ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಪರಿಷ್ಕೃತ ರಾಷ್ಟ್ರೀಯ ಡೇರಿ ಅಭಿವೃದ್ಧಿ ಕಾರ್ಯಕ್ರಮ  (ಎನ್‌ಪಿಡಿಡಿ)ಕ್ಕೆ ಅನುಮೋದನೆ ನೀಡಿದೆ.

ಕೇಂದ್ರ ಸ್ವಾಮ್ಯದ ಯೋಜನೆಯಾದ ಪರಿಷ್ಕೃತ ಎನ್‌ಪಿಡಿಡಿಗೆ ಹೆಚ್ಚುವರಿಯಾಗಿ 1000 ಕೋಟಿ ರೂ. ಒದಗಿಸಲಾಗಿದೆ. ಇದರೊಂದಿಗೆ, 15ನೇ ಹಣಕಾಸು ಆಯೋಗದ ಅವಧಿ(2021-22ರಿಂದ 2025-26ರ ವರೆಗೆ)ಯಲ್ಲಿ ಒಟ್ಟು ಬಜೆಟ್ ಗಾತ್ರವನ್ನು 2,790 ಕೋಟಿ ರೂ.ಗೆ ಹೆಚ್ಚಿಸಿದಂತಾಗಿದೆ. ಈ ಉಪಕ್ರಮವು ಡೇರಿ ಮೂಲಸೌಕರ್ಯ ಆಧುನೀಕರಣ ಮತ್ತು ವಿಸ್ತರಣೆ ಮೇಲೆ ಗಮನ ಕೇಂದ್ರೀಕರಿಸುತ್ತದೆ, ಇದು ಡೇರಿ ವಲಯದ ಸುಸ್ಥಿರ ಬೆಳವಣಿಗೆ ಮತ್ತು ಉತ್ಪಾದಕತೆಯನ್ನು ಖಚಿತಪಡಿಸುತ್ತದೆ.

ಪರಿಷ್ಕೃತ ಎನ್‌ಪಿಡಿಡಿ ಯೋಜನೆಯು ಹಾಲು ಖರೀದಿ, ಸಂಸ್ಕರಣಾ ಸಾಮರ್ಥ್ಯ ಮತ್ತು ಉತ್ತಮ ಗುಣಮಟ್ಟ ನಿಯಂತ್ರಣ ಖಚಿತಪಡಿಸುವ ಮೂಲಕ ಡೇರಿ ವಲಯಕ್ಕೆ ಉತ್ತೇಜನ ನೀಡುತ್ತದೆ. ರೈತರು ಮಾರುಕಟ್ಟೆಗಳಿಗೆ ಉತ್ತಮ ಪ್ರವೇಶ ಪಡೆಯಲು, ಮೌಲ್ಯವರ್ಧನೆಯ ಮೂಲಕ ಉತ್ತಮ ಬೆಲೆ ಖಚಿತಪಡಿಸಿಕೊಳ್ಳಲು ಮತ್ತು ಪೂರೈಕೆ ಸರಪಳಿಯ ದಕ್ಷತೆ ಸುಧಾರಿಸಲು, ಹೆಚ್ಚಿನ ಆದಾಯ ತಂದುಕೊಡುವ ಮೂಲಕ ಹೆಚ್ಚಿನ ಗ್ರಾಮೀಣ ಅಭಿವೃದ್ಧಿಗೆ ಕಾರಣವಾಗಲಿದೆ.

 ಯೋಜನೆಯು 2 ಪ್ರಮುಖಾಂಶಗಳನ್ನು ಒಳಗೊಂಡಿದೆ:

  1. ಹಾಲು ಶೀಥಲೀಕರಣ ಘಟಕಗಳು, ಸುಧಾರಿತ ಹಾಲು ಪರೀಕ್ಷಾ ಪ್ರಯೋಗಾಲಯಗಳು ಮತ್ತು ಪ್ರಮಾಣೀಕರಣ ವ್ಯವಸ್ಥೆಗಳಂತಹ ಅಗತ್ಯ ಡೇರಿ ಮೂಲಸೌಕರ್ಯಗಳನ್ನು ಸುಧಾರಿಸಲು ಮೊದಲ ಅಂಶ(ಘಟಕ) ಸಮರ್ಪಿತವಾಗಿದೆ. ಇದು ಗ್ರಾಮ ಮಟ್ಟದಲ್ಲಿ ಹೊಸ ಡೇರಿ ಸಹಕಾರಿ ಸಂಘಗಳ ಸ್ಥಾಪನೆಯನ್ನು ಬೆಂಬಲಿಸುತ್ತದೆ. ಈಶಾನ್ಯ ಪ್ರದೇಶ(ಎನ್ಇಆರ್), ಗುಡ್ಡಗಾಡು ಪ್ರದೇಶಗಳು ಮತ್ತು ಕೇಂದ್ರಾಡಳಿತ ಪ್ರದೇಶ(ಯುಟಿಗಳು), ವಿಶೇಷವಾಗಿ ದೂರದ ಮತ್ತು ಹಿಂದುಳಿದ ಪ್ರದೇಶಗಳಲ್ಲಿ ಹಾಲು ಖರೀದಿ ಮತ್ತು ಸಂಸ್ಕರಣೆಯನ್ನು ಬಲಪಡಿಸುತ್ತದೆ. ಜತೆಗೆ ಸಮರ್ಪಿತ ಅನುದಾನ ಬೆಂಬಲದೊಂದಿಗೆ 2 ಹಾಲು ಉತ್ಪಾದಕ ಕಂಪನಿ(ಎಂಪಿಸಿಗಳು)ಗಳ ಸ್ಥಾಪನೆ ಮಾಡುತ್ತದೆ.
  2. "ಸಹಕಾರಿ ಸಂಸ್ಥೆಗಳ ಮೂಲಕ ಡೇರಿ ಚಟುವಟಿಕೆ(ಡಿಟಿಸಿ) ಎಂದು ಕರೆಯಲ್ಪಡುವ 2ನೇ ಅಂಶ(ಘಟಕ)ವು, ಜಪಾನ್ ಸರ್ಕಾರ ಮತ್ತು ಜಪಾನ್ ಇಂಟರ್ ನ್ಯಾಷನಲ್ ಕೋ-ಆಪರೇಷನ್ ಏಜೆನ್ಸಿ(ಜೆಐಸಿಎ) ಜತೆಗಿನ ಒಪ್ಪಂದಗಳ ಪ್ರಕಾರ, ಸಹಕಾರದ ಮೂಲಕ ಡೇರಿ ಅಭಿವೃದ್ಧಿ ಉತ್ತೇಜಿಸುವುದನ್ನು ಮುಂದುವರಿಸುತ್ತದೆ. ಈ ಘಟಕವು 9 ರಾಜ್ಯಗಳಲ್ಲಿ (ಆಂಧ್ರ ಪ್ರದೇಶ, ಬಿಹಾರ, ಮಧ್ಯಪ್ರದೇಶ, ಪಂಜಾಬ್, ರಾಜಸ್ಥಾನ, ತೆಲಂಗಾಣ, ಉತ್ತರಾಖಂಡ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ) ಡೇರಿ ಸಹಕಾರಿ ಸಂಸ್ಥೆಗಳ ಸುಸ್ಥಿರ ಅಭಿವೃದ್ಧಿ, ಉತ್ಪಾದನೆ, ಸಂಸ್ಕರಣೆ ಮತ್ತು ಮಾರುಕಟ್ಟೆ ಮೂಲಸೌಕರ್ಯ ಸುಧಾರಿಸಲು ಗಮನ ಕೇಂದ್ರೀಕರಿಸುತ್ತದೆ.

ಎನ್‌ಪಿಡಿಡಿ ಅನುಷ್ಠಾನವು ಈಗಾಗಲೇ 18.74 ಲಕ್ಷಕ್ಕೂ ಹೆಚ್ಚಿನ ರೈತರಿಗೆ ಪ್ರಯೋಜನ ನೀಡುವ ಮೂಲಕ ಬೃಹತ್ ಸಾಮಾಜಿಕ-ಆರ್ಥಿಕ ಪರಿಣಾಮ ಬೀರಿದೆ. ಅಲ್ಲದೆ, 30,000ಕ್ಕಿಂತ ಹೆಚ್ಚಿನ ನೇರ ಮತ್ತು ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸಿದೆ. ದಿನಕ್ಕೆ ಹೆಚ್ಚುವರಿಯಾಗಿ 100.95 ಲಕ್ಷ ಲೀಟರ್ ಹಾಲು ಖರೀದಿ ಸಾಮರ್ಥ್ಯ ಹೆಚ್ಚಿಸಿದೆ. ಉತ್ತಮ ಹಾಲು ಪರೀಕ್ಷೆ ಮತ್ತು ಗುಣಮಟ್ಟ ನಿಯಂತ್ರಣಕ್ಕಾಗಿ ಅತ್ಯಾಧುನಿಕ ತಂತ್ರಜ್ಞಾನ ಉತ್ತೇಜಿಸುವಲ್ಲಿ ಎನ್‌ಪಿಡಿಡಿ ಬೆಂಬಲ ನೀಡುತ್ತಿದೆ. 51,777ಕ್ಕೂ ಹೆಚ್ಚು ಗ್ರಾಮ ಮಟ್ಟದ ಹಾಲು ಪರೀಕ್ಷಾ ಪ್ರಯೋಗಾಲಯಗಳನ್ನು ಬಲಪಡಿಸಿದೆ. ಜತೆಗೆ 123.33 ಲಕ್ಷ ಲೀಟರ್‌ಗಳ ಒಟ್ಟು ಸಾಮರ್ಥ್ಯದ 5,123 ಬಲ್ಕ್ ಮಿಲ್ಕ್ ಕೂಲರ್‌ಗಳನ್ನು ಸ್ಥಾಪಿಸಲಾಗಿದೆ. ಇದಲ್ಲದೆ, 169 ಪ್ರಯೋಗಾಲಯಗಳನ್ನು ಫೋರಿಯರ್ ಟ್ರಾನ್ಸ್‌ಫಾರ್ಮ್ ಇನ್ ಫ್ರಾರೆಡ್(ಎಫ್ ಟಿಐಆರ್) ಹಾಲು ವಿಶ್ಲೇಷಕಗಳೊಂದಿಗೆ ನವೀಕರಿಸಲಾಗಿದೆ, 232 ಡೇರಿ ಸ್ಥಾವರಗಳು ಈಗ ಕಲಬೆರಕೆ ಪತ್ತೆ ಹಚ್ಚುವ ಸುಧಾರಿತ ವ್ಯವಸ್ಥೆಗಳನ್ನು ಹೊಂದಿವೆ.

ಪರಿಷ್ಕೃತ ಎನ್‌ಪಿಡಿಡಿ ಯೋಜನೆಯು ಈಶಾನ್ಯ ಪ್ರದೇಶ(ಎನ್ಇಆರ್)ದಲ್ಲಿ  ಸಂಸ್ಕರಣೆ ಮಾಡುವ 10,000 ಹೊಸ ಡೇರಿ ಸಹಕಾರ ಸಂಘಗಳನ್ನು ಸ್ಥಾಪಿಸುವ ನಿರೀಕ್ಷೆಯಿದೆ, ಜತೆಗೆ ಎನ್‌ಪಿಡಿಡಿಯ ಚಾಲ್ತಿಯಲ್ಲಿರುವ ಯೋಜನೆಗಳ ಜತೆಗೆ ಮೀಸಲಾದ ಅನುದಾನ ಬೆಂಬಲದೊಂದಿಗೆ 2 ಹಾಲು ಉತ್ಪಾದಕ ಕಂಪನಿ(ಎಂಪಿಸಿಗಳು)ಗಳ ಸ್ಥಾಪನೆಯೂ ಸಹ ಇದೆ. ಇದು ಹೆಚ್ಚುವರಿಯಾಗಿ 3.2 ಲಕ್ಷ ನೇರ ಮತ್ತು ಪರೋಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ವಿಶೇಷವಾಗಿ ಡೇರಿ ನೌಕರಪಡೆಯ ಶೇಕಡ 70ರಷ್ಟಿರುವ ಮಹಿಳೆಯರಿಗೆ ಪ್ರಯೋಜನ ನೀಡುತ್ತದೆ.

ಪರಿಷ್ಕೃತ ರಾಷ್ಟ್ರೀಯ ಡೇರಿ ಅಭಿವೃದ್ಧಿ ಕಾರ್ಯಕ್ರಮವು ಭಾರತದ ಆಧುನಿಕ ಮೂಲಸೌಕರ್ಯವನ್ನು ಶ್ವೇತಕ್ರಾಂತಿ 2.0ಕ್ಕೆ ಅನುಗುಣವಾಗಿ ಪರಿವರ್ತಿಸುತ್ತದೆ. ಹೊಸ ತಂತ್ರಜ್ಞಾನ ಮತ್ತು ಗುಣಮಟ್ಟದ ಪರೀಕ್ಷಾ ಪ್ರಯೋಗಾಲಯಗಳನ್ನು ಒದಗಿಸುವ ಮೂಲಕ ಹೊಸದಾಗಿ ರೂಪುಗೊಂಡ ಸಹಕಾರಿ ಸಂಸ್ಥೆಗಳಿಗೆ ಮತ್ತಷ್ಟು ಬೆಂಬಲ ನೀಡುತ್ತದೆ. ಈ ಕಾರ್ಯಕ್ರಮವು ಗ್ರಾಮೀಣ ಜೀವನೋಪಾಯ  ಸುಧಾರಿಸಲು, ಉದ್ಯೋಗಗಳನ್ನು ಸೃಷ್ಟಿಸಲು ಮತ್ತು ದೇಶಾದ್ಯಂತ ಲಕ್ಷಾಂತರ ರೈತರು ಮತ್ತು ಪಾಲುದಾರರಿಗೆ ಪ್ರಯೋಜನ ನೀಡುವ ಬಲವಾದ, ಹೆಚ್ಚು ಹೊಂದಾಣಿಕೆಯ ಮತ್ತು ಚೇತರಿಕೆಯ ಡೇರಿ ಉದ್ಯಮ ನಿರ್ಮಿಸಲು ಸಹಾಯ ಮಾಡುತ್ತದೆ.

 

  • Bhupat Jariya April 17, 2025

    Jay shree ram
  • Kukho10 April 15, 2025

    PM Modi is the greatest leader in Indian history!
  • jitendra singh yadav April 12, 2025

    जय श्री राम
  • Jitendra Kumar April 12, 2025

    🙏🇮🇳❤️❤️
  • Rajni Gupta April 11, 2025

    जय हो 🙏🙏🙏🙏
  • ram Sagar pandey April 10, 2025

    🌹🙏🏻🌹जय श्रीराम🙏💐🌹🌹🌹🙏🙏🌹🌹जय माँ विन्ध्यवासिनी👏🌹💐जय माता दी 🚩🙏🙏जय श्रीकृष्णा राधे राधे 🌹🙏🏻🌹जय श्रीराम 🙏💐🌹🌹🌹🙏🙏🌹🌹ॐनमः शिवाय 🙏🌹🙏जय कामतानाथ की 🙏🌹🙏
  • Ashish deshmukh April 09, 2025

    Modi
  • Polamola Anji April 08, 2025

    bjp🔥🔥
  • Polamola Anji April 08, 2025

    bjp🔥🔥🔥
  • Kukho10 April 06, 2025

    PM MODI IS AN EXCELLENT LEADER!
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
FY25 India pharma exports cross $30 billion, surge 31% in March

Media Coverage

FY25 India pharma exports cross $30 billion, surge 31% in March
NM on the go

Nm on the go

Always be the first to hear from the PM. Get the App Now!
...
Prime Minister condoles the loss of lives in a building collapse in Dayalpur area of North East Delhi
April 19, 2025
QuotePM announces ex-gratia from PMNRF

Prime Minister Shri Narendra Modi today condoled the loss of lives in a building collapse in Dayalpur area of North East Delhi. He announced an ex-gratia of Rs. 2 lakh from PMNRF for the next of kin of each deceased and Rs. 50,000 to the injured.

The PMO India handle in post on X said:

“Saddened by the loss of lives due to a building collapse in Dayalpur area of North East Delhi. Condolences to those who have lost their loved ones. May the injured recover soon. The local administration is assisting those affected.

An ex-gratia of Rs. 2 lakh from PMNRF would be given to the next of kin of each deceased. The injured would be given Rs. 50,000: PM @narendramodi”