ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು, ಗುಜರಾತ್ ನ ಲೋಥಾಲ್ ನಲ್ಲಿರುವ ರಾಷ್ಟ್ರೀಯ ಸಾಗರ ಪರಂಪರೆಯ ಸಂಕೀರ್ಣ (ಎನ್.ಎಂ.ಹೆಚ್.ಸಿ) ಅಭಿವೃದ್ಧಿಗೆ ಅನುಮೋದನೆ ನೀಡಿದೆ. ಈ ಯೋಜನೆಯು ಎರಡು ಹಂತಗಳಲ್ಲಿ ಪೂರ್ಣಗೊಳ್ಳಲಿದೆ.
ಸ್ವಯಂಪ್ರೇರಿತ ಸಂಪನ್ಮೂಲಗಳು / ಕೊಡುಗೆಗಳ ಮೂಲಕ ನಿಧಿಯನ್ನು ಸಂಗ್ರಹಿಸುವ ಮೂಲಕ ಮತ್ತು ನಿಧಿಯನ್ನು ಸಂಗ್ರಹಿಸಿದ ನಂತರ ಅವುಗಳನ್ನು ಕಾರ್ಯಗತಗೊಳಿಸುವ ಮೂಲಕ ಮಾಸ್ಟರ್ ಪ್ಲಾನ್ ಪ್ರಕಾರ ಹಂತ 1ಬಿ ಮತ್ತು ಹಂತ 2 ಕ್ಕೆ ಸಹ ಕೇಂದ್ರ ಸಚಿವ ಸಂಪುಟ ತಾತ್ವಿಕ ಅನುಮೋದನೆಯನ್ನು ನೀಡಿದೆ.
ಹಂತ 1ಬಿ ಅಡಿಯಲ್ಲಿ ಲೈಟ್ ಹೌಸ್ ಮ್ಯೂಸಿಯಂ ನಿರ್ಮಾಣಕ್ಕೆ ಡೈರೆಕ್ಟರೇಟ್ ಜನರಲ್ ಆಫ್ ಲೈಟ್ ಹೌಸ್ ಮತ್ತು ಲೈಟ್ ಶಿಪ್ ಗಳು (ಡಿ.ಜಿ.ಎಲ್.ಎಲ.) ಧನಸಹಾಯ ನೀಡಲಿವೆ.
ಗುಜರಾತ್ ನ ಲೋಥಾಲ್ ನಲ್ಲಿ ಎನ್.ಎಂ.ಹೆಚ್.ಸಿ.ಯಲ್ಲಿ ಈ ಯೋಜನೆಯ ಅನುಷ್ಠಾನ, ಅಭಿವೃದ್ಧಿ, ನಿರ್ವಹಣೆ ಮತ್ತು ಕಾರ್ಯಾಚರಣೆಗಾಗಿ ಕೇಂದ್ರ ಬಂದರುಗಳು, ಶಿಪ್ಪಿಂಗ್ ಮತ್ತು ಜಲಮಾರ್ಗಗಳ ಸಚಿವರ ನೇತೃತ್ವದ ಆಡಳಿತ ಮಂಡಳಿಯಿಂದ ಆಡಳಿತ ನಡೆಸಲು ಹಾಗೂ ಭವಿಷ್ಯದ ಹಂತಗಳ ಅಭಿವೃದ್ಧಿಗಾಗಿ 1860 ರ ಸೊಸೈಟೀಸ್ ನೋಂದಣಿ ಕಾಯಿದೆ ಅಡಿಯಲ್ಲಿ ಪ್ರತ್ಯೇಕ ಸೊಸೈಟಿಯನ್ನು ಸ್ಥಾಪಿಸಲಾಗುವುದು.
ಯೋಜನೆಯ 1ಎ ಹಂತವು 60% ಕ್ಕಿಂತ ಹೆಚ್ಚು ಭೌತಿಕ ಪ್ರಗತಿಯೊಂದಿಗೆ ಅನುಷ್ಠಾನದಲ್ಲಿದೆ ಮತ್ತು 2025 ರ ವೇಳೆಗೆ ಪೂರ್ಣಗೊಳ್ಳಲು ಕಾರ್ಯಯೋಜನೆಗಳನ್ನು ಯೋಜಿಸಲಾಗಿದೆ. ಎನ್.ಎಂ.ಹೆಚ್.ಸಿ.ಯ ವಿಶ್ವ ದರ್ಜೆಯ ಪರಂಪರೆಯ ವಸ್ತುಸಂಗ್ರಹಾಲಯವಾಗಿ ಸ್ಥಾಪಿಸಲು, 1ಎ ಮತ್ತು 1ಬಿ ಹಂತಗಳನ್ನು ಇ.ಎಫ್.ಸಿ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗುವುದು, ಮತ್ತು ಯೋಜನೆಯ 2 ನೇ ಹಂತವನ್ನು ಭೂ ಗುತ್ತಿಗೆಯ /ಪಿಪಿಪಿ ಮೂಲಕ ಅಭಿವೃದ್ಧಿಪಡಿಸಲಾಗುವುದು.
ಉದ್ಯೋಗ ಸೃಷ್ಟಿ ಸಾಮರ್ಥ್ಯ ಸೇರಿದಂತೆ ಪ್ರಮುಖ ಪ್ರಯೋಜನಗಳು:
ಎನ್.ಎಂ.ಹೆಚ್.ಸಿ. ಯೋಜನೆಯ ಅಭಿವೃದ್ಧಿಯಲ್ಲಿ 15,000 ನೇರ ಉದ್ಯೋಗ ಮತ್ತು 7,000 ಪರೋಕ್ಷ ಉದ್ಯೋಗಗಳು ಸೇರಿದಂತೆ ಸುಮಾರು 22,000 ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ.
ಫಲಾನುಭವಿಗಳ ಸಂಖ್ಯೆ:
ಎನ್.ಎಂ.ಹೆಚ್.ಸಿ. ಯೋಜನೆಯ ಅನುಷ್ಠಾನವು ಪರಿಸರದಲ್ಲಿ ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸುತ್ತದೆ ಮತ್ತು ಇದರ ಜೊತೆಗೆ, ಸ್ಥಳೀಯ ಸಮುದಾಯಗಳು, ಪ್ರವಾಸಿಗರು ಮತ್ತು ಸಂದರ್ಶಕರು, ಸಂಶೋಧಕರು ಮತ್ತು ವಿದ್ವಾಂಸರು, ಸರ್ಕಾರಿ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ಸಾಂಸ್ಕೃತಿಕ ಸಂಸ್ಥೆಗಳು, ಪರಿಸರ ತಂಡಗಳು ಮತ್ತು ಸಂರಕ್ಷಣಾ ಗುಂಪುಗಳು, ವ್ಯವಹಾರಗಳಿಗೆ ಅಪಾರವಾಗಿ ಸಹಾಯ ಆಗಲಿದೆ.
ಹಿನ್ನೆಲೆ:
ಭಾರತದ 4,500 ವರ್ಷಗಳ ಹಳೆಯ ಕಡಲ ಪರಂಪರೆಯನ್ನು ಅತ್ಯುತ್ತಮ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳುವ ಪ್ರಧಾನಮಂತ್ರಿಯವರ ದೂರದೃಷ್ಟಿಯ ಪ್ರಕಾರ, ಕೇಂದ್ರ ಬಂದರುಗಳು, ಶಿಪ್ಪಿಂಗ್ ಮತ್ತು ಜಲಮಾರ್ಗ ಸಚಿವಾಲಯ (ಎಂ.ಒ.ಪಿ.ಎಸ್.ಡಬ್ಲ್ಯೂ) ಗುಜರಾತ್ ನ ಲೋಥಾಲ್ ನಲ್ಲಿ ವಿಶ್ವ ದರ್ಜೆಯ ರಾಷ್ಟ್ರೀಯ ಸಾಗರ ಪರಂಪರೆ ಸಂಕೀರ್ಣವನ್ನು (ಎನ್.ಎಂ.ಹೆಚ್.ಸಿ.) ಸ್ಥಾಪಿಸುತ್ತಿದೆ.
ಎನ್.ಎಂ.ಹೆಚ್.ಸಿ. ಯೋಜನೆಯ ಮಾಸ್ಟರ್ ಪ್ಲಾನ್ ಅನ್ನು ಹೆಸರಾಂತ ಆರ್ಕಿಟೆಕ್ಚರ್ ಸಂಸ್ಥೆ “ ಆರ್ಕಿಟೆಕ್ಟ್ ಹಫೀಜ್ “ ಗುತ್ತಿಗೆದಾರರಾಗಿ ಸಿದ್ಧಪಡಿಸಲಿದ್ದಾರೆ ಮತ್ತು ಹಂತ 1ಎ ನಿರ್ಮಾಣವನ್ನು “ಟಾಟಾ ಪ್ರಾಜೆಕ್ಟ್ಸ್ ಲಿಮಿಟೆಡ್”ಗೆ ವಹಿಸಲಾಗಿದೆ.
ಎನ್.ಎಂ.ಹೆಚ್.ಸಿ. ಯೋಜನೆಯನ್ನು ವಿವಿಧ ಹಂತಗಳಲ್ಲಿ ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ, ಇದರಲ್ಲಿ:
• ಹಂತ 1ರಲ್ಲಿ 6 ಗ್ಯಾಲರಿಗಳೊಂದಿಗೆ ಎನ್.ಎಂ.ಹೆಚ್.ಸಿ. ಮ್ಯೂಸಿಯಂ ಅನ್ನು ಹೊಂದಿರುತ್ತದೆ, ಇದು ಭಾರತೀಯ ನೌಕಾಪಡೆ ಮತ್ತು ಕೋಸ್ಟ್ ಗಾರ್ಡ್ ಗ್ಯಾಲರಿಯನ್ನು ಒಳಗೊಂಡಿರುತ್ತದೆ, ಇದು ಬಾಹ್ಯ ನೌಕಾ ಕಲಾಕೃತಿಗಳೊಂದಿಗೆ (ಐ.ಎನ್.ಎಸ್. ನಿಶಾಂಕ್, ಸೀ ಹ್ಯಾರಿಯರ್ ಯುದ್ಧ ವಿಮಾನ, ಯುಹೆಚ್ 3 ಹೆಲಿಕಾಪ್ಟರ್ ಇತ್ಯಾದಿ) ದೇಶದ ಅತಿದೊಡ್ಡ ಗ್ಯಾಲರಿಗಳಲ್ಲಿ ಒಂದಾಗಿದೆ. ಮಾದರಿಯು ತೆರೆದ ಜಲವಾಸಿ ಗ್ಯಾಲರಿ ಮತ್ತು ಜೆಟ್ಟಿ ವಾಕ್ ವೇ ಯಿಂದ ಆವೃತವಾಗಿರುವ ರೀತಿಯ ಗುಜರಾತ್ ನ ಲೋಥಾಲ್ ಈ ಟೌನ್ಶಿಪ್ ಸಿದ್ದವಾಗಲಿದೆ.
• ಹಂತ 1ಬಿ ಎನ್.ಎಂ.ಹೆಚ್.ಸಿ. ಮ್ಯೂಸಿಯಂ ಅನ್ನು ಇನ್ನೂ 8 ಗ್ಯಾಲರಿಗಳೊಂದಿಗೆ ಹೊಂದಿರುತ್ತದೆ, ಲೈಟ್ ಹೌಸ್ ಮ್ಯೂಸಿಯಂ ಅನ್ನು ವಿಶ್ವದ ಅತಿ ಎತ್ತರದ ಯೋಜನೆಯಾಗಿ ರೂಪಿಸಲಾಗಿದೆ. (ಸುಮಾರು 1500 ಕಾರುಗಳಿಗೆ ಕಾರ್ ಪಾರ್ಕಿಂಗ್ ಸೌಲಭ್ಯ, ಆಹಾರ ಹಾಲ್, ವೈದ್ಯಕೀಯ ಕೇಂದ್ರ, ಇತ್ಯಾದಿ.) ಸೌಲಭ್ಯಗಳ ಹೂದೋಟ(ಬಗಿಚಾ) ಸಂಕೀರ್ಣ ಸಿದ್ದವಾಗಲಿದೆ.
• ಹಂತ 2 ಕರಾವಳಿ ರಾಜ್ಯಗಳ ಪೆವಿಲಿಯನ್ಗಳನ್ನು (ಆಯಾ ಕರಾವಳಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಅಭಿವೃದ್ಧಿಪಡಿಸಲಾಗುವುದು), ಹಾಸ್ಪಿಟಾಲಿಟಿ ವಲಯ (ಸಾಗರ ಥೀಮ್ ಇಕೋ ರೆಸಾರ್ಟ್ ಮತ್ತು ಮ್ಯೂಸಿಯೊಟೆಲ್ಗಳೊಂದಿಗೆ), (ಕಡಲ ಮತ್ತು ನೌಕಾ ಥೀಮ್ ಪಾರ್ಕ್, ಹವಾಮಾನ ಬದಲಾವಣೆ ಥೀಮ್ ಪಾರ್ಕ್, ಸ್ಮಾರಕಗಳ ಪಾರ್ಕ್ ಮತ್ತು ಸಾಹಸ ಮತ್ತು ಅಮ್ಯೂಸ್ಮೆಂಟ್ ಪಾರ್ಕ್) ನೈಜ ಸಮಯದ ಲೋಥಲ್ ಸಿಟಿ, ಮಾರಿಟೈಮ್ ಇನ್ಸ್ಟಿಟ್ಯೂಟ್ ಮತ್ತು ಹಾಸ್ಟೆಲ್ ಮತ್ತು 4 ಥೀಮ್ ಆಧಾರಿತ ಉದ್ಯಾನವನಗಳನ್ನು ಕೂಡಾ ಹೊಂದಿರುತ್ತದೆ.