ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ದೇಶದಲ್ಲಿ ಗ್ರಾಮೀಣ ವಸತಿಯನ್ನು ಉತ್ತೇಜಿಸಲು ಹೊಸ ಯೋಜನೆಗೆ ಅನುಮೋದನೆ ನೀಡಿದೆ. ಈ ಯೋಜನೆಯಡಿ ಸರ್ಕಾರ ಬಡ್ಡಿ ಸಬ್ಸಿಡಿಯನ್ನು ಒದಗಿಸಲಿದೆ. ಪ್ರಧಾನಮಂತ್ರಿ ಆವಾಸ್ ಯೋಜನಾ (ಗ್ರಾಮೀಣ), ಪಿಎಂಎವೈ(ಜಿ) ಅಡಿಯಲ್ಲಿ ಬಾರದ ಎಲ್ಲ ಕುಟುಂಬಗಳೂ ಈ ಬಡ್ಡಿ ಸಬ್ಸಿಡಿ ಲಾಭ ಪಡೆಯಬಹುದು.
ಈ ಯೋಜನೆಯು ಗ್ರಾಮೀಣ ಪ್ರದೇಶದಲ್ಲಿರುವ ಜನರು ಹೊಸ ಮನೆ ಕಟ್ಟಿಕೊಳ್ಳಲು ಅಥವಾ ತಮ್ಮ ಹಾಲಿ ಇರುವ ಪಕ್ಕಾ ಮನೆಗೆ ತಮ್ಮ ವಸತಿ ಘಟಕ ಸುಧಾರಣೆಗೆ ವಿಸ್ತರಣೆ ಮಾಡಲು ಅನುಕೂಲ ಮಾಡಿಕೊಡುತ್ತದೆ. ಈ ಯೋಜನೆಯಡಿ 2 ಲಕ್ಷ ರೂಪಾಯಿಗಳವರೆಗೆ ಸಾಲ ಪಡೆಯುವವರಿಗೆ ಬಡ್ಡಿ ಸಬ್ಸಿಡಿ ನೀಡಲಾಗುತ್ತದೆ.
ರಾಷ್ಟ್ರೀಯ ಗೃಹ ಬ್ಯಾಂಕ್ ಈ ಯೋಜನೆ ಜಾರಿ ಮಾಡುತ್ತದೆ. ಸರ್ಕಾರವು ಶೇ.3ರ ಪ್ರಸ್ತುತ ಬಡ್ಡಿ ಸಬ್ಸಿಡಿ ಮೌಲ್ಯವನ್ನು ರಾಷ್ಟ್ರೀಯ ಗೃಹ ಬ್ಯಾಂಕ್ ಗೆ ಮೊದಲೇ ನೀಡುತ್ತದೆ, ಪ್ರತಿಯಾಗಿ, ಇದು ಪ್ರಾಥಮಿಕ ಸಾಲ ನೀಡಿಕೆ ಸಂಸ್ಥೆಗಳು (ವಾಣಿಜ್ಯ ಬ್ಯಾಂಕ್ ಗಳು, ಎನ್ಬಿಎಫ್ಸಿಗಳುಇತ್ಯಾದಿ) ರವಾನಿಸುತ್ತದೆ. ಇದರ ಫಲವಾಗಿ ಫನಾನುಭವಿಗೆ ಸಮಾನ ಮಾಸಿಕ ಕಂತು (ಇಎಂಐ) ಕಡಿಮೆ ಆಗುತ್ತದೆ.
ಈ ಯೋಜನೆ ಅಡಿಯಲ್ಲಿ ಸರ್ಕಾರವು ಅಸ್ಥಿತ್ವದಲ್ಲಿರುವ ವ್ಯವಸ್ಥೆ ಮೂಲಕ ಫಲಾನುಭವಿಗಳಿಗೆ ತಾಂತ್ರಿಕ ಬೆಂಬಲ ಸೇರಿದಂತೆ ಪಿಎಂಎವೈ -ಜಿ ನೊಂದಿಗೆ ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳಬಹುದು.ಈ ಹೊಸ ಯೋಜನೆಯು ಗ್ರಾಮೀಣ ಪ್ರದೇಶದಲ್ಲಿ ಮನೆಗಳ ಸುಧಾರಣೆ ಮಾಡುತ್ತದೆ ಮತ್ತು ಗ್ರಾಮೀಣ ವಸತಿ ವಲಯದಲ್ಲಿ ಉದ್ಯೋಗ ಸೃಷ್ಟಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.