"ಸೆಮಿ ಕಂಡೆಕ್ಟರ್ ಗಳು ಮೂಲ ಬುನಾದಿಯಾಗಿರುವ ಎಲೆಕ್ಟ್ರಾನಿಕ್ಸ್ ಉತ್ಪಾದನೆಗೆ ಭಾರತವನ್ನು ಜಾಗತಿಕ ತಾಣವಾಗಿ ರೂಪಿಸಲು 2,30,000 ಕೋಟಿ ರೂ.ಗಳ ಪ್ರೋತ್ಸಾಹಕಗಳು "
"ಭಾರತದಲ್ಲಿ ಸೆಮಿ ಕಂಡೆಕ್ಟರ್ ಗಳ ಅಭಿವೃದ್ಧಿ ಮತ್ತು ಡಿಸ್ ಪ್ಲೇಗಳ ಉತ್ಪಾದನಾ ಪರಿಸರ ವ್ಯವಸ್ಥೆಗಾಗಿ 76000 ಕೋಟಿ ರೂ. (>10 ಶತಕೋಟಿ ಅಮೆರಿಕನ್ ಡಾಲರ್) ಅನುಮೋದನೆ "
"ಈ ವಲಯವನ್ನು ಮುನ್ನಡೆಸಲು ಭಾರತ ಸೆಮಿಕಂಡಕ್ಟರ್ ಅಭಿಯಾನದ (ಐಎಸ್ಎಂ) ಸ್ಥಾಪನೆ "

ಆತ್ಮನಿರ್ಭರ ಭಾರತದ ದೃಷ್ಟಿಕೋನಕ್ಕೆ ಅನುಗುಣವಾಗಿ ಮತ್ತು ಭಾರತವನ್ನು ವಿದ್ಯುನ್ಮಾನ ವ್ಯವಸ್ಥೆ ವಿನ್ಯಾಸ ಮತ್ತು ಉತ್ಪಾದನೆಯ ಜಾಗತಿಕ ತಾಣವಾಗಿ ಸ್ಥಾನೀಕರಿಸುವ ನಿಟ್ಟಿನಲ್ಲಿ, ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ ದೇಶದಲ್ಲಿ ಸುಸ್ಥಿರ ಸೆಮಿ ಕಂಡೆಕ್ಟರ್ ಮತ್ತು ಡಿಸ್ ಪ್ಲೇ ಪರಿಸರ ವ್ಯವಸ್ಥೆಯ ಅಭಿವೃದ್ಧಿಯ ಸಮಗ್ರ ಕಾರ್ಯಕ್ರಮಕ್ಕೆ ಅನುಮೋದನೆ ನೀಡಿದೆ. ಈ ಕಾರ್ಯಕ್ರಮವು ಸೆಮಿ ಕಂಡಕ್ಟರ್ ಗಳು ಮತ್ತು ಡಿಸ್ ಪ್ಲೇ ಉತ್ಪಾದನೆ ಮತ್ತು ವಿನ್ಯಾಸದ ಕಂಪನಿಗಳಿಗೆ ಜಾಗತಿಕವಾಗಿ ಸ್ಪರ್ಧಾತ್ಮಕ ಪ್ರೋತ್ಸಾಹಕ ಪ್ಯಾಕೇಜ್ ಒದಗಿಸುವ ಮೂಲಕ ಎಲೆಕ್ಟ್ರಾನಿಕ್ಸ್ ಉತ್ಪಾದನೆಯಲ್ಲಿ ಹೊಸ ಯುಗಕ್ಕೆ ನಾಂದಿ ಹಾಡಲಿದೆ. ಇದು ಈ ಕ್ಷೇತ್ರಗಳಲ್ಲಿ ವ್ಯೂಹಾತ್ಮಕ ಪ್ರಾಮುಖ್ಯತೆ ಮತ್ತು ಆರ್ಥಿಕ ಸ್ವಾವಲಂಬನೆಯ ಭಾರತದ ತಾಂತ್ರಿಕ ನಾಯಕತ್ವಕ್ಕೆ ದಾರಿ ಮಾಡಿಕೊಡುತ್ತದೆ.

ಸೆಮಿಕಂಡಕ್ಟರ್ ಗಳು ಮತ್ತು ಡಿಸ್ ಪ್ಲೇಗಳು ಉದ್ಯಮ 4.0 ಅಡಿಯಲ್ಲಿ ಡಿಜಿಟಲ್ ಪರಿವರ್ತನೆಯ ಮುಂದಿನ ಹಂತವನ್ನು ಚಾಲನೆ ಮಾಡುವ ಆಧುನಿಕ ಎಲೆಕ್ಟ್ರಾನಿಕ್ಸ್ ನ ಅಡಿಪಾಯವಾಗಿದೆ. ಸೆಮಿ ಕಂಡಕ್ಟರ್ ಗಳು ಮತ್ತು ಡಿಸ್ ಪ್ಲೇ ಉತ್ಪಾದನೆಯು ಬಹಳ ಸಂಕೀರ್ಣ ಮತ್ತು ತಂತ್ರಜ್ಞಾನ– ವ್ಯಾಪಕ ವಲಯವಾಗಿದ್ದು, ಇದರಲ್ಲಿ ಬೃಹತ್ ಬಂಡವಾಳ ಹೂಡಿಕೆಗಳು, ಹೆಚ್ಚಿನ ಅಪಾಯ, ಯೋಜನೆಯ ಹೆಚ್ಚುವರಿ ವೆಚ್ಚ (long gestation)  ಮತ್ತು ಮರುಪಾವತಿ ಅವಧಿಗಳು ಮತ್ತು ತಂತ್ರಜ್ಞಾನದಲ್ಲಿ ತ್ವರಿತ ಬದಲಾವಣೆಗಳನ್ನು ಒಳಗೊಂಡಿವೆ, ಇದಕ್ಕೆ ಗಮನಾರ್ಹ ಮತ್ತು ನಿರಂತರ ಹೂಡಿಕೆಗಳ ಅಗತ್ಯವಿದೆ. ಈ ಕಾರ್ಯಕ್ರಮವು ಬಂಡವಾಳ ಬೆಂಬಲ ಮತ್ತು ತಾಂತ್ರಿಕ ಸಹಯೋಗವನ್ನು ಸುಗಮಗೊಳಿಸುವ ಮೂಲಕ ಸೆಮಿ ಕಂಡೆಕ್ಟರ್ ಮತ್ತು ಡಿಸ್ ಪ್ಲೇ ಉತ್ಪಾದನೆಗೆ ಪ್ರಚೋದನೆ ನೀಡುತ್ತದೆ.

ಸಿಲಿಕಾನ್ ಸೆಮಿಕಂಡಕ್ಟರ್ ಫ್ಯಾಬ್ಸ್, ಡಿಸ್ ಪ್ಲೇ ಫ್ಯಾಬ್ಸ್, ಸಂಯುಕ್ತ ಸೆಮಿಕಂಡಕ್ಟರ್ ಗಳು / ಸಿಲಿಕಾನ್ ಫೋಟಾನಿಕ್ಸ್ / ಸೆನ್ಸರ್ ಗಳು (ಎಂಇಎಂಎಸ್ ಸೇರಿದಂತೆ) ಫ್ಯಾಬ್ಸ್, ಸೆಮಿಕಂಡಕ್ಟರ್ ಪ್ಯಾಕೇಜಿಂಗ್ (ಎಟಿಎಂಪಿ/ ಒಎಸ್ಎಟಿ), ಸೆಮಿಕಂಡಕ್ಟರ್ ಡಿಸೈನ್ ನಲ್ಲಿ ತೊಡಗಿರುವ ಕಂಪನಿಗಳು / ಕಾನ್ಸಾರ್ಟಿಯಾಗೆ ಆಕರ್ಷಕ ಪ್ರೋತ್ಸಾಹಕ ಬೆಂಬಲವನ್ನು ಒದಗಿಸುವ ಗುರಿಯನ್ನು ಈ ಕಾರ್ಯಕ್ರಮ ಹೊಂದಿದೆ.

ಭಾರತದಲ್ಲಿ ಸೆಮಿಕಂಡಕ್ಟರ್ ಗಳ ಅಭಿವೃದ್ಧಿ ಮತ್ತು ಡಿಸ್ ಪ್ಲೇ ಉತ್ಪಾದನಾ ಪರಿಸರ ವ್ಯವಸ್ಥೆಗೆ ಈ ಕಳಕಂಡ ವ್ಯಾಪಕ ಪ್ರೋತ್ಸಾಹಕಗಳನ್ನು ಅನುಮೋದಿಸಲಾಗಿದೆ:

ಸೆಮಿಕಂಡಕ್ಟರ್ ಫ್ಯಾಬ್ಸ್ ಮತ್ತು ಡಿಸ್ ಪ್ಲೇ ಫ್ಯಾಬ್ಸ್: ಭಾರತದಲ್ಲಿ ಸೆಮಿಕಂಡಕ್ಟರ್ ಫ್ಯಾಬ್ಸ್ ಮತ್ತು ಡಿಸ್ ಪ್ಲೇ ಫ್ಯಾಬ್ ಗಳನ್ನು ಸ್ಥಾಪಿಸುವ ಯೋಜನೆಯು, ಹೆಚ್ಚು ವ್ಯಾಪಕ ಬಂಡವಾಳ ಮತ್ತು ಸಂಪನ್ಮೂಲ ಪ್ರೋತ್ಸಾಹಕ ಯೋಜನೆಗಳನ್ನು ಕಾರ್ಯಗತಗೊಳಿಸುವ ತಂತ್ರಜ್ಞಾನ ಮತ್ತು ಸಾಮರ್ಥ್ಯವನ್ನು ಹೊಂದಿರುವ ಅರ್ಹರೆಂದು ಕಂಡುಬರುವ ಅರ್ಜಿದಾರರಿಗೆ ಸಮಾನ ಕ್ರಮದ ಆಧಾರದ ಮೇಲೆ ಯೋಜನಾ ವೆಚ್ಚದ ಶೇ.50ವರೆಗೆ ಹಣಕಾಸಿನ ಬೆಂಬಲವನ್ನು ವಿಸ್ತರಿಸುತ್ತದೆ. ದೇಶದಲ್ಲಿ ಕನಿಷ್ಠ ಎರಡು ಹಸಿರು ವಲಯ ಸೆಮಿಕಂಡಕ್ಟರ್ ಫ್ಯಾಬ್ ಗಳು ಮತ್ತು ಎರಡು ಡಿಸ್ ಪ್ಲೇ ಫ್ಯಾಬ್ ಗಳನ್ನು ಸ್ಥಾಪಿಸಲು ಅರ್ಜಿಗಳನ್ನು ಅನುಮೋದಿಸಲು ಭೂಮಿ, ಸೆಮಿಕಂಡಕ್ಟರ್ ಗ್ರೇಡ್ ಜಲ, ಉತ್ತಮ ಗುಣಮಟ್ಟದ ವಿದ್ಯುತ್, ಸಾಗಣೆ ಮತ್ತು ಸಂಶೋಧನಾ ಪರಿಸರ ವ್ಯವಸ್ಥೆಯ ದೃಷ್ಟಿಯಿಂದ ಅಗತ್ಯ ಮೂಲಸೌಕರ್ಯಗಳೊಂದಿಗೆ ಹೈಟೆಕ್ ಗುಚ್ಛಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರಗಳೊಂದಿಗೆ ಭಾರತ ಸರ್ಕಾರ ನಿಕಟವಾಗಿ ಕೆಲಸ ಮಾಡಲಿದೆ.

ಸೆಮಿ–ಕಂಡಕ್ಟರ್ ಪ್ರಯೋಗಾಲಯ (ಎಸ್.ಸಿಎಲ್): ಸೆಮಿ–ಕಂಡಕ್ಟರ್ ಪ್ರಯೋಗಾಲಯದ (ಎಸ್.ಸಿಎಲ್) ಆಧುನೀಕರಣ ಮತ್ತು ವಾಣಿಜ್ಯೀಕರಣಕ್ಕೆ ವಿಧ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಕಂದು ವಲಯ ಫ್ಯಾಬ್ ಸೌಲಭ್ಯವನ್ನು ಆಧುನೀಕರಿಸಲು ವಾಣಿಜ್ಯ ಫ್ಯಾಬ್ ಪಾಲುದಾರರೊಂದಿಗೆ ಎಸ್.ಸಿಎಲ್ ಜಂಟಿ ಉದ್ಯಮದ ಸಾಧ್ಯತೆಯನ್ನು ಎಂ.ಇ.ಐ.ಟಿವೈ ಅನ್ವೇಷಿಸುತ್ತದೆ.

ಸಂಯುಕ್ತ ಸೆಮಿ ಕಂಡಕ್ಟರ್ ಗಳು/ ಸಿಲಿಕಾನ್ ಫೋಟಾನಿಕ್ಸ್/ ಸೆನ್ಸಾರ್ ಗಳು (ಎಂಇಎಂಎಸ್ ಸೇರಿದಂತೆ) ಫ್ಯಾಬ್ಸ್ ಮತ್ತು ಸೆಮಿಕಂಡಕ್ಟರ್ ಎಟಿಎಂಪಿ/ ಒಸ್ಯಾಟ್ ಘಟಕಗಳು: ಭಾರತದಲ್ಲಿ ಸಂಯುಕ್ತ ಸೆಮಿ ಕಂಡಕ್ಟರ್ ಗಳು/ ಸಿಲಿಕಾನ್ ಫೋಟಾನಿಕ್ಸ್/ ಸೆನ್ಸಾರ್ ಗಳನ್ನು (ಎಂಇಎಂಎಸ್ ಸೇರಿದಂತೆ) ಫ್ಯಾಬ್ಸ್ ಮತ್ತು ಸೆಮಿಕಂಡಕ್ಟರ್ ಎಟಿಎಂಪಿ/ ಒಎಸ್ಎಟಿ ಸೌಲಭ್ಯಗಳ ಸ್ಥಾಪನೆಯ ಯೋಜನೆ ಅನುಮೋದಿತ ಘಟಕಗಳಿಗೆ ಬಂಡವಾಳ ವೆಚ್ಚದ ಶೇ.30ರಷ್ಟು ಹಣಕಾಸಿನ ಬೆಂಬಲವನ್ನು ವಿಸ್ತರಿಸುತ್ತದೆ. ಈ ಯೋಜನೆಯಡಿ ಸರ್ಕಾರದ ಬೆಂಬಲದೊಂದಿಗೆ ಸಂಯುಕ್ತ ಸೆಮಿ ಕಂಡಕ್ಟರ್ ಗಳು ಮತ್ತು ಸೆಮಿಕಂಡಕ್ಟರ್ ಪ್ಯಾಕೇಜಿಂಗ್ ನ ಕನಿಷ್ಠ 15 ಅಂತಹ ಘಟಕಗಳನ್ನು ಸ್ಥಾಪಿಸುವ ನಿರೀಕ್ಷೆಯಿದೆ.

ಸೆಮಿಕಂಡಕ್ಟರ್ ವಿನ್ಯಾಸ ಕಂಪನಿಗಳು: ವಿನ್ಯಾಸ ಸಂಪರ್ಕಿತ ಪ್ರೋತ್ಸಾಹಕ (ಡಿಎಲ್ಐ) ಯೋಜನೆಯು ಐದು ವರ್ಷಗಳವರೆಗೆ ನಿವ್ವಳ ಮಾರಾಟದ ಮೇಲೆ ಶೇ.6 – ಶೇ.4 ಅರ್ಹ ವೆಚ್ಚದ ಶೇ.50 ವರೆಗೆ ಉತ್ಪನ್ನ ವಿನ್ಯಾಸ ಸಂಪರ್ಕಿತ ಪ್ರೋತ್ಸಾಹಕವನ್ನು ಮತ್ತು ಉತ್ಪನ್ನ ನಿಯೋಜನೆ ಸಂಪರ್ಕಿತ ಪ್ರೋತ್ಸಾಹಕವನ್ನು ವಿಸ್ತರಿಸುತ್ತದೆ. ಇಂಟಿಗ್ರೇಟೆಡ್ ಸರ್ಕ್ಯೂಟ್ ಗಳು (ಐಸಿಗಳು), ಚಿಪ್ ಸೆಟ್ ಗಳು, ಸಿಸ್ಟಮ್ ಆನ್ ಚಿಪ್ಸ್ (ಎಸ್.ಒಸಿಗಳು), ಸಿಸ್ಟಮ್ಸ್ ಮತ್ತು ಐಪಿ ಕೋರ್ ಗಳು ಮತ್ತು ಸೆಮಿಕಂಡಕ್ಟರ್ ಸಂಪರ್ಕಿತ ವಿನ್ಯಾಸಕ್ಕಾಗಿ ಸೆಮಿಕಂಡಕ್ಟರ್ ವಿನ್ಯಾಸದ 100 ದೇಶೀಯ ಕಂಪನಿಗಳಿಗೆ ಬೆಂಬಲವನ್ನು ಒದಗಿಸಲಾಗುವುದು ಮತ್ತು ಮುಂಬರುವ ಐದು ವರ್ಷಗಳಲ್ಲಿ 1500 ಕೋಟಿ ರೂ.ಗಿಂತ ಹೆಚ್ಚಿನ ವಹಿವಾಟು ಸಾಧಿಸಬಲ್ಲ ಅಂತಹ 20 ಕಂಪನಿಗಳಿಗಿಂತ ಕಡಿಮೆಯಿಲ್ಲದ ಬೆಳವಣಿಗೆಗೆ ಅನುಕೂಲ ಮಾಡಿಕೊಡಲಾಗುವುದು.

ಭಾರತ ಸೆಮಿಕಂಡಕ್ಟರ್ ಅಭಿಯಾನ: ಸುಸ್ಥಿರ ಸೆಮಿ ಕಂಡಕ್ಟರ್ ಗಳನ್ನು ಅಭಿವೃದ್ಧಿಪಡಿಸಲು ಮತ್ತು ಪರಿಸರ ವ್ಯವಸ್ಥೆಯನ್ನು ಪ್ರದರ್ಶಿಸಲು ದೀರ್ಘಕಾಲೀನ ಕಾರ್ಯತಂತ್ರಗಳನ್ನು ಚಾಲನೆಗೊಳಿಸುವ ಸಲುವಾಗಿ, ವಿಶೇಷ ಮತ್ತು ಸ್ವತಂತ್ರ "ಭಾರತ ಸೆಮಿಕಂಡಕ್ಟರ್ ಅಭಿಯಾನ (ಐಎಸ್ಎಂ)ವನ್ನು ಸ್ಥಾಪಿಸಲಾಗುವುದು. ಭಾರತ ಸೆಮಿಕಂಡಕ್ಟರ್ ಅಭಿಯಾನವನ್ನು ಸೆಮಿಕಂಡಕ್ಟರ್ ಮತ್ತು ಡಿಸ್ ಪ್ಲೇ ಉದ್ಯಮದ ಜಾಗತಿಕ ತಜ್ಞರು ಮುನ್ನಡೆಸಲಿದ್ದಾರೆ. ಇದು ಸೆಮಿಕಂಡಕ್ಟರ್ ಗಳು ಮತ್ತು ಡಿಸ್ ಪ್ಲೇ ಪರಿಸರ ವ್ಯವಸ್ಥೆಯ ಯೋಜನೆಗಳ ದಕ್ಷ ಮತ್ತು ಸುಗಮ ಅನುಷ್ಠಾನಕ್ಕೆ ನೋಡಲ್ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ.

ಸೆಮಿ ಕಂಡಕ್ಟರ್ ಗಳು ಮತ್ತು ಎಲೆಕ್ಟ್ರಾನಿಕ್ಸ್ ಗೆ ಸಮಗ್ರ ಹಣಕಾಸಿನ ಬೆಂಬಲ

ಭಾರತದಲ್ಲಿ ಸೆಮಿ ಕಂಡಕ್ಟರ್ ಗಳ ಅಭಿವೃದ್ಧಿ ಮತ್ತು ಡಿಸ್ ಪ್ಲೇ ಉತ್ಪಾದನಾ ಪರಿಸರ ವ್ಯವಸ್ಥೆಯ ಕಾರ್ಯಕ್ರಮದ ಅನುಮೋದನೆಯೊಂದಿಗೆ 76,000 ಕೋಟಿ ರೂ.ಗಳ (>10 ಶತಕೋಟಿ ಅಮೆರಿಕನ್ ಡಾಲರ್) ವೆಚ್ಚದೊಂದಿಗೆ, ಭಾರತ ಸರ್ಕಾರವು ಎಲೆಕ್ಟ್ರಾನಿಕ್ ಘಟಕಗಳು, ಸಬ್ ಅಸೆಂಬ್ಲಿಗಳು ಮತ್ತು ಸಿದ್ಧವಸ್ತುಗಳು ಸೇರಿದಂತೆ ಪೂರೈಕೆ ಸರಪಳಿಯ ಪ್ರತಿಯೊಂದು ಭಾಗಕ್ಕೂ ಪ್ರೋತ್ಸಾಹಕಗಳನ್ನು ಘೋಷಿಸಿದೆ.   ಬೃಹತ್ ಪ್ರಮಾಣದ ಎಲೆಕ್ಟ್ರಾನಿಕ್ಸ್ ಉತ್ಪಾದನೆ, ಐಟಿ ಯಂತ್ರಾಂಶಕ್ಕಾಗಿ ಪಿಎಲ್ಐ, ಎಸ್.ಪಿ.ಇ.ಸಿ.ಎಸ್. ಯೋಜನೆ ಮತ್ತು ಮಾರ್ಪಡಿಸಿದ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಗುಚ್ಛಗಳು (ಇಎಂಸಿ 2.0) ಯೋಜನೆಗೆ ಪಿಎಲ್ಐ ಅಡಿಯಲ್ಲಿ 55,392 ಕೋಟಿ ರೂ.ಗಳ (7.5 ಶತಕೋಟಿ ಅಮೆರಿಕನ್ ಡಾಲರ್) ಪ್ರೋತ್ಸಾಹಕ ಬೆಂಬಲವನ್ನು ಅನುಮೋದಿಸಲಾಗಿದೆ. ಇದಲ್ಲದೆ, ಎಸಿಸಿ ಬ್ಯಾಟರಿ, ವಾಹನ ಘಟಕಗಳು, ಟೆಲಿಕಾಂ ಮತ್ತು ನೆಟ್ ವರ್ಕಿಂಗ್ ಉತ್ಪನ್ನಗಳು, ಸೌರ ಪಿವಿ ಮಾಡ್ಯೂಲ್ ಗಳು ಮತ್ತು ಬಿಳಿ ಸರಕುಗಳನ್ನು ಒಳಗೊಂಡ ಸಂಬಂಧಿತ ವಲಯಗಳಿಗೆ 98,000 ಕೋಟಿ ರೂ.ಗಳ (13 ಶತಕೋಟಿ ಅಮೆರಿಕನ್ ಡಾಲರ್) ಪಿಎಲ್.ಐ ಪ್ರೋತ್ಸಾಹಕಗಳನ್ನು ಅನುಮೋದಿಸಲಾಗಿದೆ.  ಒಟ್ಟಾರೆಯಾಗಿ, ಸೆಮಿ ಕಂಡಕ್ಟರ್ ಗಳನ್ನು ಮೂಲಾಧಾರವಾಗಿ ಹೊಂದಿರುವ ಎಲೆಕ್ಟ್ರಾನಿಕ್ಸ್ ಉತ್ಪಾದನೆಯ ಜಾಗತಿಕ ತಾಣವಾಗಿ ಭಾರತವನ್ನು ಸಾಂಸ್ಥೀಕರಿಸಲು ಭಾರತ ಸರ್ಕಾರವು 2,30,000 ಕೋಟಿ ರೂ.ಗಳ (30 ಶತಕೋಟಿ ಅಮೆರಿಕನ್ ಡಾಲರ್) ಬೆಂಬಲಕ್ಕೆ ಬದ್ಧವಾಗಿದೆ.

ಪ್ರಸ್ತುತ ಭೌಗೋಳಿಕ ರಾಜಕೀಯ ಸನ್ನಿವೇಶದಲ್ಲಿ, ಸೆಮಿ ಕಂಡಕ್ಟರ್ ಗಳು ಮತ್ತು ಡಿಸ್ ಪ್ಲೇಗಳ ವಿಶ್ವಾಸಾರ್ಹ ಮೂಲಗಳು ವ್ಯೂಹಾತ್ಮಕ ಪ್ರಾಮುಖ್ಯತೆಯನ್ನು ಹೊಂದಿವೆ ಮತ್ತು ನಿರ್ಣಾಯಕ ಮಾಹಿತಿ ಮೂಲಸೌಕರ್ಯದ ಭದ್ರತೆಗೆ ಪ್ರಮುಖವಾಗಿವೆ. ಅನುಮೋದಿತ ಕಾರ್ಯಕ್ರಮವು ನಾವಿನ್ಯತೆಯನ್ನು ಮುನ್ನಡೆಸುತ್ತದೆ ಮತ್ತು ಭಾರತದ ಡಿಜಿಟಲ್ ಸಾರ್ವಭೌಮತ್ವವನ್ನು ಖಾತ್ರಿಪಡಿಸಿಕೊಳ್ಳಲು ದೇಶೀಯ ಸಾಮರ್ಥ್ಯಗಳನ್ನು ನಿರ್ಮಿಸುತ್ತದೆ. ಇದು ದೇಶದ ಜನಸಂಖ್ಯೆಯನ್ನು ಲಾಭವಾಗಿ ಬಳಸಿಕೊಳ್ಳಲು ಹೆಚ್ಚು ನುರಿತ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ.

ಸೆಮಿ ಕಂಡಕ್ಟರ್  ಮತ್ತು ಡಿಸ್ ಪ್ಲೇ ಪರಿಸರ ವ್ಯವಸ್ಥೆಯ ಅಭಿವೃದ್ಧಿಯು ಜಾಗತಿಕ ಮೌಲ್ಯ ಸರಪಳಿಯೊಂದಿಗೆ ಆಳವಾದ ಏಕೀಕರಣದೊಂದಿಗೆ ಆರ್ಥಿಕತೆಯ ವಿವಿಧ ವಲಯಗಳಲ್ಲಿ ದ್ವಿಗುಣದ ಪರಿಣಾಮವನ್ನು ಬೀರುತ್ತದೆ. ಈ ಕಾರ್ಯಕ್ರಮವು ಎಲೆಕ್ಟ್ರಾನಿಕ್ಸ್ ಉತ್ಪಾದನೆಯಲ್ಲಿ ಹೆಚ್ಚಿನ ದೇಶೀಯ ಮೌಲ್ಯವರ್ಧನೆಯನ್ನು ಉತ್ತೇಜಿಸುತ್ತದೆ ಮತ್ತು 2025ರ ವೇಳೆಗೆ 1 ಟ್ರಿಲಿಯನ್ ಅಮೆರಿಕನ್ ಡಾಲರ್ ಡಿಜಿಟಲ್ ಆರ್ಥಿಕತೆ ಮತ್ತು 5 ಟ್ರಿಲಿಯನ್ ಅಮೆರಿಕನ್ ಡಾಲರ್ ಜಿಡಿಪಿಯನ್ನು ಸಾಧಿಸಲು ಗಮನಾರ್ಹ ಕೊಡುಗೆ ನೀಡಲಿದೆ.

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Mutual fund industry on a high, asset surges Rs 17 trillion in 2024

Media Coverage

Mutual fund industry on a high, asset surges Rs 17 trillion in 2024
NM on the go

Nm on the go

Always be the first to hear from the PM. Get the App Now!
...
Chief Minister of Andhra Pradesh meets Prime Minister
December 25, 2024

Chief Minister of Andhra Pradesh, Shri N Chandrababu Naidu met Prime Minister, Shri Narendra Modi today in New Delhi.

The Prime Minister's Office posted on X:

"Chief Minister of Andhra Pradesh, Shri @ncbn, met Prime Minister @narendramodi

@AndhraPradeshCM"