Quote93,068 ಕೋಟಿ ರೂಪಾಯಿ ವೆಚ್ಚದ ರಾಜ್ಯ ಸರ್ಕಾರಕ್ಕೆ ನೀಡುವ ನೆರವು 37,454 ಕೋಟಿ ರೂಪಾಯಿ ಒಳಗೊಂಡಿದೆ
Quote2.5 ಲಕ್ಷ ಪರಿಶಿಷ್ಟ ಜಾತಿ ರೈತರಿಗೆ, 2 ಲಕ್ಷ ಪರಿಶಿಷ್ಟ ಪಂಗಡದ ರೈತರು ಫಲಾನುಭವಿಗಳಾಗಲಿದ್ದಾರೆ.
Quoteರೇಣುಕಾಜಿ (ಹಿಮಾಚಲ ಪ್ರದೇಶ)ದ ಯೋಜನೆಯನ್ನೂ ಒಳಗೊಂಡಂತೆ ಉತ್ತರಾಖಂಡದ ಲಖ್ವಾರ್‌ ಯೋಜನೆಗಳಿಗೆ ಶೇ 90ರಷ್ಟು ಅನುದಾನ ನೀಡಲಾಗುವುದು. ದೆಹಲಿ, ಹಿಮಾಚಲ ಪ್ರದೇಶ, ಉತ್ತರಾಖಂಡ, ಉತ್ತರ ಪ್ರದೇಶ, ಹರಿಯಾಣ ಮತ್ತು ರಾಜಸ್ಥಾನ ರಾಜ್ಯಗಳಿಗೆ ಕುಡಿಯುವ ನೀರಿನ ಪೂರೈಕೆಯ ಯೋಜನೆ ಹಾಗೂ ಯಮುನಾ ನದಿಯ ಪುನಃಶ್ಚೇತನವೂ ಒಳಗೊಂಡಿದೆ.
Quote13.88 ಲಕ್ಷ ಹೆಕ್ಟೇರ್‌ ಗೆ ಹೆಚ್ಚುವರಿ ವೇಗವರ್ಧಕ ನೀರಾವರಿ ಯೋಜನೆಗೆ ಅನುಕೂಲವಾಗುವುದು
Quoteವೇಗವರ್ಧಕ ನೀರಾವರಿ ಯೋಜನೆಯೊಂದಿಗೆ ಈಗಾಗಲೇ ಪೂರ್ಣಗೊಳ್ಳುವ ಪ್ರಮಾಣದಲ್ಲಿರುವ 60 ಯೋಜನೆಗಳನ್ನೂ ಒಳಗೊಳ್ಳಲಾಗಿದೆ.
Quote30.23 ಲಕ್ಷ ಹೆಕ್ಟೇರ್‌ ಭೂಮಿಯ ಅಭಿವೃದ್ಧಿಯೂ ಒಳಗೊಂಡಿದೆ
Quoteಪ್ರತಿ ಹೊಲಕ್ಕೂ ಪಹಣಿ ಎನ್ನುವ ಯೋಜನೆಯಲ್ಲಿ 4.5 ಲಕ್ಷ ಹೆಕ್ಟೇರ್‌ ನೀರಾವರಿ, ಸಣ್ಣ ನೀರಾವರಿ ಪದ್ಧತಿ ಹಾಗೂ ಜಲಮೂಲಗಳ ಪುನಃಶ್ಚೇತನ ಮತ್ತು 1.52 ಲಕ್ಷ ಹೆಕ್ಟೇರ್‌ ಅಂತರ್ಜಲ ಆಧಾರಿತ ಕೃಷಿಗೆ ಉತ್ತೇಜನ ನೀಡಲಾಗುತ್ತಿದೆ.
Quoteಮಳೆಯಾಧಾರಿತ 49.5 ಲಕ್ಷ ಹೆಕ್ಟೇರ್‌ ಭೂಮಿಗೆ ಸಂಬಂಧಿಸಿದ ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ, ಹದಗೆಟ್ಟಿರುವ 2.5 ಲಕ್ಷ ಹೆಕ್ಟೇರ್‌ ಭೂಮಿಯನ್ನು ಈ ಯೋಜನೆಗೆ ಒಳಪಡಿಸಲಾಗುವುದು.

ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವಹಿವಾಟುಗಳ ಸಚಿವ ಸಂಪುಟ ಸಭೆಯಲ್ಲಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಗೆ2021–26ರಲ್ಲಿ ಕಾರ್ಯಾನುಷ್ಠಾನಕ್ಕೆ 93,068 ಕೋಟಿ ರೂಪಾಯಿಗಳ ವೆಚ್ಚಕ್ಕೆ ಅನುಮೋದನೆ ನೀಡಿದೆ.
ಸಿಸಿಇಎ ಯು 37, 454 ಕೋಟಿ ರೂಪಾಯಿಗಳಷ್ಟು ರಾಜ್ಯಗಳಿಗೆ ನೆರವು ನೀಡಲಾಗುವುದು. ಮತ್ತು 20,434,56 ಕೋಟಿಗಳಷ್ಟು ಸಾಲ ಸೌಲಭ್ಯಕ್ಕೆ ಅನುಮೋದನೆ ನೀಡಿದೆ. ಭಾರತ ಸರ್ಕಾರವು, ನೀರಾವರಿ ಅಭಿವೃದ್ಧಿಗೆ ಪಿಎಂಕೆಎಸ್‌ವೈ 2016–21ರ ಅವಧಿಯಲ್ಲಿ ತೆಗೆದುಕೊಂಡ ಸಾಲಕ್ಕೂ ಅನುಮೋದನೆ ನೀಡಲಾಗಿದೆ. 
ವೇಗವರ್ಧಿತ ನೀರಾವರಿ ಯೋಜನೆ, ಪ್ರತಿ ಹೊಲಕ್ಕೂ ಪಹಣಿ ಮತ್ತು ಜಲಾನಯನ ಪ್ರದೇಶಗಳನ್ನು ಅಭಿವೃದ್ಧಿ ಪಡಿಸಲು ಆಯೋಜಿಸಲಾಗಿದೆ. ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಹಣಕಾಸಿನ ಅಗತ್ಯವನ್ನು ಪೂರೈಸಲು ಸರ್ಕಾರ ಈ ಯೋಜನೆಯನ್ನು ಹಂಚಿಕೊಳ್ಳಲಿದೆ. 

ನೀರಾವರಿ ಸಾಮರ್ಥ್ಯವನ್ನು ಹೆಚ್ಚಿಸುವ ಧಾರಣಾಶಕ್ತಿಯನ್ನು ವೃದ್ಧಿಸಲು ಈ ಯೋಜನೆಯನ್ನು 2021–26ರವರೆಗೆ 13.88 ಲಕ್ಷ ಹೆಕ್ಟೇರ್‌ ಜಮೀನಿಗೆ ಸಹಾಯವಾಗಲಿದೆ. ಈಗಾಗಲೇ ಜಾರಿಯಲ್ಲಿರುವ 60 ಯೋಜನೆಗಳನ್ನು ಪೂರ್ಣಗೊಳಿಸುವ ಗುರಿಯೊಂದಿಗೆ 30.23 ಲಕ್ಷ ಹೆಕ್ಟೇರ್‌ ಜಮೀನಿನ ಅಭಿವೃದ್ಧಿ, ಇನ್ನಿತರ ಯೋಜನೆಗಳನ್ನೂ ಕೈಗೆತ್ತಿಕೊಳ್ಳಲಾಗುವುದು. 

ಇದಲ್ಲದೆ 2021–26 ಅವಧಿಯಲ್ಲಿ ಎಐಬಿಪಿ ಯೋಜನೆಯ ಅಡಿಯಲ್ಲಿ 13.88 ಲಕ್ಷ ಹೆಕ್ಟೇರ್‌ ಜಮೀನಿಗೆ ನೀರಾವರಿ ಯೋಜನೆಯನ್ನು ವಿಸ್ತರಿಸಲಾಗುವುದು. ಹೆಚ್ಚುವರಿ ಯೋಜನೆಗಳನ್ನೂ ಪರಿಚಯಿಸಬಹುದಾಗಿದೆ. ಬರಪೀಡಿತ ಹಾಗು ಬುಡಕಟ್ಟು ಪ್ರದೇಶಗಳಿಗೂ ಈ ಯೋಜನೆಯನ್ನು ವಿಸ್ತರಿಸಲಾಗಿದೆ. 

 ಹಿಮಾಚಲ್‌ ಪ್ರದೇಶದ ರೇಣುಕಾಜಿ ಅಣೆಕಟ್ಟು ಯೋಜನೆ, ಲಖವಾರ್‌ ಬಹುಉದ್ದೇಶಿತ ಯೋಜನೆ (ಉತ್ತರಾಖಂಡ) ಎರಡಕ್ಕೂ ಈ ಸೌಲಭ್ಯದಡಿ ತರಲಾಗಿದೆ. ಎರಡೂ ಯೋಜನೆಯಗಳು ಯಮುನಾದ ಜಲಾನಯನ ಪ್ರದೇಶದ ಆರು ರಾಜ್ಯಗಳಲ್ಲಿ ನೀರು ಸಂಗ್ರಹಕ್ಕೆ ಅನುವು ಮಾಡಿಕೊಡಲಿವೆ. ಯಮುನಾ ಮೇಲ್ದಂಡೆ ಪ್ರದೇಶಗಳಿಗೆ ಇದರಿಂದ ಅನುಕೂಲವಾಗಲಿದೆ. ನೀರು ಪೂರೈಕೆಗೆ ದೆಹಲಿ, ಹಿಮಾಚಲ್‌ ಪ್ರದೇಶ್‌, ಉತ್ತರಾಖಂಡ, ಉತ್ತರಪ್ರದೇಶ, ಹರಿಯಾಣಾ ಹಾಗೂ ರಾಜಸ್ಥಾನ್‌ಗಳಲ್ಲಿ ಯಮುನಾ ನದಿಯ ಪುನಃಶ್ಚೇತನ ಮಾಡಲಾಗುವುದು. 

ಪ್ರತಿ ಹೊಲಕ್ಕೂ ಪಹಣಿ (ಎಚ್‌ಕೆಕೆಪಿ)ಗೆ ಸಾಗುವಳಿ ಭೂಮಿಯ ಪ್ರಮಾಣವನ್ನು ಹೆಚ್ಚಿಸಲು ಈ ಕ್ರಮಕೈಗೊಳ್ಳಲಾಗುತ್ತಿದೆ. ನೀರಾವರಿ ಜಮೀನಿನನ ಪ್ರಮಾಣ ಹೆಚ್ಚಿಸಲೂ ಈ ಯೋಜನೆ ಸಹಾಯಕವಾಗಿದೆ. ಇದೇ ಯೋಜನೆಯ ಅಡಿಯಲ್ಲಿ ಸಣ್ಣ ನೀರಾವರಿ, ಮೇಲ್ಮೈ ನೀರಾವರಿ ಯೋಜನೆಗಳನ್ನು ಪರಿಚಯಿಸಿ, ಇನ್ನಷ್ಟು ಜಲಮೂಲಗಳ ಪುನಃಶ್ಚೇತನಗೊಳಿಸುವ ಯೋಜನೆಇದೆ. ಇದರ ಮೂಲಕ ಇನ್ನೂ ಹೆಚ್ಚುವರಿ 4.5 ಲಕ್ಷ ಜಮೀನನ್ನು ಸಾಗುವಳಿ ಭೂಮಿಯಾಗಿ ವಿಸ್ತರಿಸುವ ಉದ್ದೇಶವಿದೆ. ಜಲಮೂಲಗಳ ಪುನಃಶ್ಚೇತನಕ್ಕಾಗಿಯೇ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಇಂಥ ಕಾರ್ಯಾನುಷ್ಠಾನಕ್ಕಾಗಿಯೇ ಅನುದಾನವನ್ನು ಒದಗಿಸಲಾಗುತ್ತಿದೆ. ಸಚಿವ ಸಂಪುಟ ಸಭೆ ನಿರ್ಧರಿಸಿದ ಮಾನದಂಡದ ಪ್ರಕಾರ ಕೇಂದ್ರವು 25–60ರಷ್ಟು ಸಾಮಾನ್ಯ ಪ್ರದೇಶದಲ್ಲಿ ಕೇಂದ್ರವು ಸಹಾಯ ನೀಡಲಿದೆ. ಅಂತರ್ಜಲಕ್ಕೆ ಸಂಬಂಧಿಸಿದಂತೆ 1.52 ಲಕ್ಷ ಹೆಕ್ಟೇರ್‌ ಭೂಮಿಯ ಲಕ್ಷ್ಯವನ್ನು 2021–22ರಲಸಾಲಿಗೆ ನೀಡಲಾಗಿದೆ.

 ಜಲಾನಯನ ಪ್ರದೇಶಗಳ ಅಭಿವೃದ್ಧಿ, ಮಳೆಯಾಶ್ರಿತ ಪ್ರದೇಶ, ಮಣ್ಣು ಮತ್ತು ಜಲ ಸಂರಕ್ಷಣೆ, ಅಂತರ್ಜಲ ಮಟ್ಟದ ಸುಧಾರಣೆ, ಮಳೆ ಕೊಯ್ಲು, ಮಳೆ ನಿರ್ವಹಣೆ ಮುಂತಾದ ವಿಷಯಗಳಿಗೆ ಈ ಯೋಜನೆಗಳನ್ನು ವಿಸ್ತರಿಸಲಾಗುವುದು. ಭೂ ಸಂಪನ್ಮೂಲ ಿಲಾಖೆ, ಜಲಾನಯನ ಅಭಿವೃದ್ಧಿ ಇಲಾಖೆಗಳು ಜಂಟಿಯಾಗಿ 49.5 ಲಕ್ಷ ಹೆಕ್ಟೇರ್‌ ಮಳೆಯಾಶ್ರಿತ ಭೂಮಿ, ಹದಕಳೆದ ಭೂಮಿಯನ್ನು ಈ ಯೋಜನೆಗಳು ಒಳಗೊಳ್ಳಲಿವೆ. ನೀರಾವರಿ ಸಂರಕ್ಷಿತ ವಿಷಯಗಳಿಗಾಗಿ 2021–2026ರವರೆಗೆ 2.5 ಲಕ್ಷ ಹೆಕ್ಟೇರ್‌ ಭೂಮಿಯನ್ನು ಈ ಯೋಜನೆಗೆ ಒಳಪಡಿಸಲಾಗುವುದು. 

 ಹಿನ್ನೆಲೆ: 

2015ರಲ್ಲಿ ಪಿಎಂಕೆಎಸ್‌ವೈ ಅಡಿಯಲ್ಲಿ ಆರಂಭಿಸಲಾದ ಈ ಯೋಜನೆಯ ಅಡಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಚಟುವಟಿಕೆಗಳ ಕುರಿತು ಈ ಕೆಳಗೆ ನಮೂದಿಸಲಾಗಿದೆ. ಜಲಸಂಪನ್ಮೂಲ ಇಲಾಖೆ, ನದಿ ಅಭಿವೃದ್ಧಿ ಮತ್ತು ಗಂಗಾ ಪುನಃಶ್ಚೇತನ, ವೇಗವರ್ಧಕ ನೀರಾವರಿ ಫಲ ಕಾರ್ಯಕ್ರಮ, ಪ್ರತಿಹೊಲಕ್ಕೂ ಪಹಣಿ ಯೋಜನೆಗಳನ್ನು ಕಾರ್ಯಾನುಷ್ಠಾನಕ್ಕೆ ತರಲಿದೆ. ಪ್ರತಿಹೊಲಕ್ಕೂ ಪಹಣಿ ಕಾರ್ಯಕ್ರಮದಲ್ಲಿ ಕಮ್ಯಾಂಡ್‌ ಏರಿಯಾ ಡೆವಲಪ್ಮೆಂಟ್‌, ಮೇಲ್ಮೈ ಮಟ್ಟದ ಸಣ್ಣ ನೀರಾವರಿ, ಜಲಮೂಲಗಳ ದುರಸ್ತಿ, ಪುನರ್‌ನಿರ್ಮಾಣ, ಪುನಃಶ್ಚೇತನಗಳೂ ಈ ಯೋಜನೆಯ ಅಡಿಯಲ್ಲಿ ಬರಲಿವೆ. ಅಂತರ್ಜಲ ಮಟ್ಟ ಸುಧಾರಣೆ, ಜಲಾನಯನ ಪ್ರದೇಶಗಳ ಅಭಿವೃದ್ಧಿ, ಭೂ ಸಂಪನ್ಮೂಲ ಇಲಾಖೆ ಈ ಯೋಜನೆಗಳ ಕಾರ್ಯಾನುಷ್ಠಾನದಲ್ಲಿ ಸಹಭಾಗಿಗಳಾಗಲಿವೆ.

 ಪಿಎಂಎಸ್‌ಕೆವೈ ನ ವಿಭಾಗದ ಪ್ರತಿಹನಿಗೂ ಮತ್ತಷ್ಟು ಬೆಳೆ ಪರ್‌ ಡ್ರಾಪ್‌ ಮೋರ್‌ ಕ್ರಾಪ್‌ ಎಂಬ ಘೋಷಣೆಯಂತೆ ಕೃಷಿ ಮತ್ತು ರೈತರ ಅಭಿವೃದ್ಧಿ ಇಲಾಖೆಯು ಈ ಯೋಜನೆಯನ್ನು ಕಾರ್ಯಾನುಷ್ಠಾನಕ್ಕೆ ತರಲಿದೆ.

  • Madhusmita Baliarsingh June 25, 2024

    Prime Minister Narendra Modi has consistently emphasized the importance of farmers' welfare in India. Through initiatives like the PM-KISAN scheme, soil health cards, and increased MSP for crops, the government aims to enhance agricultural productivity and support the livelihoods of millions of farmers. #FarmersFirst #ModiWithFarmers #AgriculturalReforms
  • Ram Raghuvanshi February 26, 2024

    Jay shree Ram
  • Jayanta Kumar Bhadra February 18, 2024

    Om Hari
  • Jayanta Kumar Bhadra February 18, 2024

    Jay Ganesh
  • Jayanta Kumar Bhadra February 18, 2024

    Om,Shanti
  • Jayanta Kumar Bhadra February 18, 2024

    Jay Ganesh
  • BHOLANATH B.P. SAROJ MP Loksabha Machhlishahr February 05, 2024

    jai shree ram
  • reenu nadda January 12, 2024

    jai ho
  • deepender kumar September 25, 2022

    modi ji mene water dem bnaya h uski 340000 sabcidi nahi aai h abhi tk
  • deepender kumar September 25, 2022

    modi ji kisan ko fasal ka sahi ret nahi mil raha h or 80 prsent fasal to barsaat se khrab ho gai h na hi koi beema claim Mila h nrme ka ret kisan ko uski laagt k hisab se milna chaiye is baar kisano ka kharcha jyada aaya h fasal pr to nrme ka ret 20000 +rahna chaiye tb kisan apna krj utar skta h nahi to kisan krje me doob jaaega
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Govt: 68 lakh cancer cases treated under PMJAY, 76% of them in rural areas

Media Coverage

Govt: 68 lakh cancer cases treated under PMJAY, 76% of them in rural areas
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 19 ಮಾರ್ಚ್ 2025
March 19, 2025

Appreciation for India’s Global Footprint Growing Stronger under PM Modi