಚು ಎಂದು ಸಂಪುಟ ನಂಬುತ್ತದೆ. ಅವುಗಳು ಪ್ರಗತಿ, ಸ್ವಾವಲಂಬನೆ ಮತ್ತು ಜಾಗತಿಕ ನಾಯಕತ್ವದ ದೃಷ್ಟಿಯನ್ನು ಪ್ರತಿನಿಧಿಸುತ್ತವೆ. ಇದು ಉದಯೋನ್ಮುಖ ನವಭಾರತದ ಸಂಕೇತವೂ ಹೌದು. ಉಪಗ್ರಹ ಸಂವಹನ ಮತ್ತು ಹವಾಮಾನಶಾಸ್ತ್ರದಿಂದ ಕೃಷಿ ಮತ್ತು ವಿಪತ್ತು ನಿರ್ವಹಣೆಯವರೆಗೆ ಉದ್ಯಮಗಳಾದ್ಯಂತ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸಲು ಈ ಅವಕಾಶಗಳನ್ನು ಬಳಸಿಕೊಳ್ಳುವಂತೆ ನಾವು ನಮ್ಮ ಸಹ ನಾಗರಿಕರನ್ನು ಒತ್ತಾಯಿಸುತ್ತೇವೆ. ನಮ್ಮ ಆವಿಷ್ಕಾರಗಳು ವಾಸ್ತವದಲ್ಲಿ ಸಾಕರಾವಾಗುವುದು, ನಮ್ಮ ಮೂಲಸೌಕರ್ಯವನ್ನು ಹೆಚ್ಚಿಸುವುದು, ನಮ್ಮ ಡಿಜಿಟಲ್ ಆರ್ಥಿಕತೆಯನ್ನು ಹೆಚ್ಚಿಸುವುದು ಮತ್ತು ವಿವಿಧ ಕ್ಷೇತ್ರಗಳಿಗೆ ನಿರ್ಣಾಯಕ ಡೇಟಾವನ್ನು ಒದಗಿಸುವುದನ್ನು ಖಚಿತಪಡಿಸಿಕೊಳ್ಳಲು ನಾವು ಕೆಲಸ ಮಾಡಬೇಕು.

ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆಗಳ ಈ ಯುಗದಲ್ಲಿ, ಹೆಚ್ಚಿನ ಯುವಜನತೆಯನ್ನು ವಿಜ್ಞಾನದ ಕಡೆಗೆ ಪ್ರೇರೇಪಿಸುವಂತೆ ಶಿಕ್ಷಣದ ಜಗತ್ತಿನೊಂದಿಗೆ ಸಂಬಂಧ ಹೊಂದಿರುವವರಿಗೆ ಸಂಪುಟವು ವಿಶೇಷವಾಗಿ ಮನವಿ ಮಾಡುತ್ತದೆ. ಚಂದ್ರಯಾನ-3 ರ ಯಶಸ್ಸು ಈ ಕ್ಷೇತ್ರಗಳಲ್ಲಿ ಆಸಕ್ತಿಯ ಕಿಡಿ ಹೊತ್ತಿಸಲು ಮತ್ತು ನಮ್ಮ ರಾಷ್ಟ್ರದಲ್ಲಿ ಅವಕಾಶಗಳನ್ನು ಬಳಸಿಕೊಳ್ಳಲು ಸಂದರ್ಭವನ್ನು ಒದಗಿಸಿದೆ.

ಈ ಸಂಪುಟವು ಈ ಚಾರಿತ್ರಿಕ ಮಿಷನ್ ಗೆ ಕೊಡುಗೆ ನೀಡಿದ ಪ್ರತಿಯೊಬ್ಬ ವ್ಯಕ್ತಿಯನ್ನು ಶ್ಲಾಘಿಸುತ್ತದೆ ಮತ್ತು ಮೆಚ್ಚುಗೆ ಸೂಚಿಸುತ್ತದೆ, ಚಂದ್ರಯಾನ-3 ಭಾರತವು ಉತ್ಸಾಹ, ಪರಿಶ್ರಮ ಮತ್ತು ಅಚಲವಾದ ಸಮರ್ಪಣೆಯೊಂದಿಗೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಉಜ್ವಲವಾದ ಸಾಕ್ಷಿಯಾಗಿದೆ ಎಂದು ಒಪ್ಪಿಕೊಳ್ಳುತ್ತದೆ. ಸಂತೋಷ ಮತ್ತು ಹೆಮ್ಮೆಯಿಂದ ತುಂಬಿರುವ ದೇಶದ ಜನರು, 2047 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ನಿರ್ಮಿಸಲು ತಮ್ಮನ್ನು ತಾವು ಸಮರ್ಪಿಸಿಕೊಳ್ಳುತ್ತಾರೆ ಎಂಬ ವಿಶ್ವಾಸವನ್ನು ಸಂಪುಟವು ವ್ಯಕ್ತಪಡಿಸುತ್ತದೆ.

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Snacks, Laughter And More, PM Modi's Candid Moments With Indian Workers In Kuwait

Media Coverage

Snacks, Laughter And More, PM Modi's Candid Moments With Indian Workers In Kuwait
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 22 ಡಿಸೆಂಬರ್ 2024
December 22, 2024

PM Modi in Kuwait: First Indian PM to Visit in Decades

Citizens Appreciation for PM Modi’s Holistic Transformation of India