ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ ಈಶಾನ್ಯ ವಲಯ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಮೇಲೆ ವಿಶೇಷ ಗಮನ ಕೇಂದ್ರೀಕರಿಸಿ ಹೊಸ ಕೇಂದ್ರ ಪ್ರಾಯೋಜಿತ ಯೋಜನೆಯಾಗಿ ಖಾದ್ಯ ತೈಲಗಳ ರಾಷ್ಟ್ರೀಯ ಅಭಿಯಾನ – ಆಯಿಲ್ ಪಾಮ್ (ಎನ್.ಎಂ.ಇ.ಒ–ಒಪಿ) ಎಂದು ಕರೆಯಲಾಗುವ ತೈಲ ತಾಳೆ (ಆಯಿಲ್ ಪಾಮ್) ಆರಂಭಿಸಲು ತನ್ನ ಅನುಮೋದನೆ ನೀಡಿದೆ. ಖಾದ್ಯ ತೈಲಗಳ ಆಮದಿನ ಮೇಲೆ ಭಾರಿ ಅವಲಂಬನೆಯಿಂದಾಗಿ, ಖಾದ್ಯ ತೈಲಗಳ ದೇಶೀಯ ಉತ್ಪಾದನೆಯನ್ನು ಹೆಚ್ಚಿಸುವ ಪ್ರಯತ್ನ ಮಾಡುವುದು ಮುಖ್ಯವಾಗಿದ್ದು, ತೈಲ ತಾಳೆಯ ಬೆಳೆ ಪ್ರದೇಶದ ಹೆಚ್ಚಳ ಮತ್ತು ಉತ್ಪಾದಕತೆಯು ಪ್ರಮುಖ ಪಾತ್ರ ವಹಿಸುತ್ತದೆ.
ಈ ಯೋಜನೆಗೆ 11,040 ಕೋಟಿ ರೂ.ಗಳ ಹಣ ಹಂಚಿಕೆ ಮಾಡಲಾಗಿದ್ದು, ಇದರಲ್ಲಿ 8,844 ಕೋಟಿ ರೂ.ಗಳು ಭಾರತ ಸರ್ಕಾರದ ಪಾಲಾಗಿದ್ದರೆ, 2,196 ಕೋಟಿ ರೂ. ರಾಜ್ಯದ ಪಾಲಾಗಿದೆ, ಇದರಲ್ಲಿ ಕಾರ್ಯಸಾಧ್ಯತೆ ಅಂತರದ ಧನಸಹಾಯವೂ ಸೇರಿದೆ.
ಈ ಯೋಜನೆಯಡಿ, 2025-26ನೇ ವರ್ಷದವರೆಗೆ ತೈಲ ತಾಳೆಗೆ 6.5 ಲಕ್ಷ ಹೆಕ್ಟೇರ್ (ಹೆ.) ಹೆಚ್ಚುವರಿ ಪ್ರದೇಶ ವ್ಯಾಪ್ತಿಗಾಗಿ ಮತ್ತು ಆ ಮೂಲಕ ಅಂತಿಮವಾಗಿ 10 ಲಕ್ಷ ಹೆಕ್ಟೇರ್ ಗುರಿಯನ್ನು ತಲುಪಲು ಪ್ರಸ್ತಾಪಿಸಲಾಗಿದೆ. ಕಚ್ಚಾ ತಾಳೆ ಎಣ್ಣೆ (ಸಿಪಿಒ) ಉತ್ಪಾದನೆಯು 2025-26ರ ವೇಳೆಗೆ 11.20 ಲಕ್ಷ ಟನ್ ಗಳಿಗೆ ಮತ್ತು 2029-30ರ ವೇಳೆಗೆ 28 ಲಕ್ಷ ಟನ್ ಗಳಿಗೆ ಏರುವ ನಿರೀಕ್ಷೆಯಿದೆ.
ಈ ಯೋಜನೆಯು ತೈಲ ತಾಳೆ ಬೆಳೆಗಾರರಿಗೆ ಅಪಾರ ಪ್ರಯೋಜನ ನೀಡುತ್ತದೆ, ಬಂಡವಾಳ ಹೂಡಿಕೆಯನ್ನು ಹೆಚ್ಚಿಸುತ್ತದೆ, ಉದ್ಯೋಗ ಸೃಷ್ಟಿಸುತ್ತದೆ, ಆಮದು ಅವಲಂಬನೆಯನ್ನು ತಗ್ಗಿಸುತ್ತದೆ ಮತ್ತು ರೈತರ ಆದಾಯವನ್ನು ಹೆಚ್ಚಿಸುತ್ತದೆ.
1991-92ರಿಂದ ಭಾರತ ಸರ್ಕಾರವು ಎಣ್ಣೆಕಾಳುಗಳು ಮತ್ತು ಎಣ್ಣೆ ತಾಳೆಗಳ ಉತ್ಪಾದನೆಯನ್ನು ಹೆಚ್ಚಿಸಲು ಅನೇಕ ಪ್ರಯತ್ನಗಳನ್ನು ಮಾಡಿದೆ. 2014-15ರಲ್ಲಿ 275 ಲಕ್ಷ ಟನ್ ಗಳಿದ್ದ ಎಣ್ಣೆಕಾಳುಗಳ ಉತ್ಪಾದನೆಯು 2020-21ರಲ್ಲಿ 365.65 ಲಕ್ಷ ಟನ್ ಗಳಿಗೆ ಏರಿದೆ. ತಾಳೆ ಎಣ್ಣೆ ಉತ್ಪಾದನೆಯ ಸಾಮರ್ಥ್ಯವನ್ನು ಹೆಚ್ಚಿಸಲು, 2020 ರಲ್ಲಿ, ಭಾರತೀಯ ತೈಲ ತಾಳೆ ಸಂಶೋಧನಾ ಸಂಸ್ಥೆ (ಐಐಒಪಿಆರ್) ತೈಲ ತಾಳೆ ಕೃಷಿ ಮೌಲ್ಯಮಾಪನ ಮಾಡಿದ್ದು, ಸುಮಾರು 28 ಲಕ್ಷ ಹೆಕ್ಟೇರ್ ಇದಕ್ಕೆ ಯೋಗ್ಯವೆಂದು ಹೇಳಿದೆ. ಹೀಗಾಗಿ, ತೈಲ ತಾಳೆ ಬೆಳೆಯಲು ಮತ್ತು ನಂತರ ಕಚ್ಚಾ ತಾಳೆ ತೈಲ (ಸಿಪಿಒ) ಉತ್ಪಾದನೆ ಮಾಡಲು ಭಾರಿ ಸಾಮರ್ಥ್ಯವಿದೆ. ಪ್ರಸ್ತುತ ಕೇವಲ 3.70 ಲಕ್ಷ ಹೆಕ್ಟೇರ್ ನಲ್ಲಿ ಮಾತ್ರ ಆಯಿಲ್ ಪಾಮ್ ಕೃಷಿಯಾಗುತ್ತಿದೆ. ಇತರ ಎಣ್ಣೆಕಾಳು ಬೆಳೆಗಳಿಗೆ ಹೋಲಿಸಿದರೆ ತೈಲ ತಾಳೆ ಪ್ರತಿ ಹೆಕ್ಟೇರ್ ಗೆ 10 ರಿಂದ 46 ಪಟ್ಟು ಹೆಚ್ಚು ತೈಲವನ್ನು ಉತ್ಪಾದಿಸುತ್ತದೆ ಮತ್ತು ಪ್ರತಿ ಹೆಕ್ಟೇರ್ ಗೆ ಸುಮಾರು 4 ಟನ್ ತೈಲವನ್ನು ನೀಡುತ್ತದೆ. ಹೀಗಾಗಿ, ಇದರ ಕೃಷಿಗೆ ಅಗಾಧ ಸಾಮರ್ಥ್ಯವಿದೆ.
ಮೇಲ್ಕಂಡ ಅಂಶ ಮತ್ತು ಇಂದಿಗೂ ಸುಮಾರು ಶೇ.98 ಸಿಪಿಒ ಆಮದು ಮಾಡಿಕೊಳ್ಳಲಾಗುತ್ತಿರುವ ಎಂಬ ಅಂಶವನ್ನು ಗಮನದಲ್ಲಿಟ್ಟುಕೊಂಡು, ದೇಶದಲ್ಲಿ ಸಿಪಿಒ ಪ್ರದೇಶ ಮತ್ತು ಉತ್ಪಾದನೆಯನ್ನು ಮತ್ತಷ್ಟು ಹೆಚ್ಚಿಸಲು ಯೋಜನೆಯನ್ನು ಪ್ರಾರಂಭಿಸಲು ಪ್ರಸ್ತಾಪಿಸಲಾಗಿದೆ. ಉದ್ದೇಶಿತ ಯೋಜನೆಯು ಪ್ರಸ್ತುತ ರಾಷ್ಟ್ರೀಯ ಆಹಾರ ಭದ್ರತಾ ಅಭಿಯಾನ–ಆಯಿಲ್ ಪಾಮ್ ಕಾರ್ಯಕ್ರಮವನ್ನು ಪರ್ಯಾಯವಾಗಿ ಬಳಸುತ್ತದೆ.
ಯೋಜನೆಯಲ್ಲಿ ಎರಡು ಪ್ರಮುಖ ಗಮನಾರ್ ಕ್ಷೇತ್ರಗಳಿವೆ. ತೈಲ ತಾಳೆ ಬೆಳೆಗಾರರು ತಾಜಾ ಹಣ್ಣಿನ ಗೊಂಚಲುಗಳನ್ನು (ಎಫ್ ಎಫ್ ಬಿಗಳು) ಉತ್ಪಾದಿಸಿದರೆ, ಅದರಿಂದ ತೈಲವನ್ನು ಕೈಗಾರಿಕೆಗಳು ಉತ್ಪಾದಿಸುತ್ತವೆ. ಪ್ರಸ್ತುತ ಈ ಎಫ್.ಎಫ್.ಬಿಗಳ ಬೆಲೆಗಳು ಅಂತಾರಾಷ್ಟ್ರೀಯ ಸಿಪಿಒ ಬೆಲೆಗಳ ಏರಿಳಿತಗಳೊಂದಿಗೆ ಸಂಬಂಧಿತವಾಗಿವೆ. ಇದೇ ಮೊದಲ ಬಾರಿಗೆ ಭಾರತ ಸರ್ಕಾರ ಎಫ್.ಎಫ್. ಬಿ.ಗಳಿಗೆ ತೈಲ ತಾಳೆ ರೈತರಿಗೆ ಬೆಲೆ ಭರವಸೆ ನೀಡಲಿದೆ. ಇದನ್ನು ಕಾರ್ಯಸಾಧ್ಯತೆ ಬೆಲೆ (ವಿಪಿ) ಎಂದು ಕರೆಯಲಾಗುತ್ತದೆ. ಇದು ಅಂತಾರಾಷ್ಟ್ರೀಯ ಸಿಪಿಒ ಬೆಲೆಗಳ ಏರಿಳಿತಗಳಿಂದ ರೈತರನ್ನು ರಕ್ಷಿಸುತ್ತದೆ ಮತ್ತು ಅಸ್ಥಿರತೆಯಿಂದ ಅವರನ್ನು ಕಾಪಾಡುತ್ತದೆ. ಈ ವಿಪಿಯು ಸಗಟು ಬೆಲೆ ಸೂಚ್ಯಂಕದೊಂದಿಗೆ ಸರಿಹೊಂದಿಸಲಾದ ಕಳೆದ 5 ವರ್ಷಗಳ ವಾರ್ಷಿಕ ಸರಾಸರಿ ಸಿಪಿಒ ಬೆಲೆಯನ್ನು ಶೇ.14.3ರಿಂದ ಗುಣಿಸಲಾಗುತ್ತದೆ. ಇದನ್ನು ತೈಲ ತಾಳೆಯ ವರ್ಷಕ್ಕೆ ಅನುಗುಣವಾಗಿ ವಾರ್ಷಿಕವಾಗಿ ನವೆಂಬರ್ 1 ರಿಂದ ಅಕ್ಟೋಬರ್ 31 ರವರೆಗೆ ನಿಗದಿಪಡಿಸಲಾಗುತ್ತದೆ. ಈ ಭರವಸೆಯು ಭಾರತೀಯ ತೈಲ ತಾಳೆ ಬೆಳೆಗಾರರಲ್ಲಿ ಹೆಚ್ಚಿನ ಪ್ರದೇಶದ ವಿಸ್ತರಣೆ ಮಾಡಲು ಮತ್ತು ಆ ಮೂಲಕ ತಾಳೆ ಎಣ್ಣೆಯ ಹೆಚ್ಚಿನ ಉತ್ಪಾದನೆ ಮಾಡುವ ವಿಶ್ವಾಸವನ್ನು ಹುಟ್ಟುಹಾಕುತ್ತದೆ. ಫಾರ್ಮುಲಾ ಬೆಲೆಯನ್ನು (ಎಫ್.ಪಿ.) ಸಹ ನಿಗದಿಪಡಿಸಲಾಗುವುದು, ಇದು ಸಿಪಿಒದ ಶೇ.14.3 ಆಗಿರುತ್ತದೆ ಮತ್ತು ಮಾಸಿಕ ಆಧಾರದ ಮೇಲೆ ನಿಗದಿಪಡಿಸಲಾಗುತ್ತದೆ. ಕಾರ್ಯಸಾಧ್ಯತೆ ಅಂತರದ ಧನಸಹಾಯವು ವಿಪಿ–ಎಫ್ ಪಿ ಆಗಿರುತ್ತದೆ ಮತ್ತು ಅಗತ್ಯಬಿದ್ದರೆ, ಅದನ್ನು ನೇರವಾಗಿ ಡಿಬಿಟಿ ರೂಪದಲ್ಲಿ ರೈತರ ಖಾತೆಗಳಿಗೆ ಪಾವತಿಸಲಾಗುತ್ತದೆ.
ರೈತರಿಗೆ ಭರವಸೆಯು ಕಾರ್ಯಸಾಧ್ಯತೆ ಅಂತರದ ಧನ ಸಹಾಯದ ರೂಪದಲ್ಲಿರುತ್ತದೆ ಮತ್ತು ಉದ್ಯಮವು ಸಿಪಿಒ ಬೆಲೆಯ ಶೇ.14.3 ಅನ್ನು ಪಾವತಿಸುವುದನ್ನು ಕಡ್ಡಾಯಗೊಳಿಸುತ್ತದೆ, ಇದು ಅಂತಿಮವಾಗಿ ಶೇ.15.3ಕ್ಕೆ ಏರುತ್ತದೆ. ಈ ಯೋಜನೆ ಪರಿಸಮಾಪ್ತಿಯ ಷರತ್ತು ಇದ್ದು, ಅದು 1 ನೇ ನವೆಂಬರ್ 2037 ಆಗಿರುತ್ತದೆ. ಈಶಾನ್ಯ ಮತ್ತು ಅಂಡಮಾನ್ ಗೆ ಉತ್ತೇಜನ ನೀಡಲು, ಭಾರತದ ಉಳಿದ ಭಾಗಗಳ ಬೆಳೆಗಾರರಿಗೆ ಪಾವತಿಸುವುದಕ್ಕಿಂತ ಸಿಪಿಒ ಬೆಲೆಯ ಶೇ.2ರಷ್ಟು ಹೆಚ್ಚುವರಿ ವೆಚ್ಚವನ್ನು ಭರಿಸಲಾಗುತ್ತದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳುತ್ತದೆ. ಭಾರತ ಸರ್ಕಾರವು ಪ್ರಸ್ತಾಪಿಸಿದ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳುವ ರಾಜ್ಯಗಳು ಯೋಜನೆಯಲ್ಲಿ ಪ್ರಸ್ತಾಪಿಸಲಾದ ಕಾರ್ಯಸಾಧ್ಯತೆ ಅಂತರ ಪಾವತಿಯಿಂದ ಪ್ರಯೋಜನ ಪಡೆಯುತ್ತವೆ ಮತ್ತು ಇದಕ್ಕಾಗಿ ಅವು ಕೇಂದ್ರ ಸರ್ಕಾರದೊಂದಿಗೆ ತಿಳಿವಳಿಕೆ ಒಪ್ಪಂದಕ್ಕೆ ಮಾಡಿಕೊಳ್ಳಬೇಕಾಗುತ್ತದೆ.
ಈ ಯೋಜನೆಯ ಎರಡನೇ ಪ್ರಮುಖ ಗಮನವೆಂದರೆ ಒಳಹರಿವುಗಳು / ಮಧ್ಯಸ್ಥಿಕೆಯ ನೆರವನ್ನು ಗಣನೀಯವಾಗಿ ಹೆಚ್ಚಿಸುವುದಾಗಿದೆ. ಎಣ್ಣೆ ತಾಳೆಗೆ ಬಿತ್ತನೆ ಸಾಮಗ್ರಿಗಾಗಿ ಗಣನೀಯ ಹೆಚ್ಚಳವನ್ನು ಮಾಡಲಾಗಿದೆ ಮತ್ತು ಇದನ್ನು ಪ್ರತಿ ಹೆ.ಗೆ 12,೦೦೦ ರೂ.ಗಳಿಂದ ಪ್ರತಿ ಹೆ.ಗೆ 29೦೦೦ ರೂ.ಗೆ ಏರಿಸಲಾಗಿದೆ. ನಿರ್ವಹಣೆ ಮತ್ತು ಅಂತರ ಬೆಳೆ ಮಧ್ಯಸ್ಥಿಕೆಗಳಿಗೆ ಮತ್ತಷ್ಟು ಗಣನೀಯ ಹೆಚ್ಚಳ ಮಾಡಲಾಗಿದೆ. ಹಳೆಯ ತೋಟಗಳ ಪುನಶ್ಚೇತನಕ್ಕಾಗಿ ಹಳೆಯ ತೋಟಗಳಲ್ಲಿ ಮರು ಗಿಡ ನೆಡುವುದಕ್ಕಾಗಿ ಪ್ರತಿ ಗಿಡಕ್ಕೆ 25೦ ರೂ. ವಿಶೇಷ ನೆರವು ನೀಡಲಾಗುತ್ತಿದೆ.
ದೇಶದಲ್ಲಿ ಬಿತ್ತನೆ ಸಾಮಗ್ರಿಗಳ ಕೊರತೆಯ ಸಮಸ್ಯೆಯನ್ನು ಪರಿಹರಿಸಲು, ಭಾರತದ ಉಳಿದ ಭಾಗಗಳಲ್ಲಿ 15 ಹೆ.ಗೆ 80 ಲಕ್ಷ ರೂ.ಗಳವರೆಗೆ ಮತ್ತು ಈಶಾನ್ಯ ಮತ್ತು ಅಂಡಮಾನ್ ಪ್ರದೇಶಗಳಲ್ಲಿ 15 ಹೆ.ಗೆ 100 ಲಕ್ಷ ರೂ.ಗಳವರೆಗೆ ಸೀಡ್ ಗಾರ್ಡನ್ ನೆರವು ನೀಡಲಾಗುತ್ತದೆ. ಇದಲ್ಲದೆ, ಸೀಡ್ ಗಾರ್ಡನ್ ಗೆ ಭಾರತದ ಇತರ ಪ್ರದೇಶಕ್ಕೆ 40 ಲಕ್ಷ ರೂ.ಗಳು ಮತ್ತು ಈಶಾನ್ಯ ಹಾಗೂ ಅಂಡಮಾನ್ ಪ್ರದೇಶಗಳಿಗೆ 50 ಲಕ್ಷ ರೂ.ನಂತೆ ನೆರವು ನೀಡಲಾಗುತ್ತದೆ. ಈಶಾನ್ಯ ಮತ್ತು ಅಂಡಮಾನ್ ಪ್ರದೇಶಗಳಿಗೆ ಹೆಚ್ಚಿನ ವಿಶೇಷ ನೆರವು ನೀಡಲಾಗುವುದು, ಇದರಲ್ಲಿ ಸಮಗ್ರ ಕೃಷಿಯ ಜೊತೆಗೆ ಅರ್ಧ ಚಂದ್ರನಾಕೃತಿಯ ಮಹಡಿ ಮೇಲಿನ ಕೃಷಿ, ಜೈವಿಕ ಬೇಲಿ ಮತ್ತು ಭೂ ಅನುಮತಿಗೆ ವಿಶೇಷ ನಿಬಂಧನೆಗಳನ್ನು ಮಾಡಲಾಗುತ್ತಿದೆ. ಉದ್ಯಮದ ಬಂಡವಾಳ ನೆರವಿಗಾಗಿ, ಈಶಾನ್ಯ ರಾಜ್ಯಗಳು ಮತ್ತು ಅಂಡಮಾನ್ ದ್ವೀಪಗಳಿಗಾಗಿ ಪ್ರೊ ರಾಟಾ ಹೆಚ್ಚಳದೊಂದಿಗೆ 5 ಎಂಟಿ/ಎಚ್.ಆರ್ ಜಮೀನಿಗೆ 5 ಕೋಟಿ ರೂ.ಗಳನ್ನುಒದಗಿಸಲಾಗುತ್ತದೆ. ಇದು ಉದ್ಯಮವನ್ನು ಈ ಪ್ರದೇಶಗಳಿಗೆ ಆಕರ್ಷಿಸುತ್ತದೆ.