Cabinet approves the North East Industrial Development Scheme (NEIDS), 2017 with financial outlay of Rs.3000 crores upto March, 2020
To promote employment in the North East States, Government is incentivizing primarily the MSME Sector through NEIDS scheme

ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಸಭೆ ಸೇರಿದ್ದ ಕೇಂದ್ರ ಸಚಿವ ಸಂಪುಟವು ಈಶಾನ್ಯ ಭಾರತ ಕೈಗಾರಿಕೋದ್ಯಮ ಅಭಿವೃದ್ಧಿ ಯೋಜನೆ (ಎನ್‍ಇಐಡಿಎಸ್)-2017ಕ್ಕೆ ಅನುಮೋದನೆ ನೀಡಿದ್ದು, 2020ರ ಮಾರ್ಚ್ ತಿಂಗಳವರೆಗೆ ಇದಕ್ಕೆ 3,000 ಕೋಟಿ ರೂಪಾಯಿಗಳನ್ನು ಒದಗಿಸಲು ತೀರ್ಮಾನಿಸಿದೆ. ಅಲ್ಲದೆ, 2020ರ ಮಾರ್ಚ್ ತಿಂಗಳಿಗೂ ಮೊದಲು ಸಲ್ಲಿಸುವ ಲೆಕ್ಕಾಚಾರದ (Assessment) ನಂತರ ಈ ಯೋಜನೆಯ ಉಳಿದ ಅವಧಿಗೂ ಅಗತ್ಯ ಅನುದಾನಗಳನ್ನು ಕೇಂದ್ರ ಸರಕಾರವು ನೀಡಲಿದೆ. ಎನ್ಇಐಡಿಎಸ್ ಯೋಜನೆಯು ಈ ಮೊದಲು ಅಸ್ತಿತ್ವದಲ್ಲಿದ್ದ ಎರಡು ಯೋಜನೆಗಳಲ್ಲಿದ್ದ ಪ್ರೋತ್ಸಾಹಕ ಕ್ರಮಗಳನ್ನೂ ಒಳಗೊಂಡಿದ್ದು, ಹೆಚ್ಚಿನ/ವಿಶಾಲವಾದ ವ್ಯಾಪ್ತಿಯನ್ನು ಹೊಂದಿದೆ.

ವಿವರಗಳು:

ದೇಶದ ಈಶಾನ್ಯ ಭಾಗದ ರಾಜ್ಯಗಳಲ್ಲಿ ಉದ್ಯೋಗಸೃಷ್ಟಿಗೆ ಉತ್ತೇಜನ ನೀಡುವ ಉದ್ದೇಶಕ್ಕಾಗಿ ಕೇಂದ್ರ ಸರಕಾರವು ಮೊದಲಿಗೆ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಈ ಯೋಜನೆಯ ಮೂಲಕ ಹಲವು ಬಗೆಯ ಪ್ರೋತ್ಸಾಹಗಳನ್ನು ನೀಡಲಿದೆ. ಅಲ್ಲದೆ, ಈ ಯೋಜನೆಯ ಮೂಲಕ ಉದ್ಯೋಗಗಳನ್ನು ಸೃಷ್ಟಿಸುವಂತಾಗಬೇಕೆಂಬ ಆಶಯದಿಂದ ಅದು ಕೆಲವು ನಿರ್ದಿಷ್ಟ ಬಗೆಯ ಪ್ರೋತ್ಸಾಹಕ ಕ್ರಮಗಳನ್ನು ವಿಸ್ತರಿಸಲಿದೆ.

ಕೇಂದ್ರ ಸರಕಾರದ ಇನ್ನಿತರ ಯೋಜನೆಗಳಡಿಯಲ್ಲಿ ನೆರವು ಪಡೆದಿರುವ ಎಲ್ಲ ಅರ್ಹ ಕಂಪನಿಗಳನ್ನು ಈ ಯೋಜನೆಯ ಅಡಿಯಲ್ಲೂ ಪರಿಗಣಿಸಲಾಗುವುದಲ್ಲದೆ, ಅವುಗಳಿಗೆ ಈ ಯೋಜನೆಯ ಇನ್ನಿತರ ಸೌಲಭ್ಯಗಳಡಿ ಸಹಾಯವನ್ನು ವಿಸ್ತರಿಸಲಾಗುವುದು.

ಈಶಾನ್ಯ ಭಾರತದ ರಾಜ್ಯಗಳಲ್ಲಿ ಸ್ಥಾಪಿಸಲಿರುವ ಹೊಸ ಕೈಗಾರಿಕಾ ಘಟಕಗಳಿಗೆ ಈ ಯೋಜನೆಯಡಿ ನೀಡುವ ಉತ್ತೇಜನಗಳ ವಿವರ ಕೆಳಕಂಡಂತಿದೆ-

* ಸಾಲ ಸೌಲಭ್ಯಕ್ಕಾಗಿ ಕೇಂದ್ರ ಬಂಡವಾಳ ಹೂಡಿಕೆ ನಿಧಿ (ಸಿಸಿಐಐಎಸಿ)

-ಕೈಗಾರಿಕಾ ಘಟಕವನ್ನು ಮತ್ತು ಅದಕ್ಕೆ ಬೇಕಾದ ಯಂತ್ರೋಪಕರಣಗಳಿಗಾಗಿ ಹೂಡುವ ಒಟ್ಟು ಬಂಡವಾಳ ಹೂಡಿಕೆಯ ಶೇಕಡ 30ರಷ್ಟನ್ನು, ಗರಿಷ್ಠ 5 ಕೋಟಿ ರೂ.ಗಳ ಮಿತಿಯೊಂದಿಗೆ ಈ ಕ್ರಮದಡಿ ನೀಡಲಾಗುವುದು.

* ಕೇಂದ್ರ ಬಡ್ಡಿ ಉತ್ತೇಜನಾ ಕ್ರಮ (ಸಿಐಐ)

-ಕೈಗಾರಿಕಾ ಕಟ್ಟಡಗಳು, ಸ್ಥಾವರಗಳು ಮತ್ತು ಯಂತ್ರೋಪಕರಣಗಳಿಗೆ ಕಟ್ಟುವ ವಿಮಾ ಹಣವನ್ನು ಕೈಗಾರಿಕಾ ಘಟಕವು ತನ್ನ ಉತ್ಪಾದನಾ ಚಟುವಟಿಕೆಯನ್ನು ನಿಜವಾಗಿ ಪ್ರಾರಂಭಿಸಿದಂದಿನಿಂದ ಮುಂದಿನ 5 ವರ್ಷಗಳ ಕಾಲ ಶೇ.100ರಷ್ಟು ಮರುಪಾವತಿಸಲಾಗುವುದು.

* ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಮರುಪಾವತಿ

-ಕೈಗಾರಿಕಾ ಘಟಕವು ತನ್ನ ಚಟುಟಿಕೆಯನ್ನು ನಿಜವಾಗಿ ಪ್ರಾರಂಭಿಸಿದ ದಿನದಿಂದ ಹಿಡಿದು ಮುಂದಿನ 5 ವರ್ಷಗಳವರೆಗೆ ಸಿಜಿಎಸ್ ಟಿ ಮತ್ತು ಐಜಿಎಸ್ ಟಿಗಳಲ್ಲಿನ ಕೇಂದ್ರ ಸರಕಾರದ ಪಾಲನ್ನು ಸಂಪೂರ್ಣವಾಗಿ, ಅಂದರೆ ಶೇ.100ರಷ್ಟನ್ನು ಮರುಪಾವತಿಸಲಾಗುವುದು.

* ಆದಾಯ ತೆರಿಗೆ (ಐಟಿ) ಮರುಪಾವತಿ

-ಕೈಗಾರಿಕಾ ಘಟಕವು ತನ್ನ ಉತ್ಪಾದನಾ ಚಟುವಟಿಕೆಯನ್ನು ಪ್ರಾರಂಭಿಸಿದ ವರ್ಷವೂ ಸೇರಿದಂತೆ ಮೊದಲ 5 ವರ್ಷಗಳ ಕಾಲ ತಾನು ಪಾವತಿಸುವ ಆದಾಯ ತೆರಿಗೆಯಲ್ಲಿನ ಕೇಂದ್ರ ಸರಕಾರದ ಪಾಲನ್ನು ಸಂಪೂರ್ಣವಾಗಿ ಹಿಂದಿರುಗಿಸಲಾಗುವುದು.

* ಸಾರಿಗೆ/ಸಾಗಣೆ ಭತ್ಯೆ (ಟಿಐ)

-ರೈಲುಗಳ ಮೂಲಕ ನಡೆಯುತ್ತಿರುವ ಸರಕುಗಳ/ಉತ್ಪನ್ನಗಳ ಸಾಗಣೆಗೆ ಈಗ ನೀಡುತ್ತಿರುವ ಸಹಾಯಧನದ ಜೊತೆಗೆ ಒಟ್ಟು ವೆಚ್ಚದ ಶೇಕಡ 20ರಷ್ಟನ್ನು ಕೊಡಲಾಗುವುದು.

-ಭಾರತೀಯ ಒಳನಾಡು ಜಲಸಾರಿಗೆ ಪ್ರಾಧಿಕಾರದ ಮೂಲಕ ಉತ್ಪನ್ನಗಳ ಸಾಗಣೆ ಮಾಡಿದರೆ ಒಟ್ಟು ವೆಚ್ಚದ ಶೇ.20ರಷ್ಟನ್ನು ನೆರವಿನ ರೂಪದಲ್ಲಿ ಕೊಡಲಾಗುವುದು.

-ಬೇಗನೇ ಹಾಳಾಗಬಹುದಾದಂತಹ ಸೂಕ್ಷ್ಮ ಉತ್ಪನ್ನಗಳನ್ನು ತಯಾರಿಸುವ ಸ್ಥಳಕ್ಕೆ ಹತ್ತಿರದಲ್ಲಿರುವ ವಿಮಾನ ನಿಲ್ದಾಣದಿಂದ ದೇಶದ ಬೇರಾವುದೇ ವಿಮಾನ ನಿಲ್ದಾಣಕ್ಕೆ ವಿಮಾನದ ಮೂಲಕ ಸಾಗಿಸಿದರೆ ಒಟ್ಟು ವೆಚ್ಚದ ಶೇ.30ರಷ್ಟು ಬಾಬ್ತನ್ನು ಕಂಪನಿಗಳಿಗೆ ನೀಡಲಾಗುವುದು.

* ಉದ್ಯೋಗಸೃಷ್ಟಿ ಉತ್ತೇಜನ (ಇಐ) ಭತ್ಯೆ

-ಕಂಪನಿಗಳು ಕಾರ್ಮಿಕರ ಭವಿಷ್ಯನಿಧಿಗೆ ಪಾವತಿಸುವ ಹಣದ ಪಾಲಿನಲ್ಲಿ ಕೇಂದ್ರ ಸರಕಾರವು ಶೇ.3.67ರಷ್ಟುನ್ನು ಸ್ವತಃ ತಾನೇ ಭರಿಸಲಿದ್ದು, ಇದರ ಜತೆಗೆ ಕಾರ್ಮಿಕರ ಪಿಂಚಣಿ ಯೋಜನೆಗೆ ಉದ್ಯೋಗದಾತ ಸಂಸ್ಥೆಗಳು ಭರಿಸುವ ಪಾಲಿನಲ್ಲಿ ಶೇ.8.33ರಷ್ಟು ಹಣವನ್ನು ಕೇಂದ್ರ ಸರಕಾರವೇ `ಪ್ರಧಾನಮಂತ್ರಿಗಳ ರೋಜಗಾರ್ ಪ್ರೋತ್ಸಾಹನ್ ಯೋಜನೆ’ಯಡಿ (ಪಿಎಂಆರ್ ಪಿವೈ) ಪಾವತಿಸಲಿದೆ.

ಈ ಮೇಲಿನ ಎಲ್ಲಾ ಪ್ರೋತ್ಸಾಹಕ ಕ್ರಮಗಳಡಿ ನೀಡಲಿರುವ ಸಹಾಯದ ಗರಿಷ್ಠ ಮಿತಿಯು ಒಂದು ಕೈಗಾರಿಕಾ ಘಟಕಕ್ಕೆ 200 ಕೋಟಿ ರೂ.ಗಳಾಗಿರಲಿದೆ.

ಈ ಹೊಸ ನೀತಿಯು ಈಶಾನ್ಯ ಭಾರತದ ರಾಜ್ಯಗಳಲ್ಲಿ ಕೈಗಾರಿಕೀಕರಣವನ್ನು ಉತ್ತೇಜಿಸಲಿದ್ದು, ಆ ಭಾಗದಲ್ಲಿ ಉದ್ಯೋಗಸೃಷ್ಟಿ ಮತ್ತು ಆದಾಯಸೃಷ್ಟಿಗೆ ಬಲ ತುಂಬಲಿದೆ.

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Mutual fund industry on a high, asset surges Rs 17 trillion in 2024

Media Coverage

Mutual fund industry on a high, asset surges Rs 17 trillion in 2024
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 25 ಡಿಸೆಂಬರ್ 2024
December 25, 2024

PM Modi’s Governance Reimagined Towards Viksit Bharat: From Digital to Healthcare