ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಂಪುಟ ಸಭೆಯು “ಕೃಷಿ ಮೂಲಸೌಕರ್ಯ ನಿಧಿ” ಅಡಿಯಲ್ಲಿ ಹಣಕಾಸು ಸೌಲಭ್ಯ ಒದಗಿಸುವ ಕೇಂದ್ರ ಸರಕಾರದ  ಯೋಜನೆಗೆ ಈ ಕೆಳಗಿನ ಮಾರ್ಪಾಡುಗಳಿಗೆ ತನ್ನ ಅನುಮೋದನೆ ನೀಡಿತು.

ಎ) ಅರ್ಹತೆಯನ್ನು ಈಗ ರಾಜ್ಯ ಏಜೆನ್ಸಿಗಳು/ಎ.ಪಿ.ಎಂ.ಸಿ.ಗಳು, ರಾಷ್ಟ್ರೀಯ ಮತ್ತು ರಾಜ್ಯ ಸಹಕಾರಿ ಒಕ್ಕೂಟಗಳು, ರೈತರ ಉತ್ಪಾದನಾ ಸಂಘಟನೆಗಳ ಒಕ್ಕೂಟಗಳು(ಎಫ್.ಪಿ.ಒ.ಗಳು) ಮತ್ತು ಸ್ವ ಸಹಾಯ ಗುಂಪಿನ (ಎಸ್.ಎಚ್.ಜಿ.) ಒಕ್ಕೂಟಗಳಿಗೆ ವಿಸ್ತರಿಸಲಾಗಿದೆ.

ಬಿ) ಈಗ ಈ ಯೋಜನೆ ಅಡಿಯಲ್ಲಿ ಬಡ್ಡಿ ರಿಯಾಯತಿಯು ಒಂದು ಸ್ಥಳದಲ್ಲಿ 2 ಕೋ.ರೂ. ಗಳ ಸಾಲದವರೆಗೆ ಮಾತ್ರ ಅನ್ವಯಿಸುತದೆ. ಒಂದು ವೇಳೆ ಯಾವುದೇ ಅರ್ಹ ಸಂಸ್ಥೆ ವಿವಿಧ ಸ್ಥಳಗಳಲ್ಲಿ ಯೋಜನೆಗಳನ್ನು ಅನುಷ್ಠಾನಗೊಳಿಸಿದರೆ ಆಗ ಅಂತಹ ಎಲ್ಲಾ ಯೋಜನೆಗಳೂ ಈಗ 2 ಕೋ.ರೂ.ಗಳವರೆಗಿನ ಸಾಲಕ್ಕೆ ಬಡ್ಡಿ ರಿಯಾಯತಿ ಪಡೆಯಲು ಅರ್ಹವಾಗುತ್ತವೆ. ಆದಾಗ್ಯೂ ಖಾಸಗಿ ರಂಗದ ಸಂಸ್ಥೆಯಾದರೆ ಅಲ್ಲಿ ಗರಿಷ್ಠ 25 ಯೋಜನೆಗಳ ಮಿತಿಯನ್ನು ಹಾಕಲಾಗಿದೆ. ಈ 25 ಯೋಜನೆಗಳ ಮಿತಿಯು ರಾಜ್ಯದ ಏಜೆನ್ಸಿಗಳಿಗೆ, ರಾಷ್ಟ್ರೀಯ ಮತ್ತು ರಾಜ್ಯದ ಸಹಕಾರಿ ಒಕ್ಕೂಟಗಳಿಗೆ, ಎಫ್.ಪಿ.ಒ. ಒಕ್ಕೂಟಗಳಿಗೆ, ಮತ್ತು ಎಸ್.ಎಚ್.ಜಿ.ಗಳ ಒಕ್ಕೂಟಗಳಿಗೆ ಅನ್ವಯಿಸುವುದಿಲ್ಲ. ಇಲ್ಲಿ ಸ್ಥಳಗಳೆಂದರೆ ಗ್ರಾಮದ ಭೌತಿಕ ಗಡಿ ಅಥವಾ ಪಟ್ಟಣಗಳ ನಿರ್ದಿಷ್ಟ ಎಲ್.ಜಿ.ಡಿ. (ಸ್ಥಳೀಯಾಡಳಿತ ಡೈರೆಕ್ಟರಿ) ಸಂಕೇತ. ಇಂತಹ ಪ್ರತೀ ಯೋಜನೆ ಕೂಡಾ ಪ್ರತ್ಯೇಕ ಎಲ್.ಜಿ.ಡಿ. ಸಂಕೇತವನ್ನು ಹೊಂದಿರುವ ಸ್ಥಳದಲ್ಲಿರಬೇಕಾಗುತ್ತದೆ.

ಸಿ) ಎ.ಪಿ.ಎಂ.ಸಿ.ಗಳಿಗೆ, ವಿವಿಧ ಮೂಲಸೌಕರ್ಯ ಮಾದರಿಗಳಿಗೆ ಅಂದರೆ ಉದಾಹರಣೆಗೆ ಶೀತಲೀಕೃತ ದಾಸ್ತಾನುಗಾರ, ವರ್ಗೀಕರಣ, ಗ್ರೇಡಿಂಗ್, ಮತ್ತು ಮೌಲ್ಯಮಾಪನ ಘಟಕಗಳು, ದಾಸ್ತಾನುಗಾರಗಳು, ಇತ್ಯಾದಿ ಒಂದೇ ಮಾರುಕಟ್ಟೆ ಪ್ರಾಂಗಣದಲ್ಲಿದ್ದರೆ 2 ಕೋ.ರೂ.ಗಳವರೆಗಿನ ಸಾಲಕ್ಕೆ ಬಡ್ಡಿ ರಿಯಾಯತಿ ಲಭ್ಯವಾಗುತ್ತದೆ.

ಡಿ) ಯೋಜನೆಯ ಮೂಲ ಉದ್ದೇಶಕ್ಕೆ ತೊಂದರೆಯಾಗದಂತೆ ಫಲಾನುಭವಿಗಳನ್ನು ಸೇರಿಸುವ ಅಥವಾ ತೆಗೆದು ಹಾಕುವುದಕ್ಕೆ ಸಂಬಂಧಿಸಿದಂತೆ ಅವಶ್ಯ ಬದಲಾವಣೆಗಳನ್ನು ಮಾಡುವ ಅಧಿಕಾರವನ್ನು ಗೌರವಾನ್ವಿತ ಕೃಷಿ ಮತ್ತು ರೈತರ ಕಲ್ಯಾಣ ಸಚಿವರಿಗೆ ನೀಡಲಾಗಿದೆ.

ಇ) ಹಣಕಾಸು ಸೌಲಭ್ಯದ ಅವಧಿಯನ್ನು 4 ವರ್ಷಗಳಿಂದ 6 ವರ್ಷಗಳಿಗೆ 2025-26ರವರೆಗೆ ವಿಸ್ತರಿಸಲಾಗಿದೆ ಮತ್ತು ಯೋಜನೆಯ ಒಟ್ಟಾರೆ ಅವಧಿಯನ್ನು 10 ರಿಂದ 13 ವರ್ಷಗಳಿಗೆ 2032-33 ರವರೆಗೆ ವಿಸ್ತರಿಸಲಾಗಿದೆ.

ಯೋಜನೆಯಲ್ಲಿಯ ಮಾರ್ಪಾಡುಗಳು ಇದರ ಪ್ರಯೋಜನಗಳು ಸಣ್ಣ ಮತ್ತು ಮಧ್ಯಮ ವರ್ಗದ ರೈತರಿಗೆ ಲಭಿಸುವಂತಾಗುವುದನ್ನು ಖಾತ್ರಿಪಡಿಸುವುದರ ಜೊತೆಗೆ ಹೂಡಿಕೆಗಳನ್ನು ತರುವಲ್ಲಿ ಬಹುಆಯಾಮದ ಪರಿಣಾಮವನ್ನು ಉಂಟು ಮಾಡಲಿವೆ. ಮಾರುಕಟ್ಟೆ ಸಂಪರ್ಕಗಳನ್ನು ಒದಗಿಸುವುದಕ್ಕಾಗಿ ಮತ್ತು ಕೊಯ್ಲೋತ್ತರ ಸಾರ್ವಜನಿಕ ಮೂಲಸೌಕರ್ಯ ಎಲ್ಲಾ ರೈತರಿಗೂ ಲಭ್ಯವಾಗುವಂತೆ ಮಾಡಲು ಪರಿಸರ ವ್ಯವಸ್ಥೆಯನ್ನು ರೂಪಿಸಲು ಎ.ಪಿ.ಎಂ.ಸಿ. ಮಾರುಕಟ್ಟೆಗಳನ್ನು ಸಜ್ಜುಗೊಳಿಸಲಾಗುವುದು.

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Modi blends diplomacy with India’s cultural showcase

Media Coverage

Modi blends diplomacy with India’s cultural showcase
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 23 ನವೆಂಬರ್ 2024
November 23, 2024

PM Modi’s Transformative Leadership Shaping India's Rising Global Stature