ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಜಾರ್ಖಂಡ್ ನ ಡಿಯೋಘರ್ ನಲ್ಲಿ ನೂತನ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್) ಸ್ಥಾಪನೆಗೆ ತನ್ನ ಸಮ್ಮತಿ ಸೂಚಿಸಿದೆ. ಯೋಜನೆಗೆ 1103 ಕೋಟಿ ರೂಪಾಯಿಗಳ ಮೌಲ್ಯದ ನಿಧಿಗೂ ಅನುಮೋದಿಸಿದೆ ಮತ್ತು ಏಮ್ಸ್ ಅನ್ನು ಪ್ರಧಾನಮಂತ್ರಿ ಆರೋಗ್ಯ ಸುರಕ್ಷಾ ಯೋಜನೆ (ಪಿ.ಎಂ.ಎಸ್.ಎಸ್.ವೈ.) ಅಡಿ ಸ್ಥಾಪಿಸುವುದಾಗಿ ಹೇಳಿದೆ.
ವಿವರಗಳು:
ಡಿಯೋಘರ್ ನ ಏಮ್ಸ್ ಈ ಕೆಳಗಿನವುಗಳನ್ನು ಒಳಗೊಂಡಿರುತ್ತದೆ :
750 ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆ, ತುರ್ತು ಚಿಕಿತ್ಸಾ ಘಕಟದ ಸೌಲಭ್ಯ.
- ವಾರ್ಷಿಕ 60 ವಿದ್ಯಾರ್ಥಿಗಳ ಪ್ರವೇಶಾವಕಾಶದ ಬಿ.ಎಸ್ಸಿ (ನರ್ಸಿಂಗ್) ಒಳಗೊಂಡನರ್ಸಿಂಗ್ ಕಾಲೇಜು, ನವದೆಹಲಿಯ ಏಮ್ಸ್ ಮಾದರಿಯಲ್ಲೇ ವಸತಿ ಸಮುಚ್ಛಯ ಮತ್ತು ಪೂರಕ ಸೌಲಭ್ಯ/ಸೇವೆಗಳು.
- 15 ಶಸ್ತ್ರಚಿಕಿತ್ಸಾ ಕೊಠಡಿ ಸೇರಿದಂತೆ 20 ಸ್ಪೆಷಾಲಿಟಿ/ಸೂಪರ್ ಸ್ಪೆಷಾಲಿಟಿ ವಿಭಾಗಗಳು.
- ಸಾಂಪ್ರದಾಯಿಕ ವೈದ್ಯ ಪದ್ಧತಿಯಲ್ಲಿ ಚಿಕಿತ್ಸೆ ಒದಗಿಸಲು 30 ಹಾಸಿಗೆಗಳ ಸಾಮರ್ಥ್ಯದ ಆಯುಷ್ ವಿಭಾಗ.
ಪರಿಣಾಮ :
ಡಿಯೋಘರ್ ನಲ್ಲಿ ನೂತನ ಏಮ್ಸ್ ಸ್ಥಾಪನೆಯಿಂದ ಆ ಭಾಗದ ಜನರಿಗೆ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ(ಎನ್.ಎಚ್.ಎಂ.) ಸೂಪರ್ ಸ್ಪೆಷಾಲಿಟಿ ಆರೋಗ್ಯ ಆರೈಖೆ ಒದಗಿಸಲು ಮತ್ತು ಆ ವಲಯದ ಪ್ರಾಥಮಿಕ ಮತ್ತು ಮಾಧ್ಯಮಿಕ ಮಟ್ಟದ ಆಸ್ಪತ್ರೆಗಳಿಗೆ ವೈದ್ಯರು ಮತ್ತು ಇತರ ಆರೋಗ್ಯ ಕಾರ್ಯಕರ್ತರ ದೊಡ್ಡ ತಂಡವನ್ನೇ ಪೂರೈಸಲು ಅನುವಾಗುತ್ತದೆ.
ಹಿನ್ನೆಲೆ:
ಪಿ.ಎಂ.ಎಸ್.ವೈ. ಅಡಿಯಲ್ಲಿ ಏಮ್ಸ್ ಅನ್ನು ಭುವನೇಶ್ವರ್, ಭೋಪಾಲ್, ರಾಯ್ಪುರ, ಜೋದ್ ಪುರ, ಋಷಿಕೇಶ್ ಮತ್ತು ಪಾಟ್ನಾದಲ್ಲಿ ಸ್ಥಾಪಿಸಲಾಗಿದೆ. ರಾಯ್ ಭರೇಲಿ (ಯುಪಿ), ನಾಗ್ಪುರ್ (ಮಹಾರಾಷ್ಟ್ರ), ಕಲ್ಯಾಣಿ (ಪಶ್ಚಿಮ ಬಂಗಾಳ) ಮತ್ತು ಮಂಗಳಗಿರಿ, ಗುಂಟೂರು, (ಎ.ಪಿ.) ಕಾಮಗಾರಿ ಪ್ರಗತಿಯಲ್ಲಿದೆ. ಗೋರಖ್ಪುರ (ಯುಪಿ) ಏಮ್ಸ್ ನ ನಿರ್ಮಾಣ ಕಾಮಗಾರಿಗೂ ಮಂಜೂರಾತಿ ನೀಡಲಾಗಿದೆ.
ಈ ಕೆಳಗಿನ ಏಮ್ಸ್ ಗಳಿಗೂ ಮಂಜೂರಾತಿ ನೀಡಲಾಗಿದೆ:
- ಬಟಿಂಡಾ, ಪಂಜಾಬ್ ಜುಲೈ 2016ರಲ್ಲಿ
- ಗುವಾಹಟಿ (ಅಸ್ಸಾಂ) ಮೇ 2017
- ಬಿಲಾಸ್ಪುರ್ (ಹಿಮಾಚಲ ಪ್ರದೇಶ) ಜನವರಿ 2018ರಲ್ಲಿ