ಪ್ರಧಾನಮಂತ್ರಿ ಶ್ರೀ ನರೇಂದ್ರಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು 2023-24 ರಿಂದ 2027-28 ರವರೆಗಿನ ಐದು ವರ್ಷಗಳ ಅವಧಿಗೆ ರೂ.150 ಕೋಟಿಗಳ ಒಂದು ಬಾರಿಯ ಬಜೆಟ್ ಬೆಂಬಲದೊಂದಿಗೆ ಇಂಟರ್ ನ್ಯಾಶನಲ್ ಬಿಗ್ ಕ್ಯಾಟ್ ಅಲೈಯನ್ಸ್ (ಐಬಿಸಿಎ) ಸ್ಥಾಪನೆಗೆ ಅನುಮೋದನೆ ನೀಡಿದೆ. ಇದರ ಪ್ರಧಾನ ಕಛೇರಿ  ಭಾರತದಲ್ಲಿರುತ್ತದೆ. 

ಹುಲಿಗಳು, ಇತರ ಬೆಕ್ಕಿನ ಪ್ರಭೇದಗಳು ಮತ್ತು ಅದರ ಅನೇಕ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನು  ಸಂರಕ್ಷಿಸುವಲ್ಲಿ ಭಾರತದ ಪ್ರಮುಖ ಪಾತ್ರವನ್ನು ಗುರುತಿಸಿರುವ ಭಾರತದ ಪ್ರಧಾನಮಂತ್ರಿಯವರು, 2019 ರ ಜಾಗತಿಕ ಹುಲಿ ದಿನಾಚರಣೆಯ ಸಂದರ್ಭದಲ್ಲಿ ತಮ್ಮ ಭಾಷಣದಲ್ಲಿ ಏಷ್ಯಾ ಖಂಡದಲ್ಲಿ ಬೇಟೆಯಾಡುವುದನ್ನು ತಡೆಯಲು ಜಾಗತಿಕ ನಾಯಕರು ಒಗ್ಗೂಡುವಂತೆ ಕರೆ ನೀಡಿದ್ದರು. ಏಪ್ರಿಲ್ 9, 2023 ರಂದು ಭಾರತದ ʼಪ್ರಾಜೆಕ್ಟ್ ಟೈಗರ್ʼನ 50 ವರ್ಷಗಳ ವಾರ್ಷಿಕೋತ್ಸವದ ಸಂದರ್ಭದಲ್ಲಿ ಅವರು ಇದನ್ನು ಪುನರುಚ್ಚರಿಸಿದರು ಮತ್ತು ದೊಡ್ಡ ಬೆಕ್ಕಿನ ಪ್ರಬೇಧಗಳು ಮತ್ತು ಅವು ಅಭಿವೃದ್ಧಿಯಾಗುವ ಪರಿಸರಗಳ ಭವಿಷ್ಯವನ್ನು ಭದ್ರಪಡಿಸುವ ಗುರಿಯೊಂದಿಗೆ ʼಇಂಟರ್ ನ್ಯಾಶನಲ್ ಬಿಗ್ ಕ್ಯಾಟ್ ಅಲೈಯನ್ಸ್ʼಗೆ ಔಪಚಾರಿಕವಾಗಿ ಚಾಲನೆ ನೀಡಿದರು.  

ಭಾರತದಲ್ಲಿ ಅಭಿವೃದ್ಧಿಪಡಿಸಲಾದ ಮತ್ತು ದೀರ್ಘಕಾಲ ಜೀವಿಸುವ ಹುಲಿಗಳು ಮತ್ತು ಇತರ ದೊಡ್ಡ ಬೆಕ್ಕುಗಳ ಜಾತಿಯ ಪ್ರಾಣಿಗಳಿಗಾಗಿ ಇರುವ  ಉತ್ತಮ ಸಂರಕ್ಷಣಾ ಅಭ್ಯಾಸಗಳನ್ನು ಇತರ ಹಲವು ದೇಶಗಳಲ್ಲಿ ಅನುಕರಿಸಬಹುದು.

ಬೆಕ್ಕಿನ ಜಾತಿಯ ಏಳು ದೊಡ್ಡ ಪ್ರಾಣಿಗಳಲ್ಲಿ ಹುಲಿ, ಸಿಂಹ, ಚಿರತೆ, ಹಿಮ ಚಿರತೆ, ಪೂಮಾ, ಜಾಗ್ವಾರ್ ಮತ್ತು ಚಿರತೆ ಸೇರಿವೆ, ಇವುಗಳಲ್ಲಿ ಐದು ಪ್ರಾಣಿಗಳು ಅಂದರೆ ಹುಲಿ, ಸಿಂಹ, ಚಿರತೆ, ಹಿಮ ಚಿರತೆ ಮತ್ತು ಚೀತಾ ಭಾರತದಲ್ಲಿ ಕಂಡುಬರುತ್ತವೆ.

ಇಂಟರ್ ನ್ಯಾಶನಲ್ ಬಿಗ್ ಕ್ಯಾಟ್ ಅಲೈಯನ್ಸ್ ಅನ್ನು 96 ದೊಡ್ಡ ಬೆಕ್ಕಿನ  ಶ್ರೇಣಿಯ ದೇಶಗಳ ಬಹು ದೇಶ, ಬಹು-ಏಜೆನ್ಸಿ ಒಕ್ಕೂಟವಾಗಿ ಕಲ್ಪಿಸಲಾಗಿದ್ದು, ಇದು ದೊಡ್ಡ ಬೆಕ್ಕಿನ ಜಾತಿಯ  ಪ್ರಾಣಿಗಳ ಸಂರಕ್ಷಣೆಯಲ್ಲಿ ಆಸಕ್ತಿ ಹೊಂದಿರುವ ದೇಶಗಳು, ಸಂರಕ್ಷಣಾ ಪಾಲುದಾರರು ಮತ್ತು ವ್ಯವಹಾರದ ಜೊತೆಗೆ, ಈ ಪ್ರಾಣಿಗಳ ಸಂರಕ್ಷಣೆ ಕ್ಷೇತ್ರದಲ್ಲಿ ಕೆಲಸ ಮಾಡುವ ವೈಜ್ಞಾನಿಕ ಸಂಸ್ಥೆಗಳು ಗುಂಪುಗಳು ಮತ್ತು ಕಾರ್ಪೊರೇಟ್ ಗಳು  ಅವುಗಳ  ಧ್ಯೇಯಕ್ಕಾಗಿ ಕೊಡುಗೆ ನೀಡಲು, ಜಾಲಗಳನ್ನು ಸ್ಥಾಪಿಸಲು ಮತ್ತು ಸಹಕಾರ ಸಂಸ್ಥೆಗಳನ್ನು ಕೇಂದ್ರೀಕೃತ ರೀತಿಯಲ್ಲಿ ಅಭಿವೃದ್ಧಿಪಡಿಸಲು, ಇದರಿಂದಾಗಿ ಯಶಸ್ವಿ ಅಭ್ಯಾಸಗಳು ಮತ್ತು ಸಿಬ್ಬಂದಿಗಳ ಕೇಂದ್ರೀಕೃತ ಭಂಡಾರವನ್ನು ಸಾಮಾನ್ಯ ವೇದಿಕೆಗೆ ತರಲು ಆರ್ಥಿಕ ಸಹಾಯದಿಂದ ಬೆಂಬಲಿತವಾಗಿದೆ. ಇದನ್ನು ಕ್ಷೇತ್ರದಲ್ಲಿ ಸಂರಕ್ಷಣಾ ಕಾರ್ಯಸೂಚಿಯನ್ನು ಬಲಪಡಿಸಿ ದೊಡ್ಡ ಬೆಕ್ಕಿನ ಜಾತಿಯ ಪ್ರಾಣಿಗಳ ಸಂಖ್ಯೆಯ ಕುಸಿತವನ್ನು ತಡೆಗಟ್ಟಲು ಮತ್ತು ಸಂಖ್ಯೆಯನ್ನು ಹೆಚ್ಚಿಸಲು ಬಳಸಲಾಗುವುದು.  ಸಂಬಂಧಪಟ್ಟ ದೇಶಗಳು ಮತ್ತು ಇತರರನ್ನು ಸಾಮಾನ್ಯ ವೇದಿಕೆಯಲ್ಲಿ ತರಲು, ಬೆಕ್ಕಿನ ಜಾತಿಯ ದೊಡ್ಡ ಪ್ರಾಣಿಗಳ ಕಾರ್ಯಸೂಚಿಯಲ್ಲಿ ಮುಂಚೂಣಿಯಲ್ಲಿರುವ   ಇದು ಒಂದು ಮಾರ್ಗದರ್ಶಕ ಹೆಜ್ಜೆಯಾಗಿದೆ.

ಸಂರಕ್ಷಣಾ ಕಾರ್ಯಸೂಚಿಯನ್ನು ಮುಂದುವರಿಸುವಲ್ಲಿ ಪರಸ್ಪರ ಪ್ರಯೋಜನಕ್ಕಾಗಿ ದೇಶಗಳ ನಡುವೆ ಪರಸ್ಪರ ಸಹಕಾರವನ್ನು ಸ್ಥಾಪಿಸುವ ಗುರಿಯನ್ನು  ಐಬಿಸಿಎ  ಹೊಂದಿದೆ. ಐಬಿಸಿಎ ವಿಶಾಲವಾದ ನೆಲೆಯಲ್ಲಿ ಬಹು ಹಂತದ ವಿಧಾನವನ್ನು ಹೊಂದಿದೆ ಮತ್ತು ಹಲವಾರು ಕ್ಷೇತ್ರಗಳಲ್ಲಿ ಸಂಪರ್ಕಗಳನ್ನು ಸ್ಥಾಪಿಸುತ್ತದೆ ಮತ್ತು ಇದು ಜ್ಞಾನ ಹಂಚಿಕೆ, ಸಾಮರ್ಥ್ಯ ನಿರ್ಮಾಣ,  ನೆಟ್ ವರ್ಕಿಂಗ್, ಸಮರ್ಥನೆ, ಹಣಕಾಸು ಮತ್ತು ಸಂಪನ್ಮೂಲಗಳ ಬೆಂಬಲ, ಸಂಶೋಧನೆ ಮತ್ತು ತಾಂತ್ರಿಕ ಬೆಂಬಲ, ಶಿಕ್ಷಣ ಮತ್ತು ಜಾಗೃತಿಗೆ ಸಹಾಯ ಮಾಡುತ್ತದೆ. ಸುಸ್ಥಿರ ಅಭಿವೃದ್ಧಿ ಮತ್ತು ಜೀವನೋಪಾಯದ ಭದ್ರತೆಗಾಗಿ ದೊಡ್ಡ ಬೆಕ್ಕುಗಳು ರಾಯಭಾರಿಗಳಾಗಿ , ಭಾರತ ಮತ್ತು ದೊಡ್ಡ ಬೆಕ್ಕು ಶ್ರೇಣಿಯ ದೇಶಗಳು ಪರಿಸರದ ಚೇತರಿಕೆ ಮತ್ತು ಹವಾಮಾನ ಬದಲಾವಣೆಯ ದುಷ್ಪರಿಣಾಮಗಳ ತಗ್ಗಿಸುವಿಕೆಯ ಮೇಲೆ ಪ್ರಮುಖ ಪ್ರಯತ್ನಗಳನ್ನು ಮಾಡಬಹುದು, ಜೊತೆಗೆ ನೈಸರ್ಗಿಕ ಪರಿಸರ ವ್ಯವಸ್ಥೆಗಳು ಅಭಿವೃದ್ಧಿ ಹೊಂದುತ್ತಿರುವ ಭವಿಷ್ಯವನ್ನು ಸುಗಮಗೊಳಿಸುತ್ತದೆ ಮತ್ತು ಆರ್ಥಿಕ ಮತ್ತು ಅಭಿವೃದ್ಧಿಯ ನೀತಿಗಳಲ್ಲಿ ಪ್ರಮುಖ ಸ್ಥಾನವನ್ನು ಪಡೆಯುತ್ತದೆ.

ಅತ್ಯುನ್ನತ ಮಟ್ಟದ ದೊಡ್ಡ ಬೆಕ್ಕಿನ ಜಾತಿಯ ಪ್ರಾಣಿಗಳ ಸಂರಕ್ಷಣಾ ಅಭ್ಯಾಸಗಳ ವ್ಯಾಪಕ   ಪ್ರಸಾರಕ್ಕಾಗಿ  ಸಹಯೋಗದ ವೇದಿಕೆಯ ಮೂಲಕ ಐಸಿಎ ಸಮನ್ವಯವನ್ನು ಕಲ್ಪಿಸುತ್ತದೆ, ತಾಂತ್ರಿಕ ಜ್ಞಾನ ಮತ್ತು ಆರ್ಥಿಕ ಬೆಂಬಲಕ್ಕಾಗಿ  ಕೇಂದ್ರ ಸಾಮಾನ್ಯ ಭಂಡಾರಕ್ಕೆ ಸುಲಭ ಲಭ್ಯತೆಯನ್ನು ಒದಗಿಸುತ್ತದೆ, ಅಸ್ತಿತ್ವದಲ್ಲಿರುವ  ಪ್ರಬೇಧಕ್ಕನುಗುಣವಾದ   ಅಂತರ ಸರ್ಕಾರಿ ವೇದಿಕೆಗಳು, ಜಾಲಗಳು ಮತ್ತು ಸಂರಕ್ಷಣಾ ಅಂತರರಾಷ್ಟ್ರೀಯ ಉಪಕ್ರಮಗಳನ್ನು ಐಸಿಎ ಬಲಪಡಿಸುತ್ತದೆ, ಹಾಗು ರಕ್ಷಣೆ ಮತ್ತು ನಮ್ಮ ಪರಿಸರದ ಭವಿಷ್ಯವನ್ನು ಸುರಕ್ಷಿತಗೊಳಿಸಲು ಮತ್ತು ಹವಾಮಾನ ಬದಲಾವಣೆಯ ಪ್ರತಿಕೂಲ ಪರಿಣಾಮಗಳನ್ನು ತಗ್ಗಿಸಲು ಸಹಾಯ ಮಾಡುತ್ತದೆ.

ಐಬಿಸಿಎಯ ಚೌಕಟ್ಟು ವಿಶಾಲವಾದ ತಳಹದಿಯಲ್ಲಿ ಹಲವು ವಿಧಾನವನ್ನು ಹೊಂದಿರುತ್ತದೆ ಮತ್ತು ಹಲವಾರು ಕ್ಷೇತ್ರಗಳಲ್ಲಿ ಬಹುಮುಖಿ ಸಂಪರ್ಕಗಳನ್ನು ಸ್ಥಾಪಿಸುತ್ತದೆ ಮತ್ತು ಜ್ಞಾನ ಹಂಚಿಕೆ, ಸಾಮರ್ಥ್ಯ ನಿರ್ಮಾಣ, ನೆಟ್ವರ್ಕಿಂಗ್, ಸಮರ್ಥನೆ, ಹಣಕಾಸು ಮತ್ತು ಸಂಪನ್ಮೂಲಗಳ ಬೆಂಬಲ, ಸಂಶೋಧನೆ ಮತ್ತು ತಾಂತ್ರಿಕ ಬೆಂಬಲ, ವೈಫಲ್ಯಗಳ ವಿರುದ್ಧ ವಿಮೆ, ಶಿಕ್ಷಣ ಮತ್ತು ಜಾಗೃತಿಗೆ ಸಹಾಯ ಮಾಡುತ್ತದೆ.  ಈ ಪ್ರಾಣಿಗಳು ವಾಸಿಸುವ ದೇಶಗಳಾದ್ಯಂತ ಬ್ರಾಂಡ್ ರಾಯಭಾರಿಗಳು ಉದ್ದೇಶವನ್ನು ಪ್ರಚಾರ ಪಡಿಸುವಲ್ಲಿ   ಹೆಚ್ಚಿನ ಪಾತ್ರವನ್ನು ವಹಿಸುತ್ತಾರೆ ಮತ್ತು ಇಡೀ ಪ್ರಕ್ರಿಯೆಯಲ್ಲಿ ಪ್ರಮುಖ ಪಾಲುದಾರರಾಗಿರುವ ಯುವಜನರು ಮತ್ತು ಸ್ಥಳೀಯ ಸಮುದಾಯಗಳು ಸೇರಿದಂತೆ ಜನಸಾಮಾನ್ಯರಲ್ಲಿ ʼಬಿಗ್ ಕ್ಯಾಟ್ ಸಂರಕ್ಷಣೆ ಅಭಿಯಾನʼವನ್ನು ಖಚಿತಪಡಿಸಿಕೊಳ್ಳಲು ಉತ್ತೇಜನವನ್ನು  ಹೆಚ್ಚಿಸುತ್ತಾರೆ. ಸಹಕಾರಿ ಕ್ರಮ ಆಧಾರಿತ ವಿಧಾನ ಮತ್ತು ಉಪಕ್ರಮಗಳ ಮೂಲಕ  ಹಸಿರು ಆರ್ಥಿಕ ಯೋಜನೆಗಳ ಅನುಷ್ಠಾನ ಹವಾಮಾನ ಬದಲಾವಣೆಯ ವಿಷಯದಲ್ಲಿರುವ ನಮ್ಮ ದೇಶ ವಹಿಸಿರುವ ನಾಯಕತ್ವದ ಪಾತ್ರ ಐಬಿಸಿಎ ವೇದಿಕೆಯ ಮೂಲಕ ಸಾಧ್ಯ. ಆದ್ದರಿಂದ ಬಿಗ್ ಕ್ಯಾಟ್ ಅಲೈಯನ್ಸ್ ಸದಸ್ಯರ ಉತ್ತೇಜನವು ಸಂಬಂಧಪಟ್ಟವರ ಸಂರಕ್ಷಣೆ ಮತ್ತು ಸಮೃದ್ಧಿಯ ಚಹರೆಯನ್ನು ಬದಲಾಯಿಸಬಹುದು.

ಇಂಟರ್ ನ್ಯಾಶನಲ್ ಬಿಗ್ ಕ್ಯಾಟ್ ಅಲೈಯನ್ಸ್ ಸಮಗ್ರ ಮತ್ತು ಅಂತರ್ಗತ ಸಂರಕ್ಷಣೆಯ ಫಲಿತಾಂಶಗಳನ್ನು ಸಾಧಿಸಲು ಸುಸ್ಥಿರ ಅಭಿವೃದ್ಧಿ ಗುರಿಗಳೊಂದಿಗೆ (ಎಸ್ ಡಿ ಜಿ)  ಜೀವವೈವಿಧ್ಯ ನೀತಿಗಳನ್ನು ಸಂಯೋಜಿಸುವ ಪ್ರಾಮುಖ್ಯತೆಯನ್ನು ಗುರುತಿಸುತ್ತದೆ. ಮೇಲೆ ತಿಳಿಸಿದ ವಿಷಯಗಳು ಸ್ಥಳೀಯ ಅಗತ್ಯತೆಗಳೊಂದಿಗೆ ಜೀವವೈವಿಧ್ಯ ಸಂರಕ್ಷಣಾ ಪ್ರಯತ್ನಗಳನ್ನು ಜೋಡಿಸುವ ಮತ್ತು ಐಎಫ್ ಸಿ ಎ ಸದಸ್ಯ ರಾಷ್ಟ್ರಗಳಲ್ಲಿ ಯು ಎನ್ ಎಸ್ ಡಿಜಿ ಗಳ ಸಾಧನೆಗೆ ಕೊಡುಗೆ ನೀಡುವ ನೀತಿ ಉಪಕ್ರಮಗಳಿಗೆ ಕರೆ ನೀಡುತ್ತದೆ. ಪ್ರಾದೇಶಿಕ ನೀತಿಗಳು ಮತ್ತು ಅಭಿವೃದ್ಧಿ ಯೋಜನಾ ಪ್ರಕ್ರಿಯೆಗಳಲ್ಲಿ ಜೈವಿಕ ವೈವಿಧ್ಯತೆಯನ್ನು ಸಂಯೋಜಿಸಲು ವಿವಿಧ ಕ್ಷೇತ್ರಗಳಲ್ಲಿ ಜೀವವೈವಿಧ್ಯವನ್ನು ಮುಖ್ಯವಾಹಿನಿಗೆ ತರುವುದು; ಇದರಲ್ಲಿ ಕೃಷಿ, ಅರಣ್ಯ, ಪ್ರವಾಸೋದ್ಯಮ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸೇರಿವೆ. ಜೀವವೈವಿಧ್ಯ ಸಂರಕ್ಷಣೆಯನ್ನು ಬೆಂಬಲಿಸುವ ಮತ್ತು ಹವಾಮಾನ ಬದಲಾವಣೆ, ಆಹಾರ ಭದ್ರತೆ, ಶುದ್ಧ ನೀರು ಮತ್ತು ಬಡತನ ನಿರ್ಮೂಲನೆಗೆ ಸಂಬಂಧಿಸಿದ ಎಸ್ ಡಿಜಿ ಗಳನ್ನು ತಲುಪಿಸುವ ಸುಸ್ಥಿರ ಭೂ ಬಳಕೆಯ ಮಾದರಿಗಳು, ಆವಾಸಸ್ಥಾನ ಮರುಸ್ಥಾಪನೆ ಉಪಕ್ರಮಗಳು ಮತ್ತು ಪರಿಸರ ವ್ಯವಸ್ಥೆ ಆಧಾರಿತ ವಿಧಾನಗಳನ್ನು ಉತ್ತೇಜಿಸುವುದು. 

ಐಬಿಸಿಎ ಆಡಳಿತವು ಸದಸ್ಯರ ಸಭೆ, ಸ್ಥಾಯಿ ಸಮಿತಿ ಮತ್ತು ಸಚಿವಾಲಯದೊಂದಿಗೆ ಭಾರತದಲ್ಲಿ ಅದರ ಪ್ರಧಾನ ಕಚೇರಿಯನ್ನು ಒಳಗೊಂಡಿದೆ. ಒಪ್ಪಂದದ ಚೌಕಟ್ಟನ್ನು (ಕಾನೂನು) ಹೆಚ್ಚಾಗಿ ಇಂಟರ್ ನ್ಯಾಶನಲ್ ಸೋಲಾರ್ ಅಲೈಯನ್ಸ್ (ಐಎಸ್ ಎ) ಮಾದರಿಯಲ್ಲಿ ರಚಿಸಲಾಗಿದೆ ಮತ್ತು ಇದನ್ನು ಅಂತರರಾಷ್ಟ್ರೀಯ ಸಂಚಾಲನಾ ಸಮಿತಿ (ಇಂಟರ್ ನ್ಯಾಶನಲ್ ಸ್ಟೀರಿಂಗ್ ಕಮಿಟಿ - ಐಎಸ್ ಸಿ)  ಅಂತಿಮಗೊಳಿಸುತ್ತದೆ. ಆತಿಥೇಯ ರಾಷ್ಟ್ರದ ಒಪ್ಪಂದವನ್ನು ಐಎಸ್ ಎ ಮತ್ತು ಭಾರತ ಸರ್ಕಾರದ ರೀತಿಯಲ್ಲಿ ಸಿದ್ಧಪಡಿಸಲಾಗಿದೆ. ಸಂಸ್ಥಾಪಕ ಸದಸ್ಯ ರಾಷ್ಟ್ರಗಳ ನಾಮನಿರ್ದೇಶಿತ ರಾಷ್ಟ್ರೀಯ ಉದ್ದೇಶಗಳ  ಮೇಲೆ ಸಂಚಾಲನಾ ಸಮಿತಿಯನ್ನು ರಚಿಸಲಾಗುತ್ತದೆ. ಸಭೆಯಲ್ಲಿ ಐಬಿಸಿಎ ತನ್ನದೇ ಆದ ಡಿಜಿಯನ್ನು ನೇಮಿಸುವವರೆಗೆ ಭಾರತ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಕಡೆಯವರು ಐಬಿಸಿಎ ಸಚಿವಾಲಯದ   ಹಂಗಾಮಿ ಮುಖ್ಯಸ್ಥರಾಗಿರುತ್ತಾರೆ. ಸಚಿವರ ಮಟ್ಟದಲ್ಲಿ ಐಬಿಸಿಎ ಸಭೆಯು, ಭಾರತ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ  ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಐಬಿಸಿಎಗೆ ಐದು ವರ್ಷಗಳವರೆಗೆ (2023-24 ರಿಂದ 2027-28) ಆರಂಭಿಕ ಅನುದಾನ150 ಕೋಟಿ ರೂಪಾಯಿಗಳು  ಭಾರತ ಸರ್ಕಾರದಿಂದ ದೊರಕಿದೆ. ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಏಜೆನ್ಸಿಗಳು ಒದಗಿಸುವ ಹೆಚ್ಚಿನ ನಿಧಿ; ಇತರ ಅರ್ಹ ಸಂಸ್ಥೆಗಳು ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳು, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳು ಮತ್ತು ದಾನಿ ಸಂಸ್ಥೆಗಳಿಂದ ಹಣಕಾಸಿನ ನೆರವು ಸಂಗ್ರಹಿಸಲು ಮತ್ತಷ್ಟು ಪ್ರಯತ್ನಿಸಲಾಗುವುದು.  

ಐಬಿಸಿಎ ಒಕ್ಕೂಟವು ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ಬಳಕೆಯನ್ನು ಖಾತ್ರಿಗೊಳಿಸುತ್ತದೆ ಮತ್ತು ಹವಾಮಾನ ಬದಲಾವಣೆಯಿಂದ ಆಗುವ ಸವಾಲುಗಳನ್ನು ತಗ್ಗಿಸುತ್ತದೆ. ದೊಡ್ಡ ಬೆಕ್ಕಿನ ಜಾತಿಯ ಪ್ರಾಣಿಗಳು ಮತ್ತು ಅವುಗಳ ಆವಾಸಸ್ಥಾನಗಳನ್ನು ರಕ್ಷಿಸುವ ಮೂಲಕ, ನೈಸರ್ಗಿಕ ಹವಾಮಾನ ಹೊಂದಾಣಿಕೆ, ನೀರು ಮತ್ತು ಆಹಾರ ಭದ್ರತೆ ಮತ್ತು ಈ ಪರಿಸರ ವ್ಯವಸ್ಥೆಗಳ ಮೇಲೆ ಅವಲಂಬಿತವಾಗಿರುವ ಸಾವಿರಾರು ಸಮುದಾಯಗಳ ಯೋಗಕ್ಷೇಮಕ್ಕೆ ಐಬಿಸಿಎ ಕೊಡುಗೆ ನೀಡುತ್ತದೆ. ಐಬಿಸಿಎ ಪರಸ್ಪರ ಪ್ರಯೋಜನಕ್ಕಾಗಿ ವಿವಿಧ ದೇಶಗಳ ನಡುವೆ ಸಹಕಾರವನ್ನು ಸ್ಥಾಪಿಸುತ್ತದೆ ಮತ್ತು ದೀರ್ಘಾವಧಿಯ ರಕ್ಷಣಾ ಕಾರ್ಯಸೂಚಿಯನ್ನು ಮುನ್ನಡೆಸಲು ಗಮನಾರ್ಹ ಕೊಡುಗೆ ನೀಡುತ್ತದೆ.

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
PLI, Make in India schemes attracting foreign investors to India: CII

Media Coverage

PLI, Make in India schemes attracting foreign investors to India: CII
NM on the go

Nm on the go

Always be the first to hear from the PM. Get the App Now!
...
PM Modi meets Prime Minister of Saint Lucia
November 22, 2024

On the sidelines of the Second India-CARICOM Summit, Prime Minister Shri Narendra Modi held productive discussions on 20 November with the Prime Minister of Saint Lucia, H.E. Mr. Philip J. Pierre.

The leaders discussed bilateral cooperation in a range of issues including capacity building, education, health, renewable energy, cricket and yoga. PM Pierre appreciated Prime Minister’s seven point plan to strengthen India- CARICOM partnership.

Both leaders highlighted the importance of collaboration in addressing the challenges posed by climate change, with a particular focus on strengthening disaster management capacities and resilience in small island nations.