ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ 2021-22ನೇ ಹಣಕಾಸು ವರ್ಷಕ್ಕೆ 23,123 ಕೋಟಿ ವೆಚ್ಚದ “ಭಾರತ ಕೋವಿಡ್–19 ತುರ್ತು ಪ್ರತಿಕ್ರಿಯೆ ಮತ್ತು ಆರೋಗ್ಯ ವ್ಯವಸ್ಥೆಗಳ ಸಿದ್ಧತಾ ಪ್ಯಾಕೇಜ್ 2ನೇ ಹಂತ’’ ಹೊಸ ಯೋಜನೆಗೆ ಅನುಮೋದನೆ ನೀಡಿತು. ಮಕ್ಕಳ ಆರೈಕೆ ಮತ್ತು ಅಳೆಯಬಹುದಾದ ಫಲಿತಾಂಶಗಳೊಂದಿಗೆ  ಆರೋಗ್ಯ ಮೂಲಸೌಕರ್ಯ ವೃದ್ಧಿಯತ್ತ ಗಮನಹರಿಸಿ, ಆರಂಭದಲ್ಲಿಯೇ ತಡೆಗಟ್ಟುವುದು, ರೋಗಪತ್ತೆ ಮತ್ತು ನಿರ್ವಹಣೆಗೆ ತಕ್ಷಣದ ಪ್ರತಿಕ್ರಿಯೆಗೆ ಆರೋಗ್ಯ ವ್ಯವಸ್ಥೆ ಬಲವರ್ಧನೆ ಮಾಡುವ ಜೊತೆಗೆ ವೇಗಗೊಳಿಸುವ ಗುರಿಯನ್ನು ಇದು ಹೊಂದಿದೆ. 

ಎರಡನೇ ಹಂತದ ಪ್ಯಾಕೇಜ್ ನಲ್ಲಿ ಕೇಂದ್ರ ವಲಯ(ಸಿಎಸ್) ಮತ್ತು ಕೇಂದ್ರದ ಪ್ರಾಯೋಜಕತ್ವದ ಯೋಜನೆ(ಸಿಎಸ್ಎಸ್) ಘಟಕಗಳ ಅಂಶಗಳಿವೆ.

ಕೇಂದ್ರೀಯ ವಲಯದ ಘಟಕಗಳ ಅಡಿಯಲ್ಲಿ

  • ಏಮ್ಸ್ ಕೇಂದ್ರೀಯ ಆಸ್ಪತ್ರೆಗಳು ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ ಬರುವ ರಾಷ್ಟ್ರೀಯ ಪ್ರಮುಖತೆಯ ಸಂಸ್ಥೆಗಳಾದ(ದೆಹಲಿಯ ವಿಎಂಎಂಸಿ ಮತ್ತು ಸಫ್ದರ್ ಜಂಗ್ ಆಸ್ಪತ್ರೆ, ದೆಹಲಿಯ ಎಲ್ಎಚ್ಎಂಸಿ ಮತ್ತು ಎಸ್ಎಸ್ ಕೆಎಚ್, ದೆಹಲಿಯ ಆರ್ ಎಂಎಲ್ ಮತ್ತು ಇಂಫಾಲದ ಆರ್ ಐಎಂಎಸ್ ಮತ್ತು ಶಿಲ್ಲಾಂಗ್ ನ ಎನ್ಇಐಜಿಆರ್ ಐಎಂಎಸ್, ಚಂಡಿಗಢದ ಪಿಜಿಐಎಂಇಆರ್, ಪುದುಚೆರಿಯ ಜೆಐಪಿಎಂಇಆರ್ ಮತ್ತು ದೆಹಲಿಯ ಏಮ್ಸ್, (ಹಾಲಿ ಇರುವ ಏಮ್ಸ್ ಗಳು) ಮತ್ತು ಪಿಎಂಎಸ್ಎಸ್ ವೈ ಅಡಿ ಆರಂಭವಾಗುತ್ತಿರುವ ಹೊಸ ಏಮ್ಸ್) ಗಳಲ್ಲಿ ಕೋವಿಡ್–19 ನಿರ್ವಹಣೆಗೆ 6,688 ಹಾಸಿಗೆಗಳ ಸಾಮರ್ಥ್ಯ ವೃದ್ಧಿಸಲು ನೆರವು ನೀಡುವುದು.
  • ಜಿನೋಮ್ ಸೀಕ್ವೆನ್ಸಿಂಗ್ ಯಂತ್ರ ಒದಗಿಸುವ ಮೂಲಕ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (ಎನ್ ಸಿಡಿಸಿ)ಯನ್ನು ಬಲವರ್ಧನೆಗೊಳಿಸಲಾಗುವುದಲ್ಲದೆ, ವೈಜ್ಞಾನಿಕ ನಿಯಂತ್ರಣ ಕೋಣೆಯನ್ನು ಅನುಮೋದಿಸುವುದು, ಸಾಂಕ್ರಾಮಿಕ ವಿಚಕ್ಷಣಾ ಸೇವೆಗಳು(ಇಐಎಸ್) ಮತ್ತು ಐಎನ್ಎಸ್ಎಸಿಒಜಿ ಸಚಿವಾಲಯಕ್ಕೆ ಬೆಂಬಲ.
  • ದೇಶದ ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ(ಸದ್ಯ ಕೇವಲ 310 ಜಿಲ್ಲಾ ಆಸ್ಪತ್ರೆಗಳಲ್ಲಿ ಇರುವ) ಆಸ್ಪತ್ರೆ ನಿರ್ವಹಣೆ ಮಾಹಿತಿ ವ್ಯವಸ್ಥೆ (ಎಚ್ಎಂಐಎಸ್)ಅನ್ನು ಅನುಷ್ಠಾನಗೊಳಿಸಲು ಬೆಂಬಲ ನೀಡುವುದು. ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಎನ್ಐಸಿ ಅಭಿವೃದ್ಧಿಪಡಿಸಿದ ಇ–ಆಸ್ಪತ್ರೆ ಮತ್ತು ಸಿಡಾಕ್ ಅಭಿವೃದ್ಧಿಪಡಿಸಿ ಇ–ಶುಶ್ರೂತ್ ಸಾಫ್ಟ್ ವೇರ್ ಗಳ ಮೂಲಕ ಎಚ್ಎಂಐಎಸ್ ಅನುಷ್ಠಾನಗೊಳಿಸುವುದು. ಇದು ಜಿಲ್ಲಾ ಆಸ್ಪತ್ರೆಗಳಲ್ಲಿ ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಮಿಷನ್ (ಎನ್ ಡಿಎಚ್ಎಂ) ಅನುಷ್ಠಾನಕ್ಕೆ ಅತಿ ಹೆಚ್ಚಿನ ಒತ್ತು ಸಿಗಲಿದೆ. ಜಿಲ್ಲಾ ಆಸ್ಪತ್ರೆಗಳಿಗೆ ಬೆಂಬಲ ನೀಡುವ ಇದರಲ್ಲಿ ಹಾರ್ಡ್ ವೇರ್ ಸಾಮರ್ಥ್ಯವೃದ್ಧಿ ನೆರವೂ ಸಹ ಒಳಗೊಂಡಿದೆ.
  • ಇದರಡಿ ಇ–ಸಂಜೀವಿನಿ ಟೆಲಿ ಸಮಾಲೋಚನೆ ರಾಷ್ಟ್ರೀಯ ವೇದಿಕೆಯನ್ನು ಮತ್ತಷ್ಟು ವಿಸ್ತರಿಸಲು ನೆರವು ನೀಡಲಾಗುವುದು. ಸದ್ಯ ಪ್ರತಿ ದಿನ 50,000 ಟೆಲಿ ಸಮಾಲೋಚನೆಗಳ ಸಾಮರ್ಥ್ಯವಿದ್ದು, ಅದನ್ನು 5 ಲಕ್ಷ ಟೆಲಿ ಸಮಾಲೋಚನೆಗಳಿಗೆ ಹೆಚ್ಚಿಸಲಾಗುವುದು. ಇದರಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೋವಿಡ್ ಆರೈಕೆ ಕೇಂದ್ರ(ಸಿಸಿಸಿ) ಗಳಲ್ಲಿ ಕೋವಿಡ್ ರೋಗಿಗಳಿಗೆ ಟೆಲಿ ಸಮಾಲೋಚನೆ ಒದಗಿಸಲು ನೆರವು ನೀಡುವುದಲ್ಲದೆ, ದೇಶದ ಎಲ್ಲ ಜಿಲ್ಲೆಗಳಲ್ಲಿ ಇ–ಸಂಜೀವಿನಿ ಟೆಲಿ ಸಮಾಲೋಚನೆಗಳ ತಾಣಗಳನ್ನು ಬಲವರ್ಧಿಸುವುದು ಸೇರಿದೆ.
  • ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ಸೆಂಟ್ರಲ್ ವಾರ್ ರೂಮ್ ಬಲವರ್ಧನೆ, ದೇಶದ ಕೋವಿಡ್–19 ಪೋರ್ಟಲ್ ಬಲವರ್ಧನೆ, 1075 ಕೋವಿಡ್ ಸಹಾಯವಾಣಿ ಮತ್ತು ಕೋವಿನ್ ವೇದಿಕೆ ಬಲವರ್ಧನೆ ಸೇರಿದಂತೆ ಮಾಹಿತಿ ತಂತ್ರಜ್ಞಾನ ಮಧ್ಯ ಪ್ರವೇಶಗಳ ಮೂಲಕ ಬೆಂಬಲ ನೀಡಲಾಗುವುದು.

ಸಿಎಸ್ಎಸ್ ಘಟಕದಡಿ, ಸಾಂಕ್ರಾಮಿಕಕ್ಕೆ ಪರಿಣಾಮಕಾರಿ ಮತ್ತು ಕ್ಷಿಪ್ರ ಪ್ರತಿಕ್ರಿಯೆಗಾಗಿ  ಜಿಲ್ಲಾ ಹಾಗೂ ಉಪ ಜಿಲ್ಲಾ ಸಾಮರ್ಥ್ಯ ಬಲವರ್ಧನೆ ಪ್ರಯತ್ನಗಳನ್ನು ತೀವ್ರಗೊಳಿಸುವ ಗುರಿ ಹೊಂದಲಾಗಿದೆ. ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಈ ನೆರವು ನೀಡಲಾಗುವುದು. 

  • 736 ಜಿಲ್ಲೆಗಳಲ್ಲಿ ಮಕ್ಕಳ ಚಿಕಿತ್ಸಾ ಘಟಕಗಳನ್ನು ಸೃಷ್ಟಿಸುವುದು ಮತ್ತು ಪ್ರತಿಯೊಂದು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ (ವೈದ್ಯಕೀಯ ಕಾಲೇಜುಗಳು ರಾಜ್ಯ ಸರ್ಕಾರದ ಆಸ್ಪತ್ರೆಗಳು ಅಥವಾ ಕೇಂದ್ರ ಸರ್ಕಾರದ ಆಸ್ಪತ್ರೆಗಳಾದ ಏಮ್ಸ್, ಐಎನ್ಐ ಇತ್ಯಾದಿ) ಮಕ್ಕಳ ಶ್ರೇಷ್ಠ ಚಿಕಿತ್ಸಾ ಕೇಂದ್ರ(ಪಿಡಿಯಾಟ್ರಿಕ್ ಸಿಒಇ) ಸ್ಥಾಪನೆ, ಟೆಲಿ ಐಸಿಯು ಸೇವೆಗಳು ಮತ್ತು ಮಾರ್ಗದರ್ಶನ ಮತ್ತು ಜಿಲ್ಲಾ ಮಕ್ಕಳ ಘಟಕಗಳಿಗೆ ತಾಂತ್ರಿಕ ನೆರವು ನೀಡುವುದು.
  • ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ 20,000 ಐಸಿಯು ಹಾಸಿಗೆಗಳ ಸಾಮರ್ಥ್ಯ ವೃದ್ಧಿ, ಆ ಪೈಕಿ ಶೇಕಡ 20ರಷ್ಟು ಮಕ್ಕಳ ಐಸಿಯು ಹಾಸಿಗೆಗಳಿರಲಿವೆ.
  • ಕೋವಿಡ್–19 ಸಂಕಷ್ಟಗಳಿಂದಾಗಿ ಗ್ರಾಮೀಣ, ನಗರದ ಹೊರವಲಯ ಮತ್ತು ಬುಡಕಟ್ಟು ಪ್ರದೇಶಗಳಲ್ಲಿ ಸಮುದಾಯಕ್ಕೆ ಹತ್ತಿರವಾದ ಆರೈಕೆಗಳನ್ನು ಒದಗಿಸುವುದು. ಹಾಲಿ ಇರುವ ಸಿಎಚ್ ಸಿ , ಪಿಎಚ್ ಸಿ ಮತ್ತು ಎಸ್ ಎಚ್ ಸಿ(6 ರಿಂದ 20 ಹಾಸಿಗೆಗಳ ಘಟಕಗಳು) ಗಳಲ್ಲಿ ಹೆಚ್ಚುವರಿ ಹಾಸಿಗೆಗಳನ್ನು ಸೃಷ್ಟಿಸಲು ಫ್ಯಾಬ್ರಿಕೇಟೆಡ್ ವ್ಯವಸ್ಥೆಗಳನ್ನು ಬಳಸಿಕೊಳ್ಳುವುದು ಮತ್ತು ದೊಡ್ಡ ಬಯಲು ಆಸ್ಪತ್ರೆಗಳನ್ನು(50 ರಿಂದ 100 ಹಾಸಿಗಗಳ ಘಟಕಗಳು) ಎರಡನೇ ಅಥವಾ ಮೂರನೇ ದರ್ಜೆ ನಗರಗಳು ಹಾಗೂ ಜಿಲ್ಲಾ ಕೇಂದ್ರ ಕಚೇರಿಗಳ ಅಗತ್ಯತೆಗಳನ್ನು ಆಧರಿಸಿ ಸೃಷ್ಟಿಸುವುದು.
  • 1050 ದ್ರವೀಕೃತ ವೈದ್ಯಕೀಯ ಆಮ್ಲಜನಕ ಸಂಗ್ರಹ ಟ್ಯಾಂಕ್ ಗಳನ್ನು ಸ್ಥಾಪಿಸುವುದು, ಅವುಗಳಿಗೆ ವೈದ್ಯಕೀಯ ಅನಿಲ ಕೊಳವೆ ವ್ಯವಸ್ಥೆ (ಎಂಜಿಪಿಎಸ್) ಒದಗಿಸುವುದು. ಆ ಮೂಲಕ ಪ್ರತಿ ಜಿಲ್ಲೆಯಲ್ಲೂ ಕನಿಷ್ಠ ಒಂದು ಅಂತಹ ಘಟಕ ಹೊಂದುವ ಗುರಿ ಇದೆ.
  • ಹಾಲಿ ಇರುವ ಆಂಬುಲೆನ್ಸ್ ವ್ಯವಸ್ಥೆಯನ್ನು ವೃದ್ಧಿಸುವುದು – ಪ್ಯಾಕೇಜ್ ಅಡಿ 8,800 ಹೊಸ ಆಂಬುಲೆನ್ಸ್ ಗಳನ್ನು ಸೇರ್ಪಡೆ ಮಾಡಲಾಗುವುದು.
  • ಕೋವಿಡ್–19 ಪರಿಣಾಮಕಾರಿ ನಿರ್ವಹಣೆಗೆ ಪದವಿ ಮತ್ತು ಸ್ನಾತಕೋತ್ತರ ಪದವಿ ಇಂಟರ್ನಿಗಳು, ಎಂಬಿಬಿಎಸ್, ಬಿಎಸ್ಸಿ ಅಂತಿಮ ವರ್ಷದ ವಿದ್ಯಾರ್ಥಿಗಳು ಹಾಗೂ ಜಿಎನ್ಎಂ ನರ್ಸಿಂಗ್ ವಿದ್ಯಾರ್ಥಿಗಳನ್ನು ಬಳಸಿಕೊಳ್ಳುವುದು.
  • ಕೋವಿಡ್–19 ಪರಿಣಾಮಕಾರಿ ನಿಯಂತ್ರಣಕ್ಕೆ ರಾಷ್ಟ್ರೀಯ ಕಾರ್ಯತಂತ್ರವಾಗಿರುವ ಸೋಂಕು ಪತ್ತೆ, ಐಸೋಲೇಟ್ ಮತ್ತು ಚಿಕಿತ್ಸೆ ಜೊತೆಗೆ ಕೋವಿಡ್–19 ಸೂಕ್ತ ನಡವಳಿಕೆ ಸದಾ ಕಾಲ ಪಾಲನೆಗೆ ಒತ್ತು ನೀಡಲಾಗುವುದು. ಅದಕ್ಕಾಗಿ ಕನಿಷ್ಠ ದಿನಕ್ಕೆ 21.5 ಲಕ್ಷ ಪರೀಕ್ಷೆಗಳನ್ನು ನಡೆಸಲು ರಾಜ್ಯಗಳಿಗೆ ನೆರವು ನೀಡಲಾಗುವುದು.
  • ಕೋವಿಡ್–19 ನಿರ್ವಹಣೆಗೆ ದಾಸ್ತಾನು ಸೃಷ್ಟಿ ಸೇರಿದಂತೆ ಅಗತ್ಯ ಔಷಧಗಳು ಮತ್ತು ಸಾಧನಗಳನ್ನು ಜಿಲ್ಲೆಗಳಲ್ಲಿ ಸಂಗ್ರಹಿಸಿಟ್ಟುಕೊಳ್ಳಲು ಬೆಂಬಲ ನೀಡಲಾಗುವುದು.

“ಭಾರತ ಕೋವಿಡ್–19 ತುರ್ತು ಪ್ರತಿಕ್ರಿಯೆ ಮತ್ತು ಆರೋಗ್ಯ ವ್ಯವಸ್ಥೆಗಳ ಸಿದ್ಧತಾ ಯೋಜನೆ: ಎರಡನೇ ಹಂತ”ಅನ್ನು 23,123 ಕೋಟಿ ರೂ. ವೆಚ್ಚದಲ್ಲಿ 2021ರ ಜುಲೈ 1 ರಿಂದ 2022ರ ಮಾರ್ಚ್ 31ರ ವರೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪಾಲಿನೊಂದಿಗೆ ಅನುಷ್ಠಾನಗೊಳಿಸಲಾಗುವುದು.

  • ಇಸಿಆರ್ ಪಿ–II ಅಡಿ ಕೇಂದ್ರದ ಪಾಲು 15,000 ಕೋಟಿ ರೂ.
  • ಇಸಿಆರ್ ಪಿ–II ಅಡಿ ರಾಜ್ಯದ ಪಾಲು 8,123 ಕೋಟಿ ರೂ.

2021-22ನೇ ಹಣಕಾಸು ವರ್ಷದಲ್ಲಿ ಮುಂದಿನ 9 ತಿಂಗಳ ತಕ್ಷಣದ ಅಗತ್ಯಗಳಿಗೆ ಕೇಂದ್ರೀಕರಿಸುವ ಮೂಲಕ  ಕೇಂದ್ರ ಸರ್ಕಾರಿ ಆಸ್ಪತ್ರೆಗಳು/ಏಜೆನ್ಸಿಗಳಿಗೆ ಮತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಎರಡನೇ ಅಲೆ ಮತ್ತು ವಿಕಾಸಗೊಳ್ಳುತ್ತಿರುವ ಸಾಂಕ್ರಾಮಿಕದ ಸಂದರ್ಭದಲ್ಲಿ ಜಿಲ್ಲಾ ಮತ್ತು ಉಪ ಜಿಲ್ಲಾ ಮಟ್ಟದಲ್ಲಿ ಸೌಕರ್ಯಗಳ ವೃದ್ಧಿಗೆ ಆದ್ಯತೆ ನೀಡಲಾಗುವುದು.

ಹಿನ್ನೆಲೆ:

ಕಳೆದ ವರ್ಷ 2020ರ ಮಾರ್ಚ್ ನಲ್ಲಿ ಇಡೀ ದೇಶ ಕೋವಿಡ್–19 ಸಾಂಕ್ರಾಮಿಕದ ಮೊದಲ ಅಲೆಯನ್ನು ಎದುರಿಸುತ್ತಿದ್ದಾಗ ಪ್ರಧಾನಮಂತ್ರಿ ಅವರು 15 ಸಾವಿರ ಕೋಟಿ ರೂಪಾಯಿಗಳ “ಭಾರತ ಕೋವಿಡ್–19 ತುರ್ತು ಪ್ರತಿಕ್ರಿಯೆ ಮತ್ತು ಆರೋಗ್ಯ ವ್ಯವಸ್ಥೆಗಳ ಸಿದ್ಧತಾ ಪ್ಯಾಕೇಜ್” ಕೇಂದ್ರದ ವಲಯ ಯೋಜನೆಯನ್ನು ಘೋಷಿಸಿದ್ದರು. ಅದರಡಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹಾಗೂ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರಯತ್ನಗಳಿಗೆ ಗಂಭೀರ ಒತ್ತು ನೀಡುವುದು ಮತ್ತು ಸಾಂಕ್ರಾಮಿಕ ನಿರ್ವಹಣೆಗೆ ಆರೋಗ್ಯ ವ್ಯವಸ್ಥೆಯ ಚಟುವಟಿಕೆಗಳನ್ನು ವೇಗವರ್ಧನೆಗೊಳಿಸಲಿದೆ. 2021ರ ಫೆಬ್ರವರಿ ಮಧ್ಯ ಭಾಗದ ನಂತರ ಸೋಂಕು ಗ್ರಾಮೀಣ ನಗರಗಳ ಹೊರ ವಲಯ ಮತ್ತು ಬುಡಕಟ್ಟು ಪ್ರದೇಶಗಳಿಗೂ ಹರಡಿ ದೇಶ ಎರಡನೇ ಅಲೆಯನ್ನು ಎದುರಿಸುತ್ತಿದೆ.

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
India's Economic Growth Activity at 8-Month High in October, Festive Season Key Indicator

Media Coverage

India's Economic Growth Activity at 8-Month High in October, Festive Season Key Indicator
NM on the go

Nm on the go

Always be the first to hear from the PM. Get the App Now!
...
PM Modi pays homage to Dr Harekrushna Mahatab on his 125th birth anniversary
November 22, 2024

The Prime Minister Shri Narendra Modi today hailed Dr. Harekrushna Mahatab Ji as a towering personality who devoted his life to making India free and ensuring a life of dignity and equality for every Indian. Paying homage on his 125th birth anniversary, Shri Modi reiterated the Government’s commitment to fulfilling Dr. Mahtab’s ideals.

Responding to a post on X by the President of India, he wrote:

“Dr. Harekrushna Mahatab Ji was a towering personality who devoted his life to making India free and ensuring a life of dignity and equality for every Indian. His contribution towards Odisha's development is particularly noteworthy. He was also a prolific thinker and intellectual. I pay homage to him on his 125th birth anniversary and reiterate our commitment to fulfilling his ideals.”