ಸೂರತ್ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ವಿಮಾನನಿಲ್ದಾಣವಾಗಿ ಘೋಷಿಸುವ ಪ್ರಸ್ತಾವಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಂಪುಟ ಸಮಿತಿ ಅನುಮೋದನೆ ನೀಡಿದೆ.
ಸೂರತ್ ವಿಮಾನ ನಿಲ್ದಾಣವು ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಸಂಪರ್ಕ ತಾಣ (ಗೇಟ್ ವೇ) ಆಗುವುದಲ್ಲದೇ ಅಭಿವೃದ್ಧಿ ಹೊಂದುತ್ತಿರುವ ವಜ್ರ ಮತ್ತು ಜವಳಿ ವಲಯಗಳ ರಫ್ತು-ಆಮದು ಕಾರ್ಯ ತಡೆರಹಿತವಾಗಿ ನಡೆಯಲು ಅನುವು ಮಾಡಿಕೊಡಲಿದೆ. ಈ ತಂತ್ರಗಾರಿಕಾ ನಡೆಯು,
ಹಿಂದೆಂದೂ ಕಂಡರಿಯದ ಆರ್ಥಿಕ ಸಾಮರ್ಥ್ಯವನ್ನು ಅನಾವರಣಗೊಳಿಸುವ ಭರವಸೆ ನೀಡಿದೆ. ಈ
ಮೂಲಕ ಸೂರತ್ ಅನ್ನು ಅಂತಾರಾಷ್ಟ್ರೀಯ ವೈಮಾನಿಕ ವಲಯದಲ್ಲಿ ಪ್ರಮುಖವಾಗಿಸಿ ಈ ಪ್ರದೇಶದಲ್ಲಿ ಸಮೃದ್ಧಿಯ ಹೊಸ ಯುಗದ ಉದಯಕ್ಕೆ ನಾಂದಿ ಹಾಡಲಿದೆ.
ಸೂರತ್, ಭಾರತದ ಕ್ಷಿಪ್ರ ಬೆಳವಣಿಗೆಯ ನಗರಗಳಲ್ಲೊಂದಾಗಿದ್ದು ಗಣನೀಯ ಆರ್ಥಿಕ ಸಾಮರ್ಥ್ಯ ಹೊಂದಿದ್ದು, ಕೈಗಾರಿಕಾ ಅಭಿವೃದ್ಧಿಯನ್ನು ಸಾಧಿಸಿದೆ. ಸೂರತ್ ವಿಮಾನ ನಲ್ದಾಣವನ್ನು ಅಂತಾರಾಷ್ಟ್ರೀಯ ನಿಲ್ದಾಣವನ್ನಾಗಿ ಮೇಲ್ದರ್ಜೆಗೇರಿಸಿರುವುದು. ಆರ್ಥಿಕ ಪ್ರಗತಿಗೆ, ವಿದೇಶಿ ಹೂಡಿಕೆದಾರರ ಆಕರ್ಷಣೆಗೆ ಮತ್ತು ದ್ವಿಪಕ್ಷೀಯ ಬಾಂಧವ್ಯ ವೃದ್ಧಿಗೆ ಪೂರಕವಾಗಿದೆ.
ಪ್ರಯಾಣಿಕರ ಸಂಖ್ಯೆ ಮತ್ತು ಸರಕು ಸಾಗಣೆ ಹೆಚ್ಚುತ್ತಿದ್ದು, ವಿಮಾನ ನಿಲ್ದಾಣಕ್ಕೆ ಅಂತಾರಾಷ್ಟ್ರೀಯ ಸ್ಥಾನಮಾನ ದೊರೆತಿರುವುದು ಪ್ರಾದೇಶಿಕ ಅಭಿವೃದ್ಧಿಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ.