ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯು (CCEA), ರೈಲ್ವೆ ಸಚಿವಾಲಯದ ಒಟ್ಟು ಅಂದಾಜು ವೆಚ್ಚ ರೂ.6,798 ಕೋಟಿಗಳ ಎರಡು ಯೋಜನೆಗಳಿಗೆ ಅನುಮೋದನೆ ನೀಡಿದೆ.
ಎರಡು ಅನುಮೋದಿತ ಯೋಜನೆಗಳೆಂದರೆ - (ಎ) ನರ್ಕಟಿಯಾಗಂಜ್-ರಕ್ಸಾಲ್-ಸೀತಾಮರ್ಹಿ-ದರ್ಭಂಗಾ ಮತ್ತು ಸೀತಾಮರ್ಹಿ-ಮುಜಾಫರ್‌ಪುರ ವಿಭಾಗದ 256 ಕಿ.ಮೀ ವ್ಯಾಪ್ತಿಯನ್ನು ದ್ವಿಗುಣಗೊಳಿಸುವುದು ಮತ್ತು (ಬಿ) ಎರ್ರುಪಾಲೆಂ ಮತ್ತು ನಂಬೂರು ನಡುವೆ ಅಮರಾವತಿ ಮೂಲಕ 57 ಕಿಲೋಮೀಟರ್‌ಗಳನ್ನು ಒಳಗೊಂಡ ಹೊಸ ಮಾರ್ಗದ ನಿರ್ಮಾಣ.
ನರ್ಕಟಿಯಾಗಂಜ್-ರಕ್ಸಾಲ್-ಸೀತಾಮರ್ಹಿ-ದರ್ಬಂಗಾ ಮತ್ತು ಸಿತಾಮರ್ಹಿ-ಮುಜಫರ್‌ಪುರ್ ವಿಭಾಗವನ್ನು ದ್ವಿಗುಣಗೊಳಿಸುವುದರಿಂದ ನೇಪಾಳ, ಈಶಾನ್ಯ ಭಾರತ ಮತ್ತು ಗಡಿ ಪ್ರದೇಶಗಳಿಗೆ ಸಂಪರ್ಕವನ್ನು ಬಲಪಡಿಸಲಾಗುತ್ತದೆ ಮತ್ತು ಸರಕು ರೈಲುಗಳ ಜೊತೆಗೆ ಪ್ರಯಾಣಿಕ ರೈಲುಗಳ ಚಲನೆಯನ್ನು ಸುಗಮಗೊಳಿಸುತ್ತದೆ ಮತ್ತು ಪ್ರದೇಶದ ಸಾಮಾಜಿಕ-ಆರ್ಥಿಕ ಬೆಳವಣಿಗೆಗೆ ಇದು ಕಾರಣವಾಗುತ್ತದೆ.
ಹೊಸ ರೈಲು ಮಾರ್ಗ ಯೋಜನೆ ಎರ್ರುಪಾಲೆಂ-ಅಮರಾವತಿ-ನಂಬೂರು ಆಂಧ್ರಪ್ರದೇಶದ ಎನ್‌ಟಿಆರ್ ವಿಜಯವಾಡ ಮತ್ತು ಗುಂಟೂರು ಜಿಲ್ಲೆಗಳು ಮತ್ತು ತೆಲಂಗಾಣದ ಖಮ್ಮಂ ಜಿಲ್ಲೆಯ ಮೂಲಕ ಹಾದು ಹೋಗುತ್ತದೆ.
3 ರಾಜ್ಯಗಳಲ್ಲಿ ಅಂದರೆ ಆಂಧ್ರಪ್ರದೇಶ, ತೆಲಂಗಾಣ ಮತ್ತು ಬಿಹಾರದ 8 ಜಿಲ್ಲೆಗಳನ್ನು ಒಳಗೊಂಡಿರುವ ಎರಡು ಯೋಜನೆಗಳು ಭಾರತೀಯ ರೈಲ್ವೆಯ ಅಸ್ತಿತ್ವದಲ್ಲಿರುವ ನೆಟ್‌ವರ್ಕ್ ಅನ್ನು ಸುಮಾರು 313 ಕಿ.ಮೀ.ಗಳಷ್ಟು ಹೆಚ್ಚಿಸುತ್ತವೆ.
ಹೊಸ ಲೈನ್ ಯೋಜನೆಯು ಸುಮಾರು 12 ಲಕ್ಷ ಜನಸಂಖ್ಯೆಗೆ ಹೆಚ್ಚಿನ ಸಂಪರ್ಕವನ್ನು ಒದಗಿಸುತ್ತದೆ. 9 ಹೊಸ ನಿಲ್ದಾಣಗಳೊಂದಿಗೆ 168 ಗ್ರಾಮಗಳಿಗೆ ಸೇವೆ ಒದಗಿಸಲಿದೆ. ಬಹು-ಟ್ರ್ಯಾಕಿಂಗ್ ಯೋಜನೆಯು ಎರಡು ಮಹತ್ವಾಕಾಂಕ್ಷೆಯ ಜಿಲ್ಲೆಗಳಿಗೆ (ಸೀತಾಮರ್ಹಿ ಮತ್ತು ಮುಜಾಫರ್‌ಪುರ) ಸಂಪರ್ಕವನ್ನು ಹೆಚ್ಚಿಸುತ್ತದೆ. 388 ಗ್ರಾಮಗಳು ಮತ್ತು ಸುಮಾರು 9 ಲಕ್ಷ ಜನಸಂಖ್ಯೆಗೆ ಇದು ಅನುಕೂಲವಾಗಲಿದೆ.
ಕೃಷಿ ಉತ್ಪನ್ನಗಳು, ರಸಗೊಬ್ಬರ, ಕಲ್ಲಿದ್ದಲು, ಕಬ್ಬಿಣದ ಅದಿರು, ಉಕ್ಕು, ಸಿಮೆಂಟ್ ಇತ್ಯಾದಿ ಸರಕುಗಳ ಸಾಗಣೆಗೆ ಇವು ಅತ್ಯಗತ್ಯ ಮಾರ್ಗಗಳಾಗಿವೆ. ಸಾಮರ್ಥ್ಯ ವರ್ಧನೆಯ ಕಾರ್ಯಗಳು 31 MTPA (ವರ್ಷಕ್ಕೆ ಮಿಲಿಯನ್ ಟನ್) ಪ್ರಮಾಣದ ಹೆಚ್ಚುವರಿ ಸರಕು ಸಾಗಣೆಗೆ ಕಾರಣವಾಗುತ್ತವೆ. ರೈಲ್ವೆಯು ಪರಿಸರ ಸ್ನೇಹಿ ಮತ್ತು ಇಂಧನ ದಕ್ಷ ಸಾರಿಗೆ ವಿಧಾನವಾಗಿದ್ದು, ಹವಾಮಾನ ಗುರಿಗಳನ್ನು ಸಾಧಿಸಲು ಮತ್ತು ದೇಶದ ಲಾಜಿಸ್ಟಿಕ್ಸ್ ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಇಂಗಾಲ ಹೊರಸೂಸುವಿಕೆ (168 ಕೋಟಿ ಕೆಜಿ) ಕಡಿಮೆ ಮಾಡಲಾಗುತ್ತಿದ್ದು, ಇದು 7 ಕೋಟಿ ಮರಗಳನ್ನು ನೆಡುವುದಕ್ಕೆ ಸಮನಾಗಿರುತ್ತದೆ.
ಹೊಸ ಮಾರ್ಗದ ಪ್ರಸ್ತಾವನೆಯು ಆಂಧ್ರಪ್ರದೇಶದ ಉದ್ದೇಶಿತ ರಾಜಧಾನಿ "ಅಮರಾವತಿ" ಗೆ ನೇರ ಸಂಪರ್ಕವನ್ನು ಒದಗಿಸುತ್ತದೆ ಮತ್ತು ಕೈಗಾರಿಕೆಗಳು ಮತ್ತು ಜನಸಂಖ್ಯೆಗೆ ಚಲನಶೀಲತೆಯನ್ನು ಸುಧಾರಿಸುತ್ತದೆ, ಭಾರತೀಯ ರೈಲ್ವೇಗಳಿಗೆ ವರ್ಧಿತ ದಕ್ಷತೆ ಮತ್ತು ಸೇವಾ ವಿಶ್ವಾಸಾರ್ಹತೆಯನ್ನು ಒದಗಿಸುತ್ತದೆ. ಬಹು-ಟ್ರ್ಯಾಕಿಂಗ್ ಪ್ರಸ್ತಾವನೆಯು ಕಾರ್ಯಾಚರಣೆಗಳನ್ನು ಸರಾಗಗೊಳಿಸುತ್ತದೆ ಮತ್ತು ದಟ್ಟಣೆಯನ್ನು ಕಡಿಮೆ ಮಾಡುತ್ತದೆ, ಭಾರತೀಯ ರೈಲ್ವೇಯಾದ್ಯಂತ ಅತ್ಯಂತ ಜನನಿಬಿಡ ವಿಭಾಗಗಳಲ್ಲಿ ಹೆಚ್ಚು ಅಗತ್ಯವಿರುವ ಮೂಲಸೌಕರ್ಯ ಅಭಿವೃದ್ಧಿಯನ್ನು ಒದಗಿಸುತ್ತದೆ.
ಈ ಯೋಜನೆಗಳು ಪ್ರಧಾನಮಂತ್ರಿಯವರ ನವಭಾರತದ ದೃಷ್ಟಿಗೆ ಅನುಗುಣವಾಗಿರುತ್ತವೆ, ಇದು "ಆತ್ಮನಿರ್ಭರ್" ಮಾಡುವ ಮೂಲಕ ಈ ಪ್ರದೇಶದಲ್ಲಿ ಸಮಗ್ರ ಅಭಿವೃದ್ಧಿಯ ಮೂಲಕ ಉದ್ಯೋಗ/ಸ್ವಯಂ ಉದ್ಯೋಗ ಅವಕಾಶಗಳನ್ನು ಹೆಚ್ಚಿಸುತ್ತದೆ.
ಯೋಜನೆಗಳು ಪ್ರಧಾನಮಂತ್ರಿ-ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಬಹು-ಮಾದರಿ ಸಂಪರ್ಕದ ಪ್ರಮುಖ ಭಾಗವಾಗಿದೆ, ಇದು ಸಮಗ್ರ ಯೋಜನೆಯ ಮೂಲಕ ಸಾಧ್ಯವಾಗಿದೆ ಮತ್ತು ಜನರು, ಸರಕು ಮತ್ತು ಸೇವೆಗಳ ಚಲನೆಗೆ ತಡೆರಹಿತ ಸಂಪರ್ಕವನ್ನು ಒದಗಿಸುತ್ತದೆ.
In a boost to infrastructure, the Union Cabinet has approved two railway projects which will boost connectivity and commerce in Andhra Pradesh, Bihar and Telangana.https://t.co/qwOu1VlIpt
— Narendra Modi (@narendramodi) October 24, 2024