ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಆಫ್ರಿಕದಲ್ಲಿ 2018ರಿಂದ 2020ರವರೆಗೆ ಚಾಲ್ತಿಯಲ್ಲಿರುವಂತೆ 18 ನೂತನ ಭಾರತೀಯ ದೂತಾವಾಸಗಳನ್ನು ಆರಂಭಿಸಲು ಸಮ್ಮತಿಸಲಾಗಿದೆ.
ಈ ಹದಿನೆಂಟು ದೂತಾವಾಸಗಳನ್ನು ಬುರ್ಕಿನಾ ಫಾಸೊ, ಕ್ಯಾಮೆರೂನ್, ಕೇಪ್ ವರ್ಡ್, ಚಾಡ್, ಕಾಂಗೋ ಗಣರಾಜ್ಯ, ದಿಬೌತಿ, ಈಕ್ವಟೋರಿಯಲ್ ಗಿನಿಯಾ, ಎರಿಟ್ರಿಯಾ, ಗಿನಿಯಾ, ಗಿನಿಯಾ ಬಿಸ್ಸೋ, ಲಿಬೇರಿಯಾ, ಮಾರಿಟಾನಿಯಾ, ರುವಾಂಡಾ, ಸಾವೋ ಟೋಮ್ ಮತ್ತು ಪ್ರಿನ್ಸಿಪೆ, ಸಿಯರಾ ಲಿಯೋನ್, ಸೊಮಾಲಿಯಾ, ಸ್ವಾಜಿಲ್ಯಾಂಡ್ ಮತ್ತು ಟೋಗೋದಲ್ಲಿ ತೆರೆಯಲಿದ್ದು, 2018-2021ರವರೆಗೆ ಕಾರ್ಯ ನಿರ್ವಹಿಸಲಿವೆ. ಈಮೂಲಕ ಆಫ್ರಿಕದಲ್ಲಿ ಭಾರತೀಯ ದೂತಾವಾಸಗಳ ಸಂಖ್ಯೆ 29ರಿಂದ 47ಕ್ಕೆ ಹೆಚ್ಚಳಗೊಂಡಿದೆ.
ಈ ನಿರ್ಧಾರದಿಂದ ಆಫ್ರಿಕ ಖಂಡದಲ್ಲಿ ಭಾರತದ ರಾಜತಾಂತ್ರಿಕ ವ್ಯಾಪ್ತಿ ವಿಸ್ತರಿಸಲಿದ್ದು, ಆಫ್ರಿಕದ ದೇಶಗಳಲ್ಲಿನ ಭಾರತೀಯರೊಂದಿಗೆ ಸಂಪರ್ಕ ಸಾಧಿಸುವಿಕೆ ಸಾಧ್ಯವಾಗಲಿದೆ. ದೂತಾವಾಸಗಳ ಆರಂಭವು ಆಫ್ರಿಕದೊಂದಿಗೆ ತೊಡಗಿಸಿಕೊಳ್ಳುವಿಕೆ ಹಾಗೂ ಸಹಕಾರವನ್ನು ಹೆಚ್ಚಿಸುವ ಉದ್ದೇಶವನ್ನು ಜಾರಿಗೊಳಿಸುವೆಡೆಗೆ ಇಟ್ಟ ಒಂದು ದಿಟ್ಟ ಹೆಜ್ಜೆಯಾಗಿದೆ.