ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಭಾರತದ ಉತ್ಪಾದನಾ ಸಾಮರ್ಥ್ಯವನ್ನು ವೃದ್ಧಿಸಲು ಮತ್ತು ರಫ್ತುಗಳನ್ನು ಹೆಚ್ಚಿಸಲು– ಆತ್ಮನಿರ್ಭರ ಭಾರತ– ಉತ್ಪಾದನೆ ಆಧಾರಿತ ಪ್ರೋತ್ಸಾಹ (ಪಿಎಲ್ಐ) ಯೋಜನೆಯನ್ನು ಈ ಕೆಳಗಿನ 10 ಪ್ರಮುಖ ಕ್ಷೇತ್ರಗಳಲ್ಲಿ ಪರಿಚಯಿಸಲು ಅನುಮೋದನೆ ನೀಡಿದೆ.

ಪಿಎಲ್ಐ ಯೋಜನೆಯನ್ನು ಸಂಬಂಧಪಟ್ಟ ಸಚಿವಾಲಯಗಳು / ಇಲಾಖೆಗಳು ಅನುಷ್ಠಾನಗೊಳಿಸುತ್ತವೆ ಮತ್ತು ನಿಗದಿಪಡಿಸಿದ ಒಟ್ಟಾರೆ ಹಣಕಾಸು ಮಿತಿಯಲ್ಲಿರುತ್ತದೆ. ವೈಯಕ್ತಿಕ ಕ್ಷೇತ್ರಗಳಿಗೆ ಪಿಎಲ್ಐನ ಅಂತಿಮ ಪ್ರಸ್ತಾಪಗಳನ್ನು ವೆಚ್ಚ ಹಣಕಾಸು ಸಮಿತಿ (ಇ ಎಫ್ ಸಿ) ಮೌಲ್ಯಮಾಪನ ಮಾಡಲಿದೆ. ನಂತರ ಸಂಪುಟವು ಅನುಮೋದಿಸುತ್ತದೆ. ಅನುಮೋದಿತ ವಲಯದ ಒಂದು ಪಿಎಲ್ಐ ಯೋಜನೆಯಿಂದ ಉಳಿತಾಯದ ಹಣವಿದ್ದರೆ, ಸಶಕ್ತ ಕಾರ್ಯದರ್ಶಿಗಳ ಗುಂಪು ಮತ್ತೊಂದು ಅನುಮೋದಿತ ವಲಯಕ್ಕೆ ಹಣವನ್ನು ಒದಗಿಸಬಹುದು. ಯಾವುದೇ ಹೊಸ ವಲಯದ ಪಿಎಲ್ಐಗೆ ಸಂಪುಟದ ಹೊಸ ಅನುಮೋದನೆ ಅಗತ್ಯವಿರುತ್ತದೆ.

ಈ 10 ಪ್ರಮುಖ ನಿರ್ದಿಷ್ಟ ಕ್ಷೇತ್ರಗಳ ಪಿಎಲ್ಐ ಯೋಜನೆಯು ಭಾರತದ ತಯಾರಕರನ್ನು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿಸುತ್ತದೆ, ಪ್ರಮುಖ ಸಾಮರ್ಥ್ಯ ಮತ್ತು ಅತ್ಯಾಧುನಿಕ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಹೂಡಿಕೆಯನ್ನು ಆಕರ್ಷಿಸುತ್ತದೆ; ದಕ್ಷತೆಯನ್ನು ಖಚಿತಪಡಿಸುತ್ತದೆ; ಹೆಚ್ಚಿನ ಆರ್ಥಿಕತೆಯನ್ನು ಸೃಷ್ಟಿಸುತ್ತದೆ; ರಫ್ತು ಹೆಚ್ಚಿಸಲು ಮತ್ತು ಭಾರತವನ್ನು ಜಾಗತಿಕ ಪೂರೈಕೆ ಸರಪಳಿಯ ಅವಿಭಾಜ್ಯ ಅಂಗವನ್ನಾಗಿ ಮಾಡುತ್ತದೆ.

  • ಎಸಿಸಿ ಬ್ಯಾಟರಿ ಉತ್ಪಾದನೆಯು ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಿಕ್ ವಾಹನಗಳು ಮತ್ತು ನವೀಕರಿಸಬಹುದಾದ ಇಂಧನದಂತಹ ಹಲವಾರು ಜಾಗತಿಕ ಬೆಳವಣಿಗೆಯ ಕ್ಷೇತ್ರಗಳಿಗೆ ಇಪ್ಪತ್ತೊಂದನೇ ಶತಮಾನದ ಅತಿದೊಡ್ಡ ಆರ್ಥಿಕ ಅವಕಾಶಗಳಲ್ಲಿ ಒಂದಾಗಿದೆ. ಎಸಿಸಿ ಬ್ಯಾಟರಿಯ ಪಿಎಲ್ಐ ಯೋಜನೆಯು ದೇಶದಲ್ಲಿ ಸ್ಪರ್ಧಾತ್ಮಕ ಎಸಿಸಿ ಬ್ಯಾಟರಿ ಘಟಕಗಳ ಸ್ಥಾಪನೆಗೆ ದೊಡ್ಡ ದೇಶೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳನ್ನು ಉತ್ತೇಜಿಸುತ್ತದೆ.
  • ಭಾರತವು 2025 ರ ವೇಳೆಗೆ 1 ಟ್ರಿಲಿಯನ್ ಅಮೆರಿಕಾ ಡಾಲರ್ ಡಿಜಿಟಲ್ ಆರ್ಥಿಕತೆಯನ್ನು ಹೊಂದುವ ನಿರೀಕ್ಷೆಯಿದೆ. ಹೆಚ್ಚುವರಿಯಾಗಿ, ಡೇಟಾ ಸ್ಥಳೀಕರಣ, ಭಾರತದಲ್ಲಿ ಇಂಟರ್ನೆಟ್ ಆಫ್ ಥಿಂಗ್ಸ್ (ಐಒಟಿ) ಮಾರುಕಟ್ಟೆ, ಸ್ಮಾರ್ಟ್ ಸಿಟಿ ಮತ್ತು ಡಿಜಿಟಲ್ ಇಂಡಿಯಾದಂತಹ ಯೋಜನೆಗಳು ಎಲೆಕ್ಟ್ರಾನಿಕ್ ಉತ್ಪನ್ನಗಳ ಬೇಡಿಕೆಯನ್ನು ಹೆಚ್ಚಿಸುವ ನಿರೀಕ್ಷೆಯಿದೆ. ಪಿಎಲ್ಐ ಯೋಜನೆಯು ಭಾರತದಲ್ಲಿ ಎಲೆಕ್ಟ್ರಾನಿಕ್ ಉತ್ಪನ್ನಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ.
  • ಭಾರತದ ಆರ್ಥಿಕತೆಗೆ ವಾಹನ ಉದ್ಯಮವು ಪ್ರಮುಖ ಕೊಡುಗೆ ನೀಡುತ್ತಿದೆ. ಪಿಎಲ್ಐ ಯೋಜನೆಯು ಭಾರತೀಯ ವಾಹನ ಉದ್ಯಮವನ್ನು ಹೆಚ್ಚು ಸ್ಪರ್ಧಾತ್ಮಕವಾಗಿಸುತ್ತದೆ ಮತ್ತು ಭಾರತೀಯ ವಾಹನ ಕ್ಷೇತ್ರದ ಜಾಗತೀಕರಣವನ್ನು ಹೆಚ್ಚಿಸುತ್ತದೆ.
  • ಭಾರತದ ಔಷಧೀಯ ಉದ್ಯಮವು ಪ್ರಮಾಣದಲ್ಲಿ ವಿಶ್ವದ ಮೂರನೇ ಅತಿದೊಡ್ಡ ಮತ್ತು ಮೌಲ್ಯದಲ್ಲಿ 14 ನೇ ದೊಡ್ಡ ಕ್ಷೇತ್ರವಾಗಿದೆ. ಇದು ಜಾಗತಿಕ ಔಷಧಗಳ ರಫ್ತಿಗೆ ಶೇ.3.5ರಷ್ಟು ಕೊಡುಗೆ ನೀಡುತ್ತದೆ. ಭಾರತವು ಔಷಧೀಯ ವಸ್ತುಗಳ ಅಭಿವೃದ್ಧಿ ಮತ್ತು ಉತ್ಪಾದನೆಗೆ ಸಂಪೂರ್ಣ ಪರಿಸರ ವ್ಯವಸ್ಥೆಯನ್ನು ಹೊಂದಿದೆ ಮತ್ತು ಸಂಬಂಧಿತ ಉದ್ಯಮಗಳ ದೃಢವಾದ ಪರಿಸರ ವ್ಯವಸ್ಥೆಯನ್ನು ಹೊಂದಿದೆ. ಪಿಎಲ್ಐ ಯೋಜನೆಯು ಜಾಗತಿಕ ಮತ್ತು ದೇಶೀಯ ಸಂಸ್ಥೆಗಳು ಹೆಚ್ಚಿನ ಮೌಲ್ಯದ ಉತ್ಪಾದನೆಯಲ್ಲಿ ತೊಡಗಿಸಿಕೊಳ್ಳಲು ಉತ್ತೇಜನ ನೀಡುತ್ತದೆ.
  • ಸುರಕ್ಷಿತ ದೂರಸಂಪರ್ಕ ಮೂಲಸೌಕರ್ಯವನ್ನು ನಿರ್ಮಿಸುವ ನಿರ್ಣಾಯಕ ಮತ್ತು ಕಾರ್ಯತಂತ್ರದಲ್ಲಿ ಟೆಲಿಕಾಂ ಉಪಕರಣಗಳು ಪ್ರಮುಖವಾಗಿವೆ. ಟೆಲಿಕಾಂ ಮತ್ತು ನೆಟ್‌ವರ್ಕಿಂಗ್ ಉತ್ಪನ್ನಗಳ ಪ್ರಮುಖ ಮೂಲ ಸಾಧನ ತಯಾರಕರಾಗಲು ಭಾರತವು ಬಯಸುತ್ತದೆ. ಪಿಎಲ್ಐ ಯೋಜನೆಯು ಜಾಗತಿಕ ಕಂಪನಿಗಳ ದೊಡ್ಡ ಹೂಡಿಕೆಗಳನ್ನು ಆಕರ್ಷಿಸುತ್ತದೆ ಮತ್ತು ದೇಶೀಯ ಕಂಪನಿಗಳು ಹೊಸ ಅವಕಾಶಗಳನ್ನು ಪಡೆಯಲು ಮತ್ತು ರಫ್ತು ಮಾರುಕಟ್ಟೆಯಲ್ಲಿ ದೊಡ್ಡ ಪಾಲುದಾರರಾಗಲು ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ.
  • ಭಾರತದ ಜವಳಿ ಉದ್ಯಮವು ವಿಶ್ವದಲ್ಲೇ ಅತಿ ದೊಡ್ಡ ಉದ್ಯಮಗಳಲ್ಲೊಂದು. ಜವಳಿ ಮತ್ತು ಉಡುಪುಗಳಲ್ಲಿನ ಜಾಗತಿಕ ರಫ್ತಿನ ಶೇ.5 ರಷ್ಟು ಪಾಲನ್ನು ಇದು ಹೊಂದಿದೆ. ಆದರೆ ಜಾಗತಿಕ ಬಳಕೆಯ ಮಾದರಿಗೆ ವ್ಯತಿರಿಕ್ತವಾಗಿ ಮಾನವ ನಿರ್ಮಿತ ಫೈಬರ್ (ಎಂಎಂಎಫ್) ವಿಭಾಗದಲ್ಲಿ ಭಾರತದ ಪಾಲು ಕಡಿಮೆ,. ಪಿಎಲ್ಐ ಯೋಜನೆಯು ದೇಶೀಯ ಉತ್ಪಾದನೆಯನ್ನು ಮತ್ತಷ್ಟು ಹೆಚ್ಚಿಸಲು, ವಿಶೇಷವಾಗಿ ಎಂಎಂಎಫ್ ವಿಭಾಗ ಮತ್ತು ತಾಂತ್ರಿಕ ಜವಳಿಗಳಲ್ಲಿ. ದೊಡ್ಡ ಹೂಡಿಕೆಯನ್ನು ಆಕರ್ಷಿಸುತ್ತದೆ,
  • ಸಂಸ್ಕರಿಸಿದ ಆಹಾರ ಉದ್ಯಮದ ಬೆಳವಣಿಗೆಯು ರೈತರು ಉತ್ತಮ ಬೆಲೆ ಪಡೆಯಲು ಕಾರಣವಾಗುತ್ತದೆ ಮತ್ತು ನಷ್ಟವನ್ನು ಕಡಿಮೆ ಮಾಡುತ್ತದೆ. ಪಿಎಲ್ಐ ಯೋಜನೆಯ ಮೂಲಕ ಬೆಂಬಲವನ್ನು ಒದಗಿಸಲು ಹೆಚ್ಚಿನ ಬೆಳವಣಿಗೆಯ ಸಾಮರ್ಥ್ಯ ಹೊಂದಿರುವ ಮತ್ತು ಮಧ್ಯಮದಿಂದ ದೊಡ್ಡ ಪ್ರಮಾಣದ ಉದ್ಯೋಗವನ್ನು ಒದಗಿಸುವ ನಿರ್ದಿಷ್ಟ ಉತ್ಪನ್ನ ಮಾರ್ಗಗಳನ್ನು ಗುರುತಿಸಲಾಗಿದೆ.
  • ಸೌರ ಪಿವಿ ಪ್ಯಾನೆಲ್‌ಗಳ ದೊಡ್ಡ ಆಮದುಗಳು ಸರಬರಾಜು–ಸರಪಳಿ ಸ್ಥಿತಿಸ್ಥಾಪಕತ್ವದಲ್ಲಿ ಅಪಾಯಗಳನ್ನುಂಟುಮಾಡುತ್ತವೆ ಮತ್ತು ಮೌಲ್ಯ ಸರಪಳಿಯ ಎಲೆಕ್ಟ್ರಾನಿಕ್ (ಹ್ಯಾಕ್ ಮಾಡಬಹುದಾದ) ಸ್ವರೂಪವನ್ನು ಪರಿಗಣಿಸಿದರೆ ಕಾರ್ಯತಂತ್ರದ ಭದ್ರತಾ ಸವಾಲುಗಳನ್ನು ಹೊಂದಿವೆ. ಸೌರ ಪಿವಿ ಮಾಡ್ಯೂಲ್‌ಗಳಿಗಾಗಿ ಕೇಂದ್ರೀಕೃತ ಪಿಎಲ್ಐ ಯೋಜನೆಯು ಭಾರತದಲ್ಲಿ ದೊಡ್ಡ ಪ್ರಮಾಣದ ಸೌರ ಪಿವಿ ಸಾಮರ್ಥ್ಯವನ್ನು ನಿರ್ಮಿಸಲು ದೇಶೀಯ ಮತ್ತು ಜಾಗತಿಕ ಕಂಪನಿಗಳನ್ನು ಉತ್ತೇಜಿಸುತ್ತದೆ ಮತ್ತು ಸೌರ ಪಿವಿ ಉತ್ಪಾದನೆಯಲ್ಲಿ ಭಾರತವು ಜಾಗತಿಕ ಮೌಲ್ಯ ಸರಪಳಿಗಳನ್ನು ತಲುಪಲು ಸಹಾಯ ಮಾಡುತ್ತದೆ.
  • ಬಿಳಿ ಸರಕುಗಳು (ಹವಾನಿಯಂತ್ರಕಗಳು ಮತ್ತು ಎಲ್ಇಡಿಗಳು) ದೇಶೀಯ ಮೌಲ್ಯವರ್ಧನೆಯ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿವೆ ಮತ್ತು ಈ ಉತ್ಪನ್ನಗಳನ್ನು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿಸುತ್ತವೆ. ಈ ಕ್ಷೇತ್ರಕ್ಕೆ ಪಿಎಲ್ಐ ಯೋಜನೆಯು ಹೆಚ್ಚು ದೇಶೀಯ ಉತ್ಪಾದನೆ, ಉದ್ಯೋಗಗಳ ಸೃಷ್ಟಿ ಮತ್ತು ರಫ್ತು ಹೆಚ್ಚಳಕ್ಕೆ ಕಾರಣವಾಗುತ್ತದೆ.
  • ಉಕ್ಕು ಆಯಕಟ್ಟಿನ ಪ್ರಮುಖ ಉದ್ಯಮವಾಗಿದೆ ಮತ್ತು ಭಾರತವು ವಿಶ್ವದ ಎರಡನೇ ಅತಿದೊಡ್ಡ ಉಕ್ಕು ಉತ್ಪಾದಕ ರಾಷ್ಟ್ರವಾಗಿದೆ. ಇದು ಸಿದ್ಧಪಡಿಸಿದ ಉಕ್ಕಿನ ನಿವ್ವಳ ರಫ್ತುದಾರ ಮತ್ತು ಕೆಲವು ಶ್ರೇಣಿಗಳ ಉಕ್ಕಿನಲ್ಲಿ ನಾಯಕನಾಗುವ ಸಾಮರ್ಥ್ಯವನ್ನು ಹೊಂದಿದೆ. ವಿಶೇಷ ಉಕ್ಕಿಗೆ ಪಿಎಲ್ಐ ಯೋಜನೆಯು ಮೌಲ್ಯವರ್ಧಿತ ಉಕ್ಕು ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, ಇದು ಒಟ್ಟು ರಫ್ತು ಹೆಚ್ಚಳಕ್ಕೆ ಕಾರಣವಾಗುತ್ತದೆ.

ಮೇಲೆ ಹೇಳಲಾದ ಕ್ಷೇತ್ರಗಳು ಈಗಾಗಲೇ ಪಿಎಲ್ಐ ಯೋಜನೆಗಳಿಗೆ ಅಧಿಸೂಚಿತವಾಗಿರುವ ೀ ಕೆಳಕಂಡ  ಕ್ಷೇತ್ರಗಳಿಗೆ ಹೆಚ್ಚುವರಿಯಾಗಿವೆ

ದೇಶದಲ್ಲಿ ದಕ್ಷ, ನ್ಯಾಯಸಮ್ಮತ ಮತ್ತು ಸ್ಥಿತಿಸ್ಥಾಪಕ ಉತ್ಪಾದನಾ ಕ್ಷೇತ್ರವನ್ನು ಪ್ರೋತ್ಸಾಹಿಸಲು ನೀತಿಗಳನ್ನು ರೂಪಿಸಲು ಪ್ರಧಾನ ಮಂತ್ರಿಯವರ 'ಆತ್ಮನಿರ್ಭರ ಭಾರತ' ಕರೆಯು ಕಾರಣವಾಗಿದೆ. ಕೈಗಾರಿಕಾ ವಸ್ತುಗಳ ಉತ್ಪಾದನೆ ಮತ್ತು ರಫ್ತುಗಳಲ್ಲಿನ ಬೆಳವಣಿಗೆ ಭಾರತೀಯ ಉದ್ಯಮವನ್ನು ವಿದೇಶಿ ಸ್ಪರ್ಧೆ ಮತ್ತು ಆಲೋಚನೆಗಳಿಗೆ ಹೆಚ್ಚು ಒಡ್ಡುತ್ತದೆ. ಅದರ ಸಾಮರ್ಥ್ಯಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಉತ್ಪಾದನಾ ಕ್ಷೇತ್ರದ ಉತ್ತೇಜನ ಮತ್ತು ಅನುಕೂಲಕರ ಉತ್ಪಾದನಾ ವ್ಯವಸ್ಥೆಯನ್ನು ಸೃಷ್ಟಿಸುವುದರಿಂದ ಜಾಗತಿಕ ಪೂರೈಕೆ ಸರಪಳಿಗಳೊಂದಿಗೆ ಜೋಡಿಸುವುದಲ್ಲದೆ, ದೇಶದ ಎಂಎಸ್‌ಎಂಇ ವಲಯದ ಬೆಳವಣಿಗೆಗೆ ಕಾರಣವಾಗುತ್ತದೆ. ಇದು ಆರ್ಥಿಕತೆಯ ಒಟ್ಟಾರೆ ಬೆಳವಣಿಗೆಗೆ ಕಾರಣವಾಗುತ್ತದೆ ಮತ್ತು ಬೃಹತ್ ಪ್ರಮಾಣದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ.

ಕ್ಷೇತ್ರವಾರು ಉತ್ಪಾದನೆಗಳು

 
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Indian Markets Outperformed With Positive Returns For 9th Consecutive Year In 2024

Media Coverage

Indian Markets Outperformed With Positive Returns For 9th Consecutive Year In 2024
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 24 ಡಿಸೆಂಬರ್ 2024
December 24, 2024

Citizens appreciate PM Modi’s Vision of Transforming India