ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು 2024-25ರ ಮಾರುಕಟ್ಟೆ ಹಂಗಾಮಿಗಾಗಿ ಮುಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗಳನ್ನು (ಎಂ ಎಸ್ ಪಿ) ಹೆಚ್ಚಿಸಲು ಅನುಮೋದಿಸಿತು.
ಬೆಳೆಗಾರರಿಗೆ ಅವರ ಉತ್ಪನ್ನಗಳಿಗೆ ಲಾಭದಾಯಕ ಬೆಲೆಗಳನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು 2024-25 ರ ಮಾರುಕಟ್ಟೆ ಹಂಗಾಮುಗಾಗಿ ಮುಂಗಾರು ಖಾರಿಫ್ ಬೆಳೆಗಳ ಎಂ ಎಸ್ ಪಿ ಯನ್ನು ಅನ್ನು ಹೆಚ್ಚಿಸಿದೆ. ಹಿಂದಿನ ವರ್ಷಕ್ಕಿಂತ ಎಂ ಎಸ್ ಪಿ ಯಲ್ಲಿ ಅಧಿಕ ಸಂಪೂರ್ಣ ಹೆಚ್ಚಳವನ್ನು ಎಣ್ಣೆಕಾಳುಗಳು ಮತ್ತು ದ್ವಿದಳ ಧಾನ್ಯಗಳಿಗೆ ಶಿಫಾರಸು ಮಾಡಲಾಗಿದೆ. ಉದಾ: ಹುಚ್ಚೆಳ್ಳು (ಕ್ವಿಂಟಲ್‌ಗೆ ರೂ.983/-̧) ಎಳ್ಳು (ಕ್ವಿಂಟಲ್‌ಗೆ ರೂ.632/-) ಮತ್ತು ತೊಗರಿ/ಅರ್ಹರ್ (ಕ್ವಿಂಟಲ್‌ಗೆ ರೂ.550/-).
2024-25 ಮಾರುಕಟ್ಟೆ ಹಂಗಾಮುಗಾಗಿ ಎಲ್ಲಾ ಮುಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗಳು
ಪ್ರತಿ ಕ್ವಿಂಟಾಲ್ ಗೆ ರೂ.
ಬೆಳೆಗಳು |
ಎಂ ಎಸ್ ಪಿ 2024-25 |
ವೆಚ್ಚ* ಕೆಎಂಎಸ್ 2024-25 |
ವೆಚ್ಚದ ಮೇಲಿನ ಲಾಭ |
ಎಂ ಎಸ್ ಪಿ 2023-24 |
2023-24ಕ್ಕಿಂತ 2024-25ರಲ್ಲಿ ಎಂ ಎಸ್ ಪಿ ಹೆಚ್ಚಳ |
||
ಧಾನ್ಯಗಳು |
|||||||
ಭತ್ತ |
ಸಾಮಾನ್ಯ |
2300 |
1533 |
50 |
2183 |
117 |
|
ಎ ದರ್ಜೆ |
2320 |
- |
- |
2203 |
117 |
||
ಜೋಳ |
ಹೈಬ್ರಿಡ್ |
3371 |
2247 |
50 |
3180 |
191 |
|
ಮಾಲ್ದಂಡಿ" |
3421 |
- |
- |
3225 |
196 |
||
ಸಜ್ಜೆ |
2625 |
1485 |
77 |
2500 |
125 |
||
ರಾಗಿ |
4290 |
2860 |
50 |
3846 |
444 |
||
ಮೆಕ್ಕೆಜೋಳ |
2225 |
1447 |
54 |
2090 |
135 |
||
ದ್ವಿದಳ ಧಾನ್ಯಗಳು |
|
|
|
|
|
||
ತೊಗರಿ/ಅರ್ಹರ್ |
7550 |
4761 |
59 |
7000 |
550 |
||
ಹೆಸರುಕಾಳು |
8682 |
5788 |
50 |
8558 |
124 |
||
ಉದ್ದಿನ ಕಾಳು |
7400 |
4883 |
52 |
6950 |
450 |
||
ಎಣ್ಣೆ ಕಾಳುಗಳು |
|
|
|
|
|
||
ನೆಲಗಡಲೆ |
6783 |
4522 |
50 |
6377 |
406 |
||
ಸೂರ್ಯಕಾಂತಿ ಬೀಜ |
7280 |
4853 |
50 |
6760 |
520 |
||
ಸೋಯಾಬೀನ್(ಹಳದಿ) |
4892 |
3261 |
50 |
4600 |
292 |
||
ಎಳ್ಳು |
9267 |
6178 |
50 |
8635 |
632 |
||
ಹುಚ್ಚೆಳ್ಳು |
8717 |
5811 |
50 |
7734 |
983 |
||
ವಾಣಿಜ್ಯ |
|
|
|
|
|
||
ಹತ್ತಿ |
ಮಧ್ಯಮ ಸ್ಟೇಪಲ್ |
7121 |
4747 |
50 |
6620 |
501 |
|
ಉದ್ದ ಸ್ಟೇಪಲ್ |
7521 |
- |
- |
7020 |
501 |
||
*ಮಾನವ ಕಾರ್ಮಿಕರು, ಎತ್ತುಗಳ ಕೂಲಿ /ಯಂತ್ರ ಕಾರ್ಮಿಕರು, ಭೂಮಿಯಲ್ಲಿ ಗುತ್ತಿಗೆಗೆ ಪಾವತಿಸಿದ ಬಾಡಿಗೆ, ಬೀಜಗಳು, ರಸಗೊಬ್ಬರಗಳು, ಗೊಬ್ಬರಗಳು, ನೀರಾವರಿ ಶುಲ್ಕಗಳಂತಹ ವಸ್ತುಗಳ ಒಳಹರಿವಿನ ವೆಚ್ಚಗಳಾದ ಉಪಕರಣಗಳು ಮತ್ತು ಕೃಷಿ ಕಟ್ಟಡಗಳ ಮೇಲಿನ ಸವಕಳಿ, ದುಡಿಯುವ ಬಂಡವಾಳದ ಮೇಲಿನ ಬಡ್ಡಿ, ಪಂಪ್ ಸೆಟ್ ಗಳ ಕಾರ್ಯಾಚರಣೆಗೆ ಡೀಸೆಲ್/ವಿದ್ಯುತ್ ಇತ್ಯಾದಿ., ವಿವಿಧ ವೆಚ್ಚಗಳು ಮತ್ತು ಕುಟುಂಬದ ದುಡಿಮೆಯ ಮೌಲ್ಯವನ್ನು ಉಲ್ಲೇಖಿಸುತ್ತದೆ.
ಭತ್ತ (ಗ್ರೇಡ್ ಎ), ಜೋಳ (ಮಾಲ್ದಂಡಿ) ಮತ್ತು ಹತ್ತಿ (ಲಾಂಗ್ ಸ್ಟೇಪಲ್) ಗಾಗಿ ವೆಚ್ಚದ ಡೇಟಾವನ್ನು ಪ್ರತ್ಯೇಕವಾಗಿ ಸಂಕಲಿಸಲಾಗಿಲ್ಲ.
2024-25 ರ ಮಾರುಕಟ್ಟೆ ಹಂಗಾಮುಗಾಗಿ ಮುಂಗಾರು ಬೆಳೆಗಳಿಗೆ ಎಂ ಎಸ್ ಪಿ ಯಲ್ಲಿನ ಹೆಚ್ಚಳವು ಅಖಿಲ ಭಾರತ ಸರಾಸರಿ ಉತ್ಪಾದನಾ ವೆಚ್ಚದ ಕನಿಷ್ಠ 1.5 ಪಟ್ಟು ಎಂ ಎಸ್ ಪಿ ಯನ್ನು ನಿಗದಿಪಡಿಸುವ ಕೇಂದ್ರ ಬಜೆಟ್ 2018-19 ರ ಘೋಷಣೆಗೆ ಅನುಗುಣವಾಗಿದೆ, ನಿರೀಕ್ಷಿತ ಲಾಭವು ರೈತರಿಗೆ ಅವರ ಉತ್ಪಾದನಾ ವೆಚ್ಚಕ್ಕಿಂತ ಅತ್ಯಧಿಕವಾಗಿರುತ್ತದೆ. ಉದಾ: ಸಜ್ಜೆ (77%), ತೊಗರಿ (59%), ಮೆಕ್ಕೆಜೋಳ (54%) ಮತ್ತು ಉದ್ದಿನಕಾಳು (52%) ಎಂದು ಅಂದಾಜಿಸಲಾಗಿದೆ. ಉಳಿದ ಬೆಳೆಗಳಿಗೆ, ಅವುಗಳ ಉತ್ಪಾದನಾ ವೆಚ್ಚದ ಮೇಲೆ ರೈತರಿಗೆ ಲಾಭವು ಶೇ.50 ರಷ್ಟಿರುತ್ತದೆ ಎಂದು ಅಂದಾಜಿಸಲಾಗಿದೆ.
ಇತ್ತೀಚಿನ ವರ್ಷಗಳಲ್ಲಿ, ದ್ವಿದಳ ಧಾನ್ಯಗಳು ಮತ್ತು ಎಣ್ಣೆಕಾಳುಗಳು ಮತ್ತು ಪೌಷ್ಠಿಕ ಧಾನ್ಯಗಳು/ಶ್ರೀ ಅನ್ನದಂತಹ ಧಾನ್ಯಗಳನ್ನು ಹೊರತುಪಡಿಸಿ, ಈ ಬೆಳೆಗಳಿಗೆ ಹೆಚ್ಚಿನ ಎಂ ಎಸ್ ಪಿ ಯನ್ನು ನೀಡುವ ಮೂಲಕ ಸರ್ಕಾರವು ಇತರ ಬೆಳೆಗಳ ಕೃಷಿಯನ್ನು ಉತ್ತೇಜಿಸುತ್ತಿದೆ.
2003-04 ರಿಂದ 2013-14 ರ ಅವಧಿಯಲ್ಲಿ ಮುಂಗಾರು ಮಾರುಕಟ್ಟೆ ಹಂಗಾಮಿನ 14 ಬೆಳೆಗಳ ಎಂ ಎಸ್ ಪಿ ಯಲ್ಲಿ ಕನಿಷ್ಠ ಸಂಪೂರ್ಣ ಹೆಚ್ಚಳವು ಸಜ್ಜೆಗೆ ಪ್ರತಿ ಕ್ವಿಂಟಲ್ ಗೆ ರೂ. 745 ಗರಿಷ್ಠ ಸಂಪೂರ್ಣ ಹೆಚ್ಚಳವಾಗಿತ್ತು ಮತ್ತು 2013-14 ರಿಂದ 2023-24 ರ ಅವಧಿಯಲ್ಲಿ ಹೆಸರು ಕಾಳಿಗೆ ಗರಿಷ್ಠ ಸಂಪೂರ್ಣ ಹೆಚ್ಚಳವು ಕ್ವಿಂಟಲ್‌ಗೆ 3,130 ರೂ.ಗಳಾಗಿದ್ದರೆ, ಮೆಕ್ಕೆಜೋಳಕ್ಕೆ ಎಂ ಎಸ್ ಪಿ ಯಲ್ಲಿ ಕನಿಷ್ಠ ಸಂಪೂರ್ಣ ಹೆಚ್ಚಳವು ಪ್ರತಿ ಕ್ವಿಂಟಲ್‌ಗೆ ರೂ. 780 ಆಗಿತ್ತು ಮತ್ತು ಹುಚ್ಚೆಳ್ಳಿಗೆ ಗರಿಷ್ಠ ಸಂಪೂರ್ಣ ಹೆಚ್ಚಳವು ರೂ 4,234 ಆಗಿತ್ತು. ವಿವರಗಳು ಅನುಬಂಧ-I ನಲ್ಲಿವೆ.
2004-05 ರಿಂದ 2013-14 ರ ಅವಧಿಯಲ್ಲಿ, ಮುಂಗಾರು ಮಾರುಕಟ್ಟೆ ಹಂಗಾಮಿನ ಅಡಿಯಲ್ಲಿ 14 ಬೆಳೆಗಳ ಖರೀದಿ 4,675.98 ಲಕ್ಷ ಮೆಟ್ರಿಕ್ ಟನ್ (LMT) ಆಗಿದ್ದರೆ, 2014-15 ರಿಂದ 2023-24 ರ ಅವಧಿಯಲ್ಲಿ, ಈ ಬೆಳೆಗಳ ಖರೀದಿ 7,5108 ಲಕ್ಷ ಮೆಟ್ರಿಕ್ ಟನ್ ಆಗಿದೆ. ವರ್ಷವಾರು ವಿವರಗಳು ಅನುಬಂಧ-II ನಲ್ಲಿವೆ.
2023-24 ರ ಉತ್ಪಾದನೆಯ 3 ನೇ ಮುಂಗಡ ಅಂದಾಜಿನ ಪ್ರಕಾರ, ದೇಶದಲ್ಲಿ ಒಟ್ಟು ಆಹಾರ ಧಾನ್ಯ ಉತ್ಪಾದನೆಯು 3288.6 ಲಕ್ಷ ಮೆಟ್ರಿಕ್ ಟನ್ (LMT) ಎಂದು ಅಂದಾಜಿಸಲಾಗಿದೆ ಮತ್ತು ಎಣ್ಣೆಕಾಳುಗಳ ಉತ್ಪಾದನೆಯು 395.9 ಲಕ್ಷ ಮೆಟ್ರಿಕ್ ಟನ್ ಅನ್ನು ಮುಟ್ಟುತ್ತಿದೆ. 2023-24ರಲ್ಲಿ, ಅಕ್ಕಿ, ಬೇಳೆಕಾಳುಗಳು, ಎಣ್ಣೆಕಾಳುಗಳು ಮತ್ತು ಪೌಷ್ಠಿಕ ಧಾನ್ಯಗಳು/ಶ್ರೀ ಅನ್ನ ಮತ್ತು ಹತ್ತಿಯ ಮುಂಗಾರು ಹಂಗಾಮಿನ ಉತ್ಪಾದನೆಯು ಕ್ರಮವಾಗಿ 1143.7 ಲಕ್ಷ ಮೆಟ್ರಿಕ್ ಟನ್, 68.6 ಲಕ್ಷ ಮೆಟ್ರಿಕ್ ಟನ್, 241.2 ಲಕ್ಷ ಮೆಟ್ರಿಕ್ ಟನ್, 130.3 ಲಕ್ಷ ಮೆಟ್ರಿಕ್ ಟನ್ ಮತ್ತು 325.2 ಲಕ್ಷ ಬೇಲ್ ಗಳು ಎಂದು ಅಂದಾಜಿಸಲಾಗಿದೆ.
ಅನುಬಂಧ-I ಪ್ರತಿ ಕ್ವಿಂಟಲ್ ಗೆ ರೂ.
ಬೆಳೆಗಳು |
ಎಂ ಎಸ್ ಪಿ 2003-04 |
ಎಂ ಎಸ್ ಪಿ 2013-14 |
ಎಂ ಎಸ್ ಪಿ 2023-24 |
2003-04ಕ್ಕಿಂತ 2013-14ರಲ್ಲಿ ಎಂ ಎಸ್ ಪಿ ಹೆಚ್ಚಳ |
2013-14ಕ್ಕಿಂತ 2023-24ರಲ್ಲಿ ಎಂ ಎಸ್ ಪಿ ಹೆಚ್ಚಳ |
|||
ಧಾನ್ಯಗಳು |
||||||||
ಎ |
ಬಿ |
ಸಿ |
ಡಿ=ಬಿ-ಎ |
ಇ=ಸಿ-ಬಿ |
||||
ಭತ್ತ |
ಸಾಮಾನ್ಯ |
550 |
1310 |
2183 |
760 |
873 |
||
ಎ ದರ್ಜೆ |
580 |
1345 |
2203 |
765 |
858 |
|||
ಜೋಳ |
ಹೈಬ್ರಿಡ್ |
505 |
1500 |
3180 |
995 |
1680 |
||
ಮಾಲ್ದಂಡಿ" |
- |
1520 |
3225 |
|
1705 |
|||
ಸಜ್ಜೆ |
505 |
1250 |
2500 |
745 |
1250 |
|||
ರಾಗಿ |
505 |
1500 |
3846 |
995 |
2346 |
|||
ಮೆಕ್ಕೆಜೋಳ |
505 |
1310 |
2090 |
805 |
780 |
|||
ದ್ವಿದಳ ಧಾನ್ಯಗಳು |
|
|
|
|
|
|||
ತೊಗರಿ/ಅರ್ಹರ್ |
1360 |
4300 |
7000 |
2940 |
2700 |
|||
ಹೆಸರುಕಾಳು |
1370 |
4500 |
8558 |
3130 |
4058 |
|||
ಉದ್ದಿನ ಕಾಳು |
1370 |
4300 |
6950 |
2930 |
2650 |
|||
ಎಣ್ಣೆ ಕಾಳುಗಳು |
|
|
|
|
|
|||
ನೆಲಗಡಲೆ |
1400 |
4000 |
6377 |
2600 |
2377 |
|||
ಸೂರ್ಯಕಾಂತಿ ಬೀಜ |
1250 |
3700 |
6760 |
2450 |
3060 |
|||
ಸೋಯಾಬೀನ್(ಹಳದಿ) |
930 |
2560 |
4600 |
1630 |
2040 |
|||
ಎಳ್ಳು |
1485 |
4500 |
8635 |
3015 |
4135 |
|||
ಹುಚ್ಚೆಳ್ಳು |
1155 |
3500 |
7734 |
2345 |
4234 |
|||
ವಾಣಿಜ್ಯ |
|
|
|
|
|
|||
ಹತ್ತಿ |
ಮಧ್ಯಮ ಸ್ಟೇಪಲ್ |
1725 |
3700 |
6620 |
1975 |
2920 |
||
ಉದ್ದ ಸ್ಟೇಪಲ್ |
1925 |
4000 |
7020 |
2075 |
3020 |
|||
|
ಅನುಬಂಧ-II
ಮುಂಗಾರು ಬೆಳೆಗಳ ಖರೀದಿ 2004-05 ರಿಂದ 2013-14 ಮತ್ತು 2014-15 ರಿಂದ 2023-24
ಲಕ್ಷ ಮೆಟ್ರಿಕ್ ಟನ್ ನಲ್ಲಿ
ಬೆಳೆಗಳು |
2004-05 ರಿಂದ 2013-14 |
2014-15 ರಿಂದ 2023-24 |
ಧಾನ್ಯಗಳು |
ಎ |
ಬಿ |
ಭತ್ತ |
4,590.39 |
6,914.98 |
ಜೋಳ |
1.92 |
5.64 |
ಸಜ್ಜೆ |
5.97 |
14.09 |
ರಾಗಿ |
0.92 |
21.31 |
ಮೆಕ್ಕೆಜೋಳ |
36.94 |
8.20 |
ದ್ವಿದಳ ಧಾನ್ಯಗಳು |
|
|
ತೊಗರಿ/ಅರ್ಹರ್ |
0.60 |
19.55 |
ಹೆಸರು ಕಾಳು |
0.00 |
1 |
ಉದ್ದು |
0.86 |
8.75 |
ಎಣ್ಣೆ ಕಾಳುಗಳು |
|
|
ನೆಲಗಡಲೆ |
3.45 |
32.28 |
ಸೂರ್ಯಕಾಂತಿ ಬೀಜ |
0.28 |
|
ಸೋಯಾಬೀನ್ (ಹಳದಿ) |
0.01 |
1.10 |
ಎಳ್ಳು |
0.05 |
0.03 |
ಹುಚ್ಚೆಳ್ಳು |
0.00 |
0.00 |
ವಾಣಿಜ್ಯ |
|
|
ಹತ್ತಿ |
34.59
|
63.41 |
ಒಟ್ಟು |
4,675.98 |
7,108.65 |