ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ಗಡಿ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಒತ್ತು ನೀಡುವ ಮೂಲಕ ರಾಜಸ್ಥಾನ ಮತ್ತು ಪಂಜಾಬ್ ರಾಜ್ಯಗಳ ಗಡಿ ಪ್ರದೇಶಗಳಲ್ಲಿ 4,406 ಕೋಟಿ ರೂಪಾಯಿಗಳ ಹೂಡಿಕೆಯಲ್ಲಿ 2,280 ಕಿಮೀ ರಸ್ತೆಗಳನ್ನು ನಿರ್ಮಿಸಲು ಅನುಮೋದನೆ ನೀಡಿದೆ.
ದೇಶದ ಇತರ ಭಾಗಗಳಿಗೆ ಸಮಾನವಾದ ಸೌಲಭ್ಯಗಳೊಂದಿಗೆ ಗಡಿ ಪ್ರದೇಶಗಳ ಅಭಿವೃದ್ಧಿಗೂ ಕೂಡಾ ವಿಶೇಷ ಗಮನವನ್ನು ನೀಡುವ ಮನಸ್ಥಿತಿಯ ಕಾರಣದಿಂದಾಗಿ ಈ ಯೋಜನೆಗಳನ್ನು ರೂಪಿಸಲು ಸಾಧ್ಯಾವಾಗಿದೆ.
ಈ ನಿರ್ಧಾರವು ರಸ್ತೆ ಮತ್ತು ಟೆಲಿಕಾಂ ಸಂಪರ್ಕ, ಮತ್ತು ನೀರು ಸರಬರಾಜು, ಆರೋಗ್ಯ ಮತ್ತು ಶಿಕ್ಷಣದ ಸೌಲಭ್ಯಗಳು ಮುಂತಾದ ಕ್ಷೇತ್ರಗಳ ಮೇಲೆ ಪ್ರಮುಖ ಪರಿಣಾಮ ಬೀರುತ್ತದೆ. ಇದು ಗ್ರಾಮೀಣ ಜೀವನೋಪಾಯವನ್ನು ಹೆಚ್ಚಿಸುತ್ತದೆ, ಪ್ರಯಾಣವನ್ನು ಸುಲಭಗೊಳಿಸುತ್ತದೆ ಮತ್ತು ಉಳಿದ ಹೆದ್ದಾರಿ ಸಂಪರ್ಕ ಜಾಲದೊಂದಿಗೆ ಈ ಪ್ರದೇಶಗಳ ಸಂಪರ್ಕ ಜೋಡಿಸುವುದನ್ನು ಖಚಿತಪಡಿಸುತ್ತದೆ.