ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಅನ್ನದಾತರ ಪರ ತನ್ನ ಬದ್ಧತೆ ಮತ್ತು ಸಮರ್ಪಣೆಗೆ ಅನುಗುಣವಾಗಿ, ಹೊಸ ಸುರಕ್ಷಾ (ಅಂಬ್ರೆಲಾ) ಯೋಜನೆ "ಪ್ರಧಾನ ಮಂತ್ರಿ ಅನ್ನದಾತಾ ಆಯ್ ಸಂರಕ್ಷಣ ಅಭಿಯಾನ" (ಪಿ.ಎಂ. ಆಶಾ)ಕ್ಕೆ ಅನುಮೋದನೆ ನೀಡುವ ಮೂಲಕ ಕೃಷಿಕರ ಪರವಾದ ಉಪಕ್ರಮಗಳಿಗೆ ಮಹತ್ವದ ಇಂಬು ನೀಡಿದೆ. 2018ರ ಬಜೆಟ್ ನಲ್ಲಿ ಘೋಷಿಸಿರುವಂತೆ ರೈತರಿಗೆ ತಮ್ಮ ಉತ್ಪನ್ನಗಳಿಗೆ ಲಾಭದಾಯಕ ದರದ ಖಾತ್ರಿ ಪಡಿಸುವ ಗುರಿಯನ್ನು ಯೋಜನೆ ಹೊಂದಿದೆ.
ಇದು ಕೃಷಿಕರ ಕಲ್ಯಾಣದತ್ತ ದೀರ್ಘ ಕಾಲಿನವಾಗಿ ಸಾಗುವ ಕ್ರಮವಾಗಿ ರೈತರ ಆದಾಯ ರಕ್ಷಣೆಗಾಗಿ ಭಾರತ ಸರ್ಕಾರ ಕೈಗೊಂಡಿರುವ ಅಭೂತಪೂರ್ವ ಕ್ರಮವಾಗಿದೆ. ಸರ್ಕಾರ ಈಗಾಗಲೇ ಉತ್ಪಾದನಾ ವೆಚ್ಚಕ್ಕಿಂತ ಒಂದೂವರೆ ಪಟ್ಟು ಹೆಚ್ಚು ತತ್ವದ ಆಧಾರದ ಮೇಲೆ ಮುಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಳ ಮಾಡಿದೆ. ಕನಿಷ್ಠ ಬೆಂಬಲ ಬೆಲೆ ಹೆಚ್ಚಳವು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಚೈತನ್ಯದಾಯಕ ದಾಸ್ತಾನು ವ್ಯವಸ್ಥೆಯ ಮೂಲಕ ರೈತರಿಗೆ ಆದಾಯವಾಗಿ ಪರಿವರ್ತಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.
ಪಿ.ಎಂ. –ಆಶಾ ಭಾಗಗಳು:
ಹೊಸ ಸುರಕ್ಷಾ (ಅಂಬ್ರೆಲಾ) ಯೋಜನೆಯು ರೈತರಿಗೆ ಲಾಭದಾಯಕವಾದ ದರ ಖಾತ್ರಿ ಪಡಿಸುವ ವ್ಯವಸ್ಥೆಯನ್ನು ಒಳಗೊಂಡಿದ್ದು, ಅದು ಈ ಕೆಳಗಿನವುಗಳನ್ನು ಹೊಂದಿದೆ.
- ಬೆಲೆ ಬೆಂಬಲ ಯೋಜನೆ (ಪಿಎಸ್.ಎಸ್.)
- ಬೆಲೆ ಕೊರತೆ ಪಾವತಿ ಯೋಜನೆ (ಪಿ.ಡಿ.ಪಿ.ಎಸ್.)
- ಪ್ರಾಯೋಗಿಕ ಖಾಸಗಿ ದಾಸ್ತಾನು ಮತ್ತು ದಾಸ್ತಾನುದಾರರ ಯೋಜನೆ (ಪಿಪಿಪಿಎಸ್)
ಆಹಾರ ಮತ್ತು ಸಾರ್ವಜನಿಕ ವಿತರಣೆ (ಡಿಎಫ್.ಪಿ.ಡಿ.)ಇಲಾಖೆಯಲ್ಲಿನ ಭತ್ತ, ಗೋಧಿ ಮತ್ತು ಪೌಷ್ಟಿಕ-ಧಾನ್ಯಗಳು/ಒರಟು ಧಾನ್ಯಗಳ ದಾಸ್ತಾನು ಮತ್ತು ಜವಳಿ ಸಚಿವಾಲಯದಲ್ಲಿ ಹತ್ತಿ ಮತ್ತು ಸೆಣಬು ದಾಸ್ತಾನಿಗೆ ಹಾಲಿ ಇರುವ ಇತರ ಯೋಜನೆಗಳು ರೈತರಿಗೆ ಈ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಒದಗಿಸಲು ಹಾಗೇ ಮುಂದುವರಿಯುತ್ತವೆ.
ದಾಸ್ತಾನು ಕಾರ್ಯಾಚರಣೆಯಲ್ಲಿ ಖಾಸಗಿ ವಲಯದ ಪಾಲ್ಗೊಳ್ಳುವಿಕೆಯ ಪ್ರಯೋಗ ಮಾಡಬೇಕಾದ ಅಗತ್ಯವಿದೆ ಎಂದು ಸಂಪುಟ ನಿರ್ಧರಿಸಿದೆ ಮತ್ತು ಸಂಗ್ರಹಣೆಯ ಕಾರ್ಯಾಚರಣೆಗಳಲ್ಲಿ ಖಾಸಗಿ ಪಾಲ್ಗೊಳ್ಳುವಿಕೆಯ ಪ್ರಮಾಣ ಹೆಚ್ಚಾಗಬಹುದು ಎಂದು ತಿಳಿದುಬಂದಿದೆ. ಆಧ್ದರಿಂದ ಪಿಡಿಪಿಎಸ್ ಜೊತೆಗೆ.
ಎಣ್ಣೆ ಕಾಳುಗಳಿಗೆ ಸಂಬಂಧಿಸಿದಂತೆ ಖಾಸಗಿ ದಾಸ್ತಾನುದಾರರ ಭಾಗವಹಿಸುವಿಕೆಯನ್ನು ಒಳಗೊಂಡಿರುವ ಜಿಲ್ಲೆಯ ಆಯ್ದ ಜಿಲ್ಲೆಯ / ಎಪಿಎಂಸಿ (ಗಳು)ಗಳಲ್ಲಿ ಪ್ರಾಯೋಗಿಕ ಆಧಾರದ ಮೇಲೆ ಖಾಸಗಿ ವಿತರಣಾ ದಾಸ್ತಾನು ಯೋಜನೆ (ಪಿಪಿಎಸ್ಎಸ್) ಯನ್ನು ಜಾರಿಗೊಳಿಸುವ ಅವಕಾಶವನ್ನು ರಾಜ್ಯಗಳಿಗೆ ನೀಡಲು ನಿರ್ಧರಿಸಲಾಗಿದೆ. ಪ್ರಾಯೋಗಿಕ ಜಿಲ್ಲೆ/ ಜಿಲ್ಲೆಗಳ ಆಯ್ದ ಎ.ಪಿ.ಎಂ.ಸಿ.ಗಳು ಎಂ.ಎಸ್.ಪಿ. ಅಧಿಸೂಚನೆಯಾಗಿರುವ ಒಂದು ಅಥವಾ ಅದಕ್ಕಿಂತ ಹೆಚ್ಚಿನ ಎಣ್ಣೆಕಾಳು ಬೆಳೆಗಳನ್ನು ವ್ಯಾಪಿಸಲಿವೆ. ಇದು ಪಿ.ಎಸ್.ಎಸ್.ಗೆ ಹೋಲಿಕೆಯಾಗುವ ಹಿನ್ನೆಲೆಯಲ್ಲಿ ಇದರಲ್ಲಿ ಅಧಿಸೂಚಿತ ಸರಕುಗಳ ಭೌತಿಕ ದಾಸ್ತಾನನ್ನು ಒಳಗೊಂಡಿದೆ, ಇದು ಪ್ರಾಯೋಗಿಕ ಜಿಲ್ಲೆಗಳಲ್ಲಿ ಪಿಎಸ್.ಎಸ್./ಪಿಡಿಪಿಎಸ್ ಗೆ ಪರ್ಯಾಯವಾಗಿದೆ.
ಮಾರುಕಟ್ಟೆಯಲ್ಲಿ ಬೆಲೆಗಳು ಸೂಚಿತ ಎಂ.ಎಸ್.ಪಿ.ಗಿಂತಲೂ ಇಳಿದಾಗ ಮತ್ತು ಮಾರುಕಟ್ಟೆಗೆ ಪ್ರವೇಶಿಸಲು ರಾಜ್ಯ ಸರ್ಕಾರ/ ಕೇಂದ್ರಾಡಳಿತ ಪ್ರದೇಶಗಳು ಅಧಿಕೃತಗೊಳಿಸಿದಾಗಲೆಲ್ಲಾ ಆಯ್ದ ಖಾಸಗಿ ಸಂಸ್ಥೆಗಳು ಪಿಪಿಎಸ್.ಎಸ್. ಮಾರ್ಗಸೂಚಿಗನುಗುಣವಾಗಿ ನೋಂದಾಯಿಸಿಕೊಂಡಿರುವ ರೈತರಿಂದ ಅಧಿಸೂಚಿತ ಮಾರುಕಟ್ಟೆಗಳಲ್ಲಿ ಅಧಿಸೂಚಿತ ಅವಧಿಯಲ್ಲಿ ಸರಕುಗಳನ್ನು ಎಂ.ಎಸ್.ಪಿ.ಯಲ್ಲಿ ದಾಸ್ತಾನು ಮಾಡಿಕೊಳ್ಳಲಿವೆ ಮತ್ತು ಅಧಿಸೂಚಿತ ಎಂ.ಎಸ್.ಪಿ.ಯ ಶೇ.15ರವರೆಗೆ ಗರಿಷ್ಠ ಸೇವಾ ಶುಲ್ಕ ಪಾವತಿಸಬಹುದಾಗಿದೆ.
ವೆಚ್ಚ :
ಇದನ್ನು ಒಟ್ಟಾರೆಯಾಗಿ 45,550 ಕೋಟಿ ರೂಪಾಯಿ ಮಾಡಲು ಹೆಚ್ಚುವರಿಯಾಗಿ 16,550 ಕೋಟಿ ರೂಪಾಯಿ ಸರ್ಕಾರದ ಖಾತ್ರಿ ನೀಡಲು ಸಂಪುಟ ನಿರ್ಧರಿಸಿದೆ.
ಇದರ ಜೊತೆಗೆ, ಸಂಗ್ರಹಣಾ ಕಾರ್ಯಾಚರಣೆಗಳಿಗೆ ಬಜೆಟ್ ನಲ್ಲಿ ಹೆಚ್ಚಿನ ಅವಕಾಶ ಮಾಡಲಾಗಿದೆ ಮತ್ತು ಪಿ.ಎಂ. ಆಶಾಅನುಷ್ಠಾನಕ್ಕೆ 15,053 ಕೋಟಿ ರೂ. ಮಂಜೂರು ಮಾಡಲಾಗಿದೆ. ಈ ಯೋಜನೆಯು ನಮ್ಮ 'ಅನ್ನದಾತ' ರಿಗೆ ಸರ್ಕಾರದ ಬದ್ಧತೆ ಮತ್ತು ಸಮರ್ಪಣೆಯ ಪ್ರತಿಫಲನವಾಗಿದೆ.
ವರ್ಷಗಳಲ್ಲಿನ ಸಂಗ್ರಹಣೆ:
2010-14ರ ಆರ್ಥಿಕ ವರ್ಷದಲ್ಲಿ ಒಟ್ಟಾರೆ ದಾಸ್ತಾನು 3500 ಕೋಟಿ ರೂಪಾಯಿ ಮಾತ್ರವಾಗಿತ್ತು, ಆದರೆ 2014-2018ರ ಆರ್ಥಿಕ ವರ್ಷದಲ್ಲಿ ಇದು 10 ಪಟ್ಟು ಹೆಚ್ಚಳವಾಗಿದ್ದು, 34ಸಾವಿರ ಕೋಟಿ ತಲುಪಿದೆ. 2010-14ರ ಅವಧಿಯಲ್ಲಿ ಈ ಕೃಷಿ ಉತ್ಪನ್ನಗಳ ದಾಸ್ತಾನಿಗೆ ಕೇವಲ 300 ಕೋಟಿ ರೂಪಾಯಿಗಳ ವೆಚ್ಚದೊಂದಿಗೆ ಸರ್ಕಾರದಿಂದ 2500 ಕೋಟಿ ರೂಪಾಯಿ ಖಾತ್ರಿ ಒದಗಿಸಲಾಗಿದೆ; ಆದರೆ, 2014-18ರ ಅವಧಿಯಲ್ಲಿ ಖಾತ್ರಿಯ ಮೊತ್ತವನ್ನು 1000 ಕೋಟಿ ರೂಪಾಯಿ ವೆಚ್ಚದೊಂದಿಗೆ 29,000 ಕೋಟಿ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.
ವಿವರಗಳು:
- ಯಾವುದೇ ಸಮಸ್ಯೆಯನ್ನು ತುಣುಕುಗಳಾಗಿ ಪರಿಹರಿಸುವ ಬದಲಾಗಿ ಸಮಗ್ರ ವಿಧಾನದೊಂದಿಗೆ ಪರಿಹರಿಸಲು ಶ್ರಮಿಸುತ್ತಿದೆ. ಎಂ.ಎಸ್.ಪಿ. ಸಾಕಷ್ಟೇನಿಲ್ಲ ಆದರೆ, ರೈತರು ಪ್ರಕಟಿಸಲಾಗಿರುವ ಎಂ.ಎಸ್.ಪಿ.ಯ ಪೂರ್ಣ ಲಾಭ ಪಡೆಯುವುದು ಮುಖ್ಯವಾಗಿದೆ. ಇದಕ್ಕಾಗಿ, ಸರ್ಕಾರವು ಕನಿಷ್ಠ ಬೆಂಬಲ ಬೆಲೆಗಿಂತ ಕೃಷಿ ಉತ್ಪನ್ನದ ದರ ಮಾರುಕಟ್ಟೆಯಲ್ಲಿ ಕಡಿಮೆ ಇದ್ದಾಗ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಂ.ಎಸ್.ಪಿ.ಯಡಿ ಸಂಪೂರ್ಣ ಉತ್ಪನ್ನ ಖರೀದಿಸಬೇಕು ಅಥವಾ ಇತರ ವ್ಯವಸ್ಥೆಗಳ ಮೂಲಕ ರೈತರಿಗೆ ಎಂ.ಎಸ್.ಪಿ. ಒದಗಿಸುವ ರೀತಿ ಕಾರ್ಯ ನಿರ್ವಹಿಸಬೇಕು ಎಂಬುದು ಭಾರತ ಸರ್ಕಾರಕ್ಕೆ ಮನವರಿಕೆಯಾಗಿದೆ. ಈ ನಿಲುವಿನೊಂದಿಗೆ ಸಂಪುಟವು ಮೂರು ಉಪ ಯೋಜನೆಗಳು ಅಂದರೆ ಬೆಲೆ ಬೆಂಬಲ ಯೋಜನೆ (ಪಿಎಸ್.ಎಸ್.), ಬೆಲೆ ಕೊರತೆ ಪಾವತಿ ಯೋಜನೆ (ಪಿ.ಡಿ.ಪಿ.ಎಸ್.), ಪ್ರಾಯೋಗಿಕ ಖಾಸಗಿ ದಾಸ್ತಾನು ಮತ್ತು ದಾಸ್ತಾನುದಾರರ ಯೋಜನೆ (ಪಿಪಿಪಿಎಸ್)ಗಳನ್ನೊಳಗೊಂಡ ಅಂಬ್ರೆಲಾ ಯೋಜನೆ ಪಿ.ಎಂ. – ಆಶಾ ಅನುಮೋದಿಸಿದೆ.
ಬೆಂಬಲ ಬೆಲೆ ಯೋಜನೆ (ಪಿ.ಎಸ್.ಎಸ್.)ನಲ್ಲಿ, ರಾಜ್ಯ ಸರ್ಕಾರಗಳ ಸಕ್ರಿಯ ಪಾತ್ರದ ಮೂಲಕ ಕೇಂದ್ರದ ನೋಡೆಲ್ ಸಂಸ್ಥೆಗಳು ದ್ವಿದಳ ಧಾನ್ಯಗಳು, ಎಣ್ಣೆ ಕಾಳುಗಳು ಮತ್ತು ಕೊಬ್ಬರಿಯ ಭೌತಿಕ ದಾಸ್ತಾನು ಮಾಡುತ್ತವೆ. ನಾಫೆಡ್, ಭಾರತೀಯ ಆಹಾರ ನಿಗಮ (ಎಫ್.ಸಿ.ಐ.)ಗಳ ಜೊತೆಗೆ ರಾಜ್ಯಗಳು/ಜಿಲ್ಲೆಗಳಲ್ಲಿ ಪಿ.ಎಸ್.ಎಸ್. ಕಾರ್ಯಾಚರಣೆ ಕೈಗೊಳ್ಳಲು ನಿರ್ಧರಿಸಲಾಗಿದೆ. ನಿಯಮಾವಳಿಗಳ ರೀತ್ಯ ದಾಸ್ತಾನ ವೆಚ್ಚ ಮತ್ತು ದಾಸ್ತಾನಿನಿಂದ ಆದ ನಷ್ಟವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ.
ಬೆಲೆ ಕೊರತೆ ಪಾವತಿ ಯೋಜನೆ (ಪಿ.ಡಿ.ಪಿ.ಎಸ್.) ಅಡಿಯಲ್ಲಿ, ಕನಿಷ್ಠ ಬೆಂಬಲ ಬೆಲೆ ಅಧಿಸೂಚನೆ ಮಾಡಲಾಗಿರುವ ಎಲ್ಲ ಎಣ್ಣೆಕಾಳುಗಳನ್ನೂ ತರಲು ಉದ್ದೇಶಿಸಲಾಗಿದೆ. ಇದರಲ್ಲಿ ಪಾರದರ್ಶಕ ಹರಾಜು ಪ್ರಕ್ರಿಯೆಯಲ್ಲಿ ಅಧಿಸೂಚಿತ ಮಾರುಕಟ್ಟೆಗಳಲ್ಲಿ ಪೂರ್ವ ನೋಂದಾಯಿತ ರೈತರು ಮಾರಾಟ ಮಾಡುವ ಮಾರಾಟ/ಮಾದರಿ ದರ ಹಾಗೂ ಎಂ.ಎಸ್.ಪಿ. ನಡುವಿನ ಅಂತರವನ್ನು ನೇರವಾಗಿ ಪಾವತಿಸಲಾಗುತ್ತದೆ. ಎಲ್ಲ ಪಾವತಿಯನ್ನೂ ನೇರವಾಗಿ ರೈತರ ನೋಂದಾಯಿತ ಬ್ಯಾಂಕ್ ಖಾತೆಗಳಿಗೆ ಮಾಡಲಾಗುತ್ತದೆ. ರೈತರಿಗೆ ಎಂ.ಎಸ್.ಪಿ.ದರ ಮತ್ತು ಮಾರಾಟದ / ಮಾದರಿ ದರಗಳ ನಡುವಿನ ವ್ಯತ್ಯಾಸವನ್ನು ಸೂಚಿಸಿದ ಮಾರುಕಟ್ಟೆಯಲ್ಲಿ ವಿಲೇವಾರಿ ಮಾಡುವಂತೆ ಬೆಳೆಗಳ ಯಾವುದೇ ಭೌತಿಕ ಸಂಗ್ರಹಣೆ ಈ ಯೋಜನೆಯಲ್ಲಿ ಒಳಗೊಂಡಿರುವುದಿಲ್ಲ. ಪಿಡಿಪಿಎಸ್ ಗೆ ಕೇಂದ್ರ ಸರ್ಕಾರದ ಬೆಂಬಲವನ್ನು ನಿಯಮಾನುಸಾರ ನೀಡಲಾಗುತ್ತದೆ.
ಸರ್ಕಾರದ ರೈತರ ಪರ ಉಪಕ್ರಮ :
2022ರ ಹೊತ್ತಿಗೆ ರೈತರ ಆದಾಯವನ್ನು ದುಪ್ಪಟ್ಟು ಮಾಡುವ ತನ್ನ ಕನಸನ್ನು ನನಸು ಮಾಡಲು ಸರ್ಕಾರ ಬದ್ಧವಾಗಿದೆ. ಉತ್ಪಾದಕತೆಯನ್ನು ಹೆಚ್ಚಿಸುವುದು, ಕೃಷಿ ವೆಚ್ಚವನ್ನು ಕಡಿಮೆ ಮಾಡುವುದು ಮತ್ತು ಮಾರುಕಟ್ಟೆ ಸ್ವರೂಪ ಸೇರಿದಂತೆ ಕೊಯ್ಲು ನಂತರದ ನಿರ್ವಹಣೆಯನ್ನು ಬಲಪಡಿಸುವುದಕ್ಕೆ ಮಹತ್ವ ನೀಡಲಾಗಿದೆ. ಹಲವು ಮಾರುಕಟ್ಟೆ ಸುಧಾರಣೆಗಳನ್ನು ಗುರುತಿಸಲಾಗಿದೆ. ಇದರಲ್ಲಿ ಮಾದರಿ ಕೃಷಿ ಉತ್ಪನ್ನ ಮತ್ತು ಜಾನುವಾರು ಮಾರುಕಟ್ಟೆ ಕಾಯಿದೆ 2017 ಮತ್ತು ಮಾದರಿ ಗುತ್ತಿಗೆ ಕೃಷಿ ಮತ್ತು ಸೇವಾ ಕಾಯಿದೆ 2018 ಸೇರಿದೆ. ಹಲವು ರಾಜ್ಯಗಳು ಇದನ್ನು ಶಾಸನದ ಮೂಲಕ ಅಳವಡಿಸಿಕೊಳ್ಳಲು ಕ್ರಮ ವಹಿಸಿವೆ.
ರೈತರಿಗೆ ತಮ್ಮ ಉತ್ಪನ್ನಕ್ಕೆ ಲಾಭದಾಯಕ ಬೆಲೆ ಖಾತ್ರಿಗಾಗಿಹೊಸ ಮಾರುಕಟ್ಟೆ ವಿನ್ಯಾಸಕ್ಕೆ ಪ್ರಯತ್ನಗಳು ಸಾಗಿವೆ. ಇದರಲ್ಲಿ ರೈತರ ಜಮೀನಿನ ಸಮೀಪದಲ್ಲೇ 22,000 ಸಂಖ್ಯೆಯ ಚಿಲ್ಲರೆ ಮಾರುಕಟ್ಟೆ ಉತ್ತೇಜಿಸಲು ಗ್ರಾಮೀಣ ಕೃಷಿ ಮಾರುಕಟ್ಟೆ (ಜಿಆರ್ ಎ.ಎಂ.ಗಳು) ಸ್ಥಾಪನೆ;ಇ ನಾಮ್ ಮೂಲಕ ಎಪಿಎಂಸಿಯ ಸ್ಪರ್ಧಾತ್ಮಕ ಮತ್ತು ಪಾರದರ್ಶಕ ಸಗಟು ವ್ಯಾಪಾರ ಮತ್ತು ದೃಢವಾದ ಮತ್ತು ರೈತ ಪರವಾದ ರಫ್ತು ನೀತಿಯೂ ಸೇರಿದೆ.
ಇದರ ಜೊತೆಗೆ, ಇತರ ಹಲವು ರೈತ ಪರವಾದ ಉಪಕ್ರಮಗಳು ಅಂದರೆ ಪ್ರಧಾನಮಂತ್ರಿ ಬೆಳೆ ವಿಮೆ ಯೋಜನೆ, ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ, ಪರಂಪರಾಗತ ಕೃಷಿ ವಿಕಾಸ ಯೋಜನೆ ಮತ್ತು ಮಣ್ಣಿನ ಆರೋಗ್ಯದ ಕಾರ್ಡ್ ವಿತರಣೆಯನ್ನೂ ಕೈಗೊಳ್ಳಲಾಗಿದೆ. ಕೃಷಿ ವೆಚ್ಚದ ಒಂದೂವರೆ ಪಟ್ಟು ಹೆಚ್ಚಿನ ಆದಾಯ ಸೂತ್ರದ ಆಧಾರದ ಮೇಲೆ ಕನಿಷ್ಠ ಬೆಂಬಲ ಬೆಲೆ ಘೋಷಣೆಯ ನಿರ್ಧಾರ ರೈತರ ಕಲ್ಯಾಣದ ಬದ್ಧತೆಯ ಅಭೂತಪೂರ್ವ ಪ್ರತಿಫಲಿಸುವ ನಿರ್ಧಾರವಾಗಿದೆ.